Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
Gilli vs Rajath: "ಇದೆಲ್ಲಾ ಜಾಸ್ತಿ ಆಯ್ತು" ಎಂದ ರಜತ್ ಹಳೇ ವೀಡಿಯೋ ಬಿಟ್ಟು ಗಿಲ್ಲಿ ಫ್ಯಾನ್ಸ್ ಕೌಂಟರ್
ಬಿಗ್‌ಬಾಸ್ ಮನೆಯಲ್ಲೀಗ ಗಿಲ್ಲಿ ವರ್ಸಸ್ ರಜತ್ ಪೈಪೋಟಿ ಶುರುವಾಗಿದೆ. ಒಂದ್ಕಡೆ ಖಡಕ್ಕಾಗಿ ಕೂಗಾಡುವ ರಜತ್. ಮತ್ತೊಂದು ಕಡೆ ಸದಾ ಕಾಲೆಳೆದು ಕಾಮಿಡಿ ಮಾಡುವ ಗಿಲ್ಲಿ. ಹಾಗಿದ್ದ ಮೇಲೆ ಬೆಂಕಿ ಹೊತ್ತಿಕೊಳ್ಳದೇ ಇರುತ್ತಾ? ಬಿಗ್‌ಬಾಸ್ ಮನೆಯಲ್ಲಿ ಮಾತ್ರವಲ್ಲ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದೆ.
ರಜತ್ ಫ್ಯಾನ್ಸ್ ಹಾಗೂ ಗಿಲ್ಲಿ ಫ್ಯಾನ್ಸ್ ನಡುವೆ ಕೆಸರೆರಚಾರ ಜೋರಾಗಿದೆ. ಮೊದಲಿನಿಂದ ಕೆಲವರು ಗಿಲ್ಲಿಯನ್ನು ವಿರೋಧಿಸುತ್ತಾ ಬರುತ್ತಿದ್ದರು. ಆತನ ಕಾಮಿಡಿ ಅತಿಯಾಯಿತು ಎನ್ನುತ್ತಿದ್ದರು. ಅಂತಹವರೆಲ್ಲಾ ಈಗ ರಜತ್ ಬೆನ್ನಿಗೆ ನಿಂತಿದ್ದಾರೆ. ಗಿಲ್ಲಿಗೆ ಟಕ್ಕರ್ ಕೊಡೊಕೆ ರಜತ್ ಸರಿ ಎನ್ನುತ್ತಿದ್ದಾರೆ. ಆದರೆ ಅದಕ್ಕೆ ಗಿಲ್ಲಿ ಫ್ಯಾನ್ಸ್ ಸುಮ್ಮನಿರ್ತಾರಾ? ಸರಿಯಾಗಿಯೇ ತಿರುಗೇಟು ಕೊಡ್ತಿದ್ದಾರೆ.

ಬಿಗ್‌ಬಾಸ್ ಸೀಸನ್ 12 ಕಳೆಕಟ್ಟಿರುವುದು ಗಿಲ್ಲಿಯಿಂದಲೇ. ಅದನ್ನು ಒಪ್ಪಿಕೊಳ್ಳಲೇಬೇಕು. ಆದರೆ ಕೆಲವೊಮ್ಮೆ ಗಿಲ್ಲಿ ತಮಾಷೆ ಬೇರೆಯವರಿಗೆ ನೋವುಂಟು ಮಾಡುತ್ತಿದೆ. ಟಾಸ್ಕ್ ನಡುವೆ ಗಿಲ್ಲಿ ಕಾಮಿಡಿ ಕೆಲವೊಮ್ಮೆ ಯಡವಟ್ಟು ಮಾಡ್ತಿದೆ. ವೀಕೆಂಡ್ ಪಂಚಾಯ್ತಿಯಲ್ಲಿ ಈ ಬಗ್ಗೆ ಕಿಚ್ಚ ಸುದೀಪ್ ಕೂಡ ಎಚ್ಚರಿಸಿದ್ದರು. ಆದರೂ ಗಿಲ್ಲಿ ಕಾಮಿಡಿ ಶೋಗೆ ಬಲ ತುಂಬಿದೆ.
ಕಲರ್ಸ್ ಕನ್ನಡ ಮತ್ತೆ ಮೊದಲ ಸ್ಥಾನಕ್ಕೆ ಏರಿದೆ. ಅದರಲ್ಲಿ ಬಿಗ್‌ಬಾಸ್ ಪಾಲು ಇದೆ ಎಂದು ಸ್ವತಃ ಸುದೀಪ್ ಹೇಳಿದ್ದಾರೆ. ಅದರಲ್ಲಿ ಗಿಲ್ಲಿ ಪಾಲು ದೊಡ್ಡದಿದೆ. ಇನ್ನು ರಜತ್ ಎಣಿಸಿದಂತೆ ಗಿಲ್ಲಿ ಮೇಲೆ ಪ್ರಹಾರ ಮಾಡುತ್ತಿದ್ದಾರೆ. ಆತನ ಆರ್ಭಟಕ್ಕೆ ಗಿಲ್ಲಿ ಕೊಂಚ ಥಂಡಾ ಹೊಡೆದಿರುವುದು ನಿಜ. ಆದರೆ ಸಮಯ ಸಿಕ್ಕಾಗಲೆಲ್ಲಾ ಸರಿಯಾಗಿಯೇ ತಿರುಗೇಟು ಕೊಡುತ್ತಿದ್ದಾರೆ. ಮುಂದೈತೆ ಅಸಲಿ ಹಬ್ಬ ಎಂದು ಎಚ್ಚರಿಕೆ ಕೂಡ ಕೊಡುತ್ತಿದ್ದಾರೆ.
"ಎಷ್ಟರಲ್ಲಿ ಇರ್ಬೇಕು ಅಷ್ಟರಲ್ಲಿ ಇರು ಮಗಾ" ಎಂದು ಗಿಲ್ಲಿಗೆ ರಜತ್ ಟಾಂಗ್ ಕೊಟ್ಟಿದ್ದಾರೆ. ಅದಕ್ಕೆ ಗಿಲ್ಲಿ ಫ್ಯಾನ್ಸ್ ಸರಿಯಾಗಿ ಕೌಂಟರ್ ಅಟ್ಯಾಕ್ ಮಾಡಿದ್ದಾರೆ. ಈ ಹಿಂದೆ ನಟ ಸುದೀಪ್ ಮಗಳು ಸಾನ್ವಿಗೆ ರಜತ್ ಡಿಸ್ಟರ್ಬ್ ಮಾಡಿದ್ದರು. ಕೂಡಲೇ ಸಾನ್ವಿ ಎಚ್ಚರಿಕೆ ನೀಡಿದ್ದರು. ಆ ವೀಡಿಯೋವನ್ನು ಗಿಲ್ಲಿ ಫ್ಯಾನ್ಸ್ ತೇಲಿ ಬಿಟ್ಟಿದ್ದಾರೆ. "ಇಲ್ಲಿ ನೋಡ್ರಪ್ಪಾ ಎಷ್ಟರಲ್ಲಿ ಇರ್ಬೇಕು ಅಷ್ಟರಲ್ಲಿ ಇರು ಮಗಾ ಅಂತ ಡೈಲಾಗ್ ಹೊಡಿಯೋನ್ನ" ಎಂದು ಕಾಲೆಳೆದಿದ್ದಾರೆ.
ಸಿಸಿಎಲ್ ಕ್ರಿಕೆಟ್ ಟೂರ್ನಿ ವೇಳೆ ದೀಪಿಕಾ ದಾಸ್, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ ಹಾಗೂ ಸಾನ್ವಿ ಸುದೀಪ್ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಈ ಹಿಂದೆ ಹಿಂದೆ ನಿಂತು ರಜತ್ ಕಿರಿಕಿರಿ ಮಾಡಿದ್ದರು. ಕೂಡಲೇ ಈ ಬಗ್ಗೆ ಬೇಸರ ವ್ಯಕ್ತಪಡಿಸಿ ಸಾನ್ವಿ ಪ್ರಶ್ನಿಸಿದ್ದರು. ಆ ವೀಡಿಯೋ ಆಗ ಸಖತ್ ವೈರಲ್ ಆಗಿತ್ತು. ಅದನ್ನೇ ಈಗ ಗಿಲ್ಲಿ ಫ್ಯಾನ್ಸ್ ಬಳಸಿ ರಜತ್ ಕಾಲೆಳೆಯುತ್ತಿದ್ದಾರೆ.
ಬಿಗ್‌ಬಾಸ್ ಮನೆ ಈಗ ಹೋಟೆಲ್ ರೂಪ ಪಡೆದಿದೆ. ಹಿಂದಿನ ಸೀಸನ್‌ನಲ್ಲಿದ್ದ ಉಗ್ರಂ ಮಂಜು, ರಜತ್, ಚೈತ್ರಾ, ಮೋಕ್ಷಿತಾ ಮನೆ ಒಳಗೆ ಹೋಗಿದ್ದಾರೆ. ಹೋದ ಕ್ಷಣದಿಂದ ಗಿಲ್ಲಿ ತಮಾಷೆ ಮಾಡಿ ಕಾಲೆಳೆಯುತ್ತಿದ್ದಾರೆ. ಅದಕ್ಕೆ ಮಂಜು, ರಜತ್ ಕೆಂಡಾಮಂಡಲವಾಗುತ್ತಿದ್ದಾರೆ. ಆದರೂ ಗಿಲ್ಲಿ ಫೈಟ್ ಕೊಡುತ್ತಿದ್ದಾರೆ.
ಮನೆಗೆ ಬಂದಿರುವ ಅತಿಥಿಗಳನ್ನು ಹೋಟೆಲ್ ಸಿಬ್ಬಂದಿ ಉಪಚರಿಸಬೇಕು, ಗೌರವ ಕೊಡಬೇಕು ಅದೇ ಗಿಲ್ಲಿಗೆ ಕೊಂಚ ಹಿನ್ನಡೆ ಉಂಟು ಮಾಡಿದಂತೆ ಕಾಣ್ತಿದೆ. ಇಲ್ಲದೇ ಇದ್ದಿದ್ದರೆ ಇನ್ನು ಸರಿಯಾಗಿಯೇ ಕ್ಲಾಸ್ ತಗೊತ್ತಿದ್ದರು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಾರಿ ಬಿಗ್‌ಬಾಸ್ ಶೋ 50 ದಿನ ಪೂರೈಸಿ ಮುಂದುವರೆಸಿದೆ. ಮೂವರು ವೈಲ್ಡ್ ಕಾರ್ಡ್ ಎಂಟ್ರಿ ಸೇರಿ 22 ಜನ ಮನೆ ಒಳಗೆ ಹೋಗಿದ್ದರು. 9 ಮಂದಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.
Credit: Filmibeat



Click it and Unblock the Notifications