Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಮದುಮಗಳಿಗೆ ಕತ್ತೆ ಗಿಫ್ಟ್ ನೀಡಿದ ಮದುಮಗ, ಇದಕ್ಕೆ ಕಾರಣವೂ ಇದೆ: ವೈರಲ್ ವೀಡಿಯೋ ಮದುಮಗಳಿಗೆ ಕತ್ತೆ ಗಿಫ್ಟ್ ನೀಡಿದ ಮದುಮಗ,
ನಮ್ಮ ಸಂಬಂಧಿಕರ ಅಥವಾ ಸ್ನೇಹಿತರ ಮದುವೆಗೆ ಹೋಗುವಾಗ ಅವರಿಗೆ ಏನಾದರು ಉಡುಗೊರೆ ತಗೊಂಡು ಹೋಗುತ್ತೇವೆ. ಆಶೀರ್ವಾದವೇ ಉಡುಗೊರೆ ಅಂತ ಬರೆದಿರುವ ಮದುವೆಗೆ ಹೋಗುವಾಗಲೂ ಒಂದು ಹೂ ಗುಚ್ಛವಾದರೂ ತಗೊಂಡು ಹೋಗಿ ವಿಶ್ ಮಾಡುತ್ತೇವೆ, ಆದರೆ ಪಾಕಿಸ್ತಾನದಲ್ಲಿ ನಡೆದಿರುವ ಮದುವೆಯೊಂದರಲ್ಲಿ ಮದುಮಗಳು ವಾರೇಶಾಳಿಗೆ ಮದುಮಗ ಅಜ್ಲಾನ್ ಕತ್ತೆಯನ್ನು ಉಡುಗೊರೆಯಾಗಿ ನೀಡಿದ್ದು ಆ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕೆಲವರು ತಮಾಷೆ ಮಾಡಲು ವಿಚಿತ್ರವಾದ ಗಿಫ್ಟ್‌ಗಳನ್ನು ನೀಡುತ್ತಾರೆ, ಆದರೆ ಈ ಮದುಮಗ ಮದುಮಗಳಿಗೆ ಕತ್ತೆಯನ್ನು ಗಿಫ್ಟ್ ನೀಡಿರುವುದು ತಮಾಷೆಗಲ್ಲ, ಅದರ ಹಿಂದೆ ಬಲವಾದ ಕಾರಣವೂ ಇದೆ.
ಅಜ್ಲಾನ್ ತನ್ನ ಹುಡುಗಿಗೆ ಕತ್ತೆಯನ್ನು ಗಿಫ್ಟ್ ಮಾಡಲು ಕಾರಣ ಆಕೆಗೆ ಕತ್ತೆಯೆಂದರೆ ತುಂಬಾನೇ ಇಷ್ಟ. ಕತ್ತೆ ತುಂಬಾನೇ ಶ್ರಮಜೀವಿ ಎಂಬ ಕಾರಣಕ್ಕೆ ಕತ್ತೆಯನ್ನು ತುಂಬಾ ಇಷ್ಟಪಡುತ್ತಾಳೆ, ಹಾಗಾಗಿ ಅವಳು ತುಂಬಾ ಇಷ್ಟಪಡುವ ಕತ್ತೆಯನ್ನು ಗಿಫ್ಟ್ ಆಗಿ ನೀಡಿದ್ದಾನೆ.
ಏನೋ ಒಂದು ಗಿಫ್ಟ್ ನೀಡುವ ಬದಲು ತನ್ನ ಹುಡುಗಿಯ ಮನಸ್ಸು ಅರಿತು ಕತ್ತೆಯನ್ನು ಗಿಫ್ಟ್ ನೀಡಿದ್ದಾನೆ, ಅಂದ ಹಾಗೆ ಈ ಗಿಫ್ಟ್ ಬಗ್ಗೆ ನಿಮ್ಮ ಅನಿಸಿಕೆ ಏನು?
ಇನ್ನು ಮತ್ತೊಂದು ವೀಡಿಯೋದಲ್ಲಿ ಪಾತ್ರೆ-ಪಗಡೆ ತೆಗೆದುಕೊಂಡು ಯುವಕರು ಟ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆಗಿದೆ. ಮದುವೆ ಸಮಾರಂಭದಲ್ಲಿ ಎಲ್ಲರೂ ಊಟವಾದ ಮೇಲೆ ಯುವಕರು ತಟ್ಟೆ-ಪಾತ್ರೆ, ವಾಟರ್ ಕ್ಯಾನ್ ತೆಗೆದು ಹಾಡಿಗೆ ಹೆಜ್ಜೆ ಹಾಕಿರುವ ವೀಡಿಯೋ ನೆಟ್ಟಿಗರಿಗೆ ತುಂಬಾ ಖುಷಿಕೊಟ್ಟಿದೆ, ತುಂಬಾ ಜನ ಈ ವೀಡಿಯೋ ಶೇರ್ ಮಾಡುತ್ತಿದ್ದಾರೆ.
Girls :- yha jyade instruments nhi baj rhe hai dance nhi karungi
— Ankit (@imoriginalankit) December 6, 2022
Meanwhile Boys :- pic.twitter.com/JN3DbHiGdl



Click it and Unblock the Notifications

