Latest Updates
-
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ
Drumstick Price: ಮಟನ್ ದರದಲ್ಲಿ ನುಗ್ಗೆಕಾಯಿ! ಒಂದು ಕೆಜಿ ನುಗ್ಗೆ ಬೆಲೆ 700 ರೂಪಾಯಿ
ಕರ್ನಾಟಕದಲ್ಲಿ (Karnataka) ಭಾರೀ ಬೇಡಿಕೆಯ ತರಕಾರಿ ಮತ್ತು ಆಯುರ್ವೇದದಲ್ಲಿ "ಮಹೌಷಧಿ" ಸಸ್ಯಗಳಲ್ಲಿ ನುಗ್ಗೆಕಾಯಿ ಕೂಡಾ ಒಂದು. ದಕ್ಷಿಣ ಭಾರತದಲ್ಲಿ (South India) ಮಾತ್ರವಲ್ಲದೇ ವಿದೇಶಗಳಲ್ಲೂ ಇದನ್ನು ಬೆಳೆಯಲಾಗುತ್ತದೆ. ಒಂದು ಕಾಲದಲ್ಲಿ ಕಮ್ಮಿ ಬೆಲೆಯಲ್ಲಿ, ಮನೆಯಲ್ಲೇ ಬೆಳೆದು ತಿನ್ನುತ್ತಿದ್ದ ನುಗ್ಗೆಕಾಯಿ ಇಂದು ದುಬಾರಿಯಾಗಿಬಿಟ್ಟಿದೆ. ಅಚ್ಛರಿಯ ವಿಷಯವೆಂದರೆ ಕೋಳಿಯ ಬೆಲೆಯನ್ನು ಮೀರಿ, ಮಟನ್ ಬೆಲೆಯಷ್ಟು ಇಂದು ನುಗ್ಗೆಕಾಯಿ ಬೆಲೆಯಾಗಿದೆ. ಅಂದರೆ 1 ಕೆಜಿ ನುಗ್ಗೆಕಾಯಿ ಬೆಲೆ 600 ರಿಂದ 700 ರೂ. ಆಗಿದೆ.

ಮಟನ್‌ಗೆ ಸರಿಸಮಾನವಾದ ನುಗ್ಗೆಕಾಯಿ ದರ!
ರಾಜ್ಯದೆಲ್ಲೆಡೆ ಚಳಿಗಾಲ ಆರಂಭವಾಗಿದೆ. ಆದರೂ ಅಲ್ಲಲ್ಲಿ ಮಳೆ ಸುರಿಯುತ್ತಲೇ ಇದೆ. ಅದೇ ರೀತಿ ನುಗ್ಗೆಕಾಯಿ ಬೆಳೆಗೆ ಅನುಕೂಲಕರ ಹವಾಮಾನ ಅತ್ಯಗತ್ಯ. ಆದರೆ ಈ ಬಾರಿಯಂತೂ ಎಡೆಬಿಡದೆ ಮಳೆ, ಚಂಡಮಾರುತ, ಅತಿಯಾದ ಬಿಸಿಲಿನಿಂದಾಗಿ ನುಗ್ಗೆಕಾಯಿ ಬೆಳೆಯಲ್ಲಿ ಪ್ರತಿಕೂಲ ಪರಿಣಾಮ ಬೀರಿದೆ. ಅದರಲ್ಲೂ ಕರ್ನಾಟಕದ ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ತುಮಕೂರಿನಲ್ಲಿ ನುಗ್ಗೆಕಾಯಿ ಉತ್ಪಾದನೆ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಈ ಹಿಂದೆ 100 ಟನ್ ಬರುತ್ತಿದ್ದ ನುಗ್ಗೆಕಾಯಿ, ಇಂದು ಕೇವಲ 30 ರಿಂದ 40 ಟನ್ ಮಾತ್ರ ಮಾರುಕಟ್ಟೆಗೆ ಬರುತ್ತಿದೆ ಎನ್ನಲಾಗಿದೆ.
ದುಬಾರಿಯಾಯ್ತು ನುಗ್ಗೆಕಾಯಿ!
ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರತೀ ಕೆ.ಜಿ ನುಗ್ಗೆಕಾಯಿ ಬೆಲೆ 500 ರಿಂದ 600 ರೂಪಾಯಿ ಆಗಿದೆ. ನವೆಂಬರ್ ತಿಂಗಳ ಆರಂಭದಲ್ಲಿ ಒಂದು ಕೆಜಿ ನುಗ್ಗೆಕಾಯಿ ಬೆಲೆ 150 ರಿಂದ 200 ರೂಪಾಯಿಗಳವರೆಗೆ ಇತ್ತು. ಆದರೆ ಒಂದೇ ತಿಂಗಳಲ್ಲಿ ಮೂರು ಒಟ್ಟು ಏರಿಕೆಯಾಗಿದೆ. ಅದರಲ್ಲೂ ಕೆಲವು ಮಾರಾಟಗಾರರು ಕೆಜಿಗೆ 700 ರೂ.ನಲ್ಲೂ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ನುಗ್ಗೆಕಾಯಿ ದರ ಮಟನ್ ಬೆಲೆಗೆ ಸರಿಸಮಾನವಾಗಿದೆ.
ಒಂದೆಡೆ ಮದುವೆ ಸೀಸನ್, ಮತ್ತೊಂದೆಡೆ ಹಬ್ಬಗಳ ಸೀಸನ್, ಇನ್ನೂ ಒಂದು ಕಡೆ ಶಬರಿಮಲೆ ಯಾತ್ರೆ. ಎಲ್ಲಿ ಕೇಳಿದರು ದಿನಕ್ಕೆ ಎರಡರಿಂದ ಮೂರು ಮದುವೆ ಸಮಾರಂಭಗಳು. ಈ ಸಂದರ್ಭದಲ್ಲಿ ಕೆಲವರು ನಾನ್‌ವೆಜ್ ಮಾಡಿದರೂ, ಸ್ವಲ್ಪ ಮಟ್ಟಿಗಾದರೂ ತರಕಾರಿ ಬೇಕೇಬೇಕು. ಆದ್ರೆ ಈ ಬೇಡಿಕೆಯೇ ಇಂದು ತರಕಾರಿ ಬೆಲೆ ದುಬಾರಿಯಾಗಲು ಕಾರಣವಾಗಿದೆ.
ಎಲ್ಲೆಲ್ಲಿ ಎಷ್ಟಿದೆ ನುಗ್ಗೆಕಾಯಿ ದರ?
ಇನ್ನು ಕುಂದಾಪುರದಲ್ಲಿ ಇಂದು ಒಂದು ಕೆಜಿ ನುಗ್ಗೆಕಾಯಿ ಬೆಲೆ 750 ರೂ. ಆಗಿದ್ದು, ಎರಡು ದಿನಗಳ ಹಿಂದಷ್ಟೇ 500 ರೂ. ಇತ್ತು. ಅದೇ ರೀತಿ ಮಂಗಳೂರು ಮಾರುಕಟ್ಟೆಯಲ್ಲಿ ನುಗ್ಗೆ ಕಾಯಿ ಬೆಲೆ ಕೆಜಿಗೆ 700 ರಿಂದ 720 ರೂಪಾಯಿ ಆಗಿದೆ. ಸದ್ಯ ಕರ್ನಾಟಕದಲ್ಲಿ ಪೂರೈಕೆ ಕಡಿಮೆಯಾಗಿದ್ದು, ತಮಿಳುನಾಡಿನಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಆದ್ರೆ ಅಲ್ಲಿನ ಬೆಳೆ ಕರ್ನಾಟಕಕ್ಕೆ ಬರುವವರೆಗೂ ಮಾರುಕಟ್ಟೆಯಲ್ಲಿ ದರ ಇದೇ ರೀತಿ ಮುಂದುವರೆಯಲಿದೆ ಎಂದು ವರದಿಯಾಗಿದೆ.
ಇಳಿಕೆಯಾಗುತ್ತಾ ನುಗ್ಗೆಕಾಯಿ ದರ?
ವರದಿಕಾ ಪ್ರರ, ಡಿಸೆಂಬರ್-ಜನವರಿ ವೇಳೆ ಹವಾಮಾನ ಸ್ಥಿರಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನುಗ್ಗೆಕಾಯಿ ಬೆಳೆಗೂ ಅನುಕೂಲವಾಗಲಿದೆ. ಆದರೆ ಹೆಚ್ಚಿನ ಬೆಳೆ ಬರುವವರೆಗೂ ಬೆಲೆ ಇದೇ ರೀತಿ ಇರಲಿದ್ದು, ಇಳಿಕೆಯಾಗುವುದಿಲ್ಲ ಎನ್ನಲಾಗಿದೆ.
Credit: Goodreturns



Click it and Unblock the Notifications











