BBK12: ಮಿಡ್ ವೀಕ್ ಎಲಿಮಿನೇಷನ್ ಶಾಕ್; ಮೊನ್ನೆ ಕಿಚ್ಚನ ಚಪ್ಪಾಳೆ ಪಡೆದ ಸ್ಪರ್ಧಿಯೇ ಔಟ್!

By Narayana M

ಕಲರ್ಸ್ ಕನ್ನಡ ಬಿಗ್‌ಬಾಸ್ ಸೀಸನ್ 12ರ ಫಿನಾಲೆಗೆ ಇನ್ನು 3 ದಿನ ಬಾಕಿಯಿದೆ. ಈಗಾಗಲೇ 100 ದಿನ ಪೂರೈಸಿ ಶೋ ಮುಂದುವರೆಯುತ್ತಿದೆ. ರಾಶಿಕಾ ಎಲಿಮಿನೇಟ್ ಆಗಿ ಹೊರಬಂದ ಬಳಿಕ ಬಿಗ್‌ಬಾಸ್ ಮನೆಯಲ್ಲಿ 7 ಮಂದಿ ಉಳಿದುಕೊಂಡಿದ್ದರು. ಇದೀಗ ಮನೆಮಂದಿಗೆ ಮಿಡ್‌ವೀಕ್ ಎಲಿಮಿನೇಷನ್ ಶಾಕ್ ಎದುರಾಗಿದೆ.

ಮಂಗಳವಾರ(ಜನವರಿ 13) ರಾತ್ರಿಯೇ ಒಬ್ಬರು ಬಿಗ್‌ಬಾಸ್ ಜರ್ನಿ ಮುಗಿಸಿ ಹೊರಬಂದಿದ್ದಾರೆ ಎಂದು ಹೇಳಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀಯಿದೆ. ಫಿನಾಲೆಗೆ ಹೋಗ್ತಾರೆ, ಅಂತಿಮ ಘಟ್ಟದ ತಲುಪುತ್ತಾರೆ, ವಿನ್ನರ್ ಕೂಡ ಆಗಬಹುದು ಎಂದುಕೊಂಡಿದ್ದ ಸ್ಪರ್ಧಿಯೇ ಮನೆಯಿಂದ ಹೊರ ಬಂದಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.


Bigg Boss Kannada Season 12 Shocking Midweek Elimination Stuns Fans Just Days Before Finale

ಪ್ರತಿಬಾರಿ ಬಿಗ್‌ಬಾಸ್ ಫಿನಾಲೆಗೂ ಮುನ್ನ ಮಿಡ್‌ನೈಟ್ ಎಲಿಮಿನೇಷನ್ ಶಾಕ್ ಎದುರಾಗುತ್ತದೆ. ಇನ್ನುಳಿದ 6 ಮಂದಿ ಫಿನಾಲೆವರೆಗೂ ಹೋಗುತ್ತಾರೆ. ಗ್ರ್ಯಾಂಡ್ ಫಿನಾಲೆ ವೇಳೆ 5ನೇ ರನ್ನರ್ ಅಪ್, 4ನೇ ರನ್ನರ್ ಹಾಗೂ 3ನೇ ರನ್ನರ್ ಅಪ್ ಯಾರು ಎನ್ನುವುದು ರಿವೀಲ್ ಆಗುತ್ತದೆ. ಅಂತಿಮವಾಗಿ ಇಬ್ಬರು ಉಳಿದುಕೊಳ್ಳುತ್ತಾರೆ. ಸುದೀಪ್ ಮನೆ ಒಳಗೆ ಹೋಗಿ ಟಾಪ್-2 ಸ್ಪರ್ಧಿಗಳನ್ನು ವೇದಿಕೆಗೆ ಕರೆತರುತ್ತಾರೆ. ಅಂತಿಮವಾಗಿ ಒಬ್ಬರ ಕೈ ಮೇಲೆತ್ತಿ ವಿಜೇತರು ಎಂದು ಘೋಷಿಸಲಾಗುತ್ತದೆ.

ಈ ಬಾರಿ ಕೂಡ ಅದೇ ರೀತಿ ಚಿತ್ರಣ ಎದುರಾಗಲಿದೆ. ಆದರೆ ಯಾರು ಫಿನಾಲೆಯಲ್ಲಿ ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿದೆ. ಗಿಲ್ಲಿ ನಟ ಗೆಲ್ಲೋದು ಖಚಿತ ಎಂದು ಸೋಶಿಯಲ್ ಮೀಡಿಯಾದಲ್ಲಿ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ. ಇನ್ನುಳಿದಂತೆ ಅಶ್ವಿನಿ ಗೌಡ ಹಾಗೂ ಧ್ರುವಂತ್ ಕೂಡ ಟ್ರೋಫಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ.

ಆರಂಭದಲ್ಲಿ ಎರಡು ವಾರಕ್ಕೆ ಎಲಿಮಿನೇಟ್ ಆಗುತ್ತಾರೆ ಎಂದುಕೊಂಡಿದ್ದ ಧ್ರುವಂತ್ ಅದ್ಭುತ ಪ್ರದರ್ಶನ ನೀಡಿ ಗೆದ್ದಿದ್ದರು. ಇಡೀ ಸೀಸನ್‌ನಲ್ಲಿ ಒಳ್ಳೆ ಪರ್ಫಾರ್ಮನ್ಸ್ ನೀಡಿದ್ದಾರೆ ಎಂದು ಹೇಳಿ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿತ್ತು. ಆದರೆ ಫಿನಾಲೆಗೂ ಮುನ್ನ ಧ್ರುವಂತ್ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಧ್ರುವಂತ್‌ಗೆ ಮಿಡ್‌ವೀಕ್ ಎಲಿಮಿನೇಷನ್ ಶಾಕ್ ಎದುರಾಗಿದೆ ಎಂದು ಹೇಳಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇಂದಿನ ಎಪಿಸೋಡ್‌ನಲ್ಲಿ ಈ ಬಗ್ಗೆ ಖಚಿತ ಮಾಹಿತಿ ಸಿಗಲಿದೆ.

13ನೇ ಸ್ಪರ್ಧಿಯಾಗಿ ಧ್ರುವಂತ್ ಬಿಗ್‌ಬಾಸ್ ಮನೆ ಒಳಗೆ ಹೋಗಿದ್ದರು. ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದ ಗಮನ ಸೆಳೆದಿದ್ದ ಧ್ರುವಂತ್ ಕೆಲ ವಿವಾದಗಳಿಂದ ಸುದ್ದಿ ಆಗಿದ್ದರು. ಬಂಟ್ವಾಳದಲ್ಲಿ ಹುಟ್ಟಿ ಕೊಡಗಿನಲ್ಲಿ ಬೆಳೆದ ಚರಿತ್ ಬಾಳಪ್ಪ ಪೂಜಾರಿ ಬಳಿಕ ಧ್ರುವಂತ್ ಅಂತ್ಲೇ ಬಣ್ಣದ ಲೋಕದಲ್ಲಿ ಮಿಂಚಿದ್ದರು. ಮಾಡೆಲಿಂಗ್ ಕ್ಷೇತ್ರದ ಮೂಲಕ ಬಣ್ಣದಲೋಕಕ್ಕೆ ಬಂದಿದ್ದರು.

ಬಿಗ್‌ಬಾಸ್ ಮನೆಗೆ ಬಂದ ಬಳಿಕ ಧ್ರುವಂತ್ ಬಗ್ಗೆ ಹೆಚ್ಚು ಮಾಹಿತಿ ವೀಕ್ಷಕರಿಗೆ ಸಿಕ್ಕಿತ್ತು. ಸಾಕಷ್ಟು ಬಾರಿ ನನಗೆ ಬಿಗ್‌ಬಾಸ್ ಮನೆಯಲ್ಲಿ ಇರೋಕೆ ಸಾಧ್ಯವಿಲ್ಲ, ನಾನು ಕೂಡಲೇ ಹೊರಗೆ ಹೋಗಬೇಕು ಕಳಿಸಿಬಿಡಿ ಎಂದು ಧ್ರುವಂತ್ ಕೇಳಿದ್ದರು. ಆದರೆ ಅದಕ್ಕೆ ಬಿಗ್‌ಬಾಸ್ ಒಪ್ಪಲಿಲ್ಲ. ಸುದೀಪ್ ಕೂಡ ತಿಳಿ ಹೇಳಿದ್ದರು. ಬಳಿಕ ವಾರದಿಂದ ವಾರಕ್ಕೆ ತಮ್ಮ ಪ್ರದರ್ಶನ ಹೆಚ್ಚಿಸಿಕೊಂಡಿದ್ದರು. ಅಶ್ವಿನಿ ಗೌಡ ಜೊತೆ ಆತ್ಮೀಯರಾಗಿ ಗುರ್ತಿಸಿಕೊಂಡರು. ಇಬ್ಬರೂ ಸೇರಿ ಮನೆಯ ಇನ್ನಿತರೆ ಸ್ಪರ್ಧಿಗಳಿಗೆ ಸವಾಲು ಹಾಕುತ್ತಾ ಬಂದಿದ್ದರು.

ಕಳೆದ ವಾರ ಕಿಚ್ಚನ ಚಪ್ಪಾಳೆ ಅಶ್ವಿನಿ ಗೌಡ ಅವರಿಗೆ ಸಿಕ್ಕಿದೆ. ಅಚ್ಚರಿ ಎನ್ನುವಂತೆ ಇಡೀ ಸೀಸನ್‌ ಪ್ರದರ್ಶನಕ್ಕಾಗಿ ಕಿಚ್ಚನ ಚಪ್ಪಾಳೆ ಧ್ರುವಂತ್ ಪಾಲಾಗಿತ್ತು. ಈ ಬಗ್ಗೆ ಬಹಳ ಚರ್ಚೆ ನಡೆದಿತ್ತು. ಇದೀಗ ಅದೇ ಧ್ರುವಂತ್ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ ಎನ್ನುವುದು ಸಾಕಷ್ಟು ಜನರಿಗೆ ಅಚ್ಚರಿ ಮೂಡಿಸಿದೆ. ಸೆಕೆಂಡ್ ರನ್ನರ್ ಆಗುತ್ತಾರೆ ಎಂದುಕೊಂಡಿದ್ದ ಧ್ರುವಂತ್ ಫಿನಾಲೆಗೂ ಹೋಗಲ್ವಾ? ಕಾದು ನೋಡಬೇಕಿದೆ.

Credit: Filmibeat

X
Desktop Bottom Promotion