Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
BBK 12: ಬಿಗ್ ಬಾಸ್ ಪ್ರೀ-ಫಿನಾಲೆ ನಡೆಸಿಕೊಡಲ್ಲ ಕಿಚ್ಚ ಸುದೀಪ್: ಹೀಗಾಗಿದ್ದು ಇದೇ ಮೊದಲು
ಬಿಗ್ ಬಾಸ್ ಕನ್ನಡ 12 ಅಂತಿಮ ಹಂತಕ್ಕೆ ಬಂದು ತಲುಪಿದೆ. ಇಂದಿನಿಂದ 12ನೇ ಸೀಸನ್‌ಗೆ ತೆರೆ ಎಳೆಯುವ ಪ್ರಕ್ರಿಯೆ ಆರಂಭ ಆಗಲಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಫಿನಾಲೆ ಎರಡು ದಿನ ನಡೆಯುತ್ತೆ. ಮೊದಲನೇ ದಿನ ಪ್ರೀ-ಫಿನಾಲೆ ಅಂತಲೂ, ಎರಡನೇ ದಿನ ಫಿನಾಲೆ ಅಂತಲೂ ಕರೆಯುವುದು ವಾಡಿಕೆ. ಈ ಎರಡು ದಿನಗಳು ವೀಕ್ಷಕರಿಗೆ ಭರ್ಜರಿ ಮನರಂಜನೆ, ಕುತೂಹಲ, ಥ್ರಿಲ್ ಎಲ್ಲವೂ ಫಿಕ್ಸ್.
ಈ ಬಾರಿ ಬಿಗ್ ಬಾಸ್ ಕನ್ನಡ 12ನೇ ಸೀಸನ್ ಫಿನಾಲೆ ಇಂದು (ಜನವರಿ 17) ಹಾಗೂ ನಾಳೆ (ಜನವರಿ 18) ನಡೆಯಲಿದೆ. ಅದರಲ್ಲೂ ಇಂದು (ಜನವರಿ 17) ಫ್ರಿ-ಫಿನಾಲೆ ಆರಂಭ ಆಗುತ್ತಿದೆ. ಮನೆಯೊಳಗೆ ಇರುವ ಆರು ಸ್ಪರ್ಧಿಗಳಲ್ಲಿ ಯಾರಾದರೂ ಎಲಿಮಿನೇಟ್ ಆಗುತ್ತಾರೋ? ಇಲ್ಲ ಕೇವಲ ಪರ್ಫಾಮೆನ್ಸ್‌ಗಷ್ಟೇ ಸೀಮಿತವಾಗಿರುತ್ತೋ ಅನ್ನೋದು ಎಪಿಸೋಡ್‌ನ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ಇನ್ನು ಫ್ರೀ-ಫಿನಾಲೆ ಹಾಗೂ ಫಿನಾಲೆಯ ಹೈಲೈಟ್ ಅಂದರೆ ಅದು ಕಿಚ್ಚ ಸುದೀಪ್. ಆದರೆ, ಈ ಬಾರಿಯ ಪ್ರೀ-ಫಿನಾಲೆಯನ್ನು ಕಿಚ್ಚ ಸುದೀಪ್ ನಡೆಸಿಕೊಡುತ್ತಿಲ್ಲ ಎಂದು ವರದಿಗಳಾಗಿವೆ. ಈ ಸುದ್ದಿ ಬಿಗ್ ಬಾಸ್ ವೀಕ್ಷಕರಿಗೆ ಹಾಗೂ ಸುದೀಪ್ ಅಭಿಮಾನಿಗಳಲ್ಲಿ ನಿರಾಸೆಯನ್ನು ಉಂಟು ಮಾಡಿದೆ. ಕಿಚ್ಚನ ಅನುಪಸ್ಥಿತಿಯ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದ್ದು, ಫ್ರಿ-ಫಿನಾಲೆ ಬಗ್ಗೆ ಬೇಸರವನ್ನು ಹೊರ ಹಾಕುತ್ತಿದ್ದಾರೆ.
ಒಂದು ವೇಳೆ ಕಿಚ್ಚ ಸುದೀಪ್ ನಿಜಕ್ಕೂ ಪ್ರೀ-ಫಿನಾಲೆಗೆ ಗೈರಾಗುವುದೇ ಆದಲ್ಲಿ ವೀಕ್ಷಕರಿಗೆ ನಿರಾಸೆ ಆಗೋದು ಗ್ಯಾರಂಟಿ. ಇಷ್ಟೇ ಅಲ್ಲದೇ ಇದು ಬಿಗ್ ಬಾಸ್ ಕನ್ನಡ 12ರ ಇತಿಹಾಸದಲ್ಲಿಯೇ ಕಿಚ್ಚ ಪ್ರೀ-ಫಿನಾಲೆಯನ್ನು ಮಿಸ್ ಮಾಡಿಕೊಂಡಿದ್ದು ಇದೇ ಮೊದಲು ಎನ್ನಲಾಗಿದೆ. ಎರಡು ದಿನ ಭರ್ಜರಿ ಮನರಂಜನೆಯಲ್ಲಿ ಕಿಚ್ಚ ಸುದೀಪ್ ನಿರೂಪಣೆ ವಿಶೇಷ ಮೆರುಗು ನೀಡುತ್ತಿತ್ತು. ಆದ್ರೀಗ ಅದನ್ನು ವೀಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
BBK 12: ಬಿಗ್ ಬಾಸ್ ತೆರೆ ಎಳೆಯೋ ಹೊತ್ತಿಲ್ಲಿ ಕುಕ್ಕಿದ ರಣಹದ್ದು; ಅರಣ್ಯ ಇಲಾಖೆಯಿಂದ ತಿಳುವಳಿಕೆ ನೋಟಿಸ್
ಕಳೆದ ಕೆಲವು ಸೀಸನ್‌ಗಳಿಂದ ಸುದೀಪ್ ಕೆಲವು ಸಂಚಿಕೆಗಳ ನಿರೂಪಣೆಯಿಂದ ಹೊರಗುಳಿದಿದ್ದಾರೆ. ಅದಕ್ಕೆ ಹಲವು ಕಾರಣಗಳು ಇವೆ. ಆದರೆ, ಫಿನಾಲೆ ಸಮಯದಲ್ಲಿ ಕಿಚ್ಚ ಸುದೀಪ್ ಮಿಸ್ ಆಗಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ಪ್ರಿ-ಫಿನಾಲೆಯಂದು ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿಲ್ಲ. ಅಂದ್ಹಾಗೆ ಇದಕ್ಕೂ ಕಾರಣವಿದೆ. ಅದೇನೇ ಇದ್ದೂ ವೀಕ್ಷಕರಿಗಂತೂ ಇದು ನಿರಾಸೆಯನ್ನುಂಟು ಮಾಡಿದೆ.
ಕಿಚ್ಚ ಸುದೀಪ್ ಮೊದಲ ಬಾರಿಗೆ ಫಿನಾಲೆ ಮಿಸ್ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣವಿದೆ. ಎರಡು ದಿನ ನಡೆಯೋ ಫಿನಾಲೆಯಲ್ಲಿ ಸುದೀಪ್ ನಿರೂಪಣೆಯೇ ಪ್ರಮುಖ ಆಕರ್ಷಣೆಯಾಗಿರುತ್ತಿತ್ತು. ಆದರೆ, ಈ ಬಾರಿ ಒಂದೇ ದಿನ ಫಿನಾಲೆ ನಡೆಯುತ್ತಿದೆ. ಕಿಚ್ಚ ಮೊದಲ ದಿನ ಮಿಸ್ ಮಾಡಿಕೊಳ್ಳುವುದಕ್ಕೆ ಕಾರಣ 'ಸೆಲೆಬ್ರೆಟಿ ಕ್ರಿಕೆಟ್ ಲೀಗ್'. ಅಲ್ಲಿಯೂ ಬ್ಯುಸಿಯಾಗಿದ್ದರಿಂದ ಫ್ರಿ-ಫಿನಾಲೆಯಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಕೇವಲ ಪರ್ಫಾಮೆನ್ಸ್ ಅಷ್ಟೇ ಇರುತ್ತೆ ಎನ್ನಲಾಗಿದೆ.
ನಿನ್ನೆ (ಜನವರಿ 16) ವೈಜಾಗ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಪಂಜಾಬ್ ದಿ ಶೇರ್ ತಂಡದ ನಡುವೆ ಮೊದಲ ಸಿಸಿಎಲ್ ಪಂದ್ಯ ನಡೆದಿತ್ತು. ಹೀಗಾಗಿ ಸುದೀಪ್ ತಮ್ಮ ತಂಡದೊಂದಿಗೆ ವೈಜಾಗ್‌ನಲ್ಲಿ ಇದ್ದರು, ಮೊದಲ ಪಂದ್ಯ ಗೆದ್ದ ಖುಷಿಯಲ್ಲಿರೋ ಕಿಚ್ಚ ಬೆಂಗಳೂರಿಗೆ ಬಂದು ಫ್ರಿ-ಫಿನಾಲೆ ನಡೆಸಿಕೊಡುವುದಕ್ಕೆ ಸಾಧ್ಯವಾಗಿಲ್ಲ ಎನ್ನಲಾಗಿದೆ. ಹೀಗಾಗಿ ಪ್ರೀ-ಫಿನಾಲೆಯನ್ನು ಮಿಸ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇಂದು (ಜನವರಿ 17) ಪ್ರಿ ಗ್ರ್ಯಾಂಡ್ ಫಿನಾಲೆ ರಾತ್ರಿ 9 ಗಂಟೆಯಿಂದ ಆರಂಭ ಆಗುತ್ತಿದೆ. ನಾಳೆ (ಜನವರಿ 18) ಭಾನುವಾರ ಸಂಜೆ 6 ಗಂಟೆಯಿಂದ ಫಿನಾಲೆ ನಡೆಯಲಿದೆ.
Credit: Filmibeat



Click it and Unblock the Notifications