Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಮವಾಸ್ಯೆ ಎಂಬುವುದು ಅಶುಭ ದಿನವೇ? ಈ ದಿನ ಯಾವ ದೇವರನ್ನು ಪೂಜಿಸಬೇಕು?
ಅಮವಾಸ್ಯೆ ಎಂದರೆ ತಿಂಗಳ ಅತ್ಯಂತ ಕತ್ತಲೆಯ ರಾತ್ರಿ. ಈ ಸಮಯದಲ್ಲಿ ಚಂದ್ರನ ಬೆಳಕು ಇರಲ್ಲ, ಸಂಜೆಯಾಗುತ್ತಿದ್ದಂತೆ ತುಂಬಾನೇ ಕತ್ತಲೆ ಆವರಿಸುವುದು, ಈ ಅಮವಾಸ್ಯೆಯ ಕತ್ತಲೆ ನೋಡುವಾಗ ಭಯ ಹುಟ್ಟಿಸುವಂತಿರುತ್ತದೆ.
ಹುಣ್ಣಿಮೆ-ಅಮವಾಸ್ಯೆ ಎಂಬುವುದು ಪ್ರಕೃತಿಯ ಪ್ರಕ್ರಿಯೆಗಳು, ಪ್ರತಿ ತಿಂಗಳು ಹುಣ್ಣಿಮೆ-ಅಮವಾಸ್ಯೆ ಬರುತ್ತಲೇ ಇರುತ್ತದೆ, ಆದರೆ ಅಮವಾಸ್ಯೆಯನ್ನು ಶುಭವೆಂದು ಪರಿಗಣಿಸುವುದಿಲ್ಲ. ಅಮವಾಸ್ಯೆಯನ್ನು ಶುಭವೆಂದು ಪರಿಗಣಿಸುವುದಿಲ್ಲ ಏಕೆ ಎಂದು ನೋಡೋಣ ಬನ್ನಿ:

ಅಮವಾಸ್ಯೆಯಂದು ಯಾವುದೇ ಶುಭ ಕಾರ್ಯ ಮಾಡುವುದಿಲ್ಲ?
ಧಾರ್ಮಿಕ ನಂಬಿಕೆ ಪ್ರಕಾರ ಅಮವಾಸ್ಯೆಯಂದು ಯಾವುದೇ ಶುಭಕಾರ್ಯ ಮಾಡುವುದಿಲ್ಲ, ಈ ದಿನ ಮದುವೆ, ಗೃಹ ಪ್ರವೇಶ ಈ ರೀತಿಯ ಯಾವುದೇ ಶುಭ ಕಾರ್ಯ ಮಾಡಿದರೆ ಒಳ್ಳೆಯದಲ್ಲ ಎಂಬ ನಂಬಿಕೆ ಇದೆ.
ಅಮವಾಸ್ಯೆಯಂದು ಈ ಕಾರ್ಯಗಳನ್ನು ಮಾಡುವುದು ಒಳ್ಳೆಯದಲ್ಲ ಎಂದು ಹೇಳಲಾಗುವುದು
* ಸೂರ್ಯೋದಯಕ್ಕೆ ಮುನ್ನ ಮನೆ ಬಿಡಬಾರದು ಎಂದು ಹೇಳಲಾಗುವುದು
* ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡಬಾರದು, ನೀರು ಕುಡಿಯುವುದು ಎಂದು ಹೇಳಲಾಗುವುದು
* ಅಮವಾಸ್ಯೆ ದಿನ ಹೊಸ ಬಟ್ಟೆ ಧರಿಸುವುದು, ಹೊಸ ಆಭರಣ ಹಾಕುವುದು ಮಾಡಬಾರದು ಎಂದು ಹೇಳಲಾಗುವುದು
ಈ ದಿನ ಯಾವ ದೇವರನ್ನು ಪೂಜಿಸಬೇಕು?
ಅಮವಾಸ್ಯೆ ದಿನ ಇಂಥದ್ದೇ ದೇವರನ್ನು ಪೂಜಿಸಬೇಕು ಎಂಬುವುದೇನೂ ಇಲ್ಲ, ನಿಮ್ಮ ಇಷ್ಟ ದೇವರನ್ನು ಪೂಜಿಸಬಹುದು. ಈ ದಿನ ಉತ್ತಮ ಆರೋಗ್ಯಕ್ಕಾಗಿ ದುರ್ಗೆಯನ್ನು ಪೂಜಿಸುತ್ತಾರೆ. ಈ ದಿನ ಕಾಲ ಭೈರವ. ಕಾರ್ತಿಕೇಯ ಹೀಗೆ ತಮ್ಮ ಇಚ್ಛೆಯ ದೇವರನ್ನು ಭಕ್ತರು ಆರಾಧಿಸುತ್ತಾರೆ.
ಅಮವಾಸ್ಯೆಯಲ್ಲಿ ಮಗು ಜನಿಸಿದರೆ?
ಅಮವಾಸ್ಯೆಯಂದು ಮಗು ಜನಿಸಿದರೆ ಶುಭವಲ್ಲ ಎಂದು ಕೆಲವರು ಹೇಳುತ್ತಾರೆ, ಆದರೆ ಅಮವಾಸ್ಯೆಯಂದು ಜನಿಸುವ ಮಗು ಅದೃಷ್ಟದ ಮಗು, ಆ ಮಗುವಿನ ಭವಿಷ್ಯ ತುಂಬಾ ಉಜ್ವಲವಾಗಿರುತ್ತದೆ ಎಂದು ಹೇಳಲಾಗುವುದು. ಮಗುವಿನ ಜನನ ಅಂದರೆ ಅದು ಅದೃಷ್ಟ, ಖುಷಿಯ ವಿಚಾರ, ಅಮವಾಸ್ಯೆಯಂದು ಜನಿಸಿದರೆ ಇನ್ನೂ ಒಳ್ಳೆಯದು ಎಂದು ಹೇಳಲಾಗುವುದು.
ಕೆಟ್ಟ ಶಕ್ತಿಗಳ ಶಕ್ತಿ ಅಧಿಕವಿರುತ್ತದೆ ಎಂದು ಹೇಳಲಾಗುವುದು
ಅಮವಾಸ್ಯೆಯ ದಿನ ಋಣಾತ್ಮಕ ಶಕ್ತಿಗಳ ಚಟುವಟಿಕೆ ಅಧಿಕವಿರುತ್ತದೆ ಎಂದು ಕೆಲವರು ನಂಬುತ್ತಾರೆ, ಈ ಕಾರಣಕ್ಕೆ ಯಾವುದೇ ಒಳ್ಳೆಯ ಶುಭ ಕಾರ್ಯ ಮಾಡಬಾರದು ಎಂದು ಹೇಳಲಾಗುವುದು. ಆದ್ದರಿಂದ ಈ ದಿನ ಹೊಸ ಬಟ್ಟೆ ಧರಿಸುವುದು, ಯಾವುದೇ ಶುಭ ಕಾರ್ಯಕ್ರಮಗಳನ್ನು ಮಾಡುವುದು, ಉಗುರು ಕತ್ತರಿಸುವುದು ಇವೆಲ್ಲಾ ಒಳ್ಳೆಯದಲ್ಲ ಎಂದು ಹೇಳಲಾಗುವುದು.
ಕೊನೆಯದಾಗಿ: ಎಲ್ಲರ ಜೀವನದಲ್ಲೂ ಒಂದೊಂದು ರೀತಿಯ ನಂಬಿಕೆ ಇರುತ್ತದೆ, ಅವರವರ ನಂಬಿಕೆಗೆ ತಕ್ಕಂತೆ ಜೀವನ ನಡೆಸುತ್ತಿರುತ್ತಾರೆ. ಕೆಲವರು ಅಮವಾಸ್ಯೆಯನ್ನು ಕೆಟ್ಟ ದಿನ ಎಂದು ಹೇಳಿದರೆ ಇನ್ನು ಕೆಲವರು ಅದೆಲ್ಲಾ ಮೂಢನಂಬಿಕೆ ಎಂದು ವಾದಿಸುತ್ತಾರೆ. ಇಲ್ಲಿ ಅವರು ಸರಿ, ಇವರು ಎಂದೇನೂ ಇಲ್ಲ, ಅವರವರ ನಂಬಿಕೆಗೆ ತಕ್ಕಂತೆ ಜೀವನ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ ಅಲ್ವಾ?



Click it and Unblock the Notifications
