Latest Updates
-
ಮಕ್ಕಳ ಭವಿಷ್ಯ ಭದ್ರವಾಗಿರಲಿ: ಎನ್ಪಿಎಸ್ ವಾತ್ಸಲ್ಯದಿಂದ ಪಾಕೆಟ್ ಮನಿವರೆಗೆ ಪೋಷಕರಿಗೆ ಇಲ್ಲಿದೆ ಸೂಕ್ತ ಹಣಕಾಸು ಮಾರ್ಗದರ್ಶಿ -
ಇಂದಿನಿಂದ ಹಾಲು ದುಬಾರಿ: ಅಮೂಲ್, ಮದರ್ ಡೈರಿ ಬೆಲೆ ಏರಿಕೆ; ಬಜೆಟ್ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬಿಗ್ ಬಾಸ್ ಕನ್ನಡ 13: ದೊಡ್ಮನೆಯ ಹೊಸ ಕ್ಯಾಪ್ಟನ್ ಯಶಸ್ ಕೃಷ್ಣ, ಮನೆಯಲ್ಲಿ ಬದಲಾಗುತ್ತಾ ಗೇಮ್ ಪ್ಲಾನ್? -
ದಟ್ಟ ಮಂಜು ಮತ್ತು ಮಾಲಿನ್ಯ: ಬೆಳಗಿನ ವಾಕಿಂಗ್ ಮಾಡುವವರು ಈ 12 ನಿಮಿಷದ ವ್ಯಾಯಾಮ ಮಿಸ್ ಮಾಡಬೇಡಿ! -
ಮದುವೆ ಪ್ಲಾನಿಂಗ್ ಗೊಂದಲವೇ? ಕನ್ನಡಿಗ ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಮತ್ತು ಶಾಂತಿಯುತ ಮದುವೆ ಮಾರ್ಗದರ್ಶಿ! -
ವಿಶ್ವ ಮಧುಮೇಹ ದಿನ: ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ₹100ರೊಳಗೆ ಸಿಗುವ ಬೆಸ್ಟ್ ಡಯಟ್ ಟಿಪ್ಸ್! -
ದೆಹಲಿ ಶಾಲೆಗಳಿಗೆ ರಜೆ ಘೋಷಣೆಯಾಗಿದೆಯಾ? ವಾಟ್ಸಾಪ್ ಸುಳ್ಳು ಸುದ್ದಿಗಳ ಹಿಂದಿನ ಸತ್ಯ ಇಲ್ಲಿದೆ! -
ತಮಿಳುನಾಡಿನಲ್ಲಿ ಮಳೆ ಅಬ್ಬರ: ಕರೆಂಟ್ ಇಲ್ಲದಿದ್ದರೂ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ವರ್ಕೌಟ್ ಟಿಪ್ಸ್! -
ಹಬ್ಬದ ಫೋಟೋ ಶೇರ್ ಮಾಡ್ತಿದ್ದೀರಾ? ಸಂಬಂಧ ಹಾಳಾಗದಂತೆ ಪ್ರೈವಸಿ ಕಾಪಾಡಿಕೊಳ್ಳಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಎಫೆಕ್ಟ್: ಗಂಟಲು ಕೆರೆತ, ಕೆಮ್ಮು ತಡೆಯಲು ಇಂದೇ ಈ ಆರೋಗ್ಯಕರ ಆಹಾರಗಳನ್ನು ಟಿಫಿನ್ನಲ್ಲಿ ಪ್ಯಾಕ್ ಮಾಡಿ!
Gold Prediction: ಮುಂದಿನ ವಾರದಲ್ಲಿ ಚಿನ್ನ ಪ್ರಿಯರಿಗೆ ಸಿಗುತ್ತಾ ಗುಡ್ ನ್ಯೂಸ್! ಏನಾಗುತ್ತೆ ಬಂಗಾರದ ಬೆಲೆ?
ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹಿಂದಿನಿಂದಲೂ ಹೆಚ್ಚು. ಆದ್ರೆ ಇತ್ತೀಚೆಗೆ ಬೆಲೆ ಏರಿಕೆಯಿಂದಾಗಿ ಹೆಚ್ಚಿನವರು ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ದಿನ ಹೋದಂತೆ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಚಿನ್ನದ ಬೆಲೆ ಇಳಿಕೆ ಕಂಡರೂ, ಏರಿಕೆ ಪ್ರಮಾಣಕ್ಕೆ ಹೋಲಿಸಿದ್ರೆ, ಇಳಿಕೆ ಪ್ರಮಾಣ ತುಂಬಾನೇ ಕಡಿಮೆಯಾಗಿರುತ್ತೆ. ಇದೀಗ ಕಳೆದೆರಡು ದಿನಗಳಿಂದ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ.

ಚಿನ್ನದ ಬೆಲೆ ಯಾವಾಗ ಇಳಿಕೆಯಾಗುತ್ತೆ ಎಂದು ಜನ ಕೂಡಾ ಭಾರೀ ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ ಕಮ್ಮಿಯಾಗುವ ಲಕ್ಷಣ ಮಾತ್ರ ಕಾಣುತ್ತಿಲ್ಲ. ಹಾಗಿದ್ರೆ ಮುಂದಿನ ವಾರ ಚಿನ್ನದ ಬೆಲೆ ಇಳಿಕೆಯಾಗುತ್ತಾ? ಏರಿಕೆಯಾಗುತ್ತಾ? ಎಂಬ ಪ್ರಶ್ನೆಗೆ ತಜ್ಞರು ಉತ್ತರ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆಗಳು ಮತ್ತು ಅಮೆರಿಕದ ಡಾಲರ್ ಮೌಲ್ಯ ಹೆಚ್ಚಳದಿಂದಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರಿಳಿತ ಕಾಣುತ್ತಿದೆ ಎಂದು ವರದಿಯಾಗಿದೆ. ಡಿಸೆಂಬರ್ನಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳ್ಳುವುದರ ನಿರೀಕ್ಷೆ ಕಡಿಮೆಯಾಗಿರುವುದು ಬುಲಿಯನ್ ಮಾರುಕಟ್ಟೆಯ ಮೇಲೆ ಮತ್ತಷ್ಟು ಒತ್ತಡ ಬಿದ್ದಿದೆ. ಬಡ್ಡಿದರಗಳ ಕಡಿತವಾಗುವ ಕುರಿತ ವರದಿಗಳು ಸಹ ಹೂಡಿಕೆದಾರರಿಗೆ ಚಿನ್ನದ ಬೆಲೆ ಏನಾಗುತ್ತೆ ಎಂದು ಊಹಿಸಲೂ ಸಾಧ್ಯವಿಲ್ಲದಂತಾಗಿದೆ.
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಡಿಸೆಂಬರ್ ಗೋಲ್ಡ್ ಫ್ಯೂಚರ್ಸ್ ವ್ಯಾಪಕ ಶ್ರೇಣಿಯಲ್ಲಿ ಚಲಿಸಿವೆ. ಈ ವಾರದ ಮಧ್ಯದಲ್ಲಿ ₹1,24,100 ಗರಿಷ್ಠ ಮಟ್ಟವನ್ನು ತಲುಪಿದ ನಂತರ, ಶುಕ್ರವಾರ ಬೆಲೆಗಳಲ್ಲಿ ಸ್ವಲ್ಪ ಕುಸಿತವಾಗಿದೆ. ಅಂದಿನ ವಹಿವಾಟಿನಲ್ಲಿ ಸುಮಾರು 1% ರಷ್ಟು ಇಳಿಕೆಯಾಗಿ, ₹1,21,700 ಸಮೀಪದಲ್ಲಿ ವಹಿವಾಟು ನಡೆಸಿದವು.
ಚಿನ್ನದ ಬೆಲೆಗಳು ಏರಿಕೆಯ ಟ್ರೆಂಡ್ಲೈನ್ ಬಳಿ ಸ್ವಲ್ಪ ಹೆಚ್ಚಾಯಿತು. ಆದರೆ, ಬಲವಾದ ಡಾಲರ್ ಮತ್ತು ನಿರೀಕ್ಷೆಗಿಂತ ಉತ್ತಮವಾದ ಅಮೆರಿಕದ ಉದ್ಯೋಗ ಅಂಕಿಅಂಶಗಳಿಂದಾಗಿ ಲಾಭದಲ್ಲಿ ಸ್ವಲ್ಪ ಏರಿಳಿತಗಳಾಗಿದೆ. ಇದು ಬುಲಿಯನ್ ಮಾರುಕಟ್ಟೆಯಲ್ಲೂ ಸ್ಥಿರತೆ ಸ್ಥಾಪಿಸಲು ಕಷ್ಟವಾಯಿತು.
MCX ನಲ್ಲಿ ಬೆಳ್ಳಿ ಫ್ಯೂಚರ್ಸ್ ಕೂಡ ಗಮನಾರ್ಹ ಏರಿಳಿತಗಳನ್ನು ಕಂಡವು. ಡಿಸೆಂಬರ್ ಕಾಂಟ್ರಾಕ್ಟ್ಗಳು ಶುಕ್ರವಾರ 2% ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಒಂದು ಕಿಲೋಗ್ರಾಂ ಬೆಳ್ಳಿ ಬೆಲೆ ₹1,50,800 ಸಮೀಪದಲ್ಲಿ ಇತ್ತು.
ಹಿಂದಿನ ವಾರದಲ್ಲಿ ಬೆಳ್ಳಿ ಬೆಲೆ ₹1,55,000 ದಾಟಿತ್ತು. ಆದರೆ, ಜಾಗತಿಕವಾಗಿ ಕೆಲವು ಹಿನ್ನಡೆ ಕಂಡ ಕಾರಣ ಬೆಳ್ಳಿ ಬೆಲೆಗಳು ಕೂಡಾ ತೀವ್ರವಾಗಿ ತಿರುಗಿ ಬಿದ್ದವು.
ಮಾರುಕಟ್ಟೆ ಮಾಹಿತಿಯ ಪ್ರಕಾರ, ನವೆಂಬರ್ ತಿಂಗಳಾದ್ಯಂತ ಬೆಳ್ಳಿ ವ್ಯಾಪಕ ಇಂಟ್ರಾಡೇ ಶ್ರೇಣಿಗಳಲ್ಲಿ ವಹಿವಾಟು ನಡೆಸುವುದನ್ನು ಮುಂದುವರೆಸಿದೆ.
ಅಮೆರಿಕದ ಬಲವಾದ ಕಾರ್ಮಿಕ ಮಾರುಕಟ್ಟೆ ದತ್ತಾಂಶದ ನಂತರ ಬುಲಿಯನ್ ಬೆಲೆಗಳಲ್ಲಿ ಏರಿಳಿತಗಳಾದವು. ಈ ದತ್ತಾಂಶವು ಫೆಡರಲ್ ರಿಸರ್ವ್ ಶೀಘ್ರವಾಗಿ ದರಗಳನ್ನು ಕಡಿತಗೊಳಿಸುವ ನಿರೀಕ್ಷೆಗಳನ್ನು ತಗ್ಗಿಸಿತು. ಇದರಿಂದ ಡಾಲರ್ ಇಂಡೆಕ್ಸ್ ಬಲಗೊಂಡಿತು.
ವ್ಯಾಪಾರಿಗಳ ಅಂದಾಜಿನ ಪ್ರಕಾರ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ₹1,20,000 ರಿಂದ ₹1,24,000 ರ ವ್ಯಾಪ್ತಿಯಲ್ಲಿ ಇರಬಹುದು ಎನ್ನಲಾಗಿದೆ. ಆದ್ದರಿಂದ, ಚಿನ್ನ ಖರೀದಿಸುವ ಪ್ಲಾನ್ನಲ್ಲಿರುವವರು ಈ ಚಿನ್ನದ ಮಾರುಕಟ್ಟೆ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಆದರೆ, ಚಿನ್ನದ ಬೆಲೆಯ ಮೇಲೆ ಇನ್ನೂ ಅನೇಕ ಅಂಶಗಳು ಪ್ರಭಾವ ಬೀರುತ್ತವೆ.
Credit: Goodreturns



Click it and Unblock the Notifications
