Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
Dharmendra Passes Away: ಹಿರಿಯ ನಟ ಧರ್ಮೇಂದ್ರ ನಿಧನ, ಭಾರತ ಚಿತ್ರರಂಗದ ಒಂದು ಯುಗಾಂತ್ಯ
ಬಾಲಿವುಡ್‌ನ ಹೀ-ಮ್ಯಾನ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಲೆಜೆಂಡ್ ನಟ ಧರ್ಮೇಂದ್ರ ಅವರು ನಿಧರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಉಸಿರಾಟದ ತೊಂದರೆಯಿಂದಾಗಿ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಧರ್ಮೇಂದ್ರ ಅವರಿಗೆ 89 ವರ್ಷ ವಯಸ್ಸಾಗಿತ್ತು. ಇವರು ಬಾಲಿವುಡ್‌ನ ಮೋಸ್ಟ್ ಹ್ಯಾಂಡ್‌ಸಮ್ ನಟ ಎಂದು ಕರೆಸಿಕೊಂಡಿದ್ದರು. ಧರ್ಮೇಂದ್ರ ಅವರ ನಿಧನದಿಂದ ಭಾರತೀಯ ಚಿತ್ರರಂಗದಲ್ಲಿ ಒಂದು ಯುಗದ ಅಂತ್ಯವಾಗಿದೆ ಎಂದು ಹೇಳಲಾಗುತ್ತಿದೆ. ತಮ್ಮ ಸುದೀರ್ಘ ಸಿನಿಮೀಯ ವೃತ್ತಿಜೀವನದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಐಎಎನ್‌ಎಸ್ ಪ್ರಕಾರ, ಬಾಲಿವುಡ್ ಐಕಾನ್ ಧರ್ಮೇಂದ್ರ ಇಂದು ನಿಧನರಾದರು. ಹೇಮಾ ಮಾಲಿನಿ ಅವರು ತಮ್ಮ ಪತಿ ಧರ್ಮೇಂದ್ರ ಅವರಿಗೆ ಅಂತಿಮ ವಿದಾಯ ಹೇಳಲು ವಿಲೇ ಪಾರ್ಲೆ ವೆಸ್ಟ್‌ನಲ್ಲಿರುವ ಪವನ್ ಹನ್ಸ್ ಸ್ಮಶಾನಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ. ಧರ್ಮೇಂದ್ರ ಅವರ ಅಂತಿಮ ವಿಧಿವಿಧಾನಗಳಿಗೆ ಕುಟುಂಬ ಸಿದ್ಧತೆ ನಡೆಸುತ್ತಿದ್ದು, ಅವರ ಮಗಳು ಇಶಾ ಡಿಯೋಲ್ ಕೂಡ ಸ್ಮಶಾನ ತಲುಪುತ್ತಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಧರ್ಮೇಂದ್ರ ಅವರ ಅಂತ್ಯಕ್ರಿಯೆ ಪವನ್ ಹನ್ಸ್ ಸ್ಮಶಾನದಲ್ಲಿ ನಡೆಯಲಿದೆ.

ಶೋಲೆ, ಚುಪ್ಕೆ ಚುಪ್ಕೆ ಮತ್ತು ಫೂಲ್ ಔರ್ ಪತ್ತರ್ ನಂತಹ ಚಿತ್ರಗಳಲ್ಲಿ ನಟಿಸಿದ್ದ ಧರ್ಮೇಂದ್ರ ಅವರು ಮೋಡಿ ಮಾಡಿದ್ದರು. ಅವರ ಮೋಡಿ, ಅಭಿನಯದಿಂದ ಚಲನಚಿತ್ರ ಪ್ರೇಮಿಗಳ ಪೀಳಿಗೆಯನ್ನು ರೂಪಿಸಿದ್ದರು. ಇವರನ್ನು ಬಾಲಿವುಡ್‌ನ ದಂತಕಥೆ ಎಂದು ಕರೆಯಲಾಗುತ್ತಿತ್ತು. ಧರ್ಮೇಂದ್ರ ಅವರ ನಿಧನಕ್ಕೆ ಬಾಲಿವುಡ್ ತಾರೆಯರು ಕಂಬನಿ ಮಿಡಿದಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ಆಸ್ಪತ್ರೆಗೆ ಧರ್ಮೇಂದ್ರ ದಾಖಲಾಗಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನವೆಂಬರ್ 10ರಂದು ತೀವ್ರ ನಿಗಾ ಘಟಕಕ್ಕೆ ಕರೆದೊಯ್ಯಲಾಯಿತು. ನಂತರ ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. ಆಗಲೇ ಅವರು ನಿಧನರಾಗಿದ್ದಾರೆ ಎಂಬ ವದಂತಿಗಳು ಸಹ ಹಬ್ಬಿದ್ದವು. ಆದರೆ ಅವರ ಕುಟುಂಬವು ಅವುಗಳನ್ನು ನಿರಾಕರಿಸಿತ್ತು. ಧರ್ಮೇಂದ್ರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮನೆಯಲ್ಲಿಯೇ ಚೇತರಿಸಿಕೊಳ್ಳಲಿದ್ದಾರೆ ಎಂದು ಅವರ ಕುಟುಂಬಸ್ಥರು ಹೇಳಿದ್ದರು.
ಧರ್ಮೇಂದ್ರ ಅವರ ಪತ್ನಿ ನಟಿ ಹೇಮಾ ಮಾಲಿನಿ, ಪ್ರಕಾಶ್ ಕೌರ್, ಮಕ್ಕಳಾದ ನಟರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್, ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಅವರನ್ನು ಅಗಲಿದ್ದಾರೆ. ಧರ್ಮೇಂದ್ರ ಅವರ ನಿಧನವು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎನ್ನಲಾಗಿದೆ.
ಕರಣ್ ಜೋಹರ್ ಸಂತಾಪ
ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ಕೂಡ ಇನ್ಸ್ಟಾಗ್ರಾಂ ಪೋಸ್ಟ್ ಹಂಚಿಕೊಂಡು ಧರ್ಮೇಂದ್ರ ಅವರ ನಿಧನದ ಸುದ್ದಿ ಖಚಿತಪಡಿಸಿದ್ದಾರೆ. "ಇದು ಒಂದು ಯುಗದ ಅಂತ್ಯ, ಒಬ್ಬ ದೊಡ್ಡ ಮೆಗಾ ಸ್ಟಾರ್, ಮುಖ್ಯವಾಹಿನಿಯ ಸಿನಿಮಾದಲ್ಲಿ ಒಬ್ಬ ನಾಯಕನ ಸಾಕಾರ. ನಂಬಲಾಗದಷ್ಟು ಸುಂದರ ಮತ್ತು ಅತ್ಯಂತ ನಿಗೂಢ ಪರದೆಯ ಉಪಸ್ಥಿತಿ. ಅವರು ಭಾರತೀಯ ಸಿನಿಮಾದ ನಿಜವಾದ ದಂತಕಥೆಯಾಗಿದ್ದಾರೆ ಮತ್ತು ಯಾವಾಗಲೂ ಇರುತ್ತಾರೆ ಎಂದು ಸಂತಾಪ ಸೂಚಿಸಿದ್ದಾರೆ.
Credit: Oneindia



Click it and Unblock the Notifications












