For Quick Alerts
ALLOW NOTIFICATIONS  
For Daily Alerts

ನ್ಯೂ ಇಯರ್ ಪಾರ್ಟಿಗೆ ರೆಡಿನಾ? ಹೋಗುವ ಮೊದಲು ಈ 'ಡು ಅಂಡ್ ಡೋಂಟ್' ತಿಳಿದಿರಲಿ

|

ಹೊಸ ವರ್ಷದ ನೈಟ್‌ ಪಾರ್ಟಿಗೆ ಈಗಾಗಲೇ ಸಿದ್ಧತೆ ಶುರುವಾಗಿದೆ. ನೀವು ಕೂಡ ಟಿಕೆಟ್‌ ಅಥವಾ ರೆಸ್ಟೋರೆಂಟ್‌ಗಳಲ್ಲಿ ಟೇಬಲ್ ಬುಕ್‌ ಮಾಡಿ ನ್ಯೂ ಇಯರ್‌ ಅನ್ನು ಗ್ರ್ಯಾಂಡ್‌ ಆಗಿ ಸ್ವಾಗತಿಸಲು ಸಿದ್ಧರಾಗಿರುತ್ತೀರಿ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ನ್ಯೂ ಇಯರ್‌ ಅಷ್ಟೊಂದು ಗ್ರ್ಯಾಂಡ್‌ ಆಗಿ ಸಂಭ್ರಮಿಸಲು ಸಾಧ್ಯವಾಗಿಲ್ಲ.

Dos and Donts of New year eve In Kannada

ಈ ವರ್ಷ ಗ್ರ್ಯಾಂಡ್‌ ನ್ಯೂ ಇಯರ್‌ ಪಾರ್ಟಿಗೆ ಭರ್ಜರಿ ಸಿದ್ಧತೆಗಳಾಗಿವೆ, ಈ ನ್ಯೂ ಇಯರ್‌ ಪಾರ್ಟಿ ಕೆಲವೊಂದು ಡು ಅಂಡ್‌ ಡೋಂಟ್‌ಗಳಿವೆ, ಅವುಗಳ ಬಗ್ಗೆ ಗೊತ್ತೇ?

ನ್ಯೂ ಇಯರ್‌ ಪಾರ್ಟಿಯಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಬುಕ್ಕಿಂಗ್‌ ಮಾಡದೆ ರೆಸ್ಟೋರೆಂಟ್‌ ಅಥವಾ ಪಾರ್ಟಿ ಸ್ಥಳಗಳಿಗೆ ಹೋಗಬೇಡಿ

ನೀವು ಈಗಾಗಲೇ ನ್ಯೂ ಇಯರ್‌ ಪಾರ್ಟಿ ಎಲ್ಲಿ ಮಾಡಬೇಕೆಂದು ಈಗಾಗಲೇ ನಿರ್ಧಾರ ಮಾಡಿದ್ದರೆ ಒಕೆ, ಇಲ್ಲಾ ರಾತ್ರಿ ಎಲ್ಲಾ ಆದರೂ ಹೋಗುವ ಎಂದು ಬ್ಲೈಂಡ್‌ ಪಾರ್ಟಿಗೆ ಹೋದರೆ ನಿರಾಸೆಯಾಗುವುದು, ಹೊಸ ವರ್ಷದ ದಿನವನ್ನು ಖುಷಿಯಿಂದ ಪ್ರಾರಂಭಿಸಬೇಕು, ನಿರಾಸೆಯಿಂದಲ್ಲ. ಆದ್ದರಿಂದ ಇನ್ನೂ ಪಾರ್ಟಿಗೆ ಬುಕ್‌ ಮಾಡದಿದ್ದರೆ ನಿಮ್ಮ ಸ್ನೇಹಿತರೆಲ್ಲಾ ಸೇರಿ ಎಲ್ಲಾದರೂ ಜೊತೆಯಾಗಿ ಸೇರಿ ಪಾರ್ಟಿ ಮಾಡಿ.... ಹ್ಯಾಪಿ ನ್ಯೂ ಇಯರ್

ಸ್ಟೈಲಿಷ್‌ ಆಗಿ ಡ್ರೆಸ್‌ ಮಾಡಿ ಆದರೆ ಕಂಫರ್ಟ್ ಇರಲಿ

ಈ ದಿನ ಪಾರ್ಟಿಗೆ ಹೋಗುವಾಗ ತುಂಬಾನೇ ಸ್ಟೈಲಿಷ್‌ ಆಗಿ ಡ್ರೆಸ್‌ ಮಾಡಬೇಕೆಂದು ಬಯಸುತ್ತೇವೆ, ಆದರೆ ನೀವು ಧರಿಸುವ ಡ್ರೆಸ್ ನಿಮಗೆ ಕಂಫರ್ಟ್ ಅನಿಸಬೇಕು. ಡ್ಯಾನ್ಸ್ ಮಾಡುವಾಗ, ಪಾರ್ಟಿ ಮೂಡ್‌ನಲ್ಲಿರುವಾಗ ನಿಮ್ಮ ಡ್ರೆಸ್‌ನಿಂದ ನಿಮಗೆ ಮುಜುಗರ ಉಂಟಾಗುವಂತೆ ಇರಬಾರದು....

ಡ್ರಿಂಕ್‌.... ಅಳತೆಯಲ್ಲಿರಲಿ

ನ್ಯೂ ಇಯರ್‌ ಪಾರ್ಟಿಯಲ್ಲಿ ಗುಂಡು ಕಾರುಬಾರು ಬಲು ಜೋರು. ಈ ದಿನ ಡ್ರಿಂಕ್ಸ್ ಪಾರ್ಟಿ ಮಾಡುವುದಾದರೆ ಡ್ರಿಂಕ್ಸ್ ಮಿತಿಯಲ್ಲಿ ಮಾಡಿ. ಅಳತೆ ಜಾಸ್ತಿಯಾದರೆ ಹೊಸ ವರ್ಷವನ್ನು ಕೆಲವೊಂದು ರಾದ್ಧಾಂತಗಳಿಂದ ಪ್ರಾರಂಭಿಸಬೇಕಾಗಿ ಬರಬಹುದು, ಆದ್ದರಿಂದ ಅಳತೆ ಮೀರದಿರಲಿ.... ಲೆಟ್ಸ್‌ ಹ್ಯಾವ್‌ ಎ ಗ್ರೇಟ್‌ ನ್ಯೂ ಇಯರ್.

ಡ್ರಿಂಕ್ಸ್‌ ಪಾರ್ಟಿ ಇದ್ದರೆ ಗಾಡಿ ಚಲಾಯಿಸಬೇಡಿ

ಡ್ರಿಂಕ್ಸ್ ಪಾರ್ಟಿಗೆ ಹೋಗುವುದಾದರೆ ನಿಮ್ಮದೇ ಗಾಡಿಯಲ್ಲಿ ಹೋಗುವುದಕ್ಕಿಂತ ಕ್ಯಾಬ್ ಸುರಕ್ಷಿತ. ಪೋಲೀಸರ ಕಾಟವೂ ಇಲ್ಲ, ನೀವು ಸುರಕ್ಷಿತವಾಗಿ ಮನೆ ತಲುಪಬಹುದು.

ಕಾರ್ಡ್ ಜೊತೆ ಸ್ವಲ್ಪ ಕ್ಯಾಶ್‌ ಕೂಡ ಇರಲಿ

ಗೂಗಲ್ ಪೇ, ಪೇಟಿಯಂ, ಕಾರ್ಡ್‌ ಏನೇ ಇದ್ದರು ಸ್ವಲ್ಪ ಕ್ಯಾಶ್‌ ಕೈಯಲ್ಲಿ ಇರಲೇಬೇಕು. ಕೆಲವೊಮ್ಮೆ ಸರ್ವರ್ ಡೌನ್ ಆಗಿದ್ದರೆ ಕಾರ್ಡ್ ವರ್ಕ್ ಆಗಲ್ಲ, ಆದ್ದರಿಂದ ಸ್ವಲ್ಪ ಕ್ಯಾಶ್‌ ಇರಲಿ.

ಡ್ಯಾನ್ಸ್‌ ಮಾಡುವಾಗ ಬೇರೆಯವರ ಚಿಂತೆ ಬಿಡಿ

ನ್ಯೂ ಇಯರ್‌ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಲು ಡ್ಯಾನ್ಸ್ ಎಕ್ಸ್‌ಪರ್ಟ್ ಆಗಿರಬೇಕಾಗಿಲ್ಲ, ನಿಮಗೆ ಇಷ್ಟ ಬಂದ ರೀತಿಯಲ್ಲಿ ಡ್ಯಾನ್ಸ್ ಮಾಡಿ, ಅವರು ಏನು ಹೇಳುತ್ತಾರೆ ಎಂಬ ಮುಜುಗರ ಬೇಡಿ, ಬ್ಯಾಲೆನ್ಸ್ ಕಳೆದುಕೊಂಡು ಬೇರೆಯವರ ಮೈ ಮೇಲೆ ಬಿದ್ದು ಡ್ಯಾನ್ಸ್ ಮಾಡುವುದು ಮಾಡಬಾರದು, ಲೆಟ್ಸ್‌ ಡ್ಯಾನ್ಸ್‌.. ಡ್ಯಾನ್ಸ್.. ಎಂಜಾಯ್‌.

ಪೋನ್‌ ಬ್ಯಾಟರಿ

ಪಾರ್ಟಿಗೆ ಹೋಗುವ ಮುನ್ನ ನಿಮ್ಮ ಫೋನ್‌ ಬ್ಯಾಟರಿ ಫುಲ್ ಇರಲಿ, ಫೋನ್ ಬ್ಯಾಟರಿ ಕಡಿಮೆ ಇದ್ದು ಹೋದರೆ ಚಾರ್ಜ್ ಕಡಿಮೆ ಇದ್ದರೆ ಕ್ಯಾಬ್‌ ಬುಕ್ ಮಾಡಲು ಅಥವಾ ಹಣ ಕೊಡಲು, ಯಾರಿಗಾದರೂ ಕರೆ ಮಾಡಲು ಸಾಧ್ಯವಾಗದೇ ಹೋಗಬಹುದು, ಹುಷಾರ್!

ಗಮ್ಮತ್ತಾಗಿ ನ್ಯೂ ಇಯರ್‌ ಪಾರ್ಟಿ ಮಾಡಿ, ಎಂಜಾಯ್‌....
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ನಿಮಗೆ 12 ತಿಂಗಳು ಯಶಸ್ಸು, 52 ವಾರ ನಗು, 365 ದಿನಗಳು ಸಂತೋಷ, 8760 ಗಂಟೆ ಆನಂದ, 525600 ನಿಮಿಷ ಅದೃಷ್ಟ, 31536000 ಸೆಕೆಂಡ್‌ ನೆಮ್ಮದಿ ತುಂಬಿರಲಿ.

ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಹೊಸ ವರ್ಷ ಆದ ತಪ್ಪನ್ನು ಸರಿಪಡಿಸಲು, ಸರಿಯಾದದ್ದನ್ನು ಮಾಡಲು, ಗುರಿ ಸಾಧನೆಗೆ ಮತ್ತೊಂದು ಅವಕಾಶ ನೀಡಿದೆ.

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು

ಹಳೆಯ ಕಹಿಯನ್ನು ಮರೆಯೋಣ, ಹೊಸತನ್ನು ಸ್ವಾಗತಿಸೋಣ, ಹೊಸ ವರ್ಷದ ಹಾರ್ದಿಕ ಶುಭಾಶಯಗಳು

English summary

Do's and Don'ts of New year eve In Kannada

New year party 2023: Do's and Don'ts of New year eve In Kannada,
X
Desktop Bottom Promotion