Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ? ಪಿತೃಪಕ್ಷದಲ್ಲಿ ಪಿತೃದೋಷ ನಿವಾರಣೆಗೆ ಪರಿಹಾರ
ಯಾವುದೇ ಕಾರಣಕ್ಕೆ ಪಿತೃದೋಷ ಒಳ್ಳೆಯದಲ್ಲ, ಪಿತೃದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು ಎಂದು ಹೇಳಲಾಗುವುದು. ಪಿತೃದೋಷ ಹೇಗೆ ಉಂಟಾಗುತ್ತದೆ? ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ? ಇದರ ಲಕ್ಷಣಗಳೇನು? ಪಿತೃದೋಷಕ್ಕೆ ಪರಿಹಾರವೇನು ಎಂದು ನೋಡೋಣ ಬನ್ನಿ:

ಪಿತೃದೋಷ ಹೇಗೆ ಉಂಟಾಗುವುದು?
ಪಿತೃದೋಷ ಪೂರ್ವಜರ ಶಾಪದಿಂದ ಉಂಟಾಗಬಹುದು, ವ್ಯಕ್ತಿಯ ಕುಂಡಲಿಯಲ್ಲಿ ಪಿತೃದೋಷವಿದ್ದರೆ ಅದರಿಂದಲೂ ಉಂಟಾಗುವುದು. ಪೂರ್ವಜರು ಏನಾದರೂ ತಪ್ಪು ಮಾಡಿದ್ದರೆ ಅದರ ದೋಷವೂ ಮುಂದಿನ ತಲೆಮಾರುಗಳಿಗೆ ಬಾಧಿಸಬಹುದು. ಈ ಪಿತೃದೋಷದಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಪಿತೃದೋಷವಿದ್ದರೆ ಅನೇಕ ಋಣಾತ್ಮಕ ಘಟನೆಗಳು ಬದುಕಿನಲ್ಲಿ ಸಂಭವಿಸುತ್ತದೆ. ತುಂಬಾನೇ ನಷ್ಟ ಅನುಭವಿಸಬೇಕಾಗುತ್ತದೆ, ಏನೇ ಮಾಡಿದರೂ ಏಳಿಗೆಯಾಗುವುದಿಲ್ಲ, ಮನಸ್ಸಿಗೆ ನೆಮ್ಮದಿಯೆಂಬುವುದೇ ಇರುವುದಿಲ್ಲ.
ಪಿತೃದೋಷವಿದೆಯೆಂದು ತಿಳಿಯುವುದು ಹೇಗೆ?
* ಆಗಾಗ ಕಾಯಿಲೆ ಬೀಳುವುದು
* ದಂಪತಿಗೆ ಗರ್ಭಧಾರಣೆಯಲ್ಲಿ ತೊಂದರೆಯಾಗುವುದು
* ಆಗಾಗ ಗರ್ಭಪಾತ ಉಂಟಾಗುವುದು
* ಯಾವುದೇ ಕಾರಣವಿಲ್ಲದೆ ಮನೆಯ ಸದಸ್ಯರ ನಡುವೆ ಸದಾ ಜಗಳ
* ಗಂಡ-ಹೆಂಡತಿ ನಡುವೆ ಜಗಳ ಉಂಟಾಗುವುದು
* ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಉಂಟಾಗುವುದು
* ಕುಟುಂಬ ಏಳಿಗೆಯಾಗುವುದಿಲ್ಲ
* ದೈಹಿಕ , ಮಾನಸಿಕ ನ್ಯೂನತೆಗಳು ಉಂಟಾಗುವುದು.
ಪಿತೃದೋಷ ಹೇಗೆ ಉಂಟಾಗುವುದು
* ತುಂಬಾ ಕ್ರೂರ ವರ್ತನೆ, ಪ್ರಾಣಿ, ಮನುಷ್ಯರನ್ನು ಕ್ರೂರವಾಗಿ ಕೊಲ್ಲುವುದು
* ಬೇರೆಯವರಿಗೆ ವಂಚನೆ ಮಾಡಿ ತಾವು ಬೆಳೆಯಲು ಯತ್ನಿಸುವುದು
* ಹಿರಿಯರೊಂದಿಗೆ ಗೌರವದೊಂದಿಗೆ ನಡೆದುಕೊಳ್ಳದಿರುವುದು
ಕುಂಡಲಿಯಲ್ಲಿ ಪಿತೃದೋಷ ಯಾವಾಗ ಉಂಟಾಗುವುದು
* ಕುಂಡಲಿಯಲ್ಲಿ ರಾಹು-ಕೇತು ಸಂಯೋಗವಾದರೆ ಪಿತೃದೋಷ ಉಂಟಾಗುವುದು
* ಸೂರ್ಯ-ರಾಹು/ಕೇತು ಅಥವಾ ಗುರು-ರಾಹು/ ಕೇತು ಸಂಯೋಗವಾಗಿದ್ದರೆ ಪಿತೃದೋಷ ಉಂಟಾಗುವುದು.
* ಜನ್ಮ ಕುಂಡಲಿಯಲ್ಲಿ ಸೂರ್ಯ ಮತ್ತು ರಾಹು ಅಥವಾ ಸೂರ್ಯ ಮತ್ತು ಶನಿ ಕುಂಡಲಿಯ ಮೊದಲ, 2ನೇ, 4ನೇ, 7ನೇ, 9 ಹಾಗೂ 10ನೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು.
ಪಿತೃದೋಷವಿದ್ದರೆ ಪಿತೃಪಕ್ಷದಲ್ಲಿ ಈ ಪರಿಹಾರ ಮಾಡಿದರೆ ಒಳ್ಳೆಯದು.
* ಪಿತೃಪಕ್ಷದಲ್ಲಿ ಪಿತೃ ತರ್ಪಣ ಮಾಡಿದರೆ ಒಳ್ಳೆಯದು
* ಪಿತೃಪಕ್ಷದಲ್ಲಿ ಪಿತೃ ದೋಷ ನಿವಾರಣೆ ಪೂಜೆ ಮಾಡಿ
* ಆಲದ ಮರಕ್ಕೆ ನೀರು ಹಾಕಿ ಶಿವನಿಗೆ ಪ್ರತಿದಿನ ಪೂಜೆ ಸಲ್ಲಿಸಿ, ಇದರಿಂದ ಪಿತೃದೋಷ ಕಡಿಮೆಯಾಗುವುದು.
* ನೀವು ಪಿತೃಪಕ್ಷದಲ್ಲಿ ಪಿಂಡದಾನ ಮಾಡಿ
* ಮಹಾಲಯ ಅಮವಾಸ್ಯೆಯಂದು ಪಿತೃ ತರ್ಪಣ ಮಾಡಿ.
* ನಿಮ್ಮ ಕುಂಡಲಿಯನ್ನು ಬಲಪಡಿಸಲು ನಿಮ್ಮ ರಾಶಿಗೆ ಸೂಕ್ತವಾದ ಹರಳು ಧರಿಸಬಹುದು.
* ಪಿತೃ ದೋಷ ನಿವಾರಣ ಮಂತ್ರ ಪಠಿಸಿ
ಓಂ ಶ್ರೀಂ ಸರ್ವ ಪಿತ್ರ ದೋಷ ನಿವಾರಣಾಯ ಕ್ಲೇಷಂ ಹನ್ ಹನ್ ಸುಖ್ ಶಾಂತಿಂ ದಹಿ ಪತ್ ಸ್ವಾಹಾ
ಈ ಮಂತ್ರ ಪಠಿಸಿ
* ಮೃತ್ಯುಂಜಯ ಮಂತ್ರ ಪಠಿಸಿ
* ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications
