Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಈ 5 ರಾಶಿಯವರು ಕಡೆವರೆಗೂ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎನ್ನುತ್ತಾರೆ. ಹಾಗಂತ ಮದುವೆಯಾದವರು ಎಲ್ಲಾರೂ ಸುಖವಾಗಿ ಸಂಸಾರ ನಡೆಸೋದಿಲ್ಲ. ಕೆಲವೇ ಕೆಲವು ಜನ ಮಾತ್ರ ಕೊನೆವರೆಗೂ ಚೆನ್ನಾಗಿ ಇರುತ್ತಾರೆ. ಇನ್ನೂ ಕೆಲವರು ಚಿಕ್ಕ-ಪುಟ್ಟ ಕಾರಣಗಳಿಗಾಗಿ ದಾಂಪತ್ಯ ಬಂಧವನ್ನು ಮುರಿದುಕೊಳ್ಳುತ್ತಾರೆ.
ಆದ್ರೆ ಕೆಲವೇ ಕೆಲವು ಜನ ಮಾತ್ರ ದಾಂಪತ್ಯದಲ್ಲಿ ಎಷ್ಟೇ ಸಮಸ್ಯೆಗಳು ಇದ್ದರೂ ಕೂಡ ಅದನ್ನು ಕೊನೆವರೆಗೂ ಉಳಿಸಿಕೊಂಡು ಹೋಗೋದಕ್ಕೆ ಯತ್ನಿಸುತ್ತಾರೆ. ಎಂತಹದ್ದೇ ಪರಿಸ್ಥಿತಿ ಬಂದರೂ ಕೂಡ ಸಂಬಂಧವನ್ನು ಮಾತ್ರ ಕಡಿದುಕೊಳ್ಳೋದಿಲ್ಲ. ಕೆಲವೇ ಕೆಲವು ರಾಶಿಯವರಲ್ಲಿ ಮಾತ್ರ ಆ ಗುಣ ಇರುತ್ತದೆ. ಅಷ್ಟಕ್ಕು ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ವೃಷಭ ರಾಶಿ
ವೃಷಭ ರಾಶಿಯವರು ದಾಂಪತ್ಯ ಬಂಧವನ್ನು ಕೊನೆವರೆಗೂ ಉಳಿಸಿಕೊಂಡು ಹೋಗೋದಕ್ಕೆ ಪ್ರಯತ್ನಿಸುತ್ತಾರೆ. ದಾಂಪತ್ಯದಲ್ಲಿ ಎಷ್ಟೇ ದೊಡ್ಡ ಸಮಸ್ಯೆಗಳಿದ್ದರೂ ಕೂಡ ಆ ಸಂಬಂಧವನ್ನು ಮುರಿಯೋದು ಅವರಿಗೆ ಇಷ್ಟ ಇರೋದಿಲ್ಲ. ಎಷ್ಟೇ ಕಷ್ಟ ಆದರೂ ಸರಿ ಸಂಗಾತಿಯ ಜೊತೆಗೆ ಬದುಕೋದಕ್ಕೆ ಬಯಸುತ್ತಾರೆ. ಇನ್ನೂ ವೃಷಭ ರಾಶಿಯವರು ತಾಳ್ಮೆ ಮತ್ತು ಬದ್ಧತೆಯನ್ನು ಹೊಂದಿರುತ್ತಾರೆ. ಇವರು ತಮ್ಮ ಸಂಬಂಧಗಳಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಬಯಸುತ್ತಾರೆ. ಈ ರಾಶಿಯವರು ಸಂಗಾತಿಗೆ ನಿಷ್ಠೆಯಿಂದಿರುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಭಾವನಾತ್ಮಕ ಜೀವಿಗಳು. ಅವರು ದಾಂಪತ್ಯ ಜೀವನದ ಬಗ್ಗೆ ಹತ್ತು-ಹಲವಾರು ಕನಸುಗಳನ್ನು ಕಂಡಿರುತ್ತಾರೆ. ಹೀಗಾಗಿ ಅಷ್ಟು ಸುಲಭವಾಗಿ ಸಂಬಂಧ ಮುರಿದುಕೊಳ್ಳೋದಕ್ಕೆ ಇಷ್ಟ ಪಡುವವರಲ್ಲ. ಆದರೆ ಇನ್ನೇನು ಸಂಬಂಧ ಮುರಿದು ಬೀಳುತ್ತೆ ಅನ್ನೋವಾಗ ಆ ಸಂಬಂಧವನ್ನು ಭಾವನಾತ್ಮಕವಾಗಿ ಪುನಃ ಸಂಪರ್ಕಿಸೋದಕ್ಕೆ ಪ್ರಯತ್ನಿಸುತ್ತಾರೆ. ತಮ್ಮ ಸಂಗಾತಿಯ ಜೊತೆಗೆ ರಾಜಿ ಮಾಡಿಕೊಳ್ಳೋದಕ್ಕೆ ಯತ್ನಿಸುತ್ತಾರೆ. ಬೇರೆಯವರ ಮಾರ್ಗದರ್ಶನ ಪಡೆದಾದರೂ ಸಂಬಂಧವನ್ನು ಸರಿಪಡಿಸುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಕೂಡ ತಮ್ಮ ಸಂಗಾತಿಯೊಂದಿಗೆ ಸಂಬಂಧ ಮುರಿದುಕೊಳ್ಳೋದು ಇಷ್ಟ ಇರೋದಿಲ್ಲ. ಇನ್ನೇನು ಮುಳುಗಿ ಹೋಯ್ತು ಅನ್ನುವ ಸಂಬಂಧವನ್ನು ಕೈ ಹಿಡಿದು ದಡ ಸೇರಿಸುತ್ತಾರೆ. ಇವರಿಗೆ ಅಹಂ ಇರೋದಿಲ್ಲ. ಸಂಗಾತಿ ತಪ್ಪು ಮಾಡಿದ್ದರೂ ಕೂಡ ಇವರು ಕ್ಷಮೆ ಕೇಳಿ ಸಂಬಂಧ ಉಳಿಸಿಕೊಳ್ಳೋದಕ್ಕೆ ಪ್ರಯತ್ನಿಸುತ್ತಾರೆ. ಒಂದೇ ಸಂಬಂಧಕ್ಕೆ ಸೀಮಿತವಾಗಿರುತ್ತಾರೆ ಈ ರಾಶಿಯವರು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ತಮ್ಮ ಬದ್ಧತೆಗೆ ಹೆಸರುವಾಸಿಯಾಗಿದ್ದಾರೆ. ದಾಂಪತ್ಯದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸಂಸಾರ ಸಾಗಿಸಿಕೊಂಡು ಹೋಗುತ್ತಾರೆ ಈ ರಾಶಿಯವರು. ಇವರು ಭಾವನೆಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ. ತಮ್ಮ ಸಂಗಾತಿಗೆ ನೋವು ಕೊಡೋದಕ್ಕೆ ಇಷ್ಟ ಪಡೋದಿಲ್ಲ. ಅಷ್ಟೇ ಅಲ್ಲ, ದಾಂಪತ್ಯದಲ್ಲಿ ಏನೇ ಸಮಸ್ಯೆ ಆದರೂ ಅದನ್ನು ಸರಿಪಡಿಸಿಕೊಂಡು ಸಂಸಾರ ಸಾಗಿಸುತ್ತಾರೆ.
ಕರ್ಕಾಟಕ ರಾಶಿ
ಮಕರ ರಾಶಿಯವರು ತಮ್ಮ ಶಿಸ್ತು ಮತ್ತು ಜವಾಬ್ದಾರಿಯುತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇನ್ನೇನು ಸಂಸಾರ ಮುರಿದು ಹೋಯಿತು ಎನ್ನುವಾಗ ಹೇಗಾದರೂ ಮಾಡಿ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ದಾಂಪತ್ಯವನ್ನು ದೀರ್ಘ ಕಾಲದವರೆಗೂ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ರಾಶಿಯವರು ಸಂಗಾತಿಗೆ ಯಾವುದೇ ರೀತಿ ಸಮಸ್ಯೆ ಮಾಡದೇ ಸಂಘರ್ಷವನ್ನು ತಾವೇ ಪರಿಹರಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಈ ರಾಶಿಯವರು ತಮ್ಮ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ.



Click it and Unblock the Notifications