Latest Updates
-
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು
Heavy Rain: ಮತ್ತೊಂದು ಚಂಡಮಾರುತದ ಭೀತಿ! ಮತ್ತೆ ರಾಜ್ಯದಲ್ಲಿ ವರುಣಾರ್ಭಟ ಶುರು?
ರಾಜ್ಯದಲ್ಲಿ ಕಳೆದ ತಿಂಗಳಷ್ಟೇ ಮೊಂಥಾ ಚಂಡಮಾರುತದ ಅಬ್ಬರ ಜೋರಾಗಿತ್ತು. ಆದರೆ ಇದೀ ಮತ್ತೊಂದು ಚಂಡಮಾರುತ ಭೀತಿ ಎದುರಾಗಿದೆ. ಮಲೇಷ್ಯಾ ಮತ್ತು ಮಲಕ್ಕಾ ಜಲಸಂಧಿಯ ಬಳಿ ಉಂಟಾದ ವಾಯುಭಾರ ಕುಸಿತದಿಂದಾಗಿ, ಭಾರತಕ್ಕೂ ತಟ್ಟುವ ನಿರೀಕ್ಷೆಯಿದೆ. ಇನ್ನು ಈ ವಾಯುಭಾರ ಕುಸಿತ ಮುಂದಿನ ದಿನಗಳಲ್ಲಿ ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಲ್ಲದೇ ಈ ಚಂಡಮಾರುತಕ್ಕೆ ಸೆನ್ಯಾರ್ (Senyar Cyclone) ಎಂದು ಹೆಸರನ್ನೂ ಇಡಲಾಗಿದೆ.

ಇನ್ನು ಈ ಚಂಡಮಾರುತದ ಪರಿಣಾಮ ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಬೀರಬಹುದು. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ತಮಿಳುನಾಡು, ಕೇರಳ, ಲಕ್ಷದ್ವೀಪ. ಅಂಡಮಾನ್ ನಿಕೋಬಾರ್, ಕರ್ನಾಟಕ ಮತ್ತು ಆಂಧ್ರದಲ್ಲಿ ಭಾರೀ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ. ಅದರಲ್ಲೂ ತಮಿಳುನಾಡಿನಲ್ಲಿ ನವೆಂವರ್ 25 ರಿಂದ 30 ರವರೆಗೆ, ಕೇರಳ, ಅಂಡಮಾನ್‌ನಲ್ಲೂ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ರಾಜ್ಯದಲ್ಲಿ ಇಂದು ಮಳೆ ಕಡಿಮೆ!
ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಮಳೆ ಎಚ್ಚರಿಕೆಯನ್ನು ನೀಡುತ್ತಲೇ ಇದೆ. ಆದರೆ ಇಂದು ಮತ್ತೆ ಮಳೆ ಹಗುರವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೂ ಹವಾಮಾನ ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆಯಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮತ್ತೆ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನವೆಂಬರ್ ಅಂತ್ಯದ ವೇಳೆಗೆ ಕರಾವಳಿ ಕರ್ನಾಟಕದಲ್ಲಿ ಚಳಿ ಹೆಚ್ಚಾಗಲಿದ್ದಿ, ಇಬ್ಬನಿ ರಚನೆಯನ್ನು ತರಲಿದೆ ಎನ್ನಲಾಗಿದೆ. ಒಂದು ವೇಳೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರಚನೆಯಾದರೆ, ಹವಾಮಾನದಲ್ಲಿ ಮತ್ತಷ್ಟು ಬದಲಾವಣೆಯಾಗಬಹುದು, ಅದರಲ್ಲ ಕರಾವಳಿ ಭಾಗದಲ್ಲಿ ಗಾಳಿಯ ವೇಗ ಮತ್ತಷ್ಟು ಹೆಚ್ಚಾಗಬಹುದು ಎನ್ನಲಾಗಿದೆ.
ಬೆಂಗಳೂರಿನ ವಾತಾವರಣ
ಬೆಂಗಳೂರಿನಲ್ಲಿ ಕಳೆದವಾರವಿಡೀ ಮೋಡಕವಿದ ವಾತಾವರಣವಿತ್ತು. ಅದರಲ್ಲೂ ಈ ವಾರದ ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯೂ ಆಗಿದೆ. ಆದ್ರೆ ಇಂದು ಬೆಂಗಳೂರಿನಲ್ಲಿ ಮತ್ತೆ ಹಗುರ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಪರಿಣಾಮ ಬೆಂಗಳೂರಿನಲ್ಲಿ ಇಂದು ಮೋಡಕವಿದ ವಾತಾವರಣ ಇರಲಿದೆ.
ಭಾರತೀಯ ಹವಾಮಾನ ಇಲಾಖೆ (IMD) ವರದಿ ಪ್ರಕಾರ, ದಕ್ಷಿಣ ಮತ್ತು ಪೂರ್ವ ಭಾರತದಾದ್ಯಂತ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ. ಇದಕ್ಕೆಲ್ಲಾ ಕಾರಣ ಮಲಕ್ಕಾ ಜಲಸಂಧಿಯ ಮೇಲೆ ಉಂಟಾಗಿರುವ ವಾಯುಭಾರ ಕುಸಿತ ಮತ್ತು ನೈಋತ್ಯ ಬಂಗಾಳಕೊಲ್ಲಿಯಲ್ಲಿನ ಕಡಿಮೆ ಒತ್ತಡದ ಪ್ರದೇಶ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಈ ಬದಲಾವಣೆಗಳಿಂದಾಗಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಇಡೀ ವಾರ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ, ಅನೇಕ ರಾಜ್ಯಗಳಲ್ಲಿ ಗುಡುಗು ಸಹಿತ ಜೋರಾದ ಗಾಳಿ ಬೀಸುವ ಸಾಧ್ಯತೆ ಇದೆ ಎನ್ನಲಾಗಿದೆ.
IMD ಮಂಗಳವಾರದ ವರದಿ ಪ್ರಕಾರ, ಬಂಗಾಳಕೊಲ್ಲಿ, ಶ್ರೀಲಂಕಾದ ಭಾಗಗಳು ಮತ್ತು ಹಿಂದೂ ಮಹಾಸಾಗರದ ಮೇಲಿರುವ ಕಡಿಮೆ ಒತ್ತಡದ ಪ್ರದೇಶವು ಮುಂದಿನ 24 ಗಂಟೆಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಈ ವ್ಯವಸ್ಥೆಯು ನೈಋತ್ಯ ಮತ್ತು ಮಧ್ಯ ಬಂಗಾಳಕೊಲ್ಲಿ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿ, ಪಶ್ಚಿಮ ಶ್ರೀಲಂಕಾ ಸಮೀಪದ ಜಲಪ್ರದೇಶಗಳಲ್ಲಿ ಹಗುರದಿಂದ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆ ಬರಬಹುದು ಎನ್ನಲಾಗಿದೆ.
Credit: Goodreturns



Click it and Unblock the Notifications
