Gold Rate: ಬೆಂಗಳೂರಲ್ಲಿ ಸ್ಥಿರವಾದ ಬಂಗಾರ...ನಿನ್ನೆ ಭಾರಿ ಇಳಿಕೆಯ ನಂತರ ಇಂದು ಎಷ್ಟಿದೆ ನೋಡಿ 24K, 22K, 18K ಚಿನ್ನ!

By Latha M R

ಚಿನ್ನ ಪ್ರಿಯರಿಗೆ ಇಂದು ಕೂಡ ಖುಷಿಸುದ್ದಿ ಸಿಕ್ಕಿದೆ. ಅದೇನೆಂದರೆ, ಬೆಂಗಳೂರಿನಲ್ಲಿ ಚಿನ್ನದ ಬೆಲೆ ನಿನ್ನೆ ಭಾರಿ ಇಳಿಕೆ ನೋಡಿದ ನಂತರ ಇಂದು, ಸ್ಥಿರತೆಯನ್ನು ಅವಲಂಬಿಸಿದೆ. ಅಂದರೆ ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ರೀತಿಯ ಇಳಿಕೆಯಾಗಲಿ, ಏರಿಕೆಯಾಗಲಿ ಕಂಡುಬಂದಿಲ್ಲ. ಚಿನ್ನದ ಬೆಲೆಗಳು ಹೂಡಿಕೆದಾರರು ಹಾಗೂ ಆಭರಣ ಖರೀದಿದಾರರಿಗೆ ದಿನವೂ ಗಮನಾರ್ಹವಾಗಿರುತ್ತವೆ. ಚಿನ್ನವೆಂದರೆ ಭಾರತೀಯರಿಗೆ ಅಚ್ಚು ಮೆಚ್ಚು. ಒಂದು ಹಂತದಲ್ಲಿ ದೊಡ್ಡ ಮಟ್ಟದ ಸಂಪತ್ತು ಎಂತಲೂ ಹೇಳಬಹುದು. ದೊಡ್ಡ ಮಟ್ಟದ ಹೂಡಿಕೆ ಸಾಧನವಾಗಿರುವ ಚಿನ್ನ, ಭಾರತದಲ್ಲಿ ಪ್ರತಿಷ್ಠೆಯ ಸಂಕೇತವೂ ಹೌದು. ಇನ್ನು ಮಹಿಳೆಯರಿಗಂತೂ ಚಿನ್ನದ ಮೇಲಿರುವ ಪ್ರೀತಿ ಅಷ್ಟಿಷ್ಟಲ್ಲ. ಚಿನ್ನ ಎಂದರೆ ಪ್ರಾಣ ಬಿಡುತ್ತಾರೆ. ಸಭೆ ಸಮಾರಂಭಗಳಲ್ಲಿ ಪ್ರತಿಷ್ಠೆ ತಂದುಕೊಡುವುದೇ ಚಿನ್ನ. ಅತ್ಯಂತ ಆಕರ್ಷಣೀಯವಾಗಿರುವ ಚಿನ್ನಕ್ಕೆ, ಈಗ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಮಹಿಳೆಯರಿಗೆ ಏನೇ ಕೊಟ್ಟರೂ ಚಿನ್ನ ಕೊಟ್ಟಾಗ ಆಗುವ ಖುಷಿ ಮತ್ತೆಲ್ಲೂ ಸಿಗುವುದಿಲ್ಲ. ಆಭರಣದ ರೂಪದಲ್ಲಿ ಮಹಿಳೆಯರಿಗೆ ಆಕರ್ಷಣೆ ನೀಡುವ ಈ ಚಿನ್ನಕ್ಕೆ ಭಾರತದಲ್ಲಿ ದಿನೇ ದಿನೆ ಡಿಮ್ಯಾಂಡ್ ಹೆಚ್ಚುತ್ತಲೇ ಇದೆ..ಹಾಗಾದರೆ ಇಂದು ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂದು ತಿಳಿಯಿರಿ. ಮೊದಲು ಚಿನ್ನದ ಬೆಲೆಯಲ್ಲಿನ ಬದಲಾವಣೆ ಬಗ್ಗೆ ತಿಳಿದು, ನಂತರ ಈ ಏರಿಳಿತಗಳಿಗೆ ಕಾರಣ ಏನೆಂದು ಓದಿರಿ.

Gold Price

24 ಕ್ಯಾರೆಟ್ ಚಿನ್ನದ ಬೆಲೆ:

24 ಕ್ಯಾರೆಟ್ ಚಿನ್ನವನ್ನು ಅತ್ಯಂತ ಶುದ್ಧ ಚಿನ್ನ ಎಂದು ಪರಿಗಣಿಸಲಾಗುತ್ತದೆ. ಇಂದಿನ ದರದ ಪ್ರಕಾರ, 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ.13,582 ಆಗಿದೆ. 10 ಗ್ರಾಂ ಚಿನ್ನವನ್ನು ಖರೀದಿಸಲು ರೂ.1,35,820 ಖರ್ಚಾಗುತ್ತದೆ. 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ.13,58,200 ಆಗಿದ್ದು, ನಿನ್ನೆಯ ದರದಲ್ಲೇ ಸ್ಥಿರವಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ:

ಆಭರಣ ತಯಾರಿಕೆಗೆ ಹೆಚ್ಚು ಬಳಸಲಾಗುವ 22 ಕ್ಯಾರೆಟ್ ಚಿನ್ನದ ದರ ಇಂದು ಬದಲಾಗಿಲ್ಲ. 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.12,450 ಆಗಿದೆ. 10 ಗ್ರಾಂ ಚಿನ್ನಕ್ಕೆ ರೂ.1,24,500 ಬೆಲೆ ಇದೆ. 100 ಗ್ರಾಂ 22 ಕ್ಯಾರೆಟ್ ಚಿನ್ನವನ್ನು ಖರೀದಿಸಲು ರೂ.12,45,000 ಅಗತ್ಯವಿದೆ.

18 ಕ್ಯಾರೆಟ್ ಚಿನ್ನದ ಬೆಲೆ:

18 ಕ್ಯಾರೆಟ್ ಚಿನ್ನವನ್ನು ಸಾಮಾನ್ಯವಾಗಿ ಡಿಸೈನರ್ ಆಭರಣಗಳಿಗೆ ಬಳಸಲಾಗುತ್ತದೆ. ಇಂದಿನ ದರದಂತೆ 1 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ ರೂ.10,187 ಆಗಿದೆ. 10 ಗ್ರಾಂಗೆ ರೂ.1,01,870 ಖರ್ಚಾಗುತ್ತದೆ. 100 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ ರೂ.10,18,700 ಆಗಿದ್ದು, ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಬೆಂಗಳೂರಿನಲ್ಲಿ ಬೆಳ್ಳಿ ದರ:

ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ ದರ ಸ್ಥಿರವಾಗಿದೆ. ಇಂದಿನ ದರದಂತೆ 1 ಗ್ರಾಂ ಬೆಳ್ಳಿಯ ಬೆಲೆ ರೂ.241 ಆಗಿದ್ದು, ನಿನ್ನೆಗೂ ಹೋಲಿಸಿದರೆ ಯಾವುದೇ ಬದಲಾವಣೆ ಇಲ್ಲ. 10 ಗ್ರಾಂ ಬೆಳ್ಳಿಗೆ ರೂ.2,410 ಮತ್ತು 100 ಗ್ರಾಂಗೆ ರೂ.24,100 ದರ ಇದೆ. ಹಾಗೆಯೇ 1 ಕೆಜಿ (1000 ಗ್ರಾಂ) ಬೆಳ್ಳಿಯ ಇಂದಿನ ಬೆಲೆ ರೂ.2,41,000 ಆಗಿದ್ದು, ನಿನ್ನೆದಿನದ ದರದಲ್ಲೇ ಮುಂದುವರೆದಿದೆ.

ಸ್ಪಾಟ್ ಗೋಲ್ಡ್ ವಿವರ:

ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಜನವರಿ 2ರಂದು ಜಾಗತಿಕ ಮಾರುಕಟ್ಟೆಯಲ್ಲಿ ಪ್ರತ್ಯಕ್ಷ ಚಿನ್ನದ ಬೆಲೆ ಇತ್ತೀಚೆಗೆ ಹೆಚ್ಚಳವನ್ನು ಕಂಡಿದೆ. 2026 ರ ಜನವರಿ 2 ರ ಬೆಳಿಗ್ಗೆ 03:57 GMT ಸಮಯಕ್ಕೆ ಪ್ರತ್ಯಕ್ಷ ಚಿನ್ನದ ಬೆಲೆ ಪ್ರತಿ ಒನ್ಸ್ (31.1 ಗ್ರಾಂ) ರೂ.4,372.02 ಗೆ ಏರಿಕೆಯಾಗಿದೆ, ಇದು ಹತ್ತಿರ 1.3% ಏರಿಕೆಯಾಗಿದೆ.

ಒಟ್ಟಾರೆ, ಇಂದು ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ನೀವು ಹೂಡಿಕೆ ಅಥವಾ ಆಭರಣ ಖರೀದಿ ಮಾಡುವ ಯೋಚನೆಯಲ್ಲಿ ಇದ್ದರೆ, ಇಂದಿನ ಸ್ಥಿರ ದರಗಳು ನಿಮಗೆ ಸಹಾಯಕವಾಗಬಹುದು. ಮುಂದಿನ ದಿನಗಳ ಚಿನ್ನದ ಬೆಲೆ ಅಪ್ಡೇಟ್‌ಗಳಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲೇ ಇರಿ.

Credit: Goodreturns

Story first published: Sunday, January 4, 2026, 8:41 [IST]
X
Desktop Bottom Promotion