Latest Updates
-
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ!
ಈ 5 ವಸ್ತುಗಳು ಮನೆ ಬಾಗಿಲಿನಲ್ಲಿದ್ದರೆ ಲಕ್ಷ್ಮೀ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ!
ಹಿಂದೂ ಧರ್ಮದ ಪ್ರಕಾರ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಮನೆ ಕಟ್ಟೋದ್ರಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ನಂಬಿಕೆಗಳ ಪ್ರಕಾರ ನಾವು ಶಾಸ್ತ್ರದ ಪ್ರಕಾರ ನಡೆದುಕೊಂಡರೆ ಮಾತ್ರ ಆ ಮನೆಗೆ ಶುಭವಾಗುತ್ತಂತೆ. ಶಾಸ್ತ್ರ ತಪ್ಪಿ ನಡೆದರೆ ಆ ಮನೆಗೆ ಶುಭವಾಗೋದಿಲ್ವಂತೆ.
ಅದ್ರಲ್ಲೂ ಮನೆಗೆ ಅದೃಷ್ಟ ಲಕ್ಷ್ಮೀ ಬರಬೇಕೆಂದರೆ, ಮನೆಯಲ್ಲಿ ಸುಖ, ಶಾಂತಿ ನೆಲೆಸಬೇಕೆಂದರೆ ಕೆಲವೊಂದು ವಾಸ್ತು ಟಿಪ್ಸ್ ಗಳನ್ನು ಪಾಲಿಸಲೇಬೇಕಾಗುತ್ತದೆ. ಅಷ್ಟಕ್ಕು ವಾಸ್ತು ಪ್ರಕಾರ ಯಾವೆಲ್ಲಾ ವಸ್ತು ನಮ್ಮ ಮನೆಯಲ್ಲಿದ್ರೆ ಶುಭವಾಗುತ್ತೆ ಅನ್ನೋದನ್ನು ತಿಳಿಯೋಣ.

1. ಹೂವಿನ ಕುಂಡ
ಮನೆಯ ಎದುರುಗಡೆ ಗ್ಲಾಸ್ ನಿಂದ ಮಾಡಿದ ಹೂಕುಂಡ ಇದ್ದರೆ ಒಳ್ಳೆಯದು. ನಿತ್ಯವೂ ಅದಕ್ಕೆ ನೀರು ಹಾಕಿ ಅದನ್ನು ಪೋಷಿಸುವ ಕೆಲಸವನ್ನು ಮಾಡಬೇಕು. ಈ ರೀತಿ ಮಾಡೋದ್ರಿಂದ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿಯನ್ನು ಆಕರ್ಷಿಸುತ್ತಂತೆ. ಅಷ್ಟೇ ಅಲ್ಲ, ಮನೆಯ ಮುಂದೆ ನೋಡೋದಕ್ಕೆ ಸುಂದರವಾಗಿ ಕಾಣುತ್ತಂತೆ. ಇತ್ತೀಚಿಗೆ ಕೃತಕ ಹೂ ಕುಂಡಗಳು ಕೂಡ ಮಾರಕಟ್ಟೆಯಲ್ಲಿ ಲಭ್ಯವಾಗುತ್ತದೆ. ಅದನ್ನು ಯಾವುದೇ ಕಾರಣಕ್ಕೂ ಬಳಸಬೇಡಿ. ನೈಸರ್ಗಿಕ ಹೂ ಕುಂಡಗಳು ಇದ್ದರೇನೇ ಒಳ್ಳೆಯದು.
2. ತೋರಣ
ಹಿಂದೂ ಧರ್ಮದಲ್ಲಿ ಮನೆಯ ಮುಂಭಾಗ ತೋರಣವನ್ನು ಕಟ್ಟುವುದು ಒಂದು ರೀತಿಯ ಸಂಪ್ರದಾಯ. ಸಾಮಾನ್ಯವಾಗಿ ಹಬ್ಬ-ಹರಿದಿನಗಳಲ್ಲಿ ಮನೆಯ ಮುಂಭಾಗ ತೋರಣವನ್ನು ಕಟ್ಟಲಾಗುತ್ತದೆ. ಮಾವಿನ ಎಲೆಯ ತೋರಣವನ್ನು ಹೆಚ್ಚಾಗಿ ಕಟ್ಟಲಾಗುತ್ತದೆ. ಹಬ್ಬದ ದಿನದ ಹೊರತಾಗಿಯೂ ಉಳಿದ ದಿನಗಳಲ್ಲೂ ಕೂಡ ನಾವು ಮಾವಿನ ತೋರಣವನ್ನು ಕಟ್ಟಿದರೆ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುತ್ತಂತೆ.
ಕೆಲವೊಂದು ಮನೆಗಳಲ್ಲಿ ಹೇಗಾಗುತ್ತೆ ಎಂದರೆ ಮನೆಯ ಎದುರು ಕಟ್ಟಿದ ತೋರಣ ಒಣಗಿ ಹೋದರೂ ಕೂಡ ಅದನ್ನು ತೆಗೆಯೋದಿಲ್ಲ. ಹಾಗೆಯೇ ಒಣಗಲು ಬಿಡುತ್ತಾರೆ ಈ ರೀತಿ ಮಾಡುವುದು ತಪ್ಪು. ಮನೆಯ ಮುಂದುಗಡೆ ಇರುವ ತೋರಣ ಒಣಗಿದ್ದರೆ ಅದು ನಕಾರಾತ್ಮ ಶಕ್ತಿಯನ್ನು ಆಕರ್ಷಿಸುತ್ತಂತೆ. ಹೀಗಾಗಿ ಮನೆಯ ತೋರಣವನ್ನು ಒಣಗುವ ಮೊದಲು ಬದಲಾಯಿಸುತ್ತಿರಿ.
3. ಲಕ್ಷ್ಮೀಯ ಪಾದಗಳು
ಮನೆಯ ಮುಂಭಾಗ ಲಕ್ಷ್ಮೀಯ ಪಾದಗಳು ಇದ್ದರೆ ಒಳ್ಳೆಯದು. ಹೆಚ್ಚಿನವರು ಪಾದಗಳ ಸ್ಟಿಕ್ಕರ್ ತಂದು ಅಂಟಿಸುತ್ತಾರೆ. ಪ್ರತಿನಿತ್ಯ ಈ ಪಾದಗಳಿಗೆ ಭಕ್ತಿಯಿಂದ ಪೂಜೆ ಮಾಡಿದರೆ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುತ್ತಂತೆ. ಅಷ್ಟೇ ಅಲ್ಲದೇ, ಈ ಪಾದಗಳು ದೇವಾನು ದೇವತೆಗಳ ಗಮನವನ್ನೂ ಕೂಡ ಸೆಳೆಯುತ್ತಂತೆ. ಇದರ ಜೊತೆಗೆ ನಕಾರಾತ್ಮಕ ಶಕ್ತಿಯು ಮನೆಯೊಳಗಡೆ ಬಾರದಂತೆ ತಡೆಹಿಡಿಯುತ್ತಂತೆ.
4. ಸ್ವಸ್ತಿಕ್
ಮೆನಯ ಮುಂಭಾಗ ಸ್ವಸ್ತಿಕ್ ಚಿಹ್ನೆ ಇದ್ದರೆ ಒಳ್ಳೆಯದು. ಇದನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಕೂಡ ಮನೆಯಲ್ಲಿ ಅದೃಷ್ಟ ಹಾಗೂ ಸಮೃದ್ಧಿ ಹೆಚ್ಚಾಗುತ್ತಂತೆ. ಸ್ವಸ್ತಿಕ್ ಚಿಹ್ನೆ ಮನೆ ಮುಭಾಗ ಇದ್ದರೆ ಮನೆಯಲ್ಲಿ ಯಾವುದೇ ರೀತಿ ದುಃಖ ಅಥವಾ ನೋವಿನ ಘಟನೆಗಳು ನಡೆಯೋದಿಲ್ವಂತೆ. ಅಷ್ಟೇ ಅಲ್ಲದೇ, ಕುಟುಂಬಸ್ಥರೆಲ್ಲರೂ ಸುಖವಾಗಿ, ಸಂತೋಷವಾಗಿ ಇರಬಹುದಂತೆ.
5. ದೊಡ್ಡದಾದ ಮನೆ ಬಾಗಿಲು
ನಮ್ಮ ಮನೆಯ ಮುಂಭಾಗದ ಬಾಗಿಲು ತುಂಬಾನೇ ದೊಡ್ಡವಾಗಿರಬೇಕಂತೆ. ಈ ರೀತಿ ಇದ್ದರೆ ಅದನ್ನು ಶುಭ ಎಂದು ಪರಿಗಣಿಸಲಾಗಿದೆ. ಮನೆ ಬಾಗಿಲನ್ನು ಗಡಿಯಾರದ ದಿಕ್ಕಿನಲ್ಲಿ ತೆರೆಯೋದ್ರಿಂದ ಮನೆಯಲ್ಲಿನ ಋಣಾತ್ಮಕ ಶಕ್ತಿಗಳು ಕೂಡ ಕಡಿಮೆಯಾಗುತ್ತಂತೆ. ಇನ್ನೂ ಮನೆಬಾಗಿಲು ಎತ್ತರವಾಗಿರಲೂ ಬೇಕು. ಇದರಿಂದ ಮನೆಯೊಳಗಡೆ ನೇರವಾಗಿ ಬೆಳಕು ಬರೋದಕ್ಕೆ ಸಾಧ್ಯವಾಗುತ್ತದೆ. ಹೀಗಾಗಿ ಯಾರಾದರೂ ಹೊಸದಾಗಿ ಮನೆ ಕಟ್ಟಿಸುತ್ತಿದ್ದರೆ ಮನೆ ಬಾಗಿಲು ದೊಡ್ಡದಾಗಿ ಇರುವಂತೆ ನೋಡಿಕೊಳ್ಳಿ.
ನಿಮ್ಮ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕಾದರೆ ಜೊತೆಗೆ ಆರ್ಥಿಕ ಸಮಸ್ಯೆಗಳು ಎದುರಾಗಬಾರದೆಂದರೆ ಈ ಬಗ್ಗೆ ಗಮನ ಕೊಡುವುದು ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications

