Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸಂಖ್ಯಾಶಾಸ್ತ್ರ: ಮೇ 29 ರಿಂದ ಜೂನ್ 4ರವರೆಗಿನ ವಾರ ಭವಿಷ್ಯ ಹೇಗಿರಲಿದೆ ನೋಡಿ
ಸಂಖ್ಯಾ ಶಾಸ್ತ್ರದ ಪ್ರಕಾರ ಜೂನ್ ತಿಂಗಳ ಕೊನೆಯ ವಾರದಲ್ಲಿ ಅನೇಕ ಜನರಿಗೆ ಶುಭ ಫಲಗಳಿದೆ. ಇನ್ನೂ ಅನೇಕ ಜನರಿಗೆ ಅಶುಭ ಫಲಗಳಿದೆ. 1 ರಿಂದ 9 ರವರೆಗೆ ಸಂಖ್ಯಾ ಶಾಸ್ತ್ರದಲ್ಲಿ ಸಂಖ್ಯೆಗಳಿದೆ. ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ರಾಶಿ ಸಂಖ್ಯೆ ತಿಳಿಯಲು ನಿಮ್ಮ ಜನ್ಮ ದಿನಾಂಕವನ್ನು ಬಳಸಿಕೊಳ್ಳಬಹುದು. ಉದಾಹರಣೆಗೆ ನಿಮ್ಮ ಜನ್ಮ ದಿನಂಕ 11 ಆಗಿದ್ದರೆ 1+1 = 2 ಈ ರೀತಿ ಲೆಕ್ಕ ಮಾಡಬಹುದು. ಹಾಗಾದ್ರೆ ಈ ವಾರದ ಸಾಪ್ತಾಹಿಕ ಸಂಖ್ಯಾ ಶಾಸ್ತ್ರ ಏನು ಹೇಳುತ್ತೆ ಅನ್ನೋದನ್ನು ತಿಳಿಯೋಣ.
ಸಂಖ್ಯೆ : 1 ( ಜನ್ಮ ದಿನಾಂಕ 1,10,19,28)
ಈ ವಾರ ನೀವು ತುಂಬಾ ಆಕ್ಟೀವ್ ಆಗುತ್ತೀರಿ. ನಿಮ್ಮಲ್ಲಿ ಒಂದು ಸ್ಪಷ್ಟ ಗುರಿಯಿರುತ್ತದೆ. ಹಾಗೂ ಅದಕ್ಕಾಗಿ ನೀವು ಕೆಲಸ ಮಾಡುತ್ತೀರಿ. ನಿಮ್ಮ ಉತ್ಸಾಹ ಇತರರನ್ನು ಮೆಚ್ಚಿಸುವಂತಿರುತ್ತದೆ. ನೀವು ಎಲ್ಲಾ ವಿಚಾರದಲ್ಲೂ ಆಶಾವಾದಿಯಾಗಿರುತ್ತೀರಿ. ಹಾಗೂ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ಸಮಸ್ಯೆಗಳು ಸ್ಫೋಟಿಸಲು ಅವಕಾಶ ಕೊಡದಿರಿ.
ಅದೃಷ್ಟದ ಸಂಖ್ಯೆ : 12
ಅದೃಷ್ಟದ ಬಣ್ಣ : ಪೀಚ್ (Peach)
ಅದೃಷ್ಟದ ವಾರ : ಮಂಗಳವಾರ

ಸಂಖ್ಯೆ : 2 ( ಜನ್ಮ ದಿನಾಂಕ 2,11,20,29)
ಈ ವಾರ ನಿಮ್ಮ ಮೊದಲ ಆದ್ಯತೆ ಮಕ್ಕಳು, ಸಂಗಾತಿ, ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಯಾರೆಲ್ಲಾ ಅನಾರೋಗ್ಯಕರ ಆಹಾರ ಸೇವಿಸುತ್ತಿದ್ದೀರೋ ಅವರಿಗೆ ಇದು ಎಚ್ಚರಿಕೆಯ ಕರೆಯಾಗಿದೆ. ವಿಟಮಿನ್‌ಗಳು ಮತ್ತು ಪ್ರೊಟೀನ್‌ಗಳ ಕೊರತೆ ನಿಮಗೆ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಬಹುದು. ಉದ್ಯೋಗ ಹುಡುಕುತ್ತಿರುವವರಿಗೆ ಶುಭ ಸುದ್ದಿ ಸಿಗಲಿದೆ.
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ದಿನ: ಗುರುವಾರ
ಸಂಖ್ಯೆ : 3 (ಜನ್ಮ ದಿನಾಂಕ 3,12,21,30)
ಈ ವಾರ ನೀವು ಭಾವನಾತ್ಮಕವಾಗಿ ಕುಗ್ಗಿ ಹೋಗುವ ಸಾಧ್ಯತೆಗಳು ಹೆಚ್ಚಾಗಿದೆ. ಈ ಸಮಯದಲ್ಲಿ ನೀವು ಸ್ತ್ರೀ ಯಿಂದ ಭಾವನಾತ್ಮಕ ಬೆಂಬಲವನ್ನು ನಿರೀಕ್ಷೇ ಮಾಡಬಹುದು. ಧ್ಯಾನವು ಕೂಡ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಬಹುದು. ಕೆಲಸದ ಕಡೆಯಿಂದ ಕೊಂಚ ಕಿರಿ ಕಿರಿ ಅನುಭವಿಸುವ ಸಾಧ್ಯತೆಯಿದೆ. ಈ ಸಮಯದಲ್ಲಿ ನೀವು ಯಾರಿಂದಲಾದರೂ ನೈತಿಕ ಬೆಂಬಲ ಹಾಗೂ ಮಾರ್ಗದರ್ಶನ ಪಡೆಯಬಹುದು.
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ದಿನ: ಶುಕ್ರವಾರ
ಸಂಖ್ಯೆ : 4 ( ಜನ್ಮ ದಿನಾಂಕ 4,13,22,31)
ಈ ವಾರ ನಿಮ್ಮ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬರುತ್ತದೆ. ನಿಮ್ಮ ಆತ್ಮ ವಿಶ್ವಾಸ ಯಾವುದೇ ಕಾರಣಕ್ಕೂ ಕುಗ್ಗದಂತೆ ನೋಡಿಕೊಳ್ಳಿ. ನೀವು ಅಂದುಕೊಂಡಿರೋದು ಆಗೋದಿಲ್ಲ. ಆಗ ನೀವು ಹತಾಶೆಗೆ ಸಿಲುಕುವ ಸಾಧ್ಯತೆಗಳಿದೆ. ವ್ಯಾಪಾರದಲ್ಲಿರುವವರು ಸ್ವಲ್ಪ ಹಣದ ಲಾಭವನ್ನು ಪಡೆಯುತ್ತಾರೆ. ನಿಮ್ಮ ಖರ್ಚುಗಳಿಗೆ ಆದ್ಯತೆ ನೀಡಿ ಮತ್ತು ಅನಗತ್ಯ ಖರ್ಚು ಮಾಡುವುದನ್ನು ಮಾಡಬೇಡಿ. ಮನೆಯವರ ಮುಂದೆ ಪ್ರಬುದ್ಧರಂತೆ ವರ್ತಿಸಿ.
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ದಿನ: ಗುರುವಾರ
ಸಂಖ್ಯೆ : 5 ( ಜನ್ಮ ದಿನಾಂಕ 5,14,23)
ಈ ವಾರ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.
ಚಿಲ್ಲರೆ ವ್ಯಾಪಾರಿಗಳಿಗೆ ಈ ವಾರ ಅತ್ಯಂತ ಫಲಪ್ರದವಾಗಿರುತ್ತದೆ. ಮನೆಯಿಂದ ಕೆಲಸ ಮಾಡುತ್ತಿರುವ ಹೆಚ್ಚಿನ ಸಮಯ ವ್ಯರ್ಥ ಮಾಡಬಾರದು. ಇದು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಕೆಲವೊಂದು ಸಂದರ್ಭಗಳಲ್ಲಿ ನೀವು ಅಸಹಾಯಕರಾಗುತ್ತೀರಿ. ಆಗ ನಿಮ್ಮ ಆಪ್ತ ಕುಟುಂಬದ ಸದಸ್ಯರ ಬೆಂಬಲ ಪಡೆದು ಪರಿಸ್ಥಿತಿಯನ್ನು ಹಗುರಗೊಳಿಸಬಹುದು.
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ದಿನ: ಭಾನುವಾರ
ಸಂಖ್ಯೆ : 6 (ಜನ್ಮ ದಿನಾಂಕ 6,15,24)
ನೀವು ಈ ವಾರ ವೈದ್ಯಕೀಯ ಪರೀಕ್ಷೇಗೆ ಒಳಗಾದರೆ ಉತ್ತಮ. ನೀವು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ನಡೆದುಕೊಳ್ಳಿ. ನಿಮ್ಮ ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ನಿರ್ಣಾಯಕ ಸಮಯ. ಈ ವಾರ ನಿಮ್ಮ ವೃತ್ತಿ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ. ಆರ್ಥಿಕವಾಗಿ ಈ ವಾರವು ತೃಪ್ತಿಕರವಾಗಿರುತ್ತದೆ. ಇತ್ತ ಖರ್ಚಿನ ಬಗ್ಗೆ ಕೂಡ ಗಮನಹರಿಸಿ.
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ದಿನ: ಶುಕ್ರವಾರ
ಸಂಖ್ಯೆ : 7 (ಜನ್ಮ ದಿನಾಂಕ 7,16,25)
ಈ ವಾರ ನೀವು ನಿಮ್ಮ ಬಗ್ಗೆ ಉತ್ತಮ ಭಾವನೆ ಹೊಂದುವ ಸಾಧ್ಯತೆಯಿದೆ. ಈ ಸಮಯವು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ವೃತ್ತಿರಂಗದಲ್ಲಿ ನೀವು ವಿರೋಧವನ್ನು ಎದುರಿಸಬೇಕಾಗುತ್ತದೆ. ನಿಮ್ಮ ಸಹೋದ್ಯೋಗಿಗಳು ನಿಮ್ಮ ಆಲೋಚನೆಯನ್ನು ಒಪ್ಪದಿರಬಹುದು. ಆಗ ನೀವು ಆಕ್ರಮಣಕಾರಿಯಾಗುವ ಸಾಧ್ಯತೆಯಿದೆ. ಇತರರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಿ ಮತ್ತು ಸಂಘರ್ಷಗಳನ್ನು ತಪ್ಪಿಸಿ. ನೀವು ವೈಯಕ್ತಿಕವಾಗಿ ಇತರರನ್ನು ಆಕರ್ಷಿಸುತ್ತೀರಿ. ನಿಮ್ಮ ಸಂಬಂಧದಲ್ಲಿ ತೊಡಕು ಕಂಡುಬರಬಹುದು ಜಾಗರೂಕರಾಗಿರಿ.
ಅದೃಷ್ಟದ ಸಂಖ್ಯೆ: 13
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ದಿನ: ಶನಿವಾರ
ಸಂಖ್ಯೆ 8 ( ಜನ್ಮ ದಿನಾಂಕ 8,17,26)
ನಿಮ್ಮ ಯೋಜಿತ ವೇಳಾಪಟ್ಟಿಯ ಪ್ರಕಾರ ಈ ವಾರ ಸಾಗುತ್ತದೆ. ಈ ವಾರವನ್ನು ನೀವು ತುಂಬಾನೇ ಆನಂದಿಸುತ್ತೀರಿ ಮತ್ತು ನಿಮ್ಮ ಮುಖದಲ್ಲಿ ಒಂದು ನಗು ಕಾಣಬಹುದು. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ನೀವು ಒತ್ತಡ ಮುಕ್ತ ಜೀವನ ನಡೆಸಬೇಕು. ವೃತ್ತಿ ಜೀವನದಲ್ಲಿ ನಿಮ್ಮ ನಿರೀಕ್ಷೇಗಳನ್ನು ನೀವು ತಲುಪುತ್ತೀರಿ. ವ್ಯಾಪಾರಸ್ಥರಿಗೆ ಇದು ಉತ್ತಮ ಸಮಯ. ಆರ್ಥಿಕ ಲಾಭವಾಗಲಿದೆ. ದಂಪತಿಗಳು ತಮ್ಮ ಸಂಗಾತಿಯೊಂದಿಗೆ ಉತ್ತಮ ಕಾಲ ಕಳೆಯುತ್ತೀರಿ.
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಬಣ್ಣ: ಬೂದು
ಅದೃಷ್ಟದ ದಿನ: ಶನಿವಾರ
ಸಂಖ್ಯೆ 9 (ಜನ್ಮ ದಿನಾಂಕ 9,18,27)
ಈ ವಾರ ನೀವು ಕೆಲಸದ ಹೊರತಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ. ಈ ವಾರ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ನೀವು ನಿಮ್ಮ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತೀರಿ. ನಿಮ್ಮ ವೃತ್ತಿಜೀವನದಲ್ಲಿ ಕೊಂಚ ಗೊಂದಲಗಳು ಆಗಬಹುದು. ಯಾವುದೇ ಒಳ್ಳೆಯ ಕೆಲಸ ಮಾಡುವಾಗ ಇತರರ ಬಗ್ಗೆ ತಲೆ ಕೆಡಿಸಿಕೊಳ್ಳೋದಕ್ಕೆ ಹೋಗಬೇಡಿ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಉತ್ತಮವಾಗುತ್ತದೆ.
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಬಣ್ಣ: ಬಂಗಾರದ ಬಣ್ಣ
ಅದೃಷ್ಟದ ದಿನ: ಭಾನುವಾರ



Click it and Unblock the Notifications
