Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದೇವಸ್ಥಾನಕ್ಕೆ ಹೋಗಾದ ಅಲ್ಲಿ ಕುಳಿತುಕೊಳ್ಳಬೇಕು ಅಂತ ಹೇಳೋದ್ಯಾಕೆ?
ಚಿಕ್ಕಂದಿನಿಂದಲೂ ದೇವಸ್ಥಾನಕ್ಕೆ ಹೋಗುವ ಅಭ್ಯಾಸವನ್ನು ಅಪ್ಪ- ಅಮ್ಮ ನಮಗೆ ರೂಢಿಸಿ ಕೊಟ್ಟಿದ್ದಾರೆ. ಪ್ರತಿಸಾರಿ ದೇವಸ್ಥಾನಕ್ಕೆ ಹೋದಾಗಲೂ ದೇವರಿಗೆ ಭಕ್ತಿಯಿಂದ ಕೈಮುಗಿದು. ಅಲ್ಲಿ ಪ್ರದಕ್ಷಿಣೆ ಹಾಕಿ. ಒಂಚೂರು ಹೊತ್ತು ಅಲ್ಲೇ ಕುಳಿತು ನಂತರ ದೇವಸ್ಥಾನದಿಂದ ವಾಪಾಸ್ಸ್ ಬರುತ್ತೇವೆ. ಚಿಕ್ಕಂದಿನಿಂದ ಅಭ್ಯಾಸ ಆಗಿರೋದ್ರಿಂದ ನಾವು ಒಬ್ಬರೇ ಹೋದಾಗಲೂ ಕೂಡ ಇದೇ ಪದ್ಧತಿಯನ್ನು ಪಾಲಿಸುತ್ತೇವೆ.

ಆದರೆ ಎಂದಾದರೂ ನಿಮಗೆ ನೀವೆ ಪ್ರಶ್ನೆ ಮಾಡಿಕೊಂಡಿದ್ದೀರಾ? ಅಷ್ಟಕ್ಕು ನಾವು ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿ ಕುಳಿತುಕೊಳ್ಳೋದು ಯಾಕೆ ಅಂತ? ಅನೇಕ ಬಾರಿ ನಾವು ಪೋಷಕರಲ್ಲಿ ಈ ಬಗ್ಗೆ ಕೇಳಿದ್ದು ಉಂಟು. ಆದರೆ ಅವರು ಅದನ್ನೆಲ್ಲಾ ಪ್ರಶ್ನೆ ಮಾಡಬಾರದು ಇದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ ಎಂದು ನಮ್ಮ ಬಾಯಿ ಮುಚ್ಚಿಸುತ್ತಾರೆ. ಅಷ್ಟಕ್ಕೂ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಕುಳಿತುಕೊಳ್ಳೋದು ಯಾಕೆ ಅನ್ನೋದನ್ನು ತಿಳಿಯೋಣ.
ಬೆಳಂ ಬೆಳಗ್ಗೆ ದೇವಸ್ಥಾನಕ್ಕೆ ಹೋಗೋದ್ರಿಂದ ಏನು ಪ್ರಯೋಜನ?
ದೇವಸ್ಥಾನಕ್ಕೆ ಹೋಗುವವರು ಹೆಚ್ಚಾಗಿ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಬರೀ ಹೊಟ್ಟೆಯಲ್ಲಿ ದೇವಸ್ಥಾನಕ್ಕೆ ಹೋಗುತ್ತಾರೆ. ಈ ಸಮಯದಲ್ಲಿ ನಮ್ಮ ಮೈ ಹಾಗೂ ಮನಸ್ಸು ಬಹಳಷ್ಟು ಶುದ್ಧವಾಗಿರುತ್ತದೆ. ನಾವು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕುವಾಗ ನಮಗೆ ಗಂಟೆ ಹಾಗೂ ಶಂಖದ ನಾದ ಕೇಳಿಸುತ್ತದೆ.
ಈ ರೀತಿಯ ದೈವೀಕ ಶಬ್ಧಗಳು ದೇವರಲ್ಲಿ ನಮ್ಮ ಮನಸ್ಸನ್ನು ತಲ್ಲೀನವಾಗುವಂತೆ ಮಾಡುತ್ತದೆ. ಹಾಗೂ ನಮ್ಮೊಳಗಿನ ಧನಾತ್ಮಕ ಶಕ್ತಿ ಕೂಡ ಹೆಚ್ಚಾಗುತ್ತದೆ. ನಮ್ಮ ಏಕಾಗ್ರತೆಯನ್ನು ಹೆಚ್ಚು ಮಾಡೋದಕ್ಕೆ ಸಹಕಾರ ನೀಡುತ್ತದೆ. ಇದೇ ಕಾರಣಕ್ಕೆ ಬೆಳಗ್ಗೆ ದೇವಸ್ಥಾನಕ್ಕೆ ಹೋಗಬೇಕು ಅಂತ ಹೇಳೋದು.
ದೇವರ ದರ್ಶನದ ನಂತರ ದೇವಸ್ಥಾನದಲ್ಲಿ ಕುಳಿತುಕೊಳ್ಳಬೇಕು ಯಾಕೆ?
1. ದೇವರ ದರ್ಶನವಾದ ಬಳಿಕ ದೇವಸ್ಥಾನದ ಒಳಗೆ ಅಥವಾ ಹೊರಗಡೆ ಒಂದು ಪ್ರಶಾಂತವಾದ ಸ್ಥಳದಲ್ಲಿ ಸರಿಯಾದ ಕ್ರಮದಲ್ಲಿ ಕುಳಿತುಕೊಳ್ಳಿ. ಹಾಗೂ ನಿಮ್ಮ ಕಣ್ಣನ್ನು ಮುಚ್ಚಿರಿ. ಹಾಗೂ ನೀವು ಈಗಷ್ಟೇ ಕಂಡ ದೇವರನ್ನು ಮತ್ತೆ ನೆನಪಿಸಿಕೊಳ್ಳಿ. ಈ ಸಂದರ್ಭದಲ್ಲಿ ನಿಮಗೆ ಗಂಟೆ, ಶಂಖದ ನಾದ ಕೇಳಿಸುತ್ತಿರುತ್ತದೆ. ಅದನ್ನು ಅನುಭವಿಸಿ. ಈ ರೀತಿ ಮಾಡೋದ್ರಿಂದ ಆಧ್ಯಾತ್ಮಿಕತೆಯ ಜೊತೆಗೆ ನಿಮ್ಮಲ್ಲಿ ದೈವೀಕ ಶಕ್ತಿ ಉತ್ತಮಗೊಳ್ಳುತ್ತದೆ.
2. ದೇವರ ದರ್ಶನವನ್ನು ಪಡೆದುಕೊಂಡು ಬಂದ ನಂತರ ದೇವರ ರೂಪವನ್ನು ಮತ್ತೆ ನೀವು ಮನಸ್ಸಿನಲ್ಲಿಯೇ ಕಣ್ತುಂಬಿಕೊಳ್ಳಿ. ಆಕರ್ಷಕ ಮುಖ, ಕಮಲದ ಕಣ್ಣುಗಳು, ಧರಿಸಿದ್ದ ವಸ್ತ್ರು, ಆಭರಣ ಹಾಗೂ ಕೈಯಲ್ಲಿ ಹಿಡಿರುವ ಆಭರಣಗಳು ಮತ್ತೊಮ್ಮೆ ನಿಮ್ಮ ಕಣ್ಮುಂದೆ ಬರಲಿ. ಇದರಿಂದ ನೀವು ಮನಃಶಾಂತಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.
3. ಅನೇಕ ಮಂದಿ ದೇವರ ದರ್ಶನವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಕಣ್ಮುಚ್ಚುತ್ತಾರೆ. ಈ ರೀತಿ ಮಾಡಿದ್ರೆ ನೀವು ದೇವರನ್ನು ಕಣ್ತುಂಬಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆ ದೇವರ ಅಲಂಕಾರವನ್ನು ನೋಡಬೇಕು. ಇನ್ನೂ ಬೇಡಿಕೊಳ್ಳುವ ಸಂದರ್ಭದಲ್ಲಿ ಮಾತ್ರ ಕಣ್ಣುಮುಚ್ಚಬೇಕು.
4. ದೇವಸ್ಥಾನದಲ್ಲಿ ಕುಳಿತಿರುವಾಗ ಈ ಮಂತ್ರಗಳನ್ನು ಪಠಿಸಿ
ಅನಯಾಸೆ ಮರಣಂ
ಬಿನ ದೆನ್ಯೆನ್ ಜೀವನಂ
ದೇಹಂತ್ ತಾವ್ ಸಾನಿಧ್ಯಂ
ದೇಹಿ ಮೇ ಪರಮೇಶ್ವರಂ
ಅನಾಯಾಸೆ ಮರಣಂ : ಈ ಮಂತ್ರದ ಅರ್ಥ ನಾವು ಯಾವುದೇ ನೋವನ್ನು ಅನುಭವಿಸದೆ ಅನಾಯಾಸವಾಗಿ ಸಾಯಬೇಕು. ನಾವು ರೋಗಗ್ರಸ್ಥರಾಗಬಾರದು. ಹಾಗೂ ಹಾಸಿಗೆ ಹಿಡಿಯಲು ಬಾರದು. ನೋವನ್ನು ಅನುಭವಿಸಿ ನಾವು ಸಾಯುವ ಬದಲು ಅನಾಯಾಸವಾಗಿ ಸತ್ತರೆ ಒಳ್ಳೆಯದು.
ಬಿನ ದೆನ್ಯೆನ್ ಜೀವನಂ : ಎಂದರೆ ಜೀವನದಲ್ಲಿ ಯಾರ ಮೇಲೆಯೂ ಅವಲಂಬಿತವಾಗಬಾರದು
ದೇಹಂತ್ ತಾವ್ ಸಾನಿಧ್ಯಂ : ಎಂದರೆ ದೇವರು ನನ್ನ ಹತ್ತಿರ ಇರುವಾಗಲೇ ನನ್ನ ಸಾವಾಗಬೇಕು. ಉದಾಹರಣೆಗೆ ದ್ರೋಣಾಚಾರ್ಯರು ಬಾಣಗಳ ಹಾಸಿಗೆಯಲ್ಲಿ ನರಳುತ್ತಿರುವಾಗ ಶ್ರೀ ಕೃಷ್ಣ ಪರಮಾತ್ಮ ಅವರ ಮುಂದಿದ್ದರು ಹಾಗೂ ಈ ಸಂದರ್ಭದಲ್ಲಿ ದ್ರೋಣಾಚಾರ್ಯರು ಶ್ರೀಕೃಷ್ಣನನ್ನು ನೋಡುತ್ತಾ ಕಣ್ಣು ಮುಚ್ಚುತ್ತಾರೆ.
ದೇಹಿ ಮೇ ಪರಮೇಶ್ವರಂ : ಎಂದರೆ ಒಳ್ಳೆಯ ವರವನ್ನು ಕರುಣಿಸು ಎಂದಾಗುತ್ತದೆ. ನಾವು ಯಾವುದೇ ಕಾರಣಕ್ಕೂ ದೇವರಲ್ಲಿ ಹಣ, ಆಸ್ತಿ, ಅಂತಸ್ತು, ಹೆಂಡತಿ, ಮಕ್ಕಳು ಇತ್ಯಾದಿಗಳಿಗಾಗಿ ಬೇಡಿಕೆಯನ್ನು ಇಡಬಾರದು. ಅತಿಯಾಸೆ ಯಾವತ್ತೂ ನಮ್ಮಲ್ಲಿ ಇರಬಾರದು ಆ ದೇವರೇ ಸ್ವ ಇಚ್ಛೆಯಿಂದ ಇದನ್ನೆಲ್ಲಾ ನಮಗೆ ಕರುಣಿಸುವಂತಾಗಬೇಕು.
ನಾವು ನಂಬಿರೋ ದೇವರು ಯಾವುದೇ ಕಾರಣಕ್ಕೂ ನಮ್ಮ ಕೈ ಬಿಡೋದಿಲ್ಲ. ನಾವು ಆಗಾಗ್ಗೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರೆ ನಮ್ಮ ಬದುಕಿನಲ್ಲಿ ಎಲ್ಲವೂ ನಿಧಾನವಾಗಿ ಬದಲಾಗುತ್ತದೆ. ನಮ್ಮ ಬದುಕಿನಲ್ಲೂ ಖಂಡಿತ ಒಳ್ಳೆಯ ದಿನಗಳು ಬಂದೇ ಬರುತ್ತದೆ.



Click it and Unblock the Notifications
