Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
Gold Rate: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ: ಇಂದಿನ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ
ಆಭರಣ ಪ್ರಿಯರಿಗೆ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲಲ್ಲಿ ಆಗುತ್ತಿರುವ ದಿನನಿತ್ಯದ ಬೆಲೆಗಳ ಏರಿಳಿತ ತೀವ್ರ ಕುತೂಹಲ ಮೂಡಿಸಿವೆ. ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಆರ್ಥಿಕ ಬೆಳವಣಿಗೆಗಳು, ಅಮೆರಿಕದ ಡಾಲರ್ ಮೌಲ್ಯದಲ್ಲಿನ ಏರಿಳಿತ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ (Geopolitical tensions) ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹ ಹಾಗೂ ಬಿಳಿ ಲೋಹದ ದರದಲ್ಲಿ ನಿರಂತರ ಏರಿಳಿತಗಳು ಕಂಡುಬರುತ್ತಿವೆ. ಬುಧವಾರ, ಫೆಬ್ರವರಿ 25ರ ಮಾರುಕಟ್ಟೆ ವರದಿಯ ಪ್ರಕಾರ, ಜಾಗತಿಕ ವಿದ್ಯಮಾನಗಳ ಪ್ರಭಾವದಿಂದ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಳಿತ ಕಂಡುಬಂದಿದೆ.
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಮತ್ತು ಸುಂಕದ ಅನಿಶ್ಚಿತತೆಯ ಕಾರಣದಿಂದಾಗಿ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ವರದಿಗಳ ಪ್ರಕಾರ, ಏಪ್ರಿಲ್ 2026 ರ ಒಪ್ಪಂದದ ಎಂಸಿಎಕ್ಸ್ ಚಿನ್ನದ ದರವು 10 ಗ್ರಾಮ್‌ಗೆ 983 ರೂಪಾಯಿಗಳಷ್ಟು (ಶೇಕಡಾ 0.55 ರಷ್ಟು) ಇಳಿಕೆ ಕಂಡು, 1,60,615 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದೆ. ಅದೇ ರೀತಿ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಮಾರ್ಚ್ 5 ರ ಒಪ್ಪಂದದ ಬೆಳ್ಳಿಯ ದರವು ಕೂಡ ಕೆಜಿಗೆ 1,006 ರೂಪಾಯಿಗಳಷ್ಟು (ಶೇಕಡಾ 0.3 ರಷ್ಟು) ಇಳಿಕೆಯಾಗಿದ್ದು, 2,64,327 ರೂಪಾಯಿಗಳ ಆಸುಪಾಸಿನಲ್ಲಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಚೀನಾ ಮಾರುಕಟ್ಟೆಗಳು ರಜೆಯ ನಂತರ ಮರು-ಆರಂಭವಾಗಿರುವುದು ಈ ಬೆಲೆ ಏರಿಳಿತಗಳಿಗೆ ಪ್ರಮುಖ ಕಾರಣ ಎಂದು ಆರ್ಥಿಕ ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

Gold: ಚಿನ್ನ - ಬೆಳ್ಳಿಗೆ ಪಿಂಕ್ ಕಾಗದ ದಶಕಗಳಿಂದ ಆಸರೆ: ಏನಿದರ ವಿಶೇಷತೆ, ಹಿನ್ನೆಲೆ ವಿವರ ಇಲ್ಲಿದೆ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಪ್ರಬಲ ಮಟ್ಟದಲ್ಲಿಯೇ ವಹಿವಾಟು ನಡೆಸುತ್ತಿದೆ. ಇಂದಿನ ಮಾರುಕಟ್ಟೆ ವರದಿ ಪ್ರಕಾರ, ಬೆಂಗಳೂರಿನಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 1,48,300 ರೂಪಾಯಿ ಇದೆ. ಅಂದರೆ ಒಂದು ಗ್ರಾಂ 22K ಚಿನ್ನದ ಬೆಲೆ 14,830 ರೂಪಾಯಿಗಳಷ್ಟಿದೆ. ಎಂಟು ಗ್ರಾಂ (ಒಂದು ಸಾವರನ್) ಚಿನ್ನದ ಬೆಲೆ 1,18,640 ರೂಪಾಯಿಗಳಿಗೆ ನಿಗದಿಯಾಗಿದೆ. ನಿನ್ನೆಗೆ ಹೋಲಿಸಿದರೆ 22 ಕ್ಯಾರೆಟ್ ಚಿನ್ನದ ದರದಲ್ಲಿ 10 ಗ್ರಾಂಗೆ 400 ರೂ. ಹೆಚ್ಚಳ ದಾಖಲಾಗಿದೆ.
ಇನ್ನು, ಹೂಡಿಕೆಗೆ ಯೋಗ್ಯವಾದ ಶುದ್ಧ ಚಿನ್ನ ಅಂದರೆ 24 ಕ್ಯಾರೆಟ್ ಬಂಗಾರದ ದರ ಬೆಂಗಳೂರಿನಲ್ಲಿ 10 ಗ್ರಾಂಗೆ 1,61,780 ರೂಪಾಯಿ ದಾಖಲಾಗಿದೆ. ಅಂದರೆ 24K ಚಿನ್ನದ ಒಂದು ಗ್ರಾಂ ಬೆಲೆ 16,178 ರೂಪಾಯಿಗಳಷ್ಟಿದೆ. ನಿನ್ನೆಗೆ ಹೋಲಿಸಿದರೆ 24K ಚಿನ್ನದ ದರದಲ್ಲಿ 10 ಗ್ರಾಂಗೆ 430 ರೂಪಾಯಿ ಏರಿಕೆಯಾಗಿದೆ. ಪ್ರತಿದಿನದ ಬಳಕೆಗೆ ಹಾಗೂ ಲೈಟ್ ವೆಯಿಟ್ ಆಭರಣಗಳ ತಯಾರಿಕೆಗೆ ಹೆಚ್ಚು ಖರೀದಿಸುವ 18 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 1,21,340 ರೂಪಾಯಿಗಳಷ್ಟಿದೆ (ಒಂದು ಗ್ರಾಂಗೆ 12,134 ರೂ.).
ಬೆಳ್ಳಿಯ ದರ ಕುರಿತು ನೋಡುವುದಾದರೆ, ಬೆಂಗಳೂರಿನಲ್ಲಿ ಬೆಳ್ಳಿಯ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಇಂದಿನ ಮಾರುಕಟ್ಟೆ ದರದ ಪ್ರಕಾರ, ಒಂದು ಕೆಜಿ ಬೆಳ್ಳಿಯ ದರವು 2,85,000 ರೂಪಾಯಿಗಳಿಗೆ ನಿಗದಿಯಾಗಿದೆ. ಅಂದರೆ ಒಂದು ಗ್ರಾಂ ಬೆಳ್ಳಿಯ ಬೆಲೆ 285 ರೂಪಾಯಿ ಆಗಿದ್ದು, 10 ಗ್ರಾಂ ಬೆಳ್ಳಿಗೆ 2,850 ರೂಪಾಯಿ ಹಾಗೂ 100 ಗ್ರಾಂಗೆ 28,500 ರೂಪಾಯಿ ನೀಡಬೇಕಿದೆ. ಇದು ನಿನ್ನೆಯ ದರಕ್ಕೆ ಹೋಲಿಸಿದರೆ ಪ್ರತಿ ಕೆಜಿಗೆ 15,000 ರೂ. ಇಳಿಕೆಯಾದಂತಾಗಿದೆ.
Gold Rate: ಮತ್ತೆ ಸತತ ಏರಿಕೆ ಕಂಡ ಚಿನ್ನ, ಬೆಳ್ಳಿ ದರ: ಫೆಬ್ರವರಿ 23ರ ಬೆಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ
ತಜ್ಞರ ಸಲಹೆ
ಚಿನ್ನದ ದರವು ದೀರ್ಘಾವಧಿಯಲ್ಲಿ ಏರಿಕೆಯ ಹಾದಿಯಲ್ಲಿದ್ದರೂ, ಅಲ್ಪಾವಧಿಯಲ್ಲಿ ಜಾಗತಿಕ ವಿದ್ಯಮಾನಗಳಿಂದಾಗಿ ದಿಢೀರ್ ಏರಿಳಿತಗಳನ್ನು ಕಾಣುತ್ತಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಎಂಸಿಎಕ್ಸ್‌ನಲ್ಲಿ ಚಿನ್ನಕ್ಕೆ 1,58,800 ರಿಂದ 1,60,600 ರೂ. ವರೆಗೆ ಉತ್ತಮ ಬೆಂಬಲ (Support level) ಇದೆ. ಬೆಲೆಗಳು ಸ್ವಲ್ಪ ಇಳಿಕೆಯಾದಾಗ (Dips) ಹೂಡಿಕೆ ಮಾಡುವುದು ಜಾಣತನ ಎಂದು ತಜ್ಞರು ಸಲಹೆ ನೀಡಿದ್ದಾರೆ.
Credit: Oneindia



Click it and Unblock the Notifications
