Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕಾಡಿನಲ್ಲಿ ಕಣ್ಮೆರೆಯಾದ ಯುವಕ, ಆ ವಿಶೇಷ ಕಲ್ಲಿಗೆ ಪೂಜೆ ಸಲ್ಲಿಸಿದಾಗ ಮರಳಿ ಬಂದ: ನೈಜ ಘಟನೆ
ಕೆಲವೊಂದು ವಿಸ್ಮಯ ಘಟನೆಗಳನ್ನು ನೋಡುವಾಗ ಹೀಗೂ ಇರುತ್ತಾ? ಎಂಬ ಪ್ರಶ್ನೆ ಮೂಡುವುದು, ಆದರೆ ಆ ರೀತಿ ಮೂಡುವ ಪ್ರಶ್ನೆಗಳಿಗೆ ಉತ್ತರವೂ ಸಿಗಲ್ಲ. ಅಂಥದ್ದೊಂದು ಘಟನೆ ಉಡುಪಿಯಲ್ಲಿ ನಡೆದಿದ್ದು ಆ ಘಟನೆ ತುಂಬಾನೇ ಸುದ್ದಿ ಮಾಡುತ್ತಿದೆ. ಕಾಡಿನಲ್ಲಿ ಕಾಣೆಯಾದ ಯುವಕ ಪವಾಡ ಸದೃಶ್ಯವಾಗಿ ಬದುಕಿ ಬಂದಿರುವ ಘಟನೆ ಇದು.

ಕಾಡಿಗೆ ಹೋದ ಹುಡುಗ ದಾರಿ ತಪ್ಪಿರಬಹುದು, ಕೊನೆಗೆ ಮರಳಿ ಬಂದಿದ್ದಾನೆ ಇದರಲ್ಲೇನು ವಿಶೇಷ ಎಂದು ಕೇಳುವವರೂ ಇದ್ದಾರೆ. ಆದರೆ ಇಲ್ಲಿ ಹುಡುಗ ಕಾಡಿನಲ್ಲಿ ದಾರಿ ತಪ್ಪಿ ಪತ್ತೆ ಸಿಕ್ಕಿರುವುದು ವಿಶೇಷವಲ್ಲ, ಆದರೆ ಈ ಹುಡುಗ ಕಾಣೆಯಾದ ಮೇಲೆ ನಡೆದ ಸಂಗತಿಗಳು ಇದೆಯೆಲ್ಲಾ ಅದು ವಿಸ್ಮಯ, ಅದುವೇ ಜನರ ಅಚ್ಚರಿಕೆ ಕಾರಣವಾಗಿರುವುದು.
ಉಡುಪಿಯ ಬೈಂದೂರು ತಾಲೂಕಿನಲ್ಲಿ ನಡೆದ ಘಟನೆಯಿದು. ಕಾಂತಾರ ಸಿನಿಮಾದಂತಿದೆ ಎಂತಿದ್ದಾರೆ ಜನರು. ಕಾಂತಾರದಲ್ಲಿ ಕಾಡಿನೊಳಗೆ ಹೋಗುವ ವ್ಯಕ್ತಿ ಕಾಣೆಯಾಗುವ ದೃಶ್ಯವಿದೆ. ಅದರಂತೆ ಇಲ್ಲಿಯೂ ಕಾಡಿಗೆ ಕಂಬ ತರಲೆಂದು ತನ್ನ ಸಾಕುನಾಯಿಯೊಂದಿಗೆ ಹೋದ ವಿವೇಕಾನಂದ ಕಾಣೆಯಾಗಿದ್ದಾರೆ. ಈತ ಕಾಡಿಗೆ ಹೋಗಿ ಬಾರದೇ ಹೋದಾಗ ಗಾಬರಿ ಬಿದ್ದ ಮನೆಯವರು ಊರಿನವರೊಂದಿಗೆ ಹುಡುಕಲಾರಂಭಿಸಿದ್ದಾರೆ. ಆ ಕಾಡಿನ ಬಗ್ಗೆ ಚೆನ್ನಾಗಿ ತಿಳಿದಿದ್ದವರೂ ಸೇರಿಕೊಂಡು ನೂರಕ್ಕೂ ಅಧಿಕ ಮಂದಿ ಹುಡುಕಿದ್ದಾರೆ. ಬರೀ ಒಂದು ದಿನವಲ್ಲ 8 ದಿನ ಹುಡುಕಿದ್ದಾರೆ. 8ನೇ ದಿನ ಹುಡುಗನ ಪತ್ತೆಯಾಗಿದೆ.
ಜ್ಯೋತಿಷಿ ಹುಡುಗನ ಬಗ್ಗೆ ಭವಿಷ್ಯ ಹೇಳಿದ್ದರು
ಮನೆಯ ಹುಡುಗ ಕಾಣೆಯಾದಾಗ ಮನೆಯವರು ಇದ್ದ ದೇವರ ಮೊರೆ ಹೋಗಿದ್ದಾರೆ, ಈತನ ಬಗ್ಗೆ ಏನಾದರೂ ಸುಳಿವು ಸಿಗಬಹುದೇ ಎಂದು ಜ್ಯೋತಿಷಿಗಳ ಮೊರೆ ಹೋಗಿದ್ದಾರೆ. ಕರಾವಳಿಯ ಜನರು ತುಂಬಾ ನಂಬುವ ಕೊರಗಜ್ಜನ ದೇವರ ಬಳಿ ಬಂದು ಪ್ರಾರ್ಥಿಸಿದಾಗಲೂ ಹುಡುಗ ಬದುಕಿದ್ದಾನೆ ಎಂಬ ಸುಳಿವು ನೀಡಿತ್ತು, ಅದಾದ ಬಳಿಕ ಮಹಿಳಾ ಜ್ಯೋತಿಷಿಯೊಬ್ಬರ ಬಳಿ ಕೇಳಿದಾಗ ಹುಡುಗ ಬದುಕಿದ್ದಾನೆ, ಆದರೆ ಅವನನ್ನು ದೇವಿಯೇ ಕಾಣೆ ಮಾಡಿದ್ದಾಳೆ, ನಿಮ್ಮ ಜಮೀನಿನಲ್ಲಿ ಒಂದು ಕಲ್ಲಿದೆ, ಅದು ವಿಶೇಷ ಅನಿಸದಿದ್ದರೂ ಆ ಕಲ್ಲು ವಿಶೇಷವಾಗಿದೆ, ಅದರಲ್ಲಿ ದೇವಿ ಇದ್ದಾಳೆ, ಅವಳಿಗೆ ಪೂಜೆ ಸಲ್ಲಿಸಿ ನಿಮ್ಮ ಮಗ ಬಂದೇ ಬರುತ್ತಾನೆ ಎಂದು ಹೇಳುತ್ತಾಳೆ.
ಅಚ್ಚರಿ ಎಂಬಂತೆ ಪೂಜೆ ಬಳಿಕ ಸಿಕ್ಕ ಮಗ
ಮಗನನ್ನು ಕಳೆದುಕೊಂಡು ಕಂಗಾಲಾಗಿದ್ದ ಪೋಷಕರು ಎಲ್ಲಾ ಪೂಜೆ ಮಾಡುತ್ತೇವೆ ನಮ್ಮ ಮಗ ಜೀವಂತ ಸಿಕ್ಕರೆ ಸಾಕು ಎಂದು ಬಯಸಿ ಆ ಕಲ್ಲಿಗೆ ಪೂಜೆ ಸಲ್ಲಿಸುತ್ತಾರೆ. ಆ ಕಲ್ಲಿಗೆ ಪೂಜೆ ಸಲ್ಲಿಸಿ ಮಾರನೇ ದಿನವೇ ಪವಾಡ ಸದೃಶ್ಯ ಎಂಬಂತೆ ಮಗ, ಮಗನ ಜೊತೆ ಕಾಣೆಯಾದ ನಾಯಿ ಸಿಗುತ್ತದೆ. ಈ ವಿಷಯ ತಿಳಿಯುತ್ತಿದ್ದಂತೆ ಜನರಿಗೆ ಅಚ್ಚರಿ ಉಂಟಾಗಿದೆ. ಅಲ್ಲದೆ ಈ ಸುದ್ದಿ ತುಂಬಾನೇ ವೈರಲ್ ಆಗಿದೆ.
ಹುಡುಗ ಸಿಕ್ಕಿದ ಮೇಲೆ ಗ್ರಾಮಸ್ಥರು ಬೈಕ್,ಟೆಂಪೂಗಳಲ್ಲಿ ಸಂಭ್ರಮದ ಮೆರವಣಿಗೆ ಮಾಡಿದ್ದಾರೆ. ಮನೆಯವರು ಊರಿನವರಿಗೆ ಸಿಹಿ ಊಟ ನೀಡಿದ್ದಾರೆ. ಆ ದೈವ ಶಕ್ತಿ ಇರುವ ಕಲ್ಲಿಗೆ ಪೂಜೆ ಮಾಡಿದ ಕಾರಣಕ್ಕೆ ನಮ್ಮ ಮಗ ನಮ್ಮ ಸಿಕ್ಕಿದ್ದಾನೆ ಎಂದು ಪೋಷಕರು ಬಲವಾಗಿ ನಂಬಿದ್ದಾರೆ.
ಕೆಲವೊಂದು ಘಟನೆಗಳೇ ಹಾಗೇ ... ಅವುಗಳನ್ನು ತುಂಬಾ ವೈಜ್ಞಾನಿಕವಾಗಿ ನೋಡಲು ಹೋಗಬಾರದು, ನಮ್ಮ ಅನುಭವಕ್ಕೆ ಬರುವುದೇ ಸತ್ಯ ಅಲ್ವಾ?



Click it and Unblock the Notifications
