Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
Karnataka Rains: ಒಂದು ದಿನ ರಾಜ್ಯಾದ್ಯಂತ ಭಾರೀ ಮಳೆ?, ಯೆಲ್ಲೋ ಅಲರ್ಟ್: ಗರಿಷ್ಠ ತಾಪಮಾನ 33.7 °c.
Karnataka Weather Forecast: ಸಮುದ್ರ ಮೇಲ್ಮೈ ಹಾಗೂ ಭೂ ಮೇಲ್ಮೈನಲ್ಲಿ ಉಂಟಾಗಿರುವ ವೈಪರೀತ್ಯಗಳ ಪ್ರಭಾವದಿಂದಾಗಿ ವಿವಿಧೆಡೆ ಮಳೆ ಆಗಲಿದೆ. ಆದರೆ ಕರ್ನಾಟಕದ ಮಟ್ಟಿಗೆ ಅದರ ಪ್ರಭಾವ ಆಗದು. ಕೆಲವೆಡೆ ಮಳೆ, ಹಲವೆಡೆ ಭರ್ಜರಿ ಬಿಸಿಲಿನ ಮುನ್ಸೂಚನೆ ಸಿಕ್ಕಿದೆ. ನಿರಂತರ ಮಳೆಗೆ ಕಂಗಾಲಾದ ರಾಜ್ಯದ ಜನರಿಗೆ ಬಿಸಿಲಿನ ಕಾವು ನೆನ್ನೆ ಶನಿವಾರದಿಂದಲೇ ತಟ್ಟಲು ಶುರುವಾಗಿದೆ.
ಹೌದು, ಶನಿವಾರ ನವೆಂಬರ್ 1ರಂದು ಅತೀವ ಬಿಸಿಲು ಕಾಣಿಸಿಕೊಂಡಿತು. ಸ್ವಚ್ಛ ನೀಲಿ ಆಕಾಶದಲ್ಲಿ ಹಿಂಗಾರು ಮಳೆ ಸುರಿಸುವ ಮಾರುತಗಳು ಅದೃಶ್ಯವಾಗಿದ್ದವು. ಎಲ್ಲೆಲ್ಲೂ ಬಿಸಿಲಿನ ಹವೆ ಹೆಚ್ಚಾಯಿತು. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗಿದೆ. ಮುಂದಿನ ಐದು ದಿನಗಳಲ್ಲಿ ಈ ಉಷ್ಣಾಂಶ ಪ್ರಮಾಣ ಹೀಗೆ ಮುಂದುವರಿಯಲಿದೆ. ಒಂದಷ್ಟು ಕಡೆಗಳಲ್ಲಿ ಮಳೆ ಸಹ ಆಗಲಿದೆ ಎಂದು ಕರ್ನಾಟಕ ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲ ಜಿಲ್ಲೆಗಳಿಗೆ ಭಾರೀ ಮಳೆ ಸಾಧ್ಯತೆ
ನವೆಂಬರ್ 04 ರಿಂದ ವಿವಿಧ ಜಿಲ್ಲೆಗಳಲ್ಲಿ ಅಂದರೆ ದಕ್ಷಿಣ ಒಳನಾಡು, ಕಲ್ಯಾಣ ಕರ್ನಾಟಕದ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಇಂದಿನ ಮುನ್ಸೂಚನೆ ಪ್ರಕಾರ, ನವೆಂಬರ್ 05ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಮತ್ತೆ ವರುಣಾರ್ಭಟ ಕಂಡು ಬರಲಿದೆ. ಅಂದು ಸಾಧಾರಣದಿಂದ ಭಾರೀ ಮಳೆ ಆಗಲಿದ್ದು, ಎಲ್ಲ ಜಿಲ್ಲೆಗಳಿಗೂ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಆವತ್ತು ಕನಿಷ್ಠ 65ರಿಂದ 115 ಮಿಲಿ ಮೀಟರ್‌ವರೆಗೆ ಮಳೆ ಆಗುವ ಲಕ್ಷಣ ಇದೆ ಎಂದು ಐಎಂಡಿ ಮುನ್ಸೂಚನಾ ವರದಿ ತಿಳಿಸಿದೆ.
ಕರಾವಳಿ ಕರ್ನಾಟಕ ಭಾಗದಲ್ಲೂ ಈಗಾಗಲೇ ಗರಿಷ್ಠ ತಾಪಮಾನ ಏರಿಕೆಯಾಗುತ್ತಿದೆ. ವಿವಿಧ ಭಾಗಗಳಲ್ಲಿ 30 ಡಿಗ್ರಿ ಸೆಲ್ಸಿಯಸ್ ದಾಟಿದೆ. ಒಣಹವೆಯ ವಾತಾವರಣ ಸೃಷ್ಟಿಯಾಗಿದೆ. ಒಂದೇ ದಿನದಲ್ಲಿ ಮಬ್ಬು ವಾತಾವರಣ ಹೋಗಿ, ಅಧಿಕ ತಾಪಮಾನ ದಾಖಲಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ಹೆಚ್ಚು ಚಳಿ, ತಂಪು ವಾತಾವರಣ ನಿರ್ಮಾಣವಾಗುತ್ತಿದೆ. ಈ ಮಧ್ಯೆ ಒಂದು ದಿನ ಭರ್ಜರಿ ಮಳೆ ಎಚ್ಚರಿಕೆ ನೀಡಲಾಗಿದೆ.
ರಾಜ್ಯದ ಗರಿಷ್ಠ ತಾಪಮಾನ 33.7 ಡಿ.ಸೆ.
ಶನಿವಾರ ರಾಜ್ಯದ ಗರಿಷ್ಠ ತಾಪಮಾನ ನೋಡುವುದಾರೆ, ಕಾರವಾರದಲ್ಲಿ 33.7 ಡಿಗ್ರಿ ಸೆಲ್ಸಿಯಸ್, ಹೊನ್ನವಾರದಲ್ಲಿ 32 ಡಿಗ್ರಿ ಸೆಲ್ಸಿಯಸ್, ಮಂಗಳೂರು ವಿಮಾನ ನಿಲ್ದಾಣ & ಶಕ್ತಿ ನಗರದಲ್ಲಿ 32 ಡಿಗ್ರಿ ಸೆಲ್ಸಿಯಸ್, ಕಲಬುರಗಿಯಲ್ಲಿ 32 ಡಿಗ್ರಿ ಸೆಲ್ಸಿಯಸ್, ವಿಜಯಪುರ 31 ಡಿಗ್ರಿ ಸೆಲ್ಸಿಯಸ್, ರಾಯಚೂರು 31 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗ 30 ಡಿಗ್ರಿ ಸೆಲ್ಸಿಯಸ್, ಹಾವೇರಿ 30 ಡಿಗ್ರಿ ಸೆಲ್ಸಿಯಸ್ 29 ಡಿಗ್ರಿ ಸೆಲ್ಸಿಯಸ್, ಬೀದರ್ 29 ಡಿಗ್ರಿ ಸೆಲ್ಸಿಯಸ್, ಬೆಳಗಾವಿ 29 ಡಿಗ್ರಿ ಸೆಲ್ಸಿಯಸ್, ಧಾರವಾಡ 29 ಡಿಗ್ರಿ ಸೆಲ್ಸಿಯಸ್, ಗದಗ, 29 ಡಿಗ್ರಿ ಸೆಲ್ಸಿಯಸ್ ಚಿತ್ರದುರ್ಗ 29 ಡಿಗ್ರಿ ಸೆಲ್ಸಿಯಸ್, ದಾವಣಗೆರೆ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಈ ತಾಪಮಾನದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
Credit: Oneindia



Click it and Unblock the Notifications