Latest Updates
-
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು!
Gold Rate Today: ಚಿನ್ನ ಪ್ರಿಯರಿಗೆ ಬಿಗ್ ಶಾಕ್! ದಿಢೀರ್ 28,900 ರೂ. ಏರಿಕೆ ಕಂಡ ಬಂಗಾರ
ಚಿನ್ನ, ಬೆಳ್ಳಿ ಪ್ರಿಯರಿಗೆ (Gold-Silver) ಬಿಗ್ ಶಾಕ್ ಎದುರಾಗಿದೆ. ಈ ವಾರವಿಡೀ ಚಿನ್ನದ ಬೆಲೆ ಬಹುತೇಕ ಇಳಿಕೆ ಕಂಡಿತ್ತು. ಅದೇ ನಿರೀಕ್ಷೆ ಗ್ರಾಹಕರಲ್ಲಿ ಶನಿವಾರವೂ ಇತ್ತು. ಆದ್ರೆ ಇದೀಗ ಚಿನ್ನದ ಬೆಲೆ ದಿಢೀರ್ ಏರಿಕೆಯಾಗಿದೆ. ಭಾರತದಲ್ಲಿ ಚಿನ್ನದ ಬೆಲೆ (Gold Rate India) ಇಂದು (ಫೆ. 7) ಭಾರೀ ಏರಿಕೆಯಾಗಿದೆ. ಹಾಗಿದ್ರೆ ಒಟ್ಟು ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ ಬೆಲೆ ಇಂದು ಭರ್ಜರಿ ಏರಿಕೆಯಾಗಿದೆ. ನಿನ್ನೆಯಷ್ಟೇ ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ಬೆಲೆ ಇಂದು ಗಗನಕ್ಕೇರಿದೆ. ಅಂದರೆ, 1 ಗ್ರಾಂ ಬೆಲೆ 15,660 ರೂ. ಆಗಿದೆ. ನಿನ್ನೆಯಷ್ಟೇ 15,371 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹289 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,25,280 ರೂ. ಆಗಿದ್ದು, ನಿನ್ನೆ 1,22,968 ರೂ. ಇತ್ತು. ನಿನ್ನೆಗಿಂತ ಇಂದು 2,312 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,56,600 ರೂ. ಆಗಿದ್ದು, ನಿನ್ನೆ 1,53,710 ರೂ. ಇತ್ತು. ಒಂದೇ ದಿನದಲ್ಲಿ 2,890 ರೂ. ಹೆಚ್ಚಳವಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹15,66,000 ರೂ. ಆಗಿದ್ದು, ನಿನ್ನೆ 15,37,100 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರ ಇಂದು ದಿಢೀರ್ 28,900 ರೂ. ಏರಿಕೆ ಕಂಡಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 14,355 ರೂ. ಆಗಿದ್ದು, ನಿನ್ನೆ 14,090 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹265 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,14,840 ರೂ. ಆಗಿದ್ದು, ನಿನ್ನೆ 1,12,720 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹2,120 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,43,550 ರೂ. ಆಗಿದ್ದು, ನಿನ್ನೆ 1,40,900 ರೂ. ಇತ್ತು. ಒಟ್ಟು 2,650 ರೂ. ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು 14,35,500 ರೂ. ಆಗಿದ್ದು, ನಿನ್ನೆ 14,09,000 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಬರೋಬ್ಬರಿ 26,500 ಹೆಚ್ಚಳವಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಬೆಲೆ ಇಂದು 11,745 ರೂ. ಆಗಿದ್ದು, ನಿನ್ನೆ 11,528 ರೂ. ಇತ್ತು. ಒಂದೇ ದಿನದಲ್ಲಿ ₹217 ರೂ. ಹೆಚ್ಚಳಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 93,960 ರೂ. ಆಗಿದ್ದು, ನಿನ್ನೆ 92,224 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 1,736 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,17,450 ರೂ. ಆಗಿದ್ದು, ನಿನ್ನೆ 1,15,280 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಬರೋಬ್ಬರಿ 2,170 ರೂ. ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹11,74,500 ರೂ. ಆಗಿದ್ದು, ನಿನ್ನೆ ₹11,74,500 ರೂ. ಇತ್ತು. 21,700 ರೂ. ಹೆಚ್ಚಳವಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 15,731, 22K ರೂ. 14,420, 18K ರೂ. 12,350
ಮುಂಬೈ: 24K ರೂ. 15,660, 22K ರೂ. 14,355, 18K ರೂ. 11,745
ದೆಹಲಿ: 24K ರೂ. 15,675, 22K ರೂ. 14,370, 18K ರೂ. 11,760
ಕೋಲ್ಕತ್ತಾ:24K ರೂ. 15,660, 22K ರೂ. 14,355, 18K ರೂ. 11,745
ಬೆಂಗಳೂರು: 24K ರೂ. 15,660, 22K ರೂ. 14,355, 18K ರೂ. 11,745
ಹೈದರಾಬಾದ್: 24K ರೂ. 15,660, 22K ರೂ. 14,355, 18K ರೂ. 11,745
ಕೇರಳ: 24K ರೂ. 15,660, 22K ರೂ. 14,355, 18K ರೂ. 11,745
ಪುಣೆ: 24K ರೂ. 15,660, 22K ರೂ. 14,355, 18K ರೂ. 11,745
ವಡೋದರಾ: 24K ರೂ. 15,665, 22K ರೂ. 14,360, 18K ರೂ. 11,750
ಅಹಮದಾಬಾದ್: 24K ರೂ. 15,665, 22K ರೂ. 14,360, 18K ರೂ. 11,750
ಬೆಳ್ಳಿ ಬೆಲೆ ಎಷ್ಟಿದೆ?
ಅತ್ತ ಬೆಳ್ಳಿಯಂತೂ ಇತ್ತೀಚೆಗೆ ಹಾವು-ಏಣಿ ಆಟವಾಡುತ್ತಿದೆ. ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಬೆಳ್ಳಿ ದರ, ಇಂದು ದಿಢೀರ್ ಹೆಚ್ಚಳವಾಗಿದೆ. 1 ಗ್ರಾಂ ಬೆಳ್ಳಿ ದರ ಇಂದು ₹285 ರೂ. ಆಗಿದ್ದು, ನಿನ್ನೆ ₹275 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಒಟ್ಟು ₹10 ರೂ. ಏರಿಕೆಯಾಗಿದೆ. 8 ಗ್ರಾಂ ಬೆಳ್ಳಿ ದರ ಇಂದು ₹2,280 ರೂ. ಆಗಿದ್ದು, ನಿನ್ನೆ ₹2,200 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹80 ರೂ. ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ₹2,850 ರೂ., 100 ಗ್ರಾಂ ಬೆಳ್ಳಿ ದರ ₹28,500 ರೂ., 1000 ಗ್ರಾಂ ಬೆಳ್ಳಿ ದರ ₹2,85,000 ರೂ. ಹೆಚ್ಚಳ ಕಂಡಿದೆ.
ಸ್ಪಾಟ್ ಗೋಲ್ಡ್ ವಿವರ:
ವರದಿ ಪ್ರಕಾರ, ಫೆಬ್ರವರಿ 7 ರಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗೆ ಸ್ವಲ್ಪ ಬೆಂಬಲ ಸಿಕ್ಕಂತಾಗಿದೆ. ಆರಂಭಿಕವಾಗಿ ನಷ್ಟಗಳು ಎದುರಾದರೂ, ನಂತರ ಸ್ಪಾಟ್ ಚಿನ್ನವು ಪ್ರತೀ ಔನ್ಸ್‌ಗೆ $4,887.30 ಕ್ಕೆ ಏರಿಕೆಯಾಗಿದೆ.
Credit: Goodreturns



Click it and Unblock the Notifications
