Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಯುಗಾದಿ ಹಬ್ಬದಂದು ಪೂಜೆಗೆ ಶುಭ ಗಳಿಗೆ, ರಾಹುಕಾಲ ಕುರಿತ ಮಾಹಿತಿ ಇಲ್ಲಿದೆ..!
ಭಾರತೀಯರಿಗೆ ಯುಗಾದಿಯಿಂದ ಹೊಸ ವರ್ಷ ಆರಂಭವಾಗುವುದು ಎನ್ನುವ ನಂಬಿಕೆಯಿದೆ. ಯುಗಾದಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಿಂದ ಆಚರಿಸುವರು. ಒಂದು ಚಂದ್ರಮಾನ ಯುಗಾದಿ ಮತ್ತೊಂದು ಸೂರ್ಯಮಾನ ಯುಗಾದಿ ಎನ್ನುವುದು.
ಈ ವರ್ಷ ಚಾಂದ್ರಮಾನ ಯುಗಾದಿಯು ಚೈತ್ರ ಮಾಸದ ಮೊದಲ ದಿನ, ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಎಪ್ರಿಲ್ 9ಕ್ಕೆ ಬಂದಿದೆ. ಹಿಂದೂಗಳ ಪಾಲಿನ ಪ್ರಮುಖ ಹಬ್ಬ ಇದಾಗಿದ್ದು, ಪ್ರತಿಯೊಂದು ಕಡೆಗಳಲ್ಲೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಯುಗಾದಿ ಅಥವಾ ಉಗಾದಿಯು ಹಿಂದೂ ಪಂಚಾಂಗದ ಹೊಸ ವರ್ಷ ಎಂದು ಆಚರಿಸಲಾಗುತ್ತದೆ ಮತ್ತು ಇದು ದಕ್ಷಿಣ ಭಾರತದ ರಾಜ್ಯಗಳಾಗಿರುವಂತಹ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ತುಂಬಾ ಜನಪ್ರಿಯ ಹಬ್ಬ. ಮಹಾರಾಷ್ಟ್ರದಲ್ಲಿ ಇದು ಗುಡಿ ಪಾಡ್ವ ಎಂದು ಮತ್ತು ಪಶ್ಚಿಮ ಬಂಗಾಳದಲ್ಲಿ ನೊಬೊ ಬೊರ್ಸೊ ಎಂದು ಕರೆಯುವರು. ಆದರೆ ಎಲ್ಲಾ ಕಡೆಗಳಲ್ಲೂ ಬಹುಪಾಲು ಒಂದೇ ರೀತಿ ಆಚರಣೆ ರೂಢಿಯಲ್ಲಿದೆ.
ಯುಗಾದಿ ಆಚರಣೆಯ ವಿಧಾನವೇನು?
ಈ ದಿನದಂದು ಸೂರ್ಯೋದಯದ ಮೊದಲು ಎದ್ದು ಸ್ನಾನ ಮಾಡಿದ ಬಳಿಕ ದೇವರ ಸ್ತೋತ್ರ ಜಪಿಸಲಾಗುತ್ತದೆ. ಈ ವೇಳೆಯಲ್ಲಿ ಕೆಲವು ಕಡೆ ಎಣ್ಣೆ ಸ್ನಾನ ಮಾಡಲಾಗುತ್ತದೆ, ತೈಲಅಭ್ಯಂಗನ ಸ್ನಾನಂ'' ಎಂದು ಹೇಳಲಾಗುತ್ತದೆ. ಎಣ್ಣೆ ಹಚ್ಚಿಕೊಂಡು ಈ ದಿನ ಸ್ನಾನ ಮಾಡಿದರೆ, ತುಂಬಾ ಪವಿತ್ರ ಎಂದು ಪರಿಗಣಿಸಲಾಗಿದೆ. ಈ ದಿನ ದೇವರ ಮೂರ್ತಿಗಳಿಗೂ ನೀರಿನಿಂದ ಅಭಿಷೇಕ ಮಾಡಿ ಶುದ್ಧೀಕರಿಸಬೇಕು. ಮೂರ್ತಿಗಳನ್ನು ತೊಳೆದು, ದೇವರ ಕೋಣೆ ಸ್ವಚ್ಛ ಮಾಡಿದ ಬಳಿಕ ಹೊಸ ಬಟ್ಟೆಗಳನ್ನು ಧರಿಸಿ, ಪ್ರಸಾದವನ್ನು ಇಟ್ಟು ಪೂಜೆ ಮಾಡಬೇಕು. ಪೂಜೆಗಾಗಿ ವಿಶೇಷವಾಗಿ ಬೇವು ಬೆಲ್ಲ ಅಥವಾ ಯುಗಾದಿ ಪಚಡಿಯನ್ನು ಇಡಬೇಕು. ಬಳಿಕ ಊಟದ ಜೊತೆ ಇದನ್ನು ಪ್ರಸಾದದಂತೆ ಸೇವಿಸಬಹುದು.
ಯುಗಾದಿ ಹಬ್ಬದ ಶುಭ ಗಳಿಗೆ ಯಾವುದು?
ಯುಗಾದಿಯನ್ನು ಈ ವರ್ಷ ಏಪ್ರಿಲ್ 9 ರಂದು ಆಚರಿಸಲಾಗುತ್ತದೆ. ಪ್ರತಿಪದ ತಿಥಿಯು ಏಪ್ರಿಲ್ 8, 2024 ರಂದು ರಾತ್ರಿ 11:50 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 9, 2024 ರಂದು ರಾತ್ರಿ 8:30 ಕ್ಕೆ ಕೊನೆಗೊಳ್ಳುತ್ತದೆ.
ಯುಗಾದಿ ಆಚರಣೆ ಹೇಗೆ?
ಯುಗಾದಿಯು ದಕ್ಷಿಣ ಭಾರತದ ಜನಪ್ರಿಯ ಹಬ್ಬವಾಗಿದೆ. ಇದು ಸಂಪತ್ತು, ಅಭಿವೃದ್ಧಿ, ಹೊಸ ಆರಂಭಗಳು ಮತ್ತು ಕೆಟ್ಟದ್ದರ ವಿರುದ್ಧ ಒಳ್ಳೆಯದ ವಿಜಯವನ್ನು ಪ್ರತಿನಿಧಿಸುತ್ತದೆ.
ದಿನವು ಸಾಂಪ್ರದಾಯಿಕ ಎಣ್ಣೆ ಸ್ನಾನದಿಂದ ಪ್ರಾರಂಭವಾಗುತ್ತದೆ, ನಂತರ ಪೂಜೆಗಳು, ಎಣ್ಣೆ ಸ್ನಾನ ಮಾಡಿ ಎಳ್ಳು ಬೆಲ್ಲ ಸೇವಿಸಲಾಗುತ್ತದೆ.
ಕೆಲವು ಕಡೆ ಕಹಿ ಬೇವು, ಬೆಲ್ಲ, ಕೊತ್ತಂಬರಿ ಬೀಜ, ಹುಣಸೆ ಹಣ್ಣುಗಳ ಸೇರಿಸಿ ಅದನ್ನು ಪೇಸ್ಟ್‌ನಂತೆ ಮಾಡಿ ಸೇವಿಸುತ್ತಾರೆ. ಇದರಿಂದ ರಕ್ತ ಶುದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
ಇದಲ್ಲದೆ, ಕೆಲವರು ಯುಗಾದಿಯಂದು ಎಣ್ಣೆ ಸ್ನಾನ ಮಾಡುತ್ತಾರೆ ಏಕೆಂದರೆ ಎಣ್ಣೆಯಲ್ಲಿ ಲಕ್ಷ್ಮಿ ದೇವಿ ವಾಸವಿದ್ದಾಳೆ ಮತ್ತು ನೀರಿನಲ್ಲಿ ಗಂಗಾ ದೇವಿ ವಾಸವಿದ್ದಾಳೆ ಎಂದು ನಂಬಲಾಗಿದೆ.
ತಾಜಾ ಮಾವಿನ ಎಲೆಗಳಿಂದ ಮನೆಯ ಮುಂಭಾಗವನ್ನು ಅಲಂಕರಿಸುತ್ತಾರೆ. ಇದಕ್ಕೂ ಕೂಡ ವೈಜ್ಞಾನಿಕ ಕಾರಣವಿದೆ. ಹೀಗೆ ತಾಜಾ ಮಾವಿನ ಎಲೆಗಳನ್ನು ಮನೆಯ ಮುಂಭಾಗದಲ್ಲಿ ಹಾಕುವುದರಿಂದಾಗಿ ತಾಜಾ ಗಾಳಿ ಮನೆಯೊಳಗೆ ಪ್ರವೇಶಿಸುತ್ತದೆ ಮತ್ತು ಇದು ತಂಪಾದ ಅನುಭವವನ್ನು ಮನೆಯೊಳಗೆ ನೀಡುತ್ತದೆ.
ಜನರು ಹೊಸ ಬಟ್ಟೆಗಳನ್ನು ತೊಡುತ್ತಾರೆ ಯಾಕೆಂದರೆ ಇದರಿಂದ ಅವರೊಳಗೊಂದು ಹೊಸತನದ ಭಾವನೆ ಹುಟ್ಟುತ್ತದೆ.
ಯುಗಾದಿ ದಿನದಂದು ಕರಗಿಸಿದ ತುಪ್ಪವನ್ನು ಒಂದು ಬೌಲ್ ನಲ್ಲಿ ಹಾಕಿ ಮುಖವನ್ನು ನೋಡಿಕೊಳ್ಳುವ ಪದ್ದತಿ ಕೆಲವು ಕಡೆಗಳಲ್ಲಿ ರೂಢಿಯಲ್ಲಿದೆ.
ಕುಟುಂಬದ ಹಿರಿಯ ಮಹಿಳೆಯು ಕುಟುಂಬದ ಕಿರಿಯ ಸದಸ್ಯರಿಗೆ ಕುಂಕುಮ ಹಚ್ಚಿ ಆರತಿ ಎತ್ತುವ ಪದ್ದತಿ ರೂಢಿಯಲ್ಲಿದೆ.
ಯುಗಾದಿಯಂದು ರಾಹುಕಾಲ, ಶುಭ ಕಾಲ ಯಾವಾಗ?
ರಾಹುಕಾಲ- 3 ಗಂಟೆಯಿಂದ 4:30
ಗುಳಿಕ ಕಾಲ- ಬೆಳಗ್ಗೆ 10:30 ರಿಂದ 12 ಗಂಟೆ



Click it and Unblock the Notifications
