Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಕೂದಲು ಕಟ್ಟದೆ ಪೂಜೆ ಮಾಡಬಾರದು ಏಕೆ? ಇದರ ಹಿಂದಿನ ಕಾರಣ ಗೊತ್ತಾ?
ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರಣೆಗೂ ಅದರದ್ದೇ ಆದ ಕಾರಣಗಳಿ, ವೈಜ್ಞಾನಿಕ ಸಾಕ್ಷಿಗಳು, ಪುರಾವೆಗಳು ಸಿಗುವುದು ನೋಡಬಹುದು. ನಿಮ್ಮ ಪ್ರತಿಯೊಂದು ಆಚಾರ ವಿಚಾರದಲ್ಲೂ ಕೂಡ ಒಂದಲ್ಲಾ ಒಂದು ರೀತಿಯ ಆಲೋಚನೆಗಳು ಇರಬಹುದು, ಆದ್ರೆ ಕೆಲವೊಂದು ಕಟ್ಟುಪಾಡುಗಳು, ನಿಯಮಗಳ ಹಿಂದೆ ಶಾಸ್ತ್ರದಲ್ಲಿ ಅದರದ್ದೇ ಆದ ನಿಯಮಗಳಿವೆ, ಅದಕ್ಕೆ ಸೂಕ್ತ ರೀತಿ ವಿವರಣೆಗಳು ಕೂಡ ಇವೆ.
ಹಾಗೆ ಹಿರಿಯರ ಮಾತಿನಲ್ಲಿ ಹಲವು ನಿಯಮಗಳ ಕೇಳುವುದು ನೋಡಬಹುದು. ಕೆಲವೊಂದು ಆಚರಣೆಯಲ್ಲಿ ಅವರು ಹೇಳುವಂತೆ ಶಾಸ್ತ್ರದಲ್ಲಿಯೂ ಹೇಳುವುದು ನೋಡಬಹುದು. ಮುಖ್ಯವಾಗಿ ಪೂಜೆ, ಭಕ್ತಿ, ದೇವಾಲಯ ಭೇಟಿ ನೀಡುವಂತಹ ಸಮಯಲ್ಲಿ ಹಲವು ರೀತಿಯ ಅಲಿಖಿತ ನಿಯಮಗಳ ಹೇಳುವುದು ನೀವು ಸಹ ಕೇಳಿರಬಹುದು.

ಹಾಗೆ ಕೂದಲನ್ನು ಕಟ್ಟದೆ ಹಾಗೆ ಪೂಜೆಯಲ್ಲಿ ಪಾಲ್ಗೊಳ್ಳುವುದು ದೇವಾಲಯಕ್ಕೆ ಹೋಗುವುದನ್ನು ಕೂಡ ಹಿರಿಯರು ಅಶುಭ ಎಂದು ಹೇಳುತ್ತಾರೆ. ಯುವತಿಯರು ಇಲ್ಲವೆ ಮಹಿಳೆಯರು ತಲೆ ಸ್ನಾನ ಮಾಡಿದ ಬಳಿಕ ಕೂದಲನ್ನು ಇಳಿ ಬಿಟ್ಟು ಯಾವುದೇ ಶುಭ ಕಾರ್ಯದಲ್ಲಿ ಭಾಗಿಯಾಗಬಾರದು ಎಂದು ಹಿರಿಯರು ಹೇಳುವುದು ಕೇಳಿರಬಹುದು.
ಹಿರಿಯರು ಹೀಗೆ ಹೇಳುವುದರ ಹಿಂದೆ ಕೂಡ ಕಾರಣಗಳಿವೆ. ಶಾಸ್ತ್ರವೂ ಕೂಡ ಇದನ್ನೇ ಹೇಳುತ್ತದೆ. ಮಹಿಳೆಯರು ಕೂದಲನ್ನು ಇಳಿಬಿಟ್ಟು ಅಥವಾ ಕಟ್ಟದೆ ಪೂಜೆಯಲ್ಲಿ ಪಾಲ್ಗೊಳ್ಳುವುದು ಅಥವಾ ದೇವಾಲಯ ಭೇಟಿ, ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಅಶುಭ ಕಾರಕ ಎಂದು ಹೇಳಲಾಗುತ್ತದೆ.
ಕೂದಲು ಇಳಿ ಬಟ್ಟು ಅಥವಾ ಕಟ್ಟದೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗುವುದರಿಂದ ದೇವರ ಕೋಪಕ್ಕೆ ಗುರಿಯಾಗಬಹುದಂತೆ. ಹಾಗೆ ನಕಾರಾತ್ಮಕ ಆಲೋಚನೆಗಳು, ಶಕ್ತಿಯನ್ನು ಆಕರ್ಷಿಸಲಿದೆ ಎಂದು ಕೂಡ ಹೇಳಲಾಗಿದೆ. ಹಾಗೆ ಕೂದಲು ಕಟ್ಟಿಕೊಳ್ಳದೆ ದೇವರ ಪ್ರಾರ್ಥನೆ ಮಾಡುವಾಗ ನಿಮ್ಮ ಗಮನ ಬೇರೆಡೆ ಸೆಳೆಯಬಹುದು ಎಂಬ ವಾದವೂ ಇದೆ. ಕೂದಲು ಸರಿ ಮಾಡಿಕೊಳ್ಳುವುದರ ಕಡೆ ನಿಮ್ಮ ಗಮನವಿರಲಿದೆ ಭಕ್ತಿಯ ಕಡೆ ಗಮನ ಹರಿಸಲು ಆಗುವುದಿಲ್ಲ ಎಂಬುದಾಗಿಯೂ ಹೇಳಲಾಗಿದೆ.
ಕಿರೀಟ ಚಕ್ರಕ್ಕೆ ಹಾನಿಯಾಲಿದೆ
ಕಿರೀಟ ಚಕ್ರ ಅಥವಾ ಸಹಸ್ರಾರವು ದೇಹದ ಏಳನೇ ಮತ್ತು ಅತ್ಯುನ್ನತ ಶಕ್ತಿ ಕೇಂದ್ರ ಎಂದು ಹೇಳಲಾಗುತ್ತದೆ. ಇದು ತಲೆಯ ಮೇಲ್ಭಾಗದಲ್ಲಿರಲಿದೆ. ಹೀಗಾಗಿ ಕೂದಲು ಕಟ್ಟದೆಯೇ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವುದು ಈ ಸಹಸ್ರಾರದ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಲಿದೆ ಎಂದು ಕೂಡ ಹೇಳಲಾಗುತ್ತದೆ. ಈ ಚಕ್ರವು ನಿಮ್ಮ ಆಧ್ಯಾತ್ಮಿಕ ಜಾಗೃತಿಗೆ ಕಾರಣವಾಗುತ್ತದೆ. ದೈವಿಕ ಸಂಪರ್ಕ ಮತ್ತು ದೈವಿಕತೆಯೊಂದಿಗಿನ ಏಕತೆಯ ಪ್ರಜ್ಞೆಯನ್ನು ಪ್ರತಿನಿಧಿಸುತ್ತದೆ.
ಹಾಗೆ ತೆರೆದ ಕೂದಲು ಮಹಿಳೆಯರಲ್ಲಿ ಕೋಪದ ಸಂಕೇತವಂತೆ. ತಾಳ್ಮೆಯ ವಿರುದ್ಧದ ಸಂಬಂಧ ಹೊಂದಿದ್ದು, ಇದರಿಂದ ನಿಮ್ಮಲ್ಲಿ ನಕಾರಾತ್ಮಕ ಹಾಗೂ ಚಂಚಲತೆಗೆ ಕಾರಣವಾಗಲಿದೆ ಎಂದು ಹೇಳಲಾಗಿದೆ. ಹಾಗೆ ಇದರ ಹಿಂದೆ ಸೀತೆಯ ಒಂದು ಕಥೆ ಕೂಡ ಇದೆ. ಸೀತಾ ದೇವಿಯ ವಿವಾಹ ಸಮಯದಲ್ಲಿ ಆಕೆಯ ಕೂದಲನ್ನು ಬಿಗಿಯಾಗಿ ಕಟ್ಟಲಾಗಿತ್ತಂತೆ. ತಾಯಿ ಸುನಯನ ಸೀತೆಗೆ ಹೀಗೆ ಬಿಗಿಯಾಗಿ ಕೂದಲನ್ನು ಕಟ್ಟಿದ್ದರಂತೆ. ಏಕೆ ಇಷ್ಟು ಬಿಗಿಯಾಗಿ ಕಟ್ಟಿದ್ದೀರಿ ಎಂದು ಕೇಳಿದಾಗ ಕೂದಲು ಬಿಗಿಯಾಗಿ ಕಟ್ಟಿದಷ್ಟು ನಿಮ್ಮಿಬ್ಬರ ಸಂಬಂಧ ಗಟ್ಟಿಯಾಗಲಿದೆ ಎಂದು ಹೇಳಿದ್ದಳಂತೆ.
ಇದಿಷ್ಟೇ ಅಲ್ಲ ಕೂದಲು ತೆರೆದಿದ್ದರೆ ಕೂದಲು ಉದುರುವುದು ಹೆಚ್ಚಾತ್ತದೆ. ದೇವಾಲಯದಲ್ಲಿ, ಧಾರ್ಮಿಕ ಕಾರ್ಯ ನಡೆಯುವ ಸ್ಥಳದಲ್ಲಿ ಕೂದಲು ಉದುರುವುದು ಶುಭ ಸೂಚಕವಲ್ಲ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications