Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಹಿಂದೂ ಧರ್ಮ ವಿರೋಧಿಸುವ ಉದಯನಿಧಿ ಸ್ಟಾಲಿನ್: ತಾಯಿ ಹಿಂದೂ ದೇವರುಗಳ ಪರಮಭಕ್ತೆ !
ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ಉದಯನಿಧಿ ಸ್ಟಾಲಿನ್ ಅವರ ತಾಯಿ ದುರ್ಗಾ ಸ್ಟಾಲಿನ್ ಸನಾತನ ಧರ್ಮವನ್ನು ತುಂಬಾನೇ ನಂಬುವವರು, ಇವರ ದೇವರ ಪರಮ ಭಕ್ತೆ ಎಂಬುವುದು ಹಲವು ಬಾರಿ ಸಾಬೀತಾಗಿದೆ. ಈ ಹಿಂದೆ ತಮಿಳಿನ ಖಾಸಗಿ ಚಾನಲ್‌ವೊಂದು ದುರ್ಗಾ ಸ್ಟಾಲಿನ್ ಪೂಜಾ ರೂಂ ಹೇಗಿದೆ ಎಂಬುವುದನ್ನು ತೋರಿಸಿದ್ದರು. ದುರ್ಗಾ ಸ್ಟಾಲಿನ್ ಅವರ ಪೂಜಾ ಕೋಣೆ ನೋಡಿದರೆ ಸಾಕ್ಷಾತ್ ದೇವಾಲಯದಂತಿದೆ.

ದುರ್ಗಾ ಸ್ಟಾಲಿನ್ ಅವರು ಪ್ರತಿದಿನ ದೇವರನ್ನು ಆರಾಧಿಸುತ್ತಾರೆ, ಅದರಲ್ಲೂ ಶುಕ್ರವಾರದಂದು ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಅವರ ದೇವರ ಮಂದಿರದಲ್ಲಿರುವ ದೇವರ ವಿಗ್ರಹಗಳನ್ನು ನೋಡಲು ತುಂಬಾನೇ ಆಕರ್ಷಕವಾಗಿದೆ, ಶ್ರೀ ಕೃಷ್ಣ, ತಿರುಪತಿ ತಿಮ್ಮಪ್ಪ, ಪೆರುಮಾಳ್ ಸೇರಿದಂತೆ ಪ್ರತಿಯೊಂದು ಹಿಂದೂ ದೇವರುಗಳು ಮೂರ್ತಿ ಅಥವಾ ವಿಗ್ರಹ ದುರ್ಗಾ ಸ್ಟಾಲಿನ್ ದೇವರ ಮಂದಿರದಲ್ಲಿದೆ. ಅವರ ದೇವರ ಮಂದಿರಲ್ಲಿ ಹನುಮಂತನ ಬೆಳ್ಳಿಯ ಗದೆ, ಸುಬ್ರಹ್ಮಣ್ಯ ಸ್ವಾಮಿಯ ಬೆಳ್ಳಿಯ ತ್ರಿಶೂಲ, ರುದ್ರಾಕ್ಷಿ ಮಾಲೆ ಇವೆಲ್ಲವೂ ವೀಕ್ಷಕರ ಗಮನ ಸೆಳೆದಿತ್ತು.
ದುರ್ಗಾ ಸ್ಟಾಲಿನ್ ಅವರು ಈ ವರ್ಷದಲ್ಲಿ ಕೇರಳದ ಶ್ರೀ ಕೃಷ್ಣ ದೇವಾಲಯವಾದ ಗುರುವಾಯರ್ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ 14 ಲಕ್ಷ ಮೌಲ್ಯದ ಚಿನ್ನದ ಕಿರೀಟವನ್ನು ಅರ್ಪಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಶ್ರೀಕೃಷ್ಣನಿಗೆ ಕಿರೀಟ ಮಾಡಲು ಅಳತೆಯನ್ನು ತೆಗೆದುಕೊಂಡು ಹೋಗಿ ಕಿರೀಟವನ್ನು ಮಾಡಿ ಅರ್ಪಿಸಿದ್ದರು. ಅಲ್ಲದೆ ಚಂದನವನ್ನು ಅರಿಯಲು ಮೆಷಿನ್ ಕೂಡ ನೀಡಿದ್ದರು.
ದೇವರ ಕೃಪೆಯಂದಾಗಿ ಉದಯ್‌ನಿಧಿ ಉಳಿದಿದ್ದು ಎನ್ನುತ್ತಾರೆ ದುರ್ಗಾ ಸ್ಟಾಲಿನ್
ದುರ್ಗಾ ಸ್ಟಾಲಿನ್ ಒಂದು ಕಡೆ ಮಾತನಾಡುತ್ತಾ ಹೇಳುತ್ತಾರೆ ನನ್ನ ಮಗ ಉಳಿದಿದ್ದೇ ದೇವರ ಕೃಪೆಯಿಂದಾಗಿ. ಹೆರಿಗೆಯಾದಾಗ ಮಗು ತುಂಬಾನೇ ತೂಕ ಕಡಿಮೆಯಿತ್ತು ಅಲ್ಲದೆ ಕೆಂಪು-ಕೆಂಪಗೆ ಇದ್ದ ಮಗು ನೀಲಿ ಬಣ್ಣಕ್ಕೆ ತಿರುಗಲಾರಂಭಿಸಿತು. ನೀಲಿ ಬಣ್ಣ ಶ್ರೀಕೃಷ್ಣನ ಬಣ್ಣವಾದರೂ ಮಗು ನೀಲಿ ಬಣ್ಣಕ್ಕೆ ತಿರುಗಿದರೆ ಅಪಾಯಕಾರಿ ಎಂದು ಹೇಳಲಾಗಿತ್ತು.
ಇದನ್ನು ವೈದ್ಯಕೀಯ ಭಾಷೆಯಲ್ಲಿ ಸೈನೋಸಿಸ್ ( Cyanosis) ಎಂದು ಕರೆಯಲಾಗುವುದು. ದುರ್ಗಾ ಸ್ಟಾಲಿನ್ ಅವರ ಅಜ್ಜಿ (ತಂದೆಯ ತಾಯಿಯ ಮೊದಲ ಮಗು ಕೂಡ ಇದೇ ರೀತಿ ನೀಲಿ ಬಣ್ಣಕ್ಕೆ ತಿರುಗಿ ಸಾವನ್ನಪ್ಪಿತ್ತು). ನಂತರ ಅವರ ಅಜ್ಜಿ ಸೂಚಿಸಿದ ಮನೆಮದ್ದು ಹಚ್ಚಿ ಕಾಲಿಗೆ ಸಾಕ್ಸ್ ಹಾಕಿ ಆರೈಕೆ ಮಾಡಿ ಮಗು-ತಾಯಿ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ತಾಯಿ ಮನೆಗೆ ಹೋಗುವ ಅವರು ಮೊದಲು ಊರಿನ ದೇವರಲ್ಲಿಗೆ ಹೋಗಿ ಪೂಜೆಯನ್ನು ಸಲ್ಲಿಸಿದಾಗಿ ಹೇಳುತ್ತಾರೆ.
ದುರ್ಗಾ ಸ್ಟಾಲಿನ್ ಅವರು ಹಿಂದೂ ಧರಗಮವನ್ನೇ ಅನುಸರಿಸುತ್ತಾರೆ, ಅಲ್ಲದೆ ಹಿಂದೂ ಆಚರನೆಗಳನ್ನು ಬಲವಾಗಿ ನಂಬುತ್ತಾರೆ.



Click it and Unblock the Notifications

