Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
Gold Rate Rise Today: 10 ಗ್ರಾಂ ಚಿನ್ನದ ಬೆಲೆ 5,020 ರೂ. ಏರಿಕೆ! ಬಂಗಾರ ಪ್ರಿಯರಿಗೆ ಶಾಕ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಗ್ರೀನ್ ಲ್ಯಾಂಡ್ ಮೇಲೆ ಇಟ್ಟಿರುವ ಗುರಿ, ಯುರೋಪ್‌ನೊಂದಿಗೆ ವ್ಯಾಪಾರ ಯುದ್ಧವನ್ನು ಹುಟ್ಟುಹಾಕುವಂತೆ ಮಾಡಿದೆ. ಇದೀಗ ಡಾಲರ್ ದುರ್ಬಲತೆಯಿಂದಾಗಿ ಬುಧವಾರ ಚಿನ್ನದ ಬೆಲೆ (Gold Rate) ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಅಂತೂ ಚಿನ್ನ ಪ್ರಿಯರಿಗೆ ಶಾಕ್ ಆಗೋದಂತೂ ಗ್ಯಾರಂಟಿ. ಇಂದು ಕಮ್ಮಿಯಾಗುತ್ತೆ, ನಾಳೆ ಕಮ್ಮಿಯಾಗುತ್ತೆ ಎಂದು ನಿರೀಕ್ಷೆಯಲ್ಲಿದ್ದವರಿಗೆ, ದಿನೇ ದಿನೇ ನಿರಾಸಭಾವವ ವ್ಯಕ್ತವಾಗುತ್ತಿದೆ. ಇಂದು ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದ್ದು, ಎಷ್ಟಿದೆ ಅನ್ನೋದರ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ ಒಂದು ಗ್ರಾಂ ಬೆಲೆ 15,480 ರೂ. ಆಗಿದ್ದು, ನಿನ್ನೆ 14,978 ರೂ. ಇತ್ತು. ನಿನ್ನೆಗಿಂತ ಇಂದು ಪ್ರತೀ ಗ್ರಾಂ ಚಿನ್ನದ ಬೆಲೆ ₹502 ರೂ. ಹೆಚ್ಚಳ ಕಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 1,23,840 ರೂ. ಆಗಿದ್ದು, ನಿನ್ನೆ 1,19,824 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 4,016 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,54,800 ರೂ. ಆಗಿದ್ದು, ನಿನ್ನೆ 1,49,780 ರೂ. ಇತ್ತು. ನಿನ್ನೆಗಿಂತ ಇಂದು 5,020 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹15,48,000 ರೂ. ಆಗಿದ್ದು, ನಿನ್ನೆ 14,97,800 ರೂ. ಇತ್ತು. ಒಂದೇ ದಿನದಲ್ಲಿ 50,200 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 14,190 ರೂ. ಆಗಿದ್ದು, ನಿನ್ನೆ 13,730 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹460 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,13,520 ರೂ. ಆಗಿದ್ದು, ನಿನ್ನೆ 1,09,840 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 3,680 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,41,900 ರೂ. ಆಗಿದ್ದು, ನಿನ್ನೆ 1,37,300 ರೂ. ಇತ್ತು. ಒಟ್ಟು 4,600 ರೂ. ಏರಿಕೆ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ ಇಂದು 14,19,000 ರೂ. ಆಗಿದ್ದು, ನಿನ್ನೆ 13,73,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 46,000 ರೂ. ಹೆಚ್ಚಳ ಕಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು 11,611 ರೂ. ಆಗಿದ್ದು, ನಿನ್ನೆ 11,234 ರೂ. ಇತ್ತು. ನಿನ್ನೆಗಿಂತ ಇಂದು ₹377 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹92,888 ರೂ. ಆಗಿದ್ದು, ನಿನ್ನೆ 89,872 ರೂ. ಇತ್ತು. ನಿನ್ನೆಗಿಂತ ಇಂದು 3,016 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,16,110 ರೂ. ಆಗಿದ್ದು, ನಿನ್ನೆ 1,12,340 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 3,770 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,61,100 ರೂ. ಆಗಿದ್ದು, ನಿನ್ನೆ 11,23,400 ರೂ. ಇತ್ತು. ಒಟ್ಟು 37,700 ರೂ. ಹೆಚ್ಚಳ ಕಂಡಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಷಿದೆ?
ಚೆನ್ನೈ: 24K ರೂ. 15,546, 22K ರೂ. 14,250, 18K ರೂ. 11,890
ಮುಂಬೈ: 24K ರೂ. 15,480, 22K ರೂ. 14,190, 18K ರೂ. 11,611
ದೆಹಲಿ: 24K ರೂ. 15,495, 22K ರೂ. 14,205, 18K ರೂ. 11,626
ಕೋಲ್ಕತ್ತಾ: 24K ರೂ. 15,480, 22K ರೂ. 14,190, 18K ರೂ. 11,611
ಬೆಂಗಳೂರು: 24K ರೂ. 15,480, 22K ರೂ. 14,190, 18K ರೂ. 11,611
ಹೈದರಾಬಾದ್: 24K ರೂ. 15,480, 22K ರೂ. 14,190, 18K ರೂ. 11,611
ಕೇರಳ: 24K ರೂ. 15,480, 22K ರೂ. 14,190, 18K ರೂ. 11,611
ಪುಣೆ: 24K ರೂ. 15,480, 22K ರೂ. 14,190, 18K ರೂ. 11,611
ವಡೋದರಾ: 24K ರೂ. 15,485, 22K ರೂ. 14,195, 18K ರೂ. 11,616
ಅಹಮದಾಬಾದ್: 24K ರೂ. 15,485, 22K ರೂ. 14,195, 18K ರೂ. 11,616
ಬೆಳ್ಳಿ ಬೆಲೆ:
ಗೋಲ್ಡ್ ರೇಟ್‌ನಂತೆ, ಬೆಳ್ಳಿ ದರ ಕೂಡಾ ಭಾರೀ ಏರಿಕೆ ಕಂಡಿದೆ. ಇದು 1 ಗ್ರಾಂ ಬೆಳ್ಳಿ ಬೆಲೆ ₹325 ರೂ. ಆಗಿದ್ದು, ನಿನ್ನೆ ₹320 ರೂ. ಇತ್ತು. ಒಂದೇ ದಿನದಲ್ಲಿ ದಿಢೀರ್ ₹5 ರೂ. ಏರಿಕೆಯಾಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ ಇಂದು ₹2,600 ರೂ. ಆಗಿದ್ದು, ನಿನ್ನೆ ₹2,560 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹40 ರೂ. ಏರಿಕೆಯಾಗಿದೆ. ಇನ್ನು 10 ಗ್ರಾಂ ಬೆಳ್ಳಿ ದರ ₹3,250 ರೂ., 100 ಗ್ರಾಂ ಬೆಳ್ಳಿ ಬೆಲೆ ₹32,500 ರೂ., 1000 ಗ್ರಾಂ ಬೆಳ್ಳಿ ದರ ₹3,25,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಜನವರಿ 21ರ ರಾಯಿಟರ್ಸ್ ವರದಿ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್‌ನತ್ತ ಕಣ್ಣಿಟ್ಟಿದ್ದರಿಂದ, ಯುರೋಪ್ ರಾಷ್ಟ್ರಗಳೊಂದಿಗೆ ವ್ಯಾಪಾರ ಯುದ್ಧ ಶುರುವಾಗುವ ಭೀತಿ ಹುಟ್ಟಿದೆ. ಅಲ್ಲದೇ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತವೆಂದೂ, ಡಾಲರ್ ದುರ್ಬಲತೆಯಿಂದಾಗಿ ಚಿನ್ನದ ಬೆಲೆ ಬುಧವಾರ ಪ್ರತೀ ಔನ್ಸ್ $4,800 ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ.
GMT 0226 ವೇಳೆಗೆ ಸ್ಪಾಟ್ ಚಿನ್ನದ ದರವೂ ಪ್ರತೀ ಔನ್ಸ್‌ಗೆ 1.2% ಏರಿಕೆಯಾಗಿ $4,821.6 ಕ್ಕೆ ತಲುಪಿದೆ.
Credit: Goodreturns



Click it and Unblock the Notifications