Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
Weekly Love Horoscope 10 - 16 July 2023: ಜುಲೈ ತಿಂಗಳಲ್ಲಿ 10 ರಿಂದ 16 ರವರೆಗೆ ಪ್ರೇಮಿಗಳಿಗೆ, ವಿವಾಹಿತರಿಗೆ ಹೇಗಿರಲಿದೆ
ಪ್ರೇಮಿಗಳು ಹಾಗೂ ದಂಪತಿಗಳ ಜೀವನದಲ್ಲಿ ಪ್ರತಿ ದಿನ ಒಂದಲ್ಲ ಒಂದು ರೀತಿಯಲ್ಲಿ ಬದಲಾವಣೆಗಳು ಇದ್ದೇ ಇರುತ್ತದೆ. ಎಲ್ಲಾ ದಿನ ಒಂದೇ ರೀತಿ ಇರುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಈ ವಾರ ವಿವಾಹಿತರು, ಪ್ರೇಮಿಗಳಿಗೆ ಹೇಗಿರಲಿದೆ? ಯಾವ ರೀತಿಯ ಏಳು ಬೀಳುಗಳನ್ನು ಅವರು ಎದುರಿಸಲಿದ್ದಾರೆ. ಇನ್ನೂ ಒಂಟಿಯಾಗಿರುವವರ ಜೀವನದಲ್ಲಿ ಏನಾದ್ರು ಬದಲಾವಣೆಗಳು ಆಗಲಿದ್ಯಾ? ಅನ್ನೋದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರು ಈ ವಾರ ತಮ್ಮ ಸಂಬಂಧದಲ್ಲಿ ಕೆಲವೊಂದು ಏರಿಳಿತಗಳನ್ನು ಎದುರಿಸುವ ಸಾಧ್ಯತೆಯಿದೆ. ಸಂವಹನವು ಮುಖ್ಯವಾಗಿದೆ. ಆದರೆ ನೀವು ಮಾಡುವ ಕೆಲಸಗಳು ಮತ್ತು ನಿಮ್ಮ ಮಾತುಗಳಿಂದ ನಿಮ್ಮ ಸಂಗಾತಿಯನ್ನು ನೋಯಿಸಬೇಡಿ. ನಿಮ್ಮ ಭಾವನೆಗಳು ಮುಕ್ತವಾಗಿ ಹಂಚಿಕೊಂಡರೆ ಉತ್ತಮ.

ಇನ್ನೂ ಸಂಗಾತಿ ಸಿಗದೇ ಏಕಾಂಗಿಯಾಗಿರುವವರು ಈ ವಾರವೂ ಒಂಟಿತನವನ್ನು ಅನುಭವಿಸುತ್ತಾರೆ. ಸಂಗಾತಿಯನ್ನು ಹುಡುಕಲು ಪ್ರಯತ್ನಿಸುತ್ತಾರೆ. ಆದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಯಾವುದೇ ಕಾರಣಕ್ಕೂ ಆತುರದಿಂದ ನಿರ್ಧಾರ ತೆಗೆದುಕೊಂಡು ಯಾರನ್ನೂ ಒಪ್ಪದಿರಿ.
ವೃಷಭ ರಾಶಿ
ವೃಷಭ ರಾಶಿಯವರು ಸಂಬಂಧಗಳಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಅನುಭವಿಸುತ್ತಾರೆ. ಉತ್ತಮ ಸಂಬಂಧಕ್ಕಾಗಿ ರಾಜಿ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ಆದರೆ ನಿಮ್ಮ ಆತ್ಮಗೌರವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ. ಲೈಂಗಿಕ ಜೀವನ ಉತ್ತಮವಾಗಿರುವಂತೆ ನೋಡಿಕೊಳ್ಳಿ. ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ.
ಇನ್ನೂ ಏಕಾಂಗಿಗಳು ಪ್ರಬುದ್ಧ ಮತ್ತು ವಯಸ್ಸಾದ ಜನರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ ಆಗಿತ್ತು. ಅವರೊಂದಿಗೆ ನೀವು ಸಂತೋಷವಾಗಿರುತ್ತೀರಿ ಎಂದು ಅನ್ನಿಸಿದರೆ ಖಂಡಿತ ಮುಂದುವರಿಯಬಹುದು.
ಮಿಥುನ ರಾಶಿ
ಈ ವಾರ ಮಿಥುನ ರಾಶಿಯವರು ಬಹಳಷ್ಟು ವಿಷಯಗಳಿಂದ ವಿಚಲಿತರಾಗಬಹುದು. ನಿಮ್ಮ ಸಂಗಾತಿಯ ಜೊತೆಗೆ ಅವರ ಕೆಲಸದಲ್ಲಿ ಕೈ ಜೋಡಿಸಿ. ಲೈಂಗಿಕ ಸಂಬಂಧವನ್ನು ಉತ್ತಮವಾಗಿ ಕಾಯ್ದುಕೊಳ್ಳೋದಕ್ಕೆ ಮರೆಯಬೇಡಿ. ನಿಮ್ಮ ಪ್ರೀತಿಯ ಬಂಧಗಳನ್ನು ಬಲಪಡಿಸಲು ಮತ್ತು ಸಾಮರಸ್ಯದ ಕಡೆಗೆ ಕೆಲಸ ಮಾಡಲು ನೀವು ಪ್ರಯತ್ನಿಸಬೇಕು.
ಏಕಾಂಗಿಗಳು ತಮ್ಮ ಸಂಬಂಧದಲ್ಲಿ ಬದ್ಧತೆಗಳಿಗೆ ಸಿದ್ಧರಾಗಿರುವುದಿಲ್ಲ. ಮತ್ತು ಒಳ್ಳೆಯ ಸಮಯಕ್ಕಾಗಿ ಎದುರು ನೋಡುತ್ತಾರೆ. ಪ್ರೀತಿಯಲ್ಲಿರುವವರು ಈ ವಾರ ಕೆಲವೊಂದು ಗೊಂದಲಗಳಿಗೆ ಒಳಗಾಗಬೇಕಾಗುತ್ತದೆ. ಇದರಿಂದ ಕೆಲವೊಂದು ಸಮಸ್ಯೆಗಳು ಎದುರಾಗುತ್ತದೆ. ಹೀಗಾಗಿ ಒತ್ತಡಕ್ಕೆ ಒಳಗಾಗಬೇಡಿ .
ಕರ್ಕಾಟಕ ರಾಶಿ
ಕರ್ಕಾಟಕ ರಾಶಿವರು ತಮ್ಮ ಸಂಗಾತಿಯ ಜೊತೆಗೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗಳು ದೀರ್ಘಕಾಲ ಉಳಿಯಲು ಬಿಡಬೇಡಿ. ನಿಮ್ಮ ಸಂಗಾತಿಯನ್ನು ಆದಷ್ಟು ಅರ್ಥ ಮಡಿಕೊಳ್ಳಿ. ಅವರ ಅಭಿಪ್ರಾಯಗಳನ್ನು ಪರಿಗಣಿಸಿ. ಜೊತೆಗೆ ಅವರ ಆಲೋಚನೆ ಮತ್ತು ನಿರ್ಣಯವನ್ನು ಗೌರವಿಸಿ.
ಏಕಾಂಗಿಗಳು ಹೊಸ ಜನರನ್ನು ಭೇಟಿ ಮಾಡುವ ಸಾಧ್ಯತೆಗಳಿದೆ. ನಿಮ್ಮ ನೆಚ್ಚಿನ ಸಂಗಾತಿಯನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಇನ್ನೂ ಪ್ರೀತಿಯಲ್ಲಿರುವ ಕರ್ಕಾಟಕ ರಾಶಿಯವರು ಗೊಂದಲಕ್ಕೊಳಗಾಗಬಹುದು. ಪ್ರೀತಿಯ ಬಗ್ಗೆ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆಯಿದೆ.
ಸಿಂಹ ರಾಶಿ
ಈ ವಾರ ಸಿಂಹ ರಾಶಿಯವರು ತಮ್ಮ ಸಂಗಾತಿಗೆ ಗೌರವ ತೋರೋದನ್ನು ಮರೀಬೇಡಿ. ಇಬ್ಬರೂ ವಿರುದ್ಧ ಅಭಿರುಚಿ ಹೊಂದಿರುವ ದಂಪತಿಗಳ ಮಧ್ಯೆ ಜಗಳಗಳಾಗುವ ಸಾಧ್ಯತೆಯಿದೆ. ನಿಮ್ಮ ಸಂಗಾತಿಗಾಗಿ ಹೆಚ್ಚಿನ ಸಮಯ ಕೊಡೋದನ್ನು ಮರೀಬೇಡಿ.
ಇನ್ನೂ ಏಕಾಂಗಿಗಳು ತಮ್ಮ ಬಾಳ ಸಂಗಾತಿಯನ್ನು ಭೇಟಿ ಮಾಡುವ ಸಾಧ್ಯತೆಗಳಿದೆ. ಇನ್ನೂ ನಿಮ್ಮ ಸಂತಸದ ಕ್ಷಣವನ್ನು ಆನಂದಿಸೋದನ್ನು ಮರೀಬೇಡಿ. ಇನ್ನೂ ಪ್ರೇಮಿಗಳು ಸಣ್ಣ-ಪುಟ್ಟ ವಿಚಾರಕ್ಕೆ ಜಗಳ ಆಡೋದನ್ನು ತಪ್ಪಿಸಬೇಕು. ನೀವು ಆದಷ್ಟು ಸಂಬಂಧವನ್ನು ಉಳಿಸಿಕೊಳ್ಳೋದಕ್ಕೆ ಪ್ರಯತ್ನಿಸಿ.
ಕನ್ಯಾರಾಶಿ
ಕನ್ಯಾ ರಾಶಿಯವರು ಈ ವಾರ ಅತಿಯಾದ ಒತ್ತಡವನ್ನು ಹೊಂದಿರುತ್ತಾರೆ. ಅವರ ಸಂಗಾತಿಯ ಜೊತೆಗೆ ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ನೀವು ಸ್ವಯಂ ಸುಧಾರಣೆಗೆ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಸಂಬಂಧಗಳು ಉತ್ತಮಗೊಳ್ಳಬೇಕಾದರೆ ಒಬ್ಬರಿಗೊಬ್ಬರು ಗೌರವ ಕೊಡೋದು ತುಂಬಾನೇ ಮುಖ್ಯವಾಗುತ್ತದೆ.
ಇನ್ನೂ ಏಕಾಂಗಿಗಳು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ಸಂಗಾತಿಯ ಹುಡುಕಾಟದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಪ್ರೀತಿಯಲ್ಲಿರುವವರು ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುವಂತ ಹೆಚ್ಚಿನ ಗಮನ ಕೊಡಿ.
ತುಲಾ ರಾಶಿ
ತುಲಾ ರಾಶಿಯವರು ಈ ವಾರ ತಮ್ಮ ಸಂಬಂಧದಲ್ಲಿ ಧನಾತ್ಮಕ ಬದಲಾವಣೆಗಳನ್ನು ಅನುಭವಿಸುತ್ತಾರೆ. ನಿಮ್ಮ ಸಂಬಂಧವು ಹೆಚ್ಚು ಸ್ಥಿರತೆಯತ್ತ ಸಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂವಹನ ಉತ್ತಮವಾಗುತ್ತದೆ. ಕುಟುಂಬದೊಳಗೆ ನಿಮ್ಮ ಪ್ರೀತಿಯೂ ಹೆಚ್ಚಾಗುತ್ತದೆ. ಮತ್ತು ಸದಸ್ಯರು ಪರಸ್ಪರ ಹತ್ತಿರವಾಗುತ್ತಾರೆ.
ಇನ್ನೂ ಏಕಾಂಗಿಗಳು ಬಹಳಷ್ಟು ಆಸಕ್ತಿದಾಯಕ ಜನರನ್ನು ಭೇಟಿಯಾಗುತ್ತಾರೆ. ಉತ್ತಮ ಸಂಗಾತಿಯ ಹುಡುಕಾಟಕ್ಕೆ ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಪ್ರೀತಿಯಲ್ಲಿರುವವರು ತಮ್ಮ ಪ್ರೀತಿಯ ಬಂಧಗಳನ್ನು ಬಲಪಡಿಸಿಕೊಳ್ಳುತ್ತಾರೆ.
ವೃಶ್ಚಿಕ ರಾಶಿ
ಈ ವಾರ ವೃಶ್ಚಿಕ ರಾಶಿಯವರು ತಮ್ಮ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಹಿಂದಿನ ಕೆಲವು ಸಮಸ್ಯೆಗಳು ಉಂಟಾಗಬಹುದು ಮತ್ತು ನಿಮ್ಮ ಸಂಬಂಧದಲ್ಲಿ ಸಮತೋಲನವನ್ನು ಹಾಳುಮಾಡಬಹುದು. ನೀವು ಹಿಂದಿನದನ್ನು ಮರೆತು ವರ್ತಮಾನದ ಮೇಲೆ ಕೇಂದ್ರೀಕರಿಸಬೇಕು. ಇದರಿಂದ ನಿಮ್ಮ ಭವಿಷ್ಯವನ್ನು ರೂಪಿಸಬಹುದು.
ಇನ್ನೂ ಒಂಟಿಯಾಗಿ ಇರುವವರು ಹಿಂದಿನ ಬಂಧನದಿಂದ ತಮ್ಮನ್ನು ತಾವು ಮುಕ್ತಗೊಳಿಸಿಕೊಳ್ಳಬೇಕು. ಮತ್ತು ಸಕಾರಾತ್ಮಕತೆಯೊಂದಿಗೆ ಹೊಸ ಜನರನ್ನು ಭೇಟಿಯಾಗಲು ಪ್ರಾರಂಭಿಸಬೇಕು. ಇನ್ನೂ ಪ್ರೇಮಿಗಳು ದುಡುಕಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ಧನು ರಾಶಿ
ಧನು ರಾಶಿಯವರು ಈ ವಾರ ಹಿಂದಿನ ಸವಿ ನೆನಪುಗಳನ್ನು ಮೆಲುಕು ಹಾಕುತ್ತಾ ಉತ್ತಮ ಸಮಯ ಕಳೆಯುತ್ತಾರೆ. ಇದರಿಂದ ನಿಮ್ಮ ಸಂಬಂಧ ಉತ್ತಮಗೊಳ್ಳುತ್ತದೆ. ನಿಮ್ಮ ಸಂಗಾತಿಯ ಜೊತೆಗೆ ಅನ್ಯೋನ್ಯವಾಗಿರುತ್ತೀರಿ. ಇನ್ನೂ ಮಗುವನ್ನು ಹೊಂದಲು ಬಯಸೋದಾದರೆ ಇದು ಉತ್ತಮ ಸಮಯ.
ಒಂಟಿಯಾಗಿರುವವರು ಹಿಂದಿನ ಯಾರನ್ನಾದರೂ ಭೇಟಿಯಾಗಬಹುದು. ಇದರಿಂದ ನಿಮ್ಮ ಬಾಳಲ್ಲಿ ಒಳ್ಳೆಯದಾಗುತ್ತದೆ. ಹಳೆಯ ಪ್ರೀತಿ ಚಿಗುರೊಡೆಯುವ ಸಾಧ್ಯತೆ ಇರುತ್ತದೆ. ಇನ್ನೂ ಪ್ರೇಮಿಗಳು ನಿಮ್ಮ ಪ್ರೀತಿಯಲ್ಲಿ ನಿಷ್ಠೆಯಿಂದ ಹಾಗೂ ನಿಮ್ಮ ಸಂಗಾತಿಯಲ್ಲಿ ಕಾಳಜಿಯನ್ನು ತೋರಬೇಕು.
ಮಕರ ರಾಶಿ
ಮಕರ ರಾಶಿಯವರಿಗೆ ಈ ವಾರ ಪ್ರೀತಿಯ ಜೀವನ ಉತ್ತಮವಾಗಿರಲಿದೆ. ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಸಂತೋಷವಾಗಿರುತ್ತೀರಿ. ನಿಮ್ಮ ಸಂಬಂಧವು ತುಂಬಾ ತೃಪ್ತಿಕರವಾಗಿರುತ್ತದೆ. ಮತ್ತು ನಿಮ್ಮ ಸಂಗಾತಿಯ ಬಗ್ಗೆ ನೀವು ತುಂಬಾ ಕಾಳಜಿ ವಹಿಸುತ್ತೀರಿ
ಒಂಟಿಯಾಗಿರುವವರು ಏಕಾಂಗಿಯಾಗಿಯೇ ಖುಷಿಯಾಗಿ ಇರುತ್ತಾರೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯವನ್ನು ಕಳೆಯುತ್ತಾರೆ. ಪ್ರೇಮಿಗಳು ತಮ್ಮ ಸಂಗಾತಿಯ ಮೇಲೆ ಒತ್ತಡ ಹಾಕೋದಕ್ಕೆ ಹೋಗಬೇಡಿ. ಅವರ ಅರ್ಥ ಮಾಡಿಕೊಂಡು ಬಾಳೋದಕ್ಕೆ ಪ್ರಯತ್ನಿಸಿ.
ಕುಂಭ ರಾಶಿ
ಕುಂಭ ರಾಶಿಯವರು ಈ ವಾರ ತಮ್ಮ ಸಂಬಂಧದಲ್ಲಿ ಆರಾಮದಾಯಕವಾಗಿರುತ್ತಾರೆ. ದಂಪತಿಗಳ ಮಧ್ಯೆ ಪ್ರೀತಿ ಹೆಚ್ಚಾಗಿರುತ್ತದೆ. ಜಗಳ ಹಾಗೂ ಮನಸ್ಥಾಪಗಳಿಗೆ ಅವಕಾಶ ಇರೋದಿಲ್ಲ. ಕೌಟುಂಬಿಕ ಜೀವನವು ತುಂಬಾ ತೃಪ್ತಿಕರವಾಗಿರುತ್ತದೆ.
ಒಂಟಿಯಾಗಿರುವವರು ಈ ವಾರ ಹೊಸ ಮತ್ತು ಆಸಕ್ತಿದಾಯಕ ಜನರನ್ನು ಭೇಟಿಯಾಗುತ್ತಾರೆ. ಯಾವುದೇ ಕಾರಣಕ್ಕೂ ಯೋಚಿಸದೇ ಆತುರದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಇನ್ನೂ ಪ್ರೇಮಿಗಳು ಮದುವೆಗಾಗಿ ಕುಟುಂಬದವರನ್ನು ಒಪ್ಪಿಸೋದಕ್ಕೆ ಕೊಂಚ ಕಷ್ಟ ಪಡಬೇಕಾಗುತ್ತದೆ. ಆದರೆ ನಿಮ್ಮ ನಿರ್ಧಾರ ಅಚಲವಾಗಿದ್ದರೆ ಖಂಡಿತ ಗೆಲ್ಲುತ್ತೀರಿ.
ಮೀನ ರಾಶಿ
ಈ ವಾರ ಮೀನ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ. ಅವರು ತಮ್ಮ ಸಂಗಾತಿಯ ಬಗ್ಗೆ ತುಂಬಾ ಪ್ರೀತಿ, ಕಾಳಜಿ ಮತ್ತು ಭಾವೋದ್ರಿಕ್ತರಾಗಿರುತ್ತಾರೆ. ಮತ್ತು ನಿಮ್ಮ ಮನೆಯಲ್ಲಿ ಸಾಮರಸ್ಯ ಇರುತ್ತದೆ.
ಏಕಾಂಗಿಗಳು ತಮ್ಮ ಸಂಗಾತಿಯ ಹುಡುಕಾಟಕ್ಕಾಗಿ ಕೊಂಚ ಕಷ್ಟ ಪಡಬೇಕಾಗುತ್ತದೆ. ಆತುರಕ್ಕೆ ಬಿದ್ದು ಯಾರನ್ನೋ ಒಪ್ಪಿಕೊಳ್ಳಬೇಡಿ. ನಿಮಗೆ ಸರಿ ಹೊಂದುವವರನ್ನೇ ಮದುವೆಯಾಗಿ. ಇನ್ನೂ ಪ್ರೀತಿಯಲ್ಲಿರುವವರು ತಮ್ಮ ಸಂಬಂಧದಲ್ಲಿ ಅಹಂನಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮತ್ತು ಅವುಗಳನ್ನು ಸೌಹಾರ್ದಯುತವಾಗಿ ಪರಿಹರಿಸಬೇಕಾಗುತ್ತದೆ.



Click it and Unblock the Notifications











