Latest Updates
-
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ?
ಗುಪ್ತಾಂಗ ಫೋಟೊ ಕಳಿಸುತ್ತಿದ್ದವನನ್ನು ಹಿಡಿದು ಕೊಟ್ಟ ಕಿರುತೆರೆ ನಟಿ; ಪ್ರವಿತ್ರಾ ಗೌಡ ಕೂಡ ಹೀಗೆ ಮಾಡಿದ್ದರೆ ಜೈಲು ಸೇರುತ್ತಿರಲಿಲ
ಆನ್‌ಲೈನ್ ಅನ್ನು ಕೆಟ್ಟದ್ದಕ್ಕೆ ಬಳಕೆ ಮಾಡುತ್ತಿರುವವರೇ ಹೆಚ್ಚು. ಅದರಲ್ಲೂ ಯುವಕರು ಆನ್‌ಲೈನ್ ಬಳಸಿಕೊಂಡು ಕೆಟ್ಟ ದಾರಿಯನ್ನು ಹಿಡಿಯುತ್ತಿದ್ದಾರೆ. ಅದಕ್ಕೆ ರೇಣುಕಾಸ್ವಾಮಿ ಪ್ರಕರಣಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ. ಈ ಕೇಸ್‌ನಲ್ಲಿ ಆರೋಪಿಗಳಾಗಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ. ಇಂತಹದ್ದೇ ಇನ್ನೊಂದು ಪ್ರಕರಣ ನಡೆದಿದ್ದು, ಅದನ್ನು ಕನ್ನಡದ ಕಿರುತೆರೆ ನಟಿ ತನ್ನ ಚಾಣಾಕ್ಷತನದಿಂದ ಪಾರಾಗಿದ್ದಾರೆ.
ರೇಣುಕಾಸ್ವಾಮಿ ಪ್ರಕರಣ, ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಕೇಸ್ ಇವೆಲ್ಲವೂ ಕಣ್ತುಂದೆ ಇದೆ. ಹೀಗಿರುವಾಗಲೇ ಮತ್ತೊಂದು ಪ್ರಕರಣ ದಾಖಲಾಗಿದೆ. ಕನ್ನಡದ ಕಿರುತೆರೆ ನಟಿಗೆ ಕಿರಾತಕನೊಬ್ಬ ಅಶ್ಲೀಲ ಸಂದೇಶ ಹಾಗೂ ತನ್ನ ಖಾಸಗಿ ಅಂಗದ ಫೋಟೊಗಳನ್ನು ಕಳುಹಿಸುತ್ತಿದ್ದ ವಿಷಯ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ನಟಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಕಿರುಕುಳ ಅನುಭವಿಸಿದ ಈ ನಟಿ ಕನ್ನಡ ಸೇರಿದಂತೆ ತೆಲುಗು ಭಾಷೆಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಿರುತೆರೆ ವೀಕ್ಷಕರಿಗೆ ಈ ನಟಿ ಚಿರಪರಿಚಿತ. ನಟಿ ಅಂದ್ಮೇಲೆ ಸೋಶಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಆಗಿದ್ದಾರೆ. ತಮ್ಮ ಫೋಟೊ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದಕ್ಕೆ ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್‌ಗಳನ್ನು ಮಾಡುತ್ತಾರೆ. ಅದಕ್ಕೆ ಈ ನಟಿ ಕೂಡ ಪ್ರತಿಕ್ರಿಯೆ ನೀಡುತ್ತಿದ್ದರು.
ದಿನ ಕಳೆದಂತೆ ಈ ಕಿರಾತಕ ನಟಿಯನ್ನು ಕಾಡುವುದಕ್ಕೆ ಶುರು ಮಾಡಿದ್ದಾನೆ. ಅಶ್ಲೀಲ ಸಂದೇಶ ಕಳಿಸುವುದಕ್ಕೆ ಆರಂಭಿಸಿದ್ದಾನೆ. ಸಾಲದ್ದಕ್ಕೆ ಖಾಸಗಿ ಅಂಗದ ಫೋಟೊಗಳನ್ನು ಕಳುಹಿಸಿ ಹಿಂಸೆ ನೀಡುವುದಕ್ಕೆ ಆರಂಭಿಸಿದ್ದಾನೆ. ಇದು ಕಿರುತೆರೆಗೆ ಭಯ ಹುಟ್ಟಿಸುವುದಕ್ಕೆ ಶುರು ಮಾಡಿತ್ತು. ಆತಂಕಕ್ಕೆ ಒಳಗಾದ ನಟಿ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರನ್ನು ದಾಖಲಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಈ ಆರೋಪಿಯ ಐಪಿ ಅಡ್ರೆಸ್ ಅನ್ನು ಟ್ರ್ಯಾಕ್ ಮಾಡಿ, ಆತನನ್ನು ಬಂಧಿಸಿದ್ದಾರೆ.
ಇದೇ ರೀತಿ ಪವಿತ್ರಾ ಗೌಡ ಕೂಡ ಆಗಿತ್ತು ಎಂದು ಪೊಲೀಸರ ತನಿಖೆಯಲ್ಲಿ ಹೇಳಲಾಗಿದೆ. ದರ್ಶನ್ ಗೆಳತಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ. ಜೊತೆಗೆ ಖಾಸಗಿ ಅಂಗದ ಫೋಟೊಗಳನ್ನು ಕಳಿಸಿದ್ದ ಎಂದು ಹೇಳಲಾಗಿದೆ. ಇದರಿಂದ ತಲೆ ಕೆಡಿಸಿಕೊಂಡ ಪವಿತ್ರಾ ಗೌಡ ಗೆಳೆಯ ದರ್ಶನ್‌ಗೆ ಹೇಳಿದ್ದರು. ಅಲ್ಲಿಂದ ಶುರುವಾಗಿದ್ದು, ಇಂದು ಜೈಲು ಸೇರುವವರೆಗೂ ಬಂದು ನಿಂತಿದೆ.
ಒಂದು ವೇಳೆ ಪವಿತ್ರಾ ಗೌಡ ಕೂಡ ಕನ್ನಡದ ಸೀರಿಯಲ್ ನಟಿ ಮಾಡಿದ ಹಾಗೇ ಪೊಲೀಸರ ಬಳಿ ಹೋಗಿದ್ದರೆ, ಇಷ್ಟೆಲ್ಲ ರಾದ್ಧಾಂತ ಆಗುತ್ತಲೇ ಇರಲಿಲ್ಲ. ಆದರೆ, ರೇಣುಕಾಸ್ವಾಮಿ ವಿಚಾರದಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್ ಇಬ್ಬರೂ ದುಡುಕಿದರೇ? ಎಡವಟ್ಟು ಮಾಡಿಕೊಂಡರೇ? ಸ್ವಲ್ಪ ತಾಳ್ಮೆಯಿಂದ ಇದ್ದಿದ್ದರೆ ಈ ಪರಿಸ್ಥಿತಿಯಿಂದ ಪಾರಾಗುತ್ತಿದ್ದರೇ? ಇಂತಹ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಆದರೆ, ಕೋರ್ಟ್ ತೀರ್ಪು ಬರುವವರೆಗೂ ರೇಣುಕಾಸ್ವಾಮಿ ಹತ್ಯೆ ಕಾರಣ ಯಾರು? ಅನ್ನೋದು ನಿಗೂಢವಾಗಿಯೇ ಇರುತ್ತೆ.
ಸದ್ಯ ಕಿರಾತಕನಿಂದ ಕನ್ನಡದ ಕಿರುತೆರೆ ನಟಿ ಸೇಫ್ ಆಗಿ ಪಾರಾಗಿದ್ದಾರೆ. ಪೊಲೀಸರ ಮೊರೆ ಹೋಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಪೊಲೀಸರು ಬಂಧಿಸಿ ತನಿಖೆ ಮಾಡಿದ ಬಳಿಕ ಆ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಹಲವು ಮಂದಿಯೊಂದಿಗೆ ಇದೇ ಕೆಲಸ ಮಾಡಿದ್ದಾನೆ. ಅಶ್ಲೀಲ ಮೆಸೇಜ್ ಹಾಗೂ ಖಾಸಗಿ ಅಂಗಾಗದ ಫೋಟೊಗಳನ್ನು ಕಳುಹಿಸಿದ್ದಾನೆಂದು ವಿಚಾರಣೆ ವೇಳೆ ಬಹಿರಂಗ ಪಡಿಸಿದ್ದಾಗಿ ವರದಿಯಾಗಿದೆ.
Credit: Filmibeat



Click it and Unblock the Notifications
