Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಾಯಿಯ ಆಟ ಗಾರೆಯವನಿಗೆ ತಂದಿಟ್ಟ ಪಜೀತಿ ನೋಡಿ: ವೀಡಿಯೋ ವೈರಲ್
ಫೇಸ್‌ಬುಕ್ ನಾಯಿಯ ತುಂಟಾದ ವೀಡಿಯೋವೊಂದು ತುಂಬಾನೇ ವೈರಲ್ ಆಗಿದೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತು ಇದೆಯೆಲ್ಲಾ ಈ ವೀಡಿಯೋದಲ್ಲಿರುವ ಸಿಚುವೇಷನ್‌ಗೆ ತುಂಬಾ ಸೂಟ್ ಆಗುತ್ತೆ.

ಪಾಪ ಗಾರೆಯವರೊಬ್ಬರು ತಮ್ಮ ಕೆಲಸ ಮಾಡ್ತಾ ಇರುತ್ತಾರೆ, ಫ್ಲೋರ್ ರೆಡಿ ಮಾಡುವಾಗ ಅದು ಸೆಟ್ ಆಗುವವರೆಗೆ ಯಾರೂ ಮೆಟ್ಟಬೇಡಿ ಎಂದು ಹೇಳುತ್ತಾರೆ, ಏಕೆಂದರೆ ಸಿಮೆಂಟ್ ಸೆಟ್ ಆಗಲು ನಿಷ್ಠ 24 ಗಂಟೆ ಸಮಯಬೇಕು, ಇಲ್ಲದಿದ್ದರೆ ನಾವು ನಡೆದಾಡುವ ಕಾಲಿನ ಮಾರ್ಕ್ಸ್ ಅಚ್ಚೊತ್ತಿದಂತೆ ಹಾಗೇ ಉಳಿದುಕೊಳ್ಳುವುದು. ಆ ಕಾರಣಕ್ಕೆ ಮನೆಯ ನಾಯಿ-ಬೆಕ್ಕು ಕೂಡ ಆ ಕಡೆ ಸುಳಿಯದಂತೆ ಎಚ್ಚರವಹಿಸಲಾಗುವುದು.
ಈ ವೀಡಿಯೋದಲ್ಲಿ ನೋಡಬಹುದು, ಆ ವ್ಯಕ್ತಿ ಮನೆಯ ವರಾಂಡವನ್ನು ತೆಳಿ ಹಾಕಿ ಸರಿ ತಮಾಸ್ (ಸಮತಟ್ಟಾಗಿ ಮಾಡುವುದು) ಮಾಡ್ತಾ ಇರ್ತಾನೆ, ಆದರೆ ಆ ಮನೆಯವರು ಸಾಕಿದ ನಾಯಿಮರಿ ಓಡಿಕೊಂಡು ಬಂದು ತನ್ನ ಹೆಜ್ಜೆ ಗುರುತು ಮೂಡಿಸುತ್ತದೆ, ಆತ ಅದನ್ನು ಓಡಿಸಿ ಮತ್ತೆ ಸರಿ ಮಾಡುತ್ತಾನೆ, ನೋಡಿದರೆ ನಾಯಿ ಮತ್ತೆ ಓಡಿ ಬಂದು ಅಲ್ಲಿಲ್ಲಾ ತನ್ನ ಹೆಜ್ಜೆ ಗುರುತು ಮೂಡಿಸಿ ಓಡುತ್ತದೆ.
ಪಾಪ ಅಷ್ಟು ಕಷ್ಟಪಟ್ಟು ಮಾಡಿದ ಕೆಲಸ ಕ್ಷಣಾರ್ಧದಲ್ಲಿ ನಾಶವಾಗುತ್ತೆ, ಆದರೆ ಆ ಗಾರೆಯವರ ತಾಳ್ಮೆಗೆ ಮೆಚ್ಚಲೇಬೇಕು, ಬೇರೆಯವರು ಆದರೆ ನಾಯಿಗೆ ಪೆಟ್ ಬೀಳುತ್ತಿತ್ತು, ಅವರು ಅದನ್ನು ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಈ ವೀಡಿಯೋ ನೋಡಿದವರು ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸುತ್ತಿದ್ದಾರೆ. ನಾನಾದರೆ ಆ ನಾಯಿಗೆ ರಪ್ ಅಂತ ಕೊಡ್ತಾ ಇದ್ದೆ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಕಷ್ಟಪಟ್ಟವರಿಗೆ ಮಾತ್ರ ಆ ಶ್ರಮ ಗೊತ್ತಿರುತ್ತದೆ ಎಂದೆಲ್ಲಾ ಕಮೆಂಟ್ ಮಾಡ್ತಾ ಇದ್ದಾರೆ.
ಏನೇ ಆಗಲಿ ನಮ್ಮ ಮನೆಯಲ್ಲಿ ಗಾರೆ ಕೆಲಸ ಮಾಡಿಸ್ತಾ ಇದ್ದೇವೆ ಹಾಗಾಗಿ ನಾಯಿಯನ್ನು ಕಟ್ಟಿ ಹಾಕಬೇಕು ಎಂಬ ಅರಿವು ಸಾಕಿದವರಿಗೆ ಇರಬೇಕಾಗಿತ್ತು, ಪಾಪಾ ಆ ವ್ಯಕ್ತಿಯ ಪಜೀತಿ ನೋಡುವಾಗ ಅಯ್ಯೋ ಅನಿಸದೆ ಇರಲ್ಲ.
ಈ ವೀಡಿಯೋ ನೋಡಿ ನಿಮಗೆ ಏನನಿಸಿತ್ತು ಅಂತ ಕಮೆಂಟ್ ಮಾಡಿ.



Click it and Unblock the Notifications
