Latest Updates
-
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್
CSK ಮಾಜಿ ಪ್ಲೇಯರ್ ಜೊತೆ ಸದ್ದಿಲ್ಲದೇ ಮದುವೆಯಾದ ಬಿಗ್ ಬಾಸ್ ಸ್ಫರ್ಧಿ, ಇಬ್ಬರಿಗೂ ಇದು ಎರಡನೇ ಮದುವೆ
ಮದುವೆ ಬದುಕಿನ ಮಹತ್ವದ ಹಂತ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಅದಕ್ಕೆ ಮದುವೆ ಎನ್ನುವುದು ಒಂದೆರಡು ದಿನದ ಆಟ ಅಲ್ಲ, ಜೀವನ ಪೂರ್ತಿ ಸಂಗಾತಿಯ ಜೊತೆ ಬಾಳುತ್ತೇವೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವಂತಹ ಸುಸಂದರ್ಭ. ಆದರೆ ಕೆಲವೊಮ್ಮೆ ಸಂದರ್ಭ ಮತ್ತು ಪರಿಸ್ಥಿತಿ...
ಕೈಮೀರಿ ಹೋಗಿರುತ್ತವೆ. ಆಗ ವಿಚ್ಛೇದನ ಪಡೆಯದೇ ಬೇರೆ ದಾರಿಯೇ ಇಲ್ಲ ಎಂಬ ಭಾವನೆ ಬರುತ್ತೆ. ನಿರೀಕ್ಷೆಯಂತೆ ಸಂಬಂಧ ಕೂಡ ಮುರಿದು ಬೀಳುತ್ತೆ. ಹೀಗೆ ದಾಂಪತ್ಯ ಅಂತ್ಯವಾದಾಗ ಸಾಮಾನ್ಯವಾಗಿ ಅನೇಕರು ಮತ್ತೊಂದು ಮದುವೆಯಾಗುವ ಮನಸು ಮಾಡುವುದಿಲ್ಲ. ಅಯ್ಯೋ ಒಮ್ಮೆ ಅನುಭವಿಸಿದ್ದೇ ಸಾಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಇನ್ನು ಕೆಲವರು ಅಳೆದು ತೂಗಿ ಹೊಸ ಭರವಸೆಯ ಜೊತೆ ಹೊಸ ಬದುಕಿಗೆ ಇನ್ನೊಮ್ಮೆ ಮುನ್ನುಡಿ ಬರೆಯಲು ಅಣಿಯಾಗುತ್ತಾರೆ. ಇದಕ್ಕೆ ಸಂಯುಕ್ತಾ ಷಣ್ಮುಗನಾಥನ್ ಮತ್ತು ಅನಿರುದ್ಧ ಶ್ರೀಕಾಂತ್ ಸದ್ಯದ ಉದಾಹರಣೆ.

ಹೌದು, ಸಂಯುಕ್ತಾ ಷಣ್ಮುಗನಾಥನ್ .. ಕಾಲಿವುಡ್‌ನ ಕಿನ್ನರಿ. 2007ರಲ್ಲಿ ಮಿಸ್ ಚೆನ್ನೈ ಕಿರೀಟವನ್ನು ಮುಡಿಗೇರಿಸಿಕೊಂಡ ಚೆಲುವೆ. ''ತುಘ್ಲಕ್ ದರ್ಬಾರ್''.. ''ವಾರಿಸು''.. ಸೇರಿ ಹಲವು ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡ ಸಂಯುಕ್ತಾ 2020ರಲ್ಲಿ ತಮಿಳಿನ ''ಬಿಗ್ ಬಾಸ್'' ಸೀಸನ್ ನಾಲ್ಕರಲ್ಲಿ ಸ್ಫರ್ಧಿಯಾಗಿದ್ದರು.
ಇನ್ನೂ ಅನಿರುದ್ಧ ಶ್ರೀಕಾಂತ ವೃತ್ತಿಯಲ್ಲಿ ಈ ಹಿಂದೆ ಕ್ರಿಕೆಟ್ ಪ್ಲೇಯರ್ ಆಗಿದ್ದವರು. 2003 ರಿಂದ 2019ರವರೆಗೆ ರಣಜಿಯಲ್ಲಿ ತಮಿಳುನಾಡಿನ ಪರ ಆಡಿದವರು ಇವರು. 2008ರಿಂದ 2013ರವರೆಗೆ ಐಪಿಎಲ್‌ನಲ್ಲಿ ''ಚೆನ್ನೈ ಸೂಪರ್ ಕಿಂಗ್ಸ್'' ತಂಡದ ಪರ ಆಡಿದ್ದ ಅನಿರುದ್ಧ ಶ್ರೀಕಾಂತ 2011ರಲ್ಲಿ ''ಕೋಲ್ಕತ್ತಾ ನೈಟ್ ರೈಡರ್ಸ್'' ವಿರುದ್ಧದ ಮಹತ್ವದ ಪಂದ್ಯದಲ್ಲಿ 55 ಬಾಲ್‌ಗಳಲ್ಲಿ 64 ರನ್‌ಗಳನ್ನು ಸಿಡಿಸಿದ್ದರು. ಈ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಈ ಅನಿರುದ್ಧ ಶ್ರೀಕಾಂತ ಬೇರೆ ಯಾರು ಅಲ್ಲ ಬದಲಿಗೆ 1983ರ ವಿಶ್ವಕಪ್ ಹೀರೋಗಳಲ್ಲಿ ಒಬ್ಬರಾದ ಕೃಷ್ಣಮಾಚಾರಿ ಶ್ರೀಕಾಂತ್ ಅವರ ಮುದ್ದಿನ ಮಗ.
ಇಂಥಾ ಅನಿರುದ್ಧ ಶ್ರೀಕಾಂತ ಮತ್ತು ಸಂಯುಕ್ತಾ ಷಣ್ಮುಗನಾಥನ್, ಸದ್ದಿಲ್ಲದೇ ತಮ್ಮ ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ಈ ಮೂಲಕ ತಮ್ಮ ತಮ್ಮ ಅಭಿಮಾನಿಗಳಿಗೆ, ಹಿಂಬಾಲಕರಿಗೆ ಸರ್‌ಫ್ರೈಸ್ ನೀಡಿದ್ದಾರೆ.
ಅಂದ್ಹಾಗೇ ಅನಿರುದ್ಧ ಮತ್ತು ಸಂಯುಕ್ತಾ, ಇಬ್ಬರಿಗೂ ಇದು ಎರಡನೇ ಮದುವೆ. 2012ರಲ್ಲಿ ಅನಿರುದ್ಧ ಮಾಡೆಲ್ ಮತ್ತು ನಟಿಯಾಗಿ ಗುರುತಿಸಿಕೊಂಡಿರುವ ಆರತಿ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದರು. ಆದರೆ ಈ ಮದುವೆ ಕೇವಲ ಎರಡೇ ವರ್ಷಕ್ಕೆ ಮುರಿದು ಬಿತ್ತು. ಇನ್ನು ಸಂಯುಕ್ತಾ ಷಣ್ಮುಗನಾಥನ್ 2020ರ ತಮ್ಮ ಪೋಷಕರ ಒತ್ತಾಸೆಯಂತೆ ದುಬೈ ಮೂಲದ ಉದ್ಯಮಿ ಕಾರ್ತಿಕ್ ಶಂಕರ್ ಅವರ ಜೊತೆ ಮದುವೆಯಾಗಿದ್ದರು.
ಇವರಿಗೆ ರಾಯನ್ ಎಂಬ ಮಗ ಕೂಡ ಇದ್ದಾನೆ. ಗಂಡ-ಮನೆ-ಸಂಸಾರ ಎಂದು ಸಂಯುಕ್ತಾ ಖುಷಿಯಾಗಿಯೇ ಇದ್ದರು. ಆದರೆ, ಸಂಯುಕ್ತಾ ಬೆನ್ನ ಹಿಂದೆ ಮಾಡಬಾರದ್ದನ್ನೆಲ್ಲ ಕಾರ್ತಿಕ್ ಶಂಕರ್ ಮಾಡಲು ಶುರು ಮಾಡಿದ್ದರು. ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದರು. ಖುದ್ದು ಸಂಯುಕ್ತಾ ಈ ಮಾತನ್ನು ಈ ವರ್ಷದ ಆರಂಭದಲ್ಲಿ ಹೇಳಿದ್ದರು. ಹೀಗಾಗಿ ಈ ವರ್ಷದ ಆರಂಭದಲ್ಲಿ ಕಾರ್ತಿಕ್ ಶಂಕರ್ ಅವರಿಗೆ ವಿಚ್ಛೇದನ ನೀಡಿದ ಸಂಯುಕ್ತಾ ಫೋಟೊಶೂಟ್ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದರು.
ಹೀಗೆ ಮೊದಲ ಮದುವೆಯ ಸಂಬಂಧವನ್ನು ಮುರಿದುಕೊಂಡ ಅನಿರುದ್ಧ ಶ್ರೀಕಾಂತ್ ಮತ್ತು ಸಂಯುಕ್ತಾ ಷಣ್ಮುಗನಾಥನ್ ಈಗ ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ನವ ಜೋಡಿಗೆ ಸದ್ಯ ಬೆಳ್ಳಿತೆರೆ, ಕಿರುತೆರೆ ಮತ್ತು ಕ್ರಿಕೆಟ್ ಕ್ಷೇತ್ರದ ಹಲವರು ಶುಭಾಶಯವನ್ನು ಕೋರುತ್ತಿದ್ದಾರೆ.
Credit: Filmibeat



Click it and Unblock the Notifications

