Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
Gold Rate Today: ಚಿನ್ನ ಪ್ರಿಯರಿಗೆ ಇಂದು ಗುಡ್ ನ್ಯೂಸ್! ಬಂಗಾರದ ಬೆಲೆ 3,500 ರೂ. ಇಳಿಕೆ
ಹೊಸ ವರ್ಷದ ಆರಂಭದ ಎರಡು ದಿನ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿತ್ತು. ಆದ್ರೆ 2026ರ ಮೂರನೇ ದಿನ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಅಂತೂ ಚಿನ್ನ ಪ್ರಿಯರಿಗೆ ಇಂದು (ಜ.03) ಗುಡ್ ನ್ಯೂಸ್ ಸಿಕ್ಕಿದೆ. ಭಾರತದಲ್ಲಿ ಚಿನ್ನದ ಬೆಲೆ (Gold Rate India) ಇಳಿಕೆಯಾಗಿದ್ದು, ಒಟ್ಟು ಚಿನ್ನದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ಇಂದು 13,582 ರೂ. ಆಗಿದ್ದು, ನಿನ್ನೆ 13,620 ರೂ. ಇತ್ತು. ನಿನ್ನೆಗಿಂತ ಇಂದು ₹38 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 1,08,656 ರೂ. ಆಗಿದ್ದು, ನಿನ್ನೆ 1,08,960 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹304 ರೂ. ಕುಸಿತವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,35,820 ರೂ. ಆಗಿದ್ದು, ನಿನ್ನೆ 1,36,200 ರೂ. ಇತ್ತು. 100 ಗ್ರಾಂ ಚಿನ್ನದ ಬೆಲೆ ಇಂದು ₹13,58,200 ರೂ. ಆಗಿದ್ದು, ನಿನ್ನೆ 13,62,000 ರೂ. ಇತ್ತು. ಒಟ್ಟು ₹3,800 ರೂ. ವ್ಯತ್ಯಾಸವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ಇಂದು 12,450 ರೂ. ಆಗಿದ್ದು, ನಿನ್ನೆ 12,485 ರೂ. ಇತ್ತು. ನಿನ್ನೆಗಿಂತ ಇಂದು ₹35 ರೂ. ವ್ಯತ್ಯಾಸವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 99,600 ರೂ. ಆಗಿದ್ದು, ನಿನ್ನೆ 99,880 ರೂ. ಇತ್ತು. ನಿನ್ನೆಗಿಂತ ಇಂದು ₹280 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,24,500 ರೂ. ಆಗಿದ್ದು, ನಿನ್ನೆ 1,24,850 ರೂ. ಇತ್ತು. ನಿನ್ನೆಯ ಬೆಲೆಗೆ ಹೋಲಿಸಿದ್ರೆ ಇಂದು ₹350 ರೂ. ಕುಸಿತವಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 12,45,000 ರೂ. ಆಗಿದ್ದು, ನಿನ್ನೆ 12,48,500 ರೂ. ಇತ್ತು. ಒಟ್ಟು 3,500 ರೂ. ಇಳಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18 ಕ್ಯಾರಟ್ ಚಿನ್ನದ ಇಂದು 1 ಗ್ರಾಂ ಬೆಲೆ ₹10,187 ರೂ. ಆಗಿದ್ದು, ನಿನ್ನೆ 10,215 ರೂ. ಇತ್ತು. ನಿನ್ನೆಗಿಂತ ಇಂದು 28 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹81,496 ರೂ. ಆಗಿದ್ದು, ನಿನ್ನೆ 81,720 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 224 ರೂ. ಇಳಿಕೆಯಾಗಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ ಇಂದು 1,01,870 ರೂ. ಆಗಿದ್ದು, ನಿನ್ನೆ 1,02,150 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 280 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 10,18,700 ರೂ. ಆಗಿದ್ದು, ನಿನ್ನೆ 10,21,500 ರೂ. ಇತ್ತು. ಒಟ್ಟು 2,800 ರೂ. ಬದಲಾವಣೆ ಕಂಡಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 13,658, 22K ರೂ. 12,520, 18K ರೂ. 10,445
ಮುಂಬೈ: 24K ರೂ. 13,582, 22K ರೂ. 12,450, 18K ರೂ. 10,187
ದೆಹಲಿ: 24K ರೂ. 13,597, 22K ರೂ. 12,465, 18K ರೂ. 10,202
ಕೋಲ್ಕತ್ತಾ: 24K ರೂ. 13,582, 22K ರೂ. 12,450, 18K ರೂ. 10,187
ಬೆಂಗಳೂರು: 24K ರೂ. 13,582, 22K ರೂ. 12,450, 18K ರೂ. 10,187
ಹೈದರಾಬಾದ್: 24K ರೂ. 13,582, 22K ರೂ. 12,450, 18K ರೂ. 10,187
ಕೇರಳ: 24K ರೂ. 13,582, 22K ರೂ. 12,450, 18K ರೂ. 10,187
ಪುಣೆ: 24K ರೂ. 13,582, 22K ರೂ. 12,450, 18K ರೂ. 10,187
ವಡೋದರಾ: 24K ರೂ. 13,587, 22K ರೂ. 12,455, 18K ರೂ. 10,192
ಅಹಮದಾಬಾದ್: 24K ರೂ. 13,587, 22K ರೂ. 12,455, 18K ರೂ. 10,192
ಇಂದು ಬೆಳ್ಳಿ ಬೆಲೆ ಎಷ್ಟಿದೆ?
ಚಿನ್ನದ ಬೆಲೆ ಇಳಿಕೆಯಾದಂತೆ, ಇತ್ತ ಬೆಳ್ಳಿ ಬೆಲೆ ಕೂಡಾ ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿ ದರ ಇಂದು ₹240 ರೂ. ಆಗಿದ್ದು, ನಿನ್ನೆ ₹242 ರೂ. ಇತ್ತು. ಪ್ರತೀ ಗ್ರಾಂ ಬೆಳ್ಳಿಯಲ್ಲಿ 2 ರೂ. ಇಳಿಕೆಯಾಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ ₹1,920, 10 ಗ್ರಾಂ ಬೆಳ್ಳಿ ಬೆಲೆ 1,936 ರೂ., 10 ಗ್ರಾಂ ಬೆಳ್ಳಿ ದರ ಇಂದು 2,400 ರೂ. ಆಗಿದ್ದು, 100 ಬೆಳ್ಳಿ ದರ ₹24,000 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,40,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಜನವರಿ 2, ರಾಯಿಟರ್ಸ್ ವರದಿ ಪ್ರಕಾರ, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಯುಎಸ್ ದರ ಕಡಿತದ ನಿರೀಕ್ಷೆಯಿಂದಾಗಿ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಆ ಪ್ರಕಾರ ಸ್ಪಾಟ್ ಚಿನ್ನದ ಬೆಲೆ 01:46 pm (GMT 1846) ಸಮಯದಲ್ಲಿ, ಪ್ರತೀ ಔನ್ಸ್‌ಗೆ $4,313.29 ರಷ್ಟು ಸ್ಥಿರವಾಗಿತ್ತು. ಇದೀಗ ಇಂದು ಸ್ಪಾಟ್ ಚಿನ್ನದ ದರ $4,332.36ಕ್ಕೆ ತಲುಪಿದೆ
Credit: Goodreturns



Click it and Unblock the Notifications