Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಮಾಸಿಕ ರಾಶಿಫಲ: ಗ್ರಹಗತಿಗಳ ಪ್ರಕಾರ ಜುಲೈ ತಿಂಗಳು ವೃಷಭ ರಾಶಿಯವರಿಗೆ ಹೇಗಿರಲಿದೆ?
ಗ್ರಹಗತಿಗಳ ಆಧಾರದ ಮೇಲೆ ಜುಲೈ 2023ರ ರಾಶಿಫಲ ನೀಡಲಾಗಿದ್ದು ನಾವಿಲ್ಲಿ ವೃಷಭ ರಾಶಿಯವರಿಗೆ ಜೂನ್ ತಿಂಗಳು ಹೇಗಿರಲಿದೆ? ಅವರ ಆರ್ಥಿಕ ಭವಿಷ್ಯ, ವೃತ್ತಿ ಜೀವನ ಭವಿಷ್ಯ, ವ್ಯಾಪಾರ, ಆರೋಗ್ಯ, ಕುಟುಂಬ ಹಾಗೂ ಪ್ರೀತಿಯ ಭವಿಷ್ಯದ ಬಗ್ಗೆ ಹೇಳಲಾಗಿದೆ. ಅಷ್ಟಕ್ಕು ಜುಲೈ ತಿಂಗಳಲ್ಲಿ ವೃಷಭ ರಾಶಿಯವರ ಬಾಳಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ ಅನ್ನೋದನ್ನು ತಿಳಿಯೋಣ.
ವೃಷಭ ರಾಶಿಯು ಶುಕ್ರ ಗ್ರಹದಿಂದ ಆಳಲ್ಪಡುತ್ತದೆ. ಚಂದ್ರ ರಾಶಿಯ ಹನ್ನೆರಡನೇ ಮನೆಯಲ್ಲಿ ರಾಹು ಜೊತೆ ಗುರು ಇರುವ ಕಾರಣ ವೃಷಭ ರಾಶಿಯವರಿಗೆ ಈ ತಿಂಗಳು ಉತ್ತಮವಾಗಿರುತ್ತದೆ. ಇನ್ನೂ ಹಿಮ್ಮುಖ ಶನಿಯು ಹತ್ತನೇ ಮನೆಯಲ್ಲಿ ಮತ್ತು ಆರನೇ ಮನೆಯಲ್ಲಿ ಕೇತು ಇರುವುದರ ಪರಿಣಾಮವಾಗಿ ಈ ರಾಶಿಯವರು ವೃತ್ತಿ ಮತ್ತು ಹಣಕಾಸು ಕ್ಷೇತ್ರದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುತ್ತೀರಿ. ಈ ಅವಧಿಯಲ್ಲಿ ಅದೃಷ್ಟವು ನಿಮ್ಮ ಜೊತೆಗೆ ಇರೋದಿಲ್ಲ. ಹೀಗಾಗಿ ನೀವು ಶ್ರಮ ಹೆಚ್ಚು ಪಡಬೇಕಾಗುತ್ತದೆ.

ವೃತ್ತಿ ಜೀವನ
ಈ ತಿಂಗಳಲ್ಲಿ ಶನಿಯು ನಿಮ್ಮ ಹತ್ತನೇ ಮನೆಯಲ್ಲಿ ಅಂದರೆ ವೃತ್ತಿಜೀವನದ ಮನೆಯಲ್ಲಿದೆ. ಶನಿಯು ಸವಾಲಿನ ಗ್ರಹವಾಗಿರುವುದರಿಂದ ವೃಷಭ ರಾಶಿಯವರು ಉತ್ತಮ ಫಲಿತಾಂಶಗಳನ್ನು ಪಡೆಯಲು ಶ್ರಮಿಸಬೇಕಾಗಬಹುದು. ಆದರೆ ನಿಮ್ಮ ವೃತ್ತಿ ಜೀವನದಲ್ಲಿ ಪಡೆಯಲು ಸಹಾಯ ಮಾಡುತ್ತಾನೆ. ಈ ಸಂದರ್ಭದಲ್ಲಿ ಉದ್ಯೋಗ ಬದಲಾವಣೆ ಅಥವಾ ವರ್ಗಾವಣೆಯ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ, ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು.
ಜುಲೈ ತಿಂಗಳ ದ್ವಿತೀಯಾರ್ಧದಲ್ಲಿ ಗುರುವು ಚಂದ್ರನ ಹನ್ನೆರಡನೇ ಮನೆಯಲ್ಲಿ ರಾಹು ಜೊತೆ ಸ್ಥಿತನಾಗಿರುತ್ತಾನೆ. ಈ ಸಂದರ್ಭದಲ್ಲಿ ನಿಮಗೆ ಉದ್ಯೋಗದಲ್ಲಿ ಬಡ್ತಿ ವಿಳಂಬವಾಗುವ ಸಾಧ್ಯತೆಯಿದೆ. ಆದರೆ ಶನಿಯು ಹತ್ತನೇ ಮನೆಯಲ್ಲಿದ್ದು, ಐದನೇ ಮನೆಯ ಅಧಿಪತಿಯಾಗಿ ಬುಧ ಮೊದಲ ಮನೆಯಲ್ಲಿದ್ದು, ಈ ಕಾರಣದಿಂದಾಗಿ ನಿಮ್ಮ ವೃತ್ತಿ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
ಆರ್ಥಿಕ ಜೀವನ
ಜುಲೈ ತಿಂಗಳು ವೃಷಭ ರಾಶಿಯವರಿಗೆ ಹಣದ ವಿಷಯದಲ್ಲಿ ಸ್ವಲ್ಪ ಕಷ್ಟವಾಗಬಹುದು. ಹನ್ನೆರಡನೇ ಮನೆಯಲ್ಲಿ ಗುರು ಮತ್ತು ರಾಹುಗಳ ಸಂಯೋಜನೆಯಿಂದಾಗಿ ಖರ್ಚುಗಳಲ್ಲಿ ಹೆಚ್ಚಳವಾಗಬಹುದು. ಮತ್ತೊಂದೆಡೆ ನಿಮ್ಮ ರಾಶಿಯ ಅಧಿಪತಿ ಶುಕ್ರನು ಅನುಕೂಲಕರ ಸ್ಥಾನದಲ್ಲಿ ಇರೋದ್ರಿಂದ ನಿಮಗೆ ಹಣವನ್ನು ಗಳಿಸಲು ಸುವರ್ಣ ಅವಕಾಶವನ್ನು ನೀಡುತ್ತಾನೆ. ಇನ್ನೂ ಎರಡನೇ ಮನೆಯ ಅಧಿಪತಿಯಾದ ಬುಧನು ತಿಂಗಳ ಅಂತ್ಯದವರೆಗೆ ಎರಡನೇ ಮನೆಯಲ್ಲಿ ಕುಳಿತುಕೊಳ್ಳುತ್ತಾನೆ. ಇದರಿಂದಾಗಿ ನೀವು ತಿಂಗಳ ಕೊನೆಯಲ್ಲಿ ಹಣವನ್ನು ಗಳಿಸುವ ಅನೇಕ ಅವಕಾಶಗಳನ್ನು ಪಡೆಯಬಹುದು.
ವ್ಯಾಪಾರ
ಈ ತಿಂಗಳು ವ್ಯಾಪಾರ ಕ್ಷೇತ್ರದಲ್ಲಿ ಇರುವವರಿಗೆ ಲಾಭ ಸಿಗುವ ಸಾಧ್ಯತೆ ತೀರಾ ಕಡಿಮೆ. ಅಲ್ಲದೆ, ಸ್ಪರ್ಧಿಗಳಿಂದ ಕಠಿಣ ಪೈಪೋಟಿ ಎದುರಾಗಬಹುದು. ಸರಿಯಾಗಿ ಯೋಜಿಸದಿರುವುದು ಮತ್ತು ಪಾಲುದಾರರ ಬೆಂಬಲವನ್ನು ಪಡೆಯದ ಕಾರಣ ನೀವು ಈ ತಿಂಗಳು ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಆದರೆ ಈ ತಿಂಗಳ ಅಂತ್ಯವು ನಿಮಗೆ ಲಾಭದಾಯಕವಾಗಿರುತ್ತದೆ. ಈ ಅವಧಿಯಲ್ಲಿ ನೀವು ಉತ್ತಮ ಲಾಭವನ್ನು ಗಳಿಸಬಹುದು.
ಆರೋಗ್ಯ
ಈ ತಿಂಗಳು ವೃಷಭ ರಾಶಿಯವರ ಆರೋಗ್ಯ ಸರಾಸರಿಯಾಗಿ ಇರುತ್ತದೆ. ನಿಮ್ಮ ಜಾತಕದ ಹನ್ನೆರಡನೇ ಮನೆಯಲ್ಲಿ ರಾಹು ಮತ್ತು ಗುರುಗಳ ಸಂಯೋಜನೆಯಿಂದಾಗಿ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಕಾಳಜಿ ವಹಿಸುವ ಅಗತ್ಯವಿದೆ. ಹಾಗೆಯೇ 15ನೇ ತಾರೀಖಿನವರೆಗೆ ಎರಡನೇ ಮನೆಯಲ್ಲಿ ಸೂರ್ಯನಿದ್ದು, 15ನೇ ತಾರೀಖಿನ ನಂತರ ಮೂರನೇ ಮನೆಯಲ್ಲಿ ಸೂರ್ಯನು ಇರುತ್ತಾನೆ. ಹೀಗಾಗಿ ಮೂರನೇ ಮನೆಯಲ್ಲಿ ಸೂರ್ಯನ ಉಪಸ್ಥಿತಿಯು ನಿಮಗೆ ಆರೋಗ್ಯದ ವಿಷಯದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತಾನೆ.
ಇನ್ನೂ ಹತ್ತನೇ ಮನೆಯಲ್ಲಿ ಶನಿಯ ಸ್ಥಾನವು ವೃಷಭ ರಾಶಿಯವರಿಗೆ ಉತ್ತಮ ಫಲಿತಾಂಶ ನೀಡಲಿದೆ. ಶನಿಯು ನಿಮ್ಮ ರಾಶಿಯ ನಾಲ್ಕನೇ ಮನೆಯನ್ನು ನೋಡುತ್ತಾನೆ. ಹೀಗಾಗಿ ನೀವು ಸೌಕರ್ಯಗಳ ಕೊರತೆಯನ್ನು ಅನುಭವಿಸಬಹುದು. ಶನಿಯು ನಿಮ್ಮ ಚಂದ್ರನ ರಾಶಿಗೆ ಅನುಕೂಲಕರ ಗ್ರಹವಾಗಿದೆ. ಮತ್ತು ಇದರ ಪರಿಣಾಮವಾಗಿ ನೀವು ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಈ ರಾಶಿಯ ಅಧಿಪತಿ ಶುಕ್ರ ಮೂರನೇ ಮನೆಯಲ್ಲಿ ನೆಲೆಗೊಂಡಿರುವುದರಿಂದ ವೃಷಭ ರಾಶಿಯವರು ನೆಗಡಿ, ಕೆಮ್ಮು ಮುಂತಾದ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡುತ್ತಿದ್ದರೆ ಉತ್ತಮ.
ಪ್ರೀತಿ ಮತ್ತು ವೈವಾಹಿಕ ಜೀವನ
ಈ ಜುಲೈ ತಿಂಗಳು ಪ್ರೀತಿಸುತ್ತಿರುವವರಿಗೆ ನೀವು ಅಂದುಕೊಂಡ ಹಾಗೆ ನಿಮ್ಮ ಜೀವನ ಇರೋದಿಲ್ಲ. ನಿಮ್ಮಿಬ್ಬರ ನಡುವೆ ಪರಸ್ಪರ ತಿಳುವಳಿಕೆಯ ಕೊರತೆ ಇರುತ್ತದೆ. ಪ್ರೇಮಿಯೊಂದಿಗೆ ಸಾಮರಸ್ಯ ಕಡಿಮೆಯಾಗಬಹುದು. ಈ ತಿಂಗಳಲ್ಲಿ ಮದುವೆ ಅಥವಾ ನಿಶ್ಚಿತಾರ್ಥದ ಬಗ್ಗೆ ಯೋಚಿಸುವುದು ಅನುಕೂಲಕರವಾಗಿರುವುದಿಲ್ಲ.
ಹನ್ನೆರಡನೇ ಮನೆಯಲ್ಲಿ ಗುರು ಮತ್ತು ರಾಹುಗಳ ಸಂಯೋಜನೆಯಿಂದಾಗಿ ಪ್ರೀತಿಯಲ್ಲಿ ಸಂತೋಷದ ಕೊರತೆಯನ್ನು ಅನುಭವಿಸಬಹುದು. ಮತ್ತೊಂದೆಡೆ ಈ ಸಮಯವು ವಿವಾಹಿತರಿಗೆ ಸ್ವಲ್ಪ ಕಷ್ಟಕರವಾಗಿರುತ್ತದೆ. ಇನ್ನೂ ವೈವಾಹಿಕ ಜೀವನದ ವಿಚಾರಕ್ಕೆ ಬರೋದಾದರೆ ಈ ರಾಶಿಯವರು ತಾಳ್ಮೆಯಿಂದಿರಬೇಕು ಮತ್ತು ವಿವಾದಗಳನ್ನು ಶಾಂತಿಯುತವಾಗಿ ನಿಭಾಯಿಸಬೇಕು. ಇದರಿಂದಾಗಿ ಪ್ರತಿಯೊಂದು ಸಮಸ್ಯೆಯನ್ನು ತಿಳುವಳಿಕೆಯಿಂದ ಬಗೆಹರಿಸಬಹುದು.
ಪರಿಹಾರಗಳು
ದಿನಕ್ಕೆ 108 ಬಾರಿ "ಓಂ ದುರ್ಗಾಯ ನಮಃ" ಮಂತ್ರ ಪಠಿಸಿ
ಶನಿವಾರ ರಾಹುವಿಗೆ ಹವನ ಮಾಡಿ
"ಓಂ ಶುಕ್ರಾಯ ನಮಃ" ಎಂಬ ಮಂತ್ರವನ್ನು ಪ್ರತಿದಿನ 24 ಬಾರಿ ಪಠಿಸಿ



Click it and Unblock the Notifications












