For Quick Alerts
ALLOW NOTIFICATIONS  
For Daily Alerts

ಫ್ಲೈಟ್‌ನಲ್ಲಿ ಹುಬ್ಬಳ್ಳಿ ಕನ್ನಡದಲ್ಲಿಯೇ ಸೂಚನೆ ನೀಡಿದ ಪೈಲೆಟ್‌: ವೀಡಿಯೋ ವೈರಲ್

|

ವಿಮಾನದ ಹತ್ತಿದಾಗ ಇಂಗ್ಲಿಷ್‌, ಹಿಂದಿ ಭಾಷೆಯಲ್ಲಿ ಸೂಚನೆಗಳನ್ನು ಕೇಳುವುದು ಸಹಜ, ಆದರೆ ಹುಬ್ಬಳ್ಳಿ-ದೆಹಲಿ ನಡುವೆ ಸಂಚಾರ ಆರಂಭಿಸಿದ ವಿಮಾನದಲ್ಲಿ ಕನ್ನಡದಲ್ಲಿ ಸೂಚನೆಗಳು ಕೇಳಿ ಬಂದಾಗ ಅದರಲ್ಲಿದ್ದ ಕನ್ನಡಿಗರಿಗೆ ಅದೆಷ್ಟು ಅಚ್ಚರಿ ಹಾಗೂ ಖುಷಿಯಾಗಿರಬೇಡ.

Kannadigas happy after watching pilot giving Instruction In Hubli Kannada Language : Video Goes Viral

ಇಂಡಿಗೋ ವಿಮಾನದಲ್ಲಿರುವ ಅಕ್ಷಯ ಪಾಟೀಲ ಉತ್ತರ ಕರ್ನಾಟಕ ಭಾಷೆಯಲ್ಲಿ ಸ್ವಾಗತ ಕೋರಿ ವಿವರಣೆ ನೀಡಿರುವ ವೀಡಿಯೋ ತುಂಬಾನೇ ವೈರಲ್ ಆಗಿದೆ.

ಫ್ಲೈಟ್‌ನಲ್ಲಿ ಕನ್ನಡದಲ್ಲಿ ಸೂಚನೆ ನೀಡಿದ ಪೈಲೆಟ್

ಫ್ಲೈಟ್‌ನಲ್ಲಿ ಕನ್ನಡದಲ್ಲಿ ಸೂಚನೆ ನೀಡಿದ ಪೈಲೆಟ್

ಪೈಲೆಟ್‌ ಸೂಚನೆಯನ್ನು ನೀಡುವಾಗ ಸ್ವಚ್ಛ ಹುಬ್ಬಳಿ ಕನ್ನಡ ಭಾಷೆಯಲ್ಲಿ ಹುಬ್ಬಳ್ಳಿಯಿಂದ ನಾವು ಡೆಲ್ಲಿಗೆ ಹೊಂಟೀವಿ, ಡೆಲ್ಲಿಗೆ 17, 000ಕಿಮೀ ಐತ್ರಿ, 2 ಗಂಟೆಯಾಗೆ ಕವರ್‌ ಮಾಡ್ತೀವ್ರಿ ಎಂದು ಹೇಳಲಾರಂಭಿಸಿದಾಗ ಅದರಲ್ಲಿದ್ದ ಕನ್ನಡಿಗರಿಗೆ ತುಂಬಾನೇ ಖುಷಿಯಾಯ್ತು, ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರೂ ಇದೇ ವಿಮಾನದಲ್ಲಿದ್ದರು.

ಮೆಚ್ಚುಗೆ ವ್ಯಕ್ತ ಪಡಿಸಿದ ಕೇಂದ್ರ ಸಚಿವ ಹ್ಲಾದ ಜೋಷಿ

ಮೆಚ್ಚುಗೆ ವ್ಯಕ್ತ ಪಡಿಸಿದ ಕೇಂದ್ರ ಸಚಿವ ಹ್ಲಾದ ಜೋಷಿ

ಕೇಂದ್ರ ಸಚಿವ( ಕೇಂದ್ರದ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ) ಪ್ರಹ್ಲಾದ ಜೋಷಿ ಕೂಡ ಈ ವೀಡಿಯೋ ಹಂಚಿಕೊಂಡು 'ದೆಹಲಿ ವಿಮಾನದಾಗ ಗಂಡುಮೆಟ್ಟಿದ ನಾಡಿನ ಭಾಷಾ ಸೊಗಡು ನಮ್ಮ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸೇವಾ ಚಾಲೂ ಆತು ಅನ್ನೋದ ಒಂದ ವಿಶೇಷ ಆದ್ರ, ಫ್ಲೈಟ್‌ ಅನೌನ್ಸ್‌ಮೆಂಟ್ ಸಹ ನಮ್ಮ ಉತ್ತರ ಕರ್ನಾಟಕ ಭಾಷಾದಾಗ ಆಗಿದ್ದು ಇನ್ನೊಂದು ವಿಶೇಷ.

ನಮ್ಮ ಬೈಲಹೊಂಗಲದವ್ರೇ ಆದ ಅಕ್ಷಯ್‌ ಪಾಟೀಲ್ ಇವತ್ತಿನ ವಿಮಾನದ ಪೈಲೆಟ್‌ ಆಗಿದ್ರಿಂದ ಸ್ವಚ್ಛ ಉತ್ತರ ಕರ್ನಾಟಕ ಭಾಷಾದಾಗ ಎಲ್ಲಾ ಪ್ರಯಾಣೀಕರಿಗೆ ಸ್ವಾಗತ ಮಾಡಿ, ರಾಷ್ಟ್ರ ರಾಜಧಾನಿಗೆ ಕರಕೊಂಡ ಹೋದ್ರು. ಇದರಕಿಂತ ಹೆಚ್ಚಿನ ಖುಷಿ ಏನ ಬೇಕ ಹೇಳ್ರಿ...ಉಳಿಬೇಕು ನಮ್ಮ ಭಾಷಾ ಮತ್ತ ಸಂಸ್ಕೃತಿ ಅಂದ್ರ ಪಕ್ಕಾ ಆಗೇ ಆಗ್ತೈತಿ ಪ್ರಗತಿ' ಎಂಬುವುದಾಗಿ ಹೇಳಿದ್ದಾರೆ.

ಕನ್ನಡ ಉಳಿಸಲು, ಬೆಳೆಸಲು ಈ ರೀತಿಯ ಪ್ರಯತ್ನ ಅಗತ್ಯ

ಕನ್ನಡ ಉಳಿಸಲು, ಬೆಳೆಸಲು ಈ ರೀತಿಯ ಪ್ರಯತ್ನ ಅಗತ್ಯ

ಇದು ತುಂಬಾ ನೂತನ ಪ್ರಯತ್ನ, ಪೈಲೆಟ್‌ ಹುಬ್ಬಳ್ಳಿ ಕನ್ನಡ ಭಾಷೆಯಲ್ಲಿ ಮಾತನಾಡಿ ಭಾಷೆ ಪ್ರೇಮ ಮರೆದಿರುವ ಈ ವೀಡಿಯೋ ತುಂಬಾನೇ ವೈರಲ್‌ ಆಗಿದೆ. ನಾವು ವೃತ್ತಿ ಅಂತ ಬಂದಾಗ ನಾವೆಲ್ಲಾ ವ್ಯವಹಾರಿಕ ಭಾಷೆಯನ್ನಾಗಿ ಇಂಗ್ಲಿಷ್‌ ಹೆಚ್ಚಾಗಿ ಬಳಸುತ್ತೇವೆ. ಆದರೆ ನಮ್ಮ ಕನ್ನಡಿಗರೇ ಸಿಕ್ಕಾಗ ಅವರಿಗೆ ನಮ್ಮ ಭಾಷೆ ಅರ್ಥವಾಗುವಾಗ ಬೇರೆ ಭಾಷೆಯ ಸಹಾಯ ನಿಜವಾಗಲೂ ಬೇಕೆ? ನಮ್ಮ ಭಾಷೆಯನ್ನು ನಾವು ಮಾತನಾಡಿದರೆ ಮಾತ್ರ ಬೆಳೆಸಲು ಸಾಧ್ಯ ಅಲ್ಲವೇ? ನಮ್ಮ ಭಾಷೆಯನ್ನು ಮತ್ತಷ್ಟು ಹೇಗೆ ಶ್ರೀಮಂತಗೊಳಿಸಬೇಕು, ಅದಕ್ಕೆ ನಾವು ಮಾಡಬೇಕಾದ ಚಿಕ್ಕ ಕಾರ್ಯವೇನು ಎಂಬುವುದಕ್ಕೆ ಇದೊಂದು ಅತ್ಯುತ್ತಮವಾದ ಉದಾಹರಣೆ ಎಂದರೆ ತಪ್ಪಾಗಲಾರದು, ಏನಂತೀರಿ?

English summary

Kannadiga's happy after watching pilot giving Instruction In Hubli Kannada Language : Video Goes Viral

pilot giving Instruction In Hubli Kannada Language In Indigo Flight, kannadiga's are very happy: Video Goes Viral,
X
Desktop Bottom Promotion