Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
Chicken Price Hike: ಚಿಕನ್ ಬೆಲೆ 360ಕ್ಕೆ ಏರಿಕೆ! ಗ್ರಾಹಕರು ಶಾಕ್, ಯಾವಾಗ ಇಳಿಕೆಯಾಗುತ್ತೆ ಗೊತ್ತಾ?
ಬೆಂಗಳೂರು: ಮಾಂಸ ಪ್ರಿಯರಿಗೆ ಚಿಕನ್ ಅಂದ್ರೆ ಕೇಳೋದೆ ಬೇಡ. ತುಂಬಾ ಇಷ್ಟ ಪಡುತ್ತಾರೆ. ಆದರೆ ನಾನ್‌ವೆಜ್ (Nonveg) ಪ್ರಿಯರ ಕೋಳಿ, ಇದೀಗ ದುಬಾರಿಯಾಗಿಬಿಟ್ಟಿದೆ. ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಕೋಳಿ ಮಾಂಸದ ಬೆಲೆ ತೀವ್ರ ಏರಿಕೆ ಕಂಡಿದೆ. ಅದೆಷ್ಟೋ ಮಂದಿ ವಾರವಿಡೀ ಚಿಕನ್ ತಿನ್ನುತ್ತಿದ್ದರು, ಇನ್ನೂ ಕೆಲವು ಮಂದಿ ಭಾನುವಾರ ಬಂದ್ರೆ ಸಾಕು, ಚಿಕನ್ ತಂದು ಪಾರ್ಟಿ ಮಾಡುತ್ತ ಕಾಲ ಕಳೆಯುತ್ತಿದ್ದರು. ಆದ್ರೆ ಇದೀಗ ಈ ಎಲ್ಲಾ ಜಾಲಿಗಳನ್ನು, ಚಿಕನ್ ಬೆಲೆಯಿಂದಾಗಿ ಕಿಸೆ ಖಾಲಿ ಮಾಡುವಂತೆ ಮಾಡಿದೆ. ಬೆಂಗಳೂರಿನಲ್ಲಂತೂ ಒಂದು ಕೆಜಿ ಕೋಳಿ ಮಾಂಸದ ಬೆಲೆ 340 ರಿಂದ 360 ಕ್ಕೆ ಏರಿಕೆ ಕಂಡಿದೆ.

ಚಿಕನ್ ಬೆಲೆ ಭಾರೀ ಏರಿಕೆ!
ಎತ್ತಿಗೆ ಜ್ವರ ಬಂದ್ರೆ, ಎಮ್ಮೆಗೆ ಬರೆ ಹಾಕಿದ್ರು, ಅನ್ನೋ ಗಾದೆ ಮಾತನ್ನ ಎಲ್ಲರೂ ಕೇಳಿರಬಹುದು. ಅದೇ ಪರಿಸ್ಥಿತಿ ಇಂದು ಬೆಂಗಳೂರಿನಲ್ಲಾಗಿದೆ. ಎಲ್ಲೋ ನಡೆಯುತ್ತಿರುವ ಪ್ರತಿಭಟನೆಯ ಬಿಸಿ, ಬೆಂಗಳೂರಿನ ಚಿಕನ್ ಮಾಂಸದ ಬೆಲೆಗೆ ತಟ್ಟಿದೆ. ಭಾನುವಾರ ಬಂದ್ರೆ ಸಾಕು ನಾನ್‌ವೆಜ್ ಪ್ರಿಯರಂತೂ ಚಿಕನ್, ಮಟನ್ ಅಂತ ಹಲವು ಬಗೆಯ ಖಾದ್ಯಗಳನ್ನು ತಯಾರಿಸಿ, ತಿನ್ನಲು ಶುರು ಮಾಡುತ್ತಾರೆ. ಆದ್ರೆ ಈ ವಾರದಲ್ಲಿ ಚಿಕನ್ ಬೆಲೆ ನೋಡಿದ್ರೆ, ತಿನ್ನೋದೆ ಬೇಡವೆಂಬಂತಾಗಿದೆ. ಇದೇ ರೀತಿ ಮುಂದುವರೆದರೆ, ಮುಂದೊಂದು ದಿನ ಮಟನ್ ಬೆಲೆಯಷ್ಟೇ ಚಿಕನ್ ದುಬಾರಿಯಾಗಬಹುದು ಎಂದು ಹಲವರು ಹೇಳುತ್ತಿದ್ದಾರೆ.
ಬೆಲೆ ಏರಿಕೆಗೆ ಕಾರಣಗಳೇನು?
ಕಳೆದ ಡಿಸೆಂಬರ್‌ನಲ್ಲಿ ಬ್ರಾಯ್ಲರ್ ಚಿಕನ್ ಮಾಂಸದ ಬೆಲೆ ಕೆಜಿಗೆ 260 ರಿಂದ 280 ರೂ.ನಲ್ಲಿ ಇತ್ತು. ಆದ್ರೆ ಇದೀಗ ಈ ಬೆಲೆ 340 ರಿಂದ 360 ರೂ.ಗೆ ತಲುಪಿದೆ. ಇದಕ್ಕೆ ಕಾರಣಗಳು ಕೆಳಗೆ ನೀಡಲಾಗಿದೆ.
ತಮಿಳುನಾಡಿನಲ್ಲಿ ಕೋಳಿ ಸಾಕಾಣಿಕೆದಾರರ ಮುಷ್ಕರ:
ತಮಿಳುನಾಡಿನಲ್ಲಿ ಕೋಳಿ ಸಾಕಾಣಿಕೆದಾರರು, ಖಾಸಗಿ ಕಂಪನಿಗಳು ನೀಡುತ್ತಿರುವ ಕಡಿಮೆ ಸಾಕಾಣಿಕೆ ದರಕ್ಕೆ ವಿರೋಧಿಸಿ ಜನವರಿ 1, 2026 ರಿಂದ ಉತ್ಪಾದನೆಗೆ ಬ್ರೇಕ್ ನೀಡಿದ್ದಾರೆ. ಇದರಿಂದ ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಚಿಕನ್ ಪೂರೈಕೆ ಮಟ್ಟ ಭಾರೀ ಇಳಿಕೆಯಾಗಿದೆ. ಬೆಂಗಳೂರು ಮತ್ತು ಕರ್ನಾಟಕದಲ್ಲಿ ತಮಿಳುನಾಡಿನ ಕೋಳಿಗಳಿಗೆ ಭಾರೀ ಬೇಡಿಕೆಯಿದೆ. ಆದ್ರೆ ಇತ್ತೀಚೆಗೆ ಪೂರೈಕೆ ಕಡಿಮೆಯಾದ್ದರಿಂದ, ಬೆಲೆಯೂ ದಿಢೀರ್ ಏರಿಕೆ ಕಂಡಿದೆ.
ಚಳಿಗಾಲದ ಪರಿಣಾಮ:
ಚಳಿಗಾಲದಲ್ಲಿ ಸಾಮಾನ್ಯವಾಗಿ ಕೋಳಿಗಳ ಬೆಳವಣಿಗೆ ನಿಧಾನವಾಗುತ್ತದೆ. ಅಲ್ಲದೇ ಬಹುತೇಕ ಕೋಳಿಗಳು ಈ ಸಂದರ್ಭದಲ್ಲಿ ಸಾಯುತ್ತವೆ ಅಂತಾನೂ ಹೇಳಲಾಗುತ್ತದೆ. ಇದರಿಂದ ಉತ್ಪಾದನೆ ಪ್ರಮಾಣವೂ ಕಡಿಮೆಯಾಗಿ, ಪೂರೈಕೆ ಕೊರತೆ ಉಂಟಾಗಿದೆ.
ಬೇಡಿಕೆ ಹೆಚ್ಚಳ:
ಜನವರಿ-ಫೆಬ್ರವರಿ ತಿಂಗಳುಗಳಲ್ಲಿ ಹಬ್ಬ-ಸಂಭ್ರಮಗಳು (ಹೊಸವರ್ಷ, ರಿಪಬ್ಲಿಕ್ ಡೇ) ಹೆಚ್ಚಾಗಿ ಇರುವುದರಿಂದ ಕೋಳಿ ಮಾಂಸದ ಬೇಡಿಕೆ ಹೆಚ್ಚಾಗಿದೆ ಎನ್ನಲಾಗಿದೆ.
ಇತರ ಕಾರಣಗಳು
- ಫೀಡ್ (ಕೋಳಿ ಆಹಾರ) ದರದಲ್ಲಿ ಏರಿಕೆ.
- ಸಾಗಾಣಿಕೆ ವೆಚ್ಚ ಮತ್ತು ಇಂಧನ ದರ ಹೆಚ್ಚಳ.
ಇಳಿಕೆಯಾಗುತ್ತಾ ಚಿಕನ್ ಬೆಲೆ?
ಚಿಕನ್ ಮಾಂಸದ ಬೆಲೆ ಈಗಾಗಲೇ 340-350 ರೂ. ದಾಟಿದೆ. ಆದರೆ ಮುಂದಿನ ದಿನಗಳಲ್ಲಿ ಯಾವುದೇ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ತಮಿಳುನಾಡಿನಲ್ಲಿ ಮುಷ್ಕರ ಮುಂದುವರೆದರೆ ಕೋಳಿ ಮಾಂಸದ ಬೆಲೆ 400 ರೂ. ದಾಟುವ ಸಾಧ್ಯತೆಯೂ ಇದೆ. ಕರ್ನಾಟಕದ ಪೌಲ್ಟ್ರಿ ಸಾಕಾಣಿಕೆದಾರರು ಈಗಾಗಲೇ ಉತ್ಪಾದನೆ ಹೆಚ್ಚಿಸುತ್ತಿದ್ದಾರೆ ಎಂದು ವರದಿಯಾಗಿದ್ದರೂ, ಪೂರೈಕೆ ಸಾಮಾನ್ಯ ದಿನದಂತಾಗಲು ಕಮ್ಮಿಯಂದರೂ 10 ರಿಂದ 15 ದಿನಗಳು ಬೇಕಾಗಬಹುದು ಎನ್ನಲಾಗಿದೆ.
Credit: Goodreturns



Click it and Unblock the Notifications