Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಈ ವರ್ಷ ಓಣಂ ಆಚರಣೆ ಯಾವಾಗ? ಓಣಂಗೂ ದೀಪಾವಳಿಗೂ ಇರುವ ಹೋಲಿಕೆಯೇನು?
ಕೇರಳಿಗರ ಪ್ರಮುಖ ಹಬ್ಬ ಓಣಂ. ನಮ್ಮಲ್ಲಿ ದಸರಾವನ್ನು 10 ದಿನಗಳು ಹೇಗೆ ಸಡಗರ-ಸಂಭ್ರಮದಿಂದ ಆಚರಿಸುತ್ತೇವೋ ಅದೇ ರೀತಿ ಕೇರಳದಲ್ಲಿ 10 ದಿನ ಹೂವಿನ ರಂಗೋಲಿ ಹಾಕಿ ಆಚರಿಸಲಾಗುವುದು. ಓಣಂ ಹಬ್ಬವನ್ನು ಕೇರಳಿಗರು ಆಚರಿಸುವುದಾದರೂ ಕರ್ನಾಟಕದಲ್ಲೂ ಈ ಹಬ್ಬದ ಆಚರಣೆಯನ್ನು ಕಾಣಬಹುದು. ಕೇರಳದಿಂದ ವಲಸೆ ಬಂದು ಕರ್ನಾಟಕದಲ್ಲಿ ನೆಲೆಸಿರುವ, ಉದ್ಯೋಗಕ್ಕಾಗಿ ಕರ್ನಾಟಕ್ಕೆ ಬಂದಿರುವ ಕೇರಳಿಗರು ಈ ಹಬ್ಬವನ್ನು ಆಚರಿಸುತ್ತಾರೆ. ಕೆಲವೊಂದು ಆಫೀಸ್‌ಗಳಲ್ಲಿಯೂ ಹೂವಿನ ರಂಗೋಲಿ ಹಾಕಿ ಓಣಂ ಆಚರಿಸಲಾಗುವುದು.

ಈ ವರ್ಷ ಓಣಂವನ್ನು ಯಾವಾಗ ಆಚರಿಸಲಾಗುವುದು? ನಮ್ಮ ಯಾವ ಹಬ್ಬಕ್ಕೆ ಓಣಂಗೆ ಹೋಲಿಕೆ ಇದೆ ಎಂದು ನೋಡುವುದಾದರೆ
2023ರಲ್ಲಿ ಓಣಂ ಆಚರಣೆ
ಈ ವರ್ಷ ಓಣಂ ಅನ್ನು 29 ಹಾಗೂ 30ರಂದು ಆಚರಿಸಲಾಗುವುದು.
ತಿರುವಾಣಂ ನಕ್ಷತ್ರ ಆಗಸ್ಟ್ 29 ಮುಂಜಾನೆ 2:43ಕ್ಕೆ ಪ್ರಾರಂಭ
ತಿರುವಾಣಂ ನಕ್ಷತ್ರ ಮುಕ್ತಾಯ : ಆಗಸ್ಟ್ 29 ರಾತ್ರಿ 11:50
ತಿರುವಾಣಂ ಅನ್ನು ಮಕ್ಕಳ ಓಣಂ ಎಂದು ಕರೆಯಲಾಗುವುದು.
ಓಣಂ ಅನ್ನು ಆಗಸ್ಟ್ 30ರಂದು ಆಚರಿಸಲಾಗುವುದು.
ಈ ಹಬ್ಬದ ಆಚರಣೆಗೂ ನಮ್ಮ ದೀಪಾವಳಿಗೂ ಒಂದಕ್ಕೊಂದು ಸಂಬಂಧವಿದೆ.
ಓಣಂ ಹಬ್ಬದಂದು ಪೂಕಳಂ (ಹೂವಿನ ರಂಗೋಲಿ) ಹಾಕಿ ಮಾವಾಲಿಯನ್ನು ಕರೆಯಲಾಗುವುದು. ನಾವು ದೀಪಾವಳಿಯಂದು ದೀಪಗಳನ್ನು ಬೆಳಗಿ ಬಲಿಚಕ್ರವರ್ತಿಯನ್ನು ಆಹ್ವಾನಿಸುತ್ತೇವೆ.
ಮಾವಾಲಿ ಕತೆ ಹಾಗೂ ಬಲಿಚಕ್ರವರ್ತಿ ಕತೆ ಎರಡೂ ಒಂದೇ ರೀತಿ ಇರುವುದರಿಂದ ನಮ್ಮಲ್ಲಿಯ ದೀಪಾವಳಿ ಹಾಗೂ ಕೇರಳಂ ಓಣಂ ಆಚರಣೆಯ ಉದ್ದೇಶ ಒಂದೇ ರೀತಿ ಕಾಣುವುದು.
ಓಣಂ ಆಚರಣೆಯ ಸಮಯದಲ್ಲಿ ಸಾಂಪ್ರದಾಯಕ ನೃತ್ಯಗಳು ಹಾಗೂ ಆಟಗಳನ್ನು ಆಡಲಾಗುವುದು. ಕೈಕೊತ್ತಿ ಕಲಿ, ತುಂಬಿ ತುಳ್ಳಲ್ ಎಂಬ ಮನೋಹರವಾದ ನೃತ್ಯ ಪ್ರಕಾರಗಳನ್ನು ಮಾಡಲಾಗುವುದು. ದೋಣಿ ಪಂದ್ಯಗಳಿರುತ್ತದೆ. ಈ ಹಬ್ಬದ ಸಮಯದಲ್ಲಿ ವಿಶೇಷ ಅಡುಗೆಗಳನ್ನು ತಯಾರಿಸಲಾಗುವುದು. ಓಣಂ ಸಮಯದಲ್ಲಿ ಈ ಹಬ್ಬದ ವೈಶಿಷ್ಠ್ಯತೆ ಕಣ್ತುಂಬಿಗಳು ಬರುವ ಪ್ರವಾಸಿಗರ ಸಂಖ್ಯೆಯೂ ಅಧಿಕವಿರುತ್ತದೆ.



Click it and Unblock the Notifications