Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಳಗ್ಗೆ ಎದ್ಧ ತಕ್ಷಣ ಈ ವಸ್ತುಗಳನ್ನು ನೋಡಿದ್ರೆ ಧನ ನಷ್ಟ ಗ್ಯಾರಂಟಿ!
ವಾಸ್ತು ಶಾಸ್ತ್ರದ ಪ್ರಕಾರ ನಾವು ಬೆಳಗ್ಗೆ ಎದ್ದ ತಕ್ಷಣ ಏನನ್ನು ನೋಡುತ್ತೇವೆ ಅನ್ನೋದ್ರ ಮೇಲೆ ನಮ್ಮ ಅಂದಿನ ದಿನ ಹೇಗಿರುತ್ತೆ ಅಂತ ನಿರ್ಧಾರವಾಗಿರುತ್ತಂತೆ. ಅದೇ ರೀತಿ ಬೆಳಗ್ಗೆ ಎದ್ದ ಸಂದರ್ಭದಲ್ಲಿ ತುಂಬಾನೇ ಜಾಗರೂಕರಾಗಿ ಇರಬೇಕು. ಸಾಧ್ಯವಾದಷ್ಟು ಬೆಳಗ್ಗೆ ಎದ್ದ ತಕ್ಷಣ ದೇವರ ಫೋಟೋವನ್ನು ನೋಡಿದರೆ ಉತ್ತಮ. ಇದರಿಂದ ಆ ದಿನ ಉತ್ತಮವಾಗಿ ಸಾಗೋದಕ್ಕೆ ಸಾಹಯವಾಗುತ್ತಂತೆ. ಹಾಗೂ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಶುಭವಾಗುತ್ತೆ ಎಂದು ನಂಬಲಾಗಿದೆ. ಅಷ್ಟಕ್ಕು ಬೆಳಗ್ಗೆ ಎದ್ದ ತಕ್ಷಣ ಯಾವ ವಸ್ತುಗಳನ್ನು ನೋಡಬಾರದು ಅನ್ನೋದನ್ನು ತಿಳಿಯೋಣ.
ಮುರಿದ ಪಾತ್ರೆ
ಬೆಳಗ್ಗೆ ಎದ್ದ ತಕ್ಷಣ ಮನೆಯಲ್ಲಿರೋ ಮುರಿದ ಅಥವಾ ಬಿರುಕು ಬಿಟ್ಟ ಪಾತ್ರೆಯನ್ನು ನೋಡಬೇಡಿ. ಇದರಿಂದ ನಿಮಗೆ ಕೆಟ್ಟದಾಗುತ್ತಂತೆ. ಆ ದಿನ ಪೂರ್ತಿ ಹಾಳಾಗುವುದು ಮಾತ್ರವಲ್ಲದೇ, ನೀವು ಅಂದುಕೊಂಡ ಯಾವುದೇ ಕೆಲಸ ಆಗೋದಿಲ್ವಂತೆ. ಹೀಗಾಗಿ ಯಾವುದೇ ಕಾರಣಕ್ಕೂ ಮುರಿದ ಪಾತ್ರೆ ನಿಮ್ಮ ಕಣ್ಣೆದುರು ಇರದಂತೆ ಎಚ್ಚರ ವಹಿಸಿದ್ರೆ ಒಳ್ಳೆಯದು.

ಕನ್ನಡಿಯಲ್ಲಿ ಮುಖ ನೋಡಬೇಡಿ
ನಮ್ಮಲ್ಲಿ ಹೆಚ್ಚಿನವರಿಗೆ ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವ ಅಭ್ಯಾಸವಿದೆ. ಈ ರೀತಿ ಮಾಡೋದಕ್ಕೆ ಹೋಗಬೇಡಿ. ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ನಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬಾರದು. ಇದರಿಂದ ಅಶುಭವಾಗುತ್ತಂತೆ. ಅದರ ಬದಲಾಗಿ ಎದ್ದ ತಕ್ಷಣ ಎರಡು ಕೈಗಳನ್ನು ಉಜ್ಜಿ ನಿಮ್ಮ ಕೈಯನ್ನು ನೀವು ನೋಡಿಕೊಳ್ಳಿ.
ಸೂಜಿ-ನೂಲು
ಹೆಚ್ಚಿನವರು ಸೂಜಿ-ನೂಲನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳುತ್ತಾರೆ. ಹೀಗಾಗಿ ನೀವು ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಕಣ್ಣಿಗೆ ಬೀಳುತ್ತದೆ. ಬೆಳಗ್ಗೆ ಎದ್ದ ತಕ್ಷಣ ಸೂಜಿ-ನೂಲು ಅಥವಾ ಎಣ್ಣೆ ಮತ್ತು ಪಾತ್ರೆಯನ್ನು ನೋಡಬೇಡಿ. ಇದರಿಂದ ನಿಮ್ಮ ದಿನವೇ ಹಾಳಾಗುತ್ತಂತೆ. ಹೀಗಾಗಿ ಆದಷ್ಟು ಇವುಗಳು ನಿಮ್ಮಿಂದ ದೂರ ಇರುವಂತೆ ನೋಡಿಕೊಂಡರೆ ಉತ್ತಮ. ಇವುಗಳು ನೀವು ಏಳುವಾಗ ಕಣ್ಣಿಗೆ ಬೀಳದಿದ್ದರೆ ಉತ್ತಮ.
ನಿಮ್ಮ ನೆರಳು
ವಾಸ್ತು ಶಾಸ್ತ್ರದ ಪ್ರಕಾರ ನೀವು ಬೆಳಗ್ಗೆ ಎದ್ದ ತಕ್ಷಣ ನಿಮ್ಮ ನೆರಳನ್ನು ನೋಡಬಾರದು. ಇದನ್ನು ಅಶುಭ ಎಂದು ಪರಿಗಣಿಸಲಾಗಿದೆ. ಬೆಳಗ್ಗೆ ಸೂರ್ಯ ಹುಟ್ಟುವ ಸಮಯದಲ್ಲಿ ನೀವು ನಿಮ್ಮ ನೆರಳು ಪೂರ್ವ ದಿಕ್ಕಿನಲ್ಲಿರೋದನ್ನು ಗಮನಿಸಿರುತ್ತೀರಿ. ರಾಹು ದೋಷ ಇದ್ದರೆ ಹೀಗಾಗುತ್ತೆ ಎಂದು ನಂಬಲಾಗಿದೆ.
ಕೊಳಕದ ಪಾತ್ರೆಗಳು
ಬೆಳಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಕೊಳಕಾದ ಪಾತ್ರೆಗಳನ್ನು ನೋಡೋದಕ್ಕೆ ಹೋಗಬೇಡಿ. ಕೊಳಕಾದ ಪಾತ್ರೆಗಳನ್ನು ನೋಡುವುದರಿಂದ ನಿಮಗೆ ಧನ ನಷ್ಟವಾಗುತ್ತಂತೆ. ಹೀಗಾಗಿ ರಾತ್ರಿಯೇ ಎಲ್ಲಾ ಪಾತ್ರೆಗಳನ್ನು ತೊಳೆದು ಸ್ವಚ್ಛವಾಗಿಟ್ಟರೆ ಒಳ್ಳೆಯದು. ಯಾವುದೇ ಕಾರಣಕ್ಕೂ ಕಣ್ಣ ಮುಂದೆ ಪಾತ್ರೆಗಳು ಕಾಣುವ ಹಾಗೆ ಇಡೋದಕ್ಕೆ ಹೋಗಬೇಡಿ.
ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡುವುದರಿಂದ ನಮ್ಮ ಬಾಳಿನಲ್ಲಿ ಋಣಾತ್ಮಕ ಅಂಶ ಹೆಚ್ಚಾಗುತ್ತೆ ಎಂದು ನಂಬಲಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡೋದಕ್ಕೆ ಹೋಗಲೇಬೇಡಿ.



Click it and Unblock the Notifications

