Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
Gold Rate: ಚಿನ್ನ-ಬೆಳ್ಳಿ ಪ್ರಿಯರಿಗೆ ಜಾಕ್‌ಪಾಟ್! 6,000ರೂ. ಇಳಿಕೆ
ಚಿನ್ನದ ಬೆಲೆ ಏರಿಕೆಯಿಂದ ಬೇಜಾರಾಗಿದ್ದ ಜನರಿಗೆ ಸಿಕ್ತು ನೋಡಿ ಸಿಹಿ ಸುದ್ದಿ. ಬಹಳ ದಿನಗಳ ನಂತರ ಇದೀಗ ಕೊನೆಗೂ ಭಾರತದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆಯಾಗಿದೆ. ಚಿನ್ನ ಖರೀದಿಸೋ ಪ್ಲಾನ್‌ನಲ್ಲಿದ್ದವರಿಗೆ ಬೆಸ್ಟ್ ಟೈಂ ಇದು ಅಂತಾನೇ ಹೇಳಬಹುದು. ಹಾಗಿದ್ರೆ ಇಂದು ಚಿನ್ನದ ಬೆಲೆ (Gold Rate Today) ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ಇಂದು 13,418 ರೂ. ಆಗಿದ್ದು, ನಿನ್ನೆ 13,484 ರೂ. ಇತ್ತು. ನಿನ್ನೆಗಿಂತ ಇಂದು ಪ್ರತೀ ಗ್ರಾಂನಲ್ಲಿ ಕೇವಲ ₹66 ರೂ. ಇಳಿಕೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,07,344 ರೂ. ಆಗಿದ್ದು, ನಿನ್ನೆ 1,07,872 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹528 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,34,180 ರೂ. ಆಗಿದ್ದು, ನಿನ್ನೆ 1,34,840 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹660 ರೂ. ಇಳಿಕೆ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹13,41,800 ರೂ. ಆಗಿದ್ದು, ನಿನ್ನೆ 13,48,400 ರೂ. ಇತ್ತು. ಏರಿಕೆಯ ಹಾದಿ ನೋಡಿದರೆ, ಇಳಿಕೆಯ ಪ್ರಮಾಣ ಬಹಳ ಕಡಿಮೆ ಎಂದು ಹೇಳಲಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ಇಂದು 12,300 ರೂ. ಆಗಿದ್ದು, ನಿನ್ನೆ 12,360 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಬರೋಬ್ಬರಿ ₹60 ರೂ. ಇಳಿಕೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 98,400 ರೂ. ಆಗಿದ್ದು, ನಿನ್ನೆ 98,880 ರೂ. ಆಗಿತ್ತು. ನಿನ್ನೆಗಿಂತ ಇಂದು ₹480 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,23,000 ರೂ. ಆಗಿದ್ದು, ನಿನ್ನೆ 1,23,600 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹600 ರೂ. ಬದಲಾವಣೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 12,30,000 ರೂ. ಆಗಿದ್ದು, ನಿನ್ನೆ 12,36,000 ರೂ. ಇತ್ತು. ಒಟ್ಟು 6000 ರೂ. ಇಳಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ 18 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ಇಂದು ₹10,064 ರೂ. ಆಗಿದ್ದು, ನಿನ್ನೆ 10,113 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 49 ರೂ. ಇಳಿಕೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು ₹80,512 ರೂ. ಆಗಿದ್ದು, ನಿನ್ನೆ 80,904 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 392 ರೂ. ಇಳಿಕೆಯಾಗಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ ಇಂದು 1,00,640 ರೂ. ಆಗಿದ್ದು, ನಿನ್ನೆ 1,01,130 ರೂ. ಇತ್ತು. ಒಟ್ಟು 490 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 10,06,400 ರೂ. ಆಗಿದ್ದು, ನಿನ್ನೆ 10,11,300 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು 4,900 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 13,506, 22K ರೂ. 12,380, 18K ರೂ. 10,330
ಮುಂಬೈ: 24K ರೂ. 13,418, 22K ರೂ. 12,300, 18K ರೂ. 10,064
ದೆಹಲಿ: 24K ರೂ. 13,433, 22K ರೂ. 12,315, 18K ರೂ. 10,079
ಕೋಲ್ಕತ್ತಾ: 24K ರೂ. 13,418, 22K ರೂ. 12,300, 18K ರೂ. 10,064
ಬೆಂಗಳೂರು: 24K ರೂ. 13,418, 22K ರೂ. 12,300, 18K ರೂ. 10,064
ಹೈದರಾಬಾದ್: 24K ರೂ. 13,418, 22K ರೂ. 12,300, 18K ರೂ. 10,064
ಕೇರಳ: 24K ರೂ. 13,418, 22K ರೂ. 12,300, 18K ರೂ. 10,064
ಪುಣೆ: 24K ರೂ. 13,418, 22K ರೂ. 12,300, 18K ರೂ. 10,064
ವಡೋದರಾ: 24K ರೂ. 13,423, 22K ರೂ. 12,305, 18K ರೂ. 10,069
ಅಹಮದಾಬಾದ್: 24K ರೂ. 13,423, 22K ರೂ. 12,305, 18K ರೂ. 10,069
ಇಂದು ಬೆಳ್ಳಿ ಬೆಲೆ ಎಷ್ಟಿದೆ?
ಚಿನ್ನದ ದರ ಏರಿಕೆಯಾಗುತ್ತಿದ್ದಂತೆ, ಬೆಳ್ಳಿ ಬೆಲೆಯೂ ಭಾರೀ ಏರಿಕೆಯಾಗಿತ್ತು. ಆದ್ರೆ ಇದೀಗ ಬೆಳ್ಳಿ ಪ್ರಿಯರಿಗೂ ಗುಡ್ ನ್ಯೂಸ್ ಇದೆ. ಒಂದು ಗ್ರಾಂ ಬೆಳ್ಳಿ ದರ ಇಂದು ₹209 ರೂ. ಆಗಿದ್ದು, ನಿನ್ನೆ ₹211 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು ₹2 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ₹1,672 ರೂ. ಆಗಿದೆ. ನಿನ್ನೆ ₹1,688 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹16 ರೂ. ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ₹2,090 ರೂ. ಆಗಿದೆ. ಇನ್ನು 100 ಬೆಳ್ಳಿ ದರ 20,900 ರೂ., 1000 ಗ್ರಾಂ ಬೆಳ್ಳಿ ಬೆಲೆ 2,09,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಡಿಸೆಂಬರ್ 19ರ ರಾಯಿಟರ್ಸ್ ವರದಿಯ ಪ್ರಕಾರ, ಶುಕ್ರವಾರದ ಅಮೆರಿಕದ ಹಣದುಬ್ಬರದ ವರದಿಯ ನಿರೀಕ್ಷೆ ಕಡಿಮೆಯಾಗಿರುವುದರಿಂದ ಚಿನ್ನದ ಬೆಲೆ ಕುಸಿತ ಕಂಡಿದೆ.
GMT 0147 ರ ಸಮಯದಲ್ಲಿ ಸ್ಪಾಟ್ ಚಿನ್ನದ ದರವು, ಪ್ರತೀ ಔನ್ಸ್‌ಗೆ 0.3% ಇಳಿಕೆಯಾಗಿದ್ದು, $4,318.19 ಕ್ಕೆ ತಲುಪಿದೆ.
Credit: Goodreturns



Click it and Unblock the Notifications