Latest Updates
-
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ
Bigg Boss: 2ನೇ ಕ್ಲಾಸ್ ಓದಿರೋ ಯುವಕ ಬಿಗ್ ಬಾಸ್ ಕದ ತಟ್ಟಿದ್ದೇಗೆ? ಈಗ ಹೇಗಿದೆ ದಿವಾಕರ್ ಲೈಫ್?
ಬಿಗ್ ಬಾಸ್ ಕನ್ನಡ ಹಲವು ಮಂದಿಗೆ ಒಳ್ಳೆಯ ವೇದಿಕೆ ಕೊಟ್ಟಿದೆ. ಅವರ ವೃತ್ತಿ ಬದುಕನ್ನು ಇನ್ನಷ್ಟು ಉತ್ತುಂಗಕ್ಕೆ ಕರೆದುಕೊಂಡು ಹೋಗಿದೆ. ಆದರೆ, ಕೆಲವರು ಏನಾದರು? ಬಿಗ್ ಬಾಸ್ ಫೇಮ್ ಅನ್ನು ಬಳಸಿಕೊಳ್ಳುವುದಕ್ಕೆ ಯಾಕೆ ವಿಫಲರಾದರು? ಅನ್ನೋದು ಪ್ರಶ್ನೆ ಇನ್ನೂ ಹಲವರನ್ನು ಕಾಡುತ್ತಲೇ ಇದೆ. ಬಿಗ್ ಬಾಸ್ ಕನ್ನಡದ 12 ಸೀಸನ್‌ಗಳಲ್ಲಿ 5ನೇ ಸೀಸನ್ ವಿಭಿನ್ನವಾಗಿ ನಿಂತಿತ್ತು.
ಹೌದು, ಬಿಗ್ ಬಾಸ್ ಕನ್ನಡದ 5ನೇ ಸೀಸನ್‌ನಲ್ಲಿ ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿತ್ತು. ಆ ಕೋಟಾದಲ್ಲಿ ಆಯ್ಕೆಯಾಗಿದ್ದವರು ದಿವಾಕರ್. ಬಿಗ್ ಬಾಸ್ ಸೀಸನ್ 5 ಗೆಲ್ಲದೇ ಹೋದರೂ ಈ ರಿಯಾಲಿಟಿ ಶೋ ಮೂಲಕ ವೀಕ್ಷಕರಿಗೆ ಹತ್ತಿರವಾದರು. ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಏನೋ ಮಾಡೇ ಮಾಡುತ್ತಾರೆ ಅಂತ ವೀಕ್ಷಕರು ಮಾತಾಡಿಕೊಂಡರು.

ಕೆಲವು ವರ್ಷಗಳಿಂದ ಬಿಗ್ ಬಾಸ್ ದಿವಾಕರ್ ಸುದ್ದಿಯಲ್ಲಿ ಇರಲಿಲ್ಲ. ಸೈಲೆಂಟ್ ಆಗಿ ತೆರೆಮರೆಯಲ್ಲಿ ಉಳಿದು ಬಿಟ್ಟಿದ್ದರು. ಆದ್ರೀಗ ಫಿಲ್ಮಿಬೀಟ್ ಕನ್ನಡಕ್ಕೆ ಸಿಕ್ಕಿದ್ದು, ಅವರ ಲೈಫ್‌ನಲ್ಲಿ ಏನೆಲ್ಲ ನಡೆಯುತ್ತಿದೆ ಅನ್ನೋದನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಬಳಿಕ ಅವರ ಲೈಫ್ ಹೇಗಿದೆ? ಲೈಫ್‌ನಲ್ಲಿ ಏನೇನು ಆಗುತ್ತಿದೆ ಅನ್ನೋದನ್ನು ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಬಳಿಕ ಲೈಫ್ ಹೇಗಿದೆ?
"ಲೈಫ್ ತುಂಬಾನೇ ಚೆನ್ನಾಗಿದೆ ಅಂತ ಹೇಳುವುದಕ್ಕಿಂತ ಅದ್ಭುತವಾಗಿದೆ. ಇದೆಲ್ಲದಕ್ಕೂ ನನಗೆ ಬಿಗ್ ಬಾಸ್ ಕಾರಣ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ನನಗಂತೂ ಇದು ತುಂಬಾನೇ ದೊಡ್ಡ ವೇದಿಕೆ. ಕೆಲವರು ಬಿಗ್ ಬಾಸ್ ಅನ್ನು ಏನು ಅಂದುಕೊಳ್ಳುತ್ತಾರೋ ಗೊತ್ತಿಲ್ಲ. ನನಗಂತೂ ಬಹಳ ದೊಡ್ಡ ಅವಕಾಶ. ನನ್ನನ್ನು ಎಲ್ಲಾ ಗುರುತು ಹಿಡಿಯುತ್ತಾರೆ, ಬ್ಯುಸಿನೆಸ್, ಸಿನಿಮಾಗಳನ್ನು ಮಾಡಿದ್ದೇನೆ ಅಂದರೆ, ಅದೆಲ್ಲದಕ್ಕೂ ಕಾರಣವೇ ಬಿಗ್ ಬಾಸ್. ಇದನ್ನು ಹೇಗೆ ವರ್ಣಿಸಬೇಕೋ ಗೊತ್ತಿಲ್ಲ"
BBK 12: "ಗಿಲ್ಲಿ.. ಬಿಗ್ ಬಾಸ್ ಮನೆಗೆ ನಿನ್ನ ಒಬ್ಬನ್ನು ಮೆಚ್ಚಿಸುವುದಕ್ಕೆ ಬಂದಿಲ್ಲ"; ಅಶ್ವಿನಿ ಗೌಡ 2.0 ಶುರು!
ನಿಮ್ಮ ಲೈಫ್‌ನಲ್ಲಿ ಬಿಗ್ ಬಾಸ್ ಎಫೆಕ್ಟ್ ಏನು?
"ನಾನು ಬಿಗ್ ಬಾಸ್‌ಗೆ ಹೋಗುವುದಕ್ಕೂ ಮುನ್ನ ಸೇಲ್ಸ್ ಮ್ಯಾನ್ ಆಗಿ ಹೋದವನು. ಬಿಗ್ ಬಾಸ್‌ಗೆ ಹೋಗಿ ಬಂದ್ಮೇಲೆ 10ಕ್ಕಿಂತ ಹೆಚ್ಚು ಪಟ್ಟು ಬ್ಯುಸಿನೆಸ್ ಆಗುತ್ತಿದೆ. ಎರಡನೆಯದ್ದು ನಾನು ಕಂಡಿರುವ ಕನಸು. ನಾನು ಹೀರೋ ಆಗಬೇಕು ಅಂತ ಬೆಂಗಳೂರಿಗೆ ಬಂದೋನು. ಅದೆಲ್ಲವನ್ನೂ ನನಸು ಮಾಡಿದ್ದು ಬಿಗ್ ಬಾಸ್. ದರ್ಶನ್ ಸರ್, ಸುದೀಪ್ ಸರ್ ಅನ್ನು ಪೊಲೀಸ್ ಗೆಟಪ್‌ನಲ್ಲಿ ನೋಡಬೇಕಾದರೆ, ನಾನು ಒಂದು ಸಿನಿಮಾದಲ್ಲಿ ಪೊಲೀಸ್ ಆಗಿ ನಟಿಸಬೇಕು ಅಂತ ಆಸೆ ಇಟ್ಟವನು. ಫಸ್ಟ್ ಸಿನಿಮಾ 'ರೇಸ್'ನಲ್ಲಿ ಪೊಲೀಸ್ ಪಾತ್ರವೇ ಸಿಕ್ಕಿತ್ತು."
ಬಿಗ್ ಬಾಸ್‌ನಿಂದ ಬಂದ್ಮೇಲೆ ಏನಾಯ್ತು?
"ಬಿಗ್ ಬಾಸ್‌ನಿಂದ ಹೊರ ಬಂದ್ಮೇಲೆ ಬಹಳಷ್ಟು ಮಂದಿ ಸಿಕ್ಕಿದರು. ಅಷ್ಟು ಕೊಡಿ ಹೀರೊ ಆಗಬಹುದು. ಇಷ್ಟು ಕೊಡಿ ಅಂತ ಬಂದರು. ಈಗೀನ ಯುವಕರಿಗೂ ಅದನ್ನೇ ಹೇಳುತ್ತಾರೆ. ₹5 ಲಕ್ಷ ಕೊಡಿ, ₹10 ಲಕ್ಷ ಕೊಡಿ ಹೀರೊ ಆಗಬಹುದು ಎನ್ನುತ್ತಾರೆ. ಅವರಿಗೆ ಹೇಳೋದು ಏನಂದರೆ, ನೀವು ಪಡುವ ಕಷ್ಟವೇ ನಿಮ್ಮನ್ನು ಹೀರೋ ಮಾಡುತ್ತೆ. ದುಡ್ಡು ಖರ್ಚು ಮಾಡಿ ಸಿನಿಮಾ ಮಾಡಬಹುದು. ಸ್ಟಾರ್ ಆಗೋದು ಕಷ್ಟ" ಎನ್ನುತ್ತಾರೆ.
ಬಿಗ್ ಬಾಸ್ ದಿವಾಕರ್‌ಗೆ ಸಿನಿಮಾಗಳಲ್ಲಿ ಅವಕಾಶಗಳಿಗೆ ಅವಕಾಶ ಬಂದಿತ್ತು. ಆದರೆ, ಅವರು ಅಂದುಕೊಂಡಂತಹ ಬಿಗ್ ಬಜೆಟ್ ಸಿನಿಮಾಗಳು ಸಿಕ್ಕಿಲ್ಲ. ಇಂದಿಗೂ ತನ್ನ ಕನಸುಗಳನ್ನು ಈಡೇರಿಸಿಕೊಳ್ಳುವುದಕ್ಕೆ ದಿವಾಕರ್ ಶತಪ್ರಯತ್ನ ಮಾಡುತ್ತಲೇ ಇದ್ದಾರೆ. ಸದ್ಯ ಬ್ಯುಸಿನೆಸ್ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.
Credit: Filmibeat



Click it and Unblock the Notifications











