Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
Year Ender 2023: ಈ ವರ್ಷ ಅತೀ ಹೆಚ್ಚಿನ ಜನರು ಸರ್ಚ್ ಮಾಡಿದ್ದು ಈ ವ್ಯಕ್ತಿಗಳ ಬಗ್ಗೆ, ಏಕೆ ಗೊತ್ತಾ?
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೂಗಲ್‌ನಲ್ಲಿ ಜನ ಅತೀ ಹೆಚ್ಚು ಬಾರಿ ಹುಡುಕಾಡಿದ ಹೆಸರುಗಳನ್ನು ರಿಲೀಸ್ ಮಾಡಿದೆ. ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾದ ಪ್ರಮುಖ 10 ಮಂದಿಯನ್ನು ಜನರು ಗೂಗಲ್‌ನಲ್ಲಿ ಹುಡುಕಾಡಿದ್ದಾರೆ. ಈ ಪಟ್ಟಿಯನ್ನು ಗೂಗಲ್ ಪ್ರತಿ ವರ್ಷವೂ ಬಿಡುಗಡೆ ಮಾಡುತ್ತಾ ಬಂದಿದೆ. ಈ ಬಾರಿ ಸಹ ಈ ಪಟ್ಟಿ ಬಿಡುಗಡೆ ಮಾಡಿದೆ.
ಗೂಗಲ್ ತನ್ನ 'ಇಯರ್ ಇನ್ ಸರ್ಚ್ 2023' ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತನ್ನ ಸರ್ಚ್ ಇಂಜಿನ್‌ನಲ್ಲಿ ಅತೀ ಹೆಚ್ಚು ಬಾರಿ ಬಳಸಲ್ಪಟ್ಟ ಹೆಸರುಗಳಾಗಿವೆ ಎಂದಿದೆ. 'ಇಯರ್ ಇನ್ ಸರ್ಚ್ 2023' ಪಟ್ಟಿಯು ಎಲ್ಲಾ ವಿಭಾಗಗಳನ್ನು ಒಳಗೊಂಡಿದೆ - ನ್ಯೂಸ್, ಮನರಂಜನೆ, ಮೀಮ್‌ಗಳು, ಪ್ರಯಾಣ, ಪಾಕವಿಧಾನಗಳು, ಕ್ರೀಡೆ ಹೀಗೆ ಹಲವು ವಿಭಾಗಗಳಲ್ಲಿ ಸುದ್ದಿಯಾದ ವ್ಯಕ್ತಿಗಳ ಹೆಸರು ಇದಾಗಿದೆ.

2023ರಲ್ಲಿ ಗೂಗಲ್ ಸರ್ಚ್ ಇಂಜಿನ್ ಮೂಲಕ ಜಾಗತಿಕವಾಗಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿಯಲ್ಲಿ ಎನ್‌ಎಫ್‌ಎಲ್ (ನ್ಯಾಷನಲ್ ಫುಟ್‌ಬಾಲ್ ಲೀಗ್)ನ ಆಟಗಾರ ಡಮರ್ ಹ್ಯಾಮ್ಲಿನ್ ಅಗ್ರಸ್ಥಾನದಲ್ಲಿದ್ದಾರೆ. ಇವರು ಜನವರಿಯಲ್ಲಿ ನಡೆದಿದ್ದ ಎನ್‌ಎಫ್‌ಎಲ್ ಲೀಗ್ ಹಂತದ ಪಂದ್ಯದ ವೇಳೆ ಗಾಯಗೊಂಡಿದ್ದರು. ಅಮೆರಿಕನ್ ಫುಟ್‌ಬಾಲ್ ಆಟಗಾರರಾದ ಹ್ಯಾಮ್ಲಿನ್ ಎದೆಯ ಭಾಗಕ್ಕೆ ಗಾಯವಾಗಿತ್ತು. ಈ ವೇಳೆ ಅವರು ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಈ ಕಾರಣಕ್ಕೆ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು 5 ದಿನಗಳ ಕಾಲ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಬಳಿಕ ಗಾಯದಿಂದ ಚೇತರಿಸಿಕೊಂಡ ಅವರು ಅಮೆರಿಕಾದಲ್ಲಿರುವ ತಮ್ಮ ನಿವಾಸಕ್ಕೆ ಮರಳಿದ್ದರು. ಹೀಗಾಗಿ ಅವರ ಕುರಿತು ಜನ ಗೂಗಲ್‌ನಲ್ಲಿ ಅತೀ ಹೆಚ್ಚು ಬಾರಿ ಹುಡುಕಾಡಿದ್ದಾರೆ. ಜೊತೆಗೆ ಅವರು ಗಾಯಗೊಂಡ ವಿಡಿಯೋ ಸಹ ವೈರಲ್ ಆಗಿದ್ದ ಕಾರಣ ಗೂಗಲ್‌ನಲ್ಲಿ ಅವರ ಆರೋಗ್ಯ ಕುರಿತು ಹುಡುಕಾಟ ನಿರಂತರವಾಗಿತ್ತು.
ಇವರ ಬಳಿಕ ಎರಡನೇ ಸ್ಥಾನದಲ್ಲಿ ಬಾಲಿವುಡ್ ನಟ ಜೆರೆಮಿ ರೆನ್ನರ್ ಹೆಸರು ಕಂಡುಬಂದಿದೆ. ಹಲವು ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿರುವ ಅವರು, 2023ರ ಜನವರಿಯಲ್ಲಿ ಹಿಮದೊಳಗೆ ಸಿಲುಕಿ ಸುದ್ದಿಯಾಗಿದ್ದರು. ಸ್ನೋ ಫ್ಲೋದಲ್ಲಿ ಸಿಲುಕಿದ್ದ ಅವರನ್ನು ರಕ್ಷಣೆ ಮಾಡಲಾಗಿತ್ತು. ಆದರೆ ಅವರು ತಮ್ಮ ದೇಹದ ಸುಮಾರು 30ಕ್ಕೂ ಹೆಚ್ಚು ಮೂಳೆ ಮುರಿತದಿಂದ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ಎಂದಿನಂತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.
ಇವರಾದ ಬಳಿಕ ವಿವಾದಾತ್ಮಕ ವ್ಯಕ್ತಿ ಎಂದೇ ಕರೆಸಿಕೊಂಡಿರುವ ಆಂಡ್ರೂ ಟೇಟ್ ಮೂರನೇ ಸ್ಥಾನದಲ್ಲಿದ್ದಾರೆ. ಈತ ಸ್ತ್ರೀ ದ್ವೇಷವಾದಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕ ಒಂದಲ್ಲಾ ಒಂದು ವಿವಾದ ಸೃಷ್ಟಿಸುತ್ತಿರುತ್ತಾರೆ. ಇವರನ್ನೂ ಸಹ ಜನ ಗೂಗಲ್ ಸರ್ಚ್ ಇಂಜಿನ್ ಮೂಲಕ ಹುಡುಕಾಡಿದ್ದಾರೆ. ಅವರ ವಿಡಿಯೋಗಳಿಗಾಗಿ ಗೂಗಲ್ ಮೂಲಕ ಹುಡುಕಾಟ ನಡೆಸಿದ್ದಾರೆ.
ಇನ್ನು ನಾಲ್ಕನೇ ಸ್ಥಾನದಲ್ಲಿ ಫ್ರೆಂಚ್ ಖ್ಯಾತ ಫುಟ್‌ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ ಮತ್ತು ನ್ಯಾಷನಲ್ ಫುಟ್‌ಬಾಲ್ ಲೀಗ್ (ಎನ್‌ಎಫ್‌ಎಲ್) ಆಟಗಾರ ಟ್ರಾವಿಸ್ ಕೆಲ್ಸೆ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಎನ್‌ಎಫ್ಎಲ್ ಲೀಗ್‌ನಲ್ಲಿ ಎಂಬಪ್ಪೆ ಅಭೂತಪೂರ್ವ ಪ್ರದರ್ಶನವು ಅವರ ಹೆಸರು ಹುಡುಕಾಟದ ಹಿಂದಿನ ರಹಸ್ಯವಾಗಿದೆ. ಇನ್ನು ಟ್ರಾವಿಸ್ ಕೆಲ್ಸೆ ಸಹ ಅದ್ಭುತ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದರು.
ಆರನೇ ಸ್ಥಾನದಲ್ಲಿ ಜೆನ್ನಾ ಒರ್ಟೆಗಾ
ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದ್ದ ಹಾರರ್-ಕಾಮಿಡಿ ಸೀರಿಸ್ 'ವೆಡ್‌ನೆಸ್‌ಡೆ' ನಟಿ ಜೆನ್ನಾ ಒರ್ಟೆಗಾ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಾಡಿದವರ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾರೆ. 21 ವರ್ಷದ ನಟಿ ಈ ಸೀರಿಸ್‌ನಲ್ಲಿ ನಿರ್ವಹಿಸಿದ್ದ ಆಡಂ ಪಾತ್ರಕ್ಕೆ ಭಾರೀ ಮೆಚ್ಚುಗೆ ಕೇಳಿಬಂದಿತ್ತು. ಜೊತೆಗೆ ಆಕೆಗೆ ಗೋಲ್ಡನ್ ಗ್ಲೋಬ್ ಅವಾರ್ಡ್, ಪ್ರೈಮ್‌ಟೈಮ್ ಇಮ್ಮಿ ಮತ್ತು ಸ್ಕ್ರೀನ್ ಆಕ್ಟರ್ ಗಿಲ್ಡ್ ಅವಾರ್ಡ್ ಒಲಿದು ಬಂದಿತ್ತು.
ಭಾರತಕ್ಕೆ ಬಂದವರು ಒಬ್ಬರೆ
ಗೂಗಲ್ ರಿವೀಲ್ ಮಾಡಿರುವ ಅತೀ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಹೆಸರಿನ ಪಟ್ಟಿಯಲ್ಲಿ ಭಾರತಕ್ಕೆ ಸೇರಿದವರು ಯಾರು ಇಲ್ಲ. ಆದರೆ ಅವರಲ್ಲಿ ಭಾರತಕ್ಕೆ ಭೇಟಿ ನೀಡಿದ ಒಬ್ಬರ ಹೆಸರು ಸ್ಥಾನ ಗಿಟ್ಟಿಸಿದೆ. ಈ ಪಟ್ಟಿಯ 7ನೇ ಸ್ಥಾನದಲ್ಲಿ ಹಾಡುಗಾರ್ತಿ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಲಿಲ್ ಟೇ ಸ್ಥಾನ ಪಡೆದಿದ್ದರೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 30 ವರ್ಷಗಳವರೆಗೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಮೆರಿಕನ್ ನಟ ಡ್ಯಾನಿ ಮಾಸ್ಟರ್ಸನ್ 8ನೇ ಸ್ಥಾನದಲ್ಲಿದ್ದಾರೆ.
ಈ ಬಾರಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯದ ವೇಳೆ ಭಾರತಕ್ಕೆ ಆಗಮಿಸಿದ್ದ ಇಂಗ್ಲೆಂಡ್‌ನ ಮಾಜಿ ಫುಟ್‌ಬಾಲ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್ 9ನೇ ಸ್ಥಾನದಲ್ಲಿದ್ದಾರೆ. ಇವರ ಬಳಿಕ 10ನೇ ಸ್ಥಾನದಲ್ಲಿ 'ದಿ ಲಾಸ್ಟ್ ಆಫ್ ಅಸ್' ನಟ ಪೆಡ್ರೊ ಪಾಸ್ಕಲ್ ಹೆಸರು ಸ್ಥಾನ ಪಡೆದಿದೆ.



Click it and Unblock the Notifications
