Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
Gold Silver Rate Today: ಚಿನ್ನ-ಬೆಳ್ಳಿ ಬೆಲೆ ಮತ್ತೆ ಪಾತಾಳಕ್ಕೆ! ಒಂದೇ ದಿನ ಭರ್ಜರಿ ಇಳಿಕೆ
ಭಾರತೀಯ ಚಿನ್ನ ಪ್ರಿಯರಿಗೆ ಬಂಪರ್ ಸುದ್ದಿ. ಅಂತೂ ಇಂತೂ ಭಾರೀ ಇಳಿಕೆ ಕಂಡಿದೆ ನೋಡಿ ಇಂದು ಭಾರತದಲ್ಲಿ ಚಿನ್ನದ ದರ (Gold Rate India). ಹೌದು, ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಇದೇ ಬೆಸ್ಟ್ ಟೈಂ ಅನ್ಸುತ್ತೆ. ಏಕೆಂದರೆ ಇಂದು (ಫೆ.13) ಚಿನ್ನದ ದರ ಭಾರೀ ಇಳಿಕೆ ಕಂಡಿದೆ. ಹಾಗಿದ್ರೆ ಭಾರತದಲ್ಲಿ ಇಂದು ಚಿನ್ನದ ದರ ಎಷ್ಟಿದೆ? ಎಷ್ಟು ಇಳಿಕೆ ಕಂಡಿದೆ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
ಭಾರತದಲ್ಲಿ 24K ಚಿನ್ನದ ಪ್ರತೀ ಗ್ರಾಂನಲ್ಲಿ ₹262 ರೂ. ಇಳಿಕೆ ಕಂಡಿದೆ. ಆ ಮೂಲಕ ಇಂದು 1 ಗ್ರಾಂ ಬೆಲೆ ಒಟ್ಟು ₹15,578 ರೂ. ಆಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹1,24,624 ರೂ. ಆಗಿದ್ದು, ನಿನ್ನೆ ₹1,26,720 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 2,096 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,55,780 ರೂ. ಆಗಿದ್ದು, ನಿನ್ನೆ ₹1,58,400 ರೂ. ಇತ್ತು. ಒಂದೇ ದಿನ ಕೇವಲ ಬರೋಬ್ಬರಿ 2,620 ರೂ. ಇಳಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ದರ 15,57,800 ರೂ. ಆಗಿದ್ದು, ನಿನ್ನೆ 15,84,000 ರೂ. ಇತ್ತು. ಒಂದೇ ದಿನದಲ್ಲಿ 26,200 ರೂ. ಕುಸಿತವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆಯಲ್ಲಿಇಂದು ₹240 ರೂ. ಇಳಿಕೆಯಾಗಿದೆ. ಆ ಮೂಲಕ ಒಂದು ಗ್ರಾಂ ಬೆಲೆ ಇಂದು ₹14,280 ರೂ. ಆಗಿದ್ದು, ನಿನ್ನೆ ₹14,520 ರೂ. ಇತ್ತು. ಅದೇ ರೀತಿ 8 ಗ್ರಾಂ ಚಿನ್ನದ ದರ ಇಂದು 1,14,240 ರೂ. ಆಗಿದ್ದು, ನಿನ್ನೆ 1,16,160 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ 1,920 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,42,800 ರೂ. ಆಗಿದ್ದು, ನಿನ್ನೆ ₹1,45,200 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,400 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹14,28,000 ರೂ. ಆಗಿದ್ದು, ನಿನ್ನೆ ₹14,52,000 ರೂ. ಇತ್ತು. ಒಂದ ದಿನದಲ್ಲಿ ಬರೋಬ್ಬರಿ 24,000 ರೂ. ಇಳಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹11,684 ರೂ. ಆಗಿದ್ದು, ನಿನ್ನೆ ₹11,684 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 684 ರೂ. ಕಮ್ಮಿಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ದರ ಇಂದು ₹93,472 ರೂ. ಆಗಿದ್ದು, ನಿನ್ನೆ 95,040 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,568 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ 1,16,840 ರೂ. ಆಗಿದ್ದು, ನಿನ್ನೆ 1,18,800 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,960 ರೂ. ಇಳಿಕೆ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,68,400 ರೂ. ಆಗಿದ್ದು, ನಿನ್ನೆ 11,88,000 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 19,600 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 15,709, 22K ರೂ. 14,400, 18K ರೂ. 12,400
ಮುಂಬೈ: 24K ರೂ. 15,578, 22K ರೂ. 14,280, 18K ರೂ. 11,684
ದೆಹಲಿ: 24K ರೂ. 15,593, 22K ರೂ. 14,295, 18K ರೂ. 11,699
ಕೋಲ್ಕತ್ತಾ: 24K ರೂ. 15,578, 22K ರೂ. 14,280, 18K ರೂ. 11,684
ಬೆಂಗಳೂರು: 24K ರೂ. 15,578, 22K ರೂ. 14,280, 18K ರೂ. 11,684
ಹೈದರಾಬಾದ್: 24K ರೂ. 15,578, 22K ರೂ. 14,280, 18K ರೂ. 11,684
ಕೇರಳ: 24K ರೂ. 15,578, 22K ರೂ. 14,280, 18K ರೂ. 11,684
ಪುಣೆ: 24K ರೂ. 15,578, 22K ರೂ. 14,280, 18K ರೂ. 11,684
ವಡೋದರಾ: 24K ರೂ. 15,583, 22K ರೂ. 14,285, 18K ರೂ. 11,689
ಅಹಮದಾಬಾದ್: 24K ರೂ. 15,583, 22K ರೂ. 14,285, 18K ರೂ. 11,689
ಭಾರತದಲ್ಲಿ ಬೆಳ್ಳಿ ದರ:
ಅತ್ತ ಚಿನ್ನದ ಬೆಲೆಯತೆ, ಬೆಳ್ಳಿ ಬೆಲೆ ಕೂಡಾ ಇಂದು ಭರ್ಜರಿ ಇಳಿಕೆ ಕಂಡಿದೆ. 1 ಗ್ರಾಂ ಬೆಳ್ಳಿ ದರ ಇಂದು ₹280 ರೂ. ಆಗಿದ್ದು, ನಿನ್ನೆ ₹295 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಬೆಳ್ಳಿ ದರದಲ್ಲಿ ₹15 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ₹2,240 ರೂ., 10 ಗ್ರಾಂ ಬೆಳ್ಳಿ ದರ ₹2,800 ರೂ., 100 ಗ್ರಾಂ ಬೆಳ್ಳಿ ಬೆಲೆ ₹28,000 ರೂ. ಆಗಿದೆ. ಅದೇ ರೀತಿ 1 ಕೆಜಿ ಬೆಳ್ಳಿ ಬೆಲೆ ₹2,80,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಫೆಬ್ರವರಿ 13, 2026 ರ ರಾಯಿಟರ್ಸ್ ವರದಿ ಪ್ರಕಾರ, ಅಮೆರಿಕಾದ ಬಲವಾದ ಉದ್ಯೋಗ ದತ್ತಾಂಶಗಳ ನಂತರ ಬಡ್ಡಿ ದರ ಕಡಿತದ ನಿರೀಕ್ಷೆಗಳು ಕಡಿಮೆಯಾಗಿದ್ದು, ಇನ್ನು ಅಮೆರಿಕದ ಹಣದುಬ್ಬರ ದತ್ತಾಂಶಗಳು ಬರಲಿರುವುದರಿಂದ ಬಡ್ಡಿ ದರದ ದಿಕ್ಕನ್ನು ನಿರ್ಧರಿಸಲು ಹೂಡಿಕೆದಾರರು ಕಾತುರದಲ್ಲಿದ್ದಾರೆ.
ಈ ಮಧ್ಯ ಸ್ಪಾಟ್ ಚಿನ್ನದ ಬೆಲೆ ಇಂದು GMT 0311 ಕ್ಕೆ 1.3% ಏರಿಕೆಯೊಂದಿಗೆ ಪ್ರತೀ ಔನ್ಸ್‌ಗೆ $4,982.59 ಡಾಲರ್‌ಗೆ ತಲುಪಿದೆ.
Credit: Goodreturns



Click it and Unblock the Notifications
