Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
Gold Rate: ಚಿನ್ನ ಪ್ರಿಯರಿಗೆ ಬಿಗ್ ಶಾಕ್! ಮತ್ತೆ ಏರಿಕೆ ಕಂಡ ಬಂಗಾರದ ಬೆಲೆ
ಅಯ್ಯಯ್ಯೋ, ಭಾರತದಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಯ್ತು. ನಿನ್ನೆಯಷ್ಟೇ ಬೆಲೆ ಇಳಿಕೆಯಿಂದ ಚಿನ್ನ ಖರೀದಿದಾರರು ತಕ್ಕ ಮಟ್ಟಿಗೆ ನಿಟ್ಟುಸಿರುಬಿಟ್ಟಿದ್ದರು. ಆದರೆ ಇದೀಗ ಮತ್ತೆ ಬೆಲೆ ಏರಿಕೆಯಾಗಿದೆ. ಚಿನ್ನದ ಬೆಲೆ ಇಳಿಕೆಯಾಗುತ್ತೆ ಎಂದು ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ನಿರಾಸೆಯಾಗಿದೆ. ಹಾಗಿದ್ರೆ ಭಾರತದಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆ (Gold-Silver Rate) ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ 24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ಇಂದು ₹12,704 ರೂ. ಆಗಿದ್ದು, ನಿನ್ನೆ ₹12,513 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಬರೋಬ್ಬರಿ ₹191 ರೂ. ಏರಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 1,01,632 ರೂ. ಆಗಿದ್ದು, ನಿನ್ನೆ 1,00,104 ಇತ್ತು. ಒಟ್ಟು 1,528 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,27,040 ರೂ. ಆಗಿದ್ದು, ನಿನ್ನೆ 1,25,130 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ 1,910 ರೂ. ಏರಿಕೆ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು ₹12,70,400 ರೂ. ಆಗಿದ್ದು, ನಿನ್ನೆ 12,51,300 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ, ಇಂದು ಒಟ್ಟು ₹19,100 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 11,645 ರೂ. ಆಗಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 11,470 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹175 ರೂ. ಏರಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 93,160 ರೂ. ಆಗಿದ್ದು, ನಿನ್ನೆ 91,760 ರೂಪಾಯಿ ಇತ್ತು. ನಿನ್ನೆಗಿಂತ ಇಂದು 1,400 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,16,450 ರೂ ಆಗಿದ್ದು, ನಿನ್ನೆ 1,14,700ರೂ. ಇತ್ತು. ನಿನ್ನೆಗೆ ಬೆಲೆಗೆ ಹೋಲಿಸಿದ್ರೆ ಇಂದು 1,700 ರೂ ಬದಲಾವಣೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,64,500 ರೂ. ಆಗಿದ್ದು, ನಿನ್ನೆ ₹11,47,000 ರೂ. ಇತ್ತು. ಒಟ್ಟು 17,500 ರೂ. ಏರಿಕೆ ಕಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
24K, 22K ಚಿನ್ನಕ್ಕೆ ಹೋಲಿಸಿದ್ರೆ 18K ಚಿನ್ನದ ಬೆಲೆ ಸ್ವಲ್ಪ ಕಡಿಮೆ. ಅದೇ ರೀತಿ ಇಂದು 1 ಗ್ರಾಂ ಬೆಲೆ ₹9,528 ರೂ. ಆಗಿದ್ದು, ನಿನ್ನೆ 9,385 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು ₹143 ರೂ. ಏರಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹76,224 ರೂ. ಆಗಿದ್ದು, ನಿನ್ನೆ 75,080 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,144 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 95,280 ರೂ. ಆಗಿದ್ದು, ನಿನ್ನೆ 93,850 ರೂ. ಆಗಿದೆ. ನಿನ್ನೆಗಿಂತ ಇಂದು 1,430 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ಒಟ್ಟು ಬೆಲೆ 9,52,800 ರೂ. ಆಗಿದ್ದು, ನಿನ್ನೆಗಿಂತ 14,300
ರೂ. ಹೆಚ್ಚಳ ಕಂಡಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಷಿದೆ?
ಚೆನ್ನೈ: 24K ರೂ. 12,786, 22K ರೂ. 11,720, 18K ರೂ. 9,780
ಮುಂಬೈ: 24K ರೂ. 12,704, 22K ರೂ. 11,645, 18K ರೂ. 9,528
ದೆಹಲಿ: 24K ರೂ. 12,719, 22K ರೂ. 11,660, 18K ರೂ. 9,543
ಕೋಲ್ಕತ್ತಾ: 24K ರೂ. 12,704, 22K ರೂ. 11,645, 18K ರೂ. 9,528
ಬೆಂಗಳೂರು: 24K ರೂ. 12,704, 22K ರೂ. 11,645, 18K ರೂ. 9,528
ಹೈದರಾಬಾದ್: 24K ರೂ. 12,704, 22K ರೂ. 11,645, 18K ರೂ. 9,528
ಕೇರಳ: 24K ರೂ. 12,704, 22K ರೂ. 11,645, 18K ರೂ. 9,528
ಪುಣೆ: 24K ರೂ. 12,704, 22K ರೂ. 11,645, 18K ರೂ. 9,528
ವಡೋದರಾ: 24K ರೂ. 12,709, 22K ರೂ. 11,650, 18K ರೂ. 9,533
ಅಹಮದಾಬಾದ್: 24K ರೂ. 12,709, 22K ರೂ. 11,650, 18K ರೂ. 9,533
ಬೆಳ್ಳಿ ಬೆಲೆ ಎಷ್ಷಿದೆ?
ಚಿನ್ನದ ಬೆಲೆ ಏರಿಕೆಯಾಗಿದ್ದೇ ತಡ, ಇತ್ತ ಬೆಳ್ಳಿ ಬೆಲೆಯೂ ಭಾರೀ ಏರಿಕೆಯ ಹಾದಿಯಲ್ಲಿದೆ. ಇಂದು 1 ಗ್ರಾಂ ಬೆಳ್ಳಿ ಬೆಲೆ ₹167 ರೂ. ಆಗಿದ್ದು, ನಿನ್ನೆ ₹163 ರೂ. ಇತ್ತು. ನಿನ್ನೆಗಿಂತ ಇಂದು ಪ್ರತೀ ಗ್ರಾಂ ನಲ್ಲಿ ₹4 ರೂ. ಹೆಚ್ಚಳವಾಗಿದೆ. 8 ಗ್ರಾಂ ಬೆಳ್ಳಿ ಬೆಲೆ ₹1,336, 10 ಗ್ರಾಂ ಬೆಳ್ಳಿ ದರ ₹1,670, 100 ಗ್ರಾಂ ಬೆಳ್ಳಿ ದರ ₹16,700 ರೂ., 1000 ಗ್ರಾಂ ಬೆಳ್ಳಿ ದರ ₹1,67,000 ರೂ. ಆಗಿದ್ದು, ನಿನ್ನೆಗಿಂತ ಇಂದು 4 ಸಾವಿರ ರೂ. ಹೆಚ್ಚಳವಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ನವೆಂಬರ್ 21ರ ರಾಯಿಟರ್ಸ್ ವರದಿ ಪ್ರಕಾರ, ಫೆಡ್ ದರದ ಬಗ್ಗೆ ಹೇಳಿಕೆ, ಡಿಸೆಂಬರ್‌ನಲ್ಲಿ ಯುಎಸ್ ದರ ಕಡಿತದ ನಿರೀಕ್ಷೆಯಿಂದಾಗಿ, ಚಿನ್ನದ ಬೆಲೆಗಳು ಮಂಗಳವಾರ ಗರಿಷ್ಠ ಏರಿಕೆಯಾಯಿತು.
ಇನ್ನು GMT 0303 ಹೊತ್ತಿಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.2% ಇಳಿಕೆಯಾಗಿತ್ತು. ಆ ಪ್ರಕಾರ, $4,147.51 ಕ್ಕೆ ತಲುಪಿದೆ. ಇದು ನವೆಂಬರ್ 14ರ ನಂತರ ಅತ್ಯಧಿಕ ದರವಾಗಿದೆ.
Credit: Goodreturns



Click it and Unblock the Notifications
