Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಪಾಪ! ಈ ಬೆಕ್ಕಿಗೆ ತನಗೆ ಕಿವಿಯಿದೆ ಎಂದು ಕನ್ನಡಿ ನೋಡಿದ ಮೇಲೆ ಗೊತ್ತಾಯಿತು
ಪ್ರಾಣಿಗಳು ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬ ನೋಡಿ ಇನ್ನೊಂದು ಪ್ರಾಣಿಯೆಂದು ಭಾವಿಸಿ ಅದನ್ನು ಜೋರು ಮಾಡುವುದು, ಇಲ್ಲಾ ಅದನ್ನು ಮುಟ್ಟಲು ಪ್ರಯತ್ನಿಸಿ ಕನ್ನಡಿ ಮುಟ್ಟುವುದು, ಪಕ್ಷಿಗಳಾದರೆ ಕನ್ನಡಿಯನ್ನೇ ಕುಟುಕುವುದು ನೋಡಿರುತ್ತೀರಿ. ಆಗ ನಮಗೆ ಅವುಗಳನ್ನು ನೋಡುವುದು ಸಕತ್ ಮಜಾವಾಗಿರುತ್ತದೆ.
ಇಲ್ಲೊಂದು ಬೆಕ್ಕಿಗೆ ಪಾಪ ತನಗೆ ಕಿವಿಯಿದೆ ಎನ್ನುವುದು ಕನ್ನಡಿ ನೋಡಿದಾಗ ಗೊತ್ತಾಗುತ್ತದೆ, ಅಲ್ಲಿಯವರೆಗೆ ಅದಕ್ಕೆ ಪಾಪ ತನ್ನ ಮುದ್ದಾದ ಮುಖಕ್ಕೆ ಪುಟ್ಟದಾದ ಕಿವಿಯಿದೆ ಎಂದೇ ಗೊತ್ತೇ ಇರಲಿಲ್ಲವಾ ಅಥವಾ ಕನ್ನಡಿಯಲ್ಲಿ ನೋಡಿದ ಮೇಲೆ ತನ್ನ ಕಿವಿಗಳು ತುಂಬಾ ಚೆನ್ನಾಗಿದೆ ಎಂದು ಗೊತ್ತಾಯಿತಾ? ಅದಕ್ಕೇ ಗೊತ್ತು. ಏನೇ ಆಗಲಿ ಈ ಬೆಕ್ಕು ತುಂಬಾ ಬುದ್ಧಿವಂತ ಬೆಕ್ಕು ಎಂಬುವುದರಲ್ಲಿ ಡೌಟೇ ಇಲ್ಲ.

ಇಲ್ಲೊಂದು ಬೆಕ್ಕಿನ ಮರಿ ಕನ್ನಡಿ ನೋಡಿ ತನ್ನದೇ ಕಿವಿಯೆಂದು ಪರೀಕ್ಷಿಸುತ್ತಿರುವ ವೀಡಿಯೋ ತುಂಬಾ ಮಜಾವಾಗಿದೆ. ಮೊದಲಿಗೆ ಕನ್ನಡಿಯಲ್ಲಿ ಕಿವಿ ನೋಡಿದಾಗ ಅದಕ್ಕೆ ಅದು ನನ್ನದೇ ಕಿವಿಯೆಂದು ಗೊತ್ತಾಗುವುದಿಲ್ಲ, ಆದರೆ ಅದು ಬೆಡ್ ಮೇಲೆ ನಿಂತಾಗ ಕನ್ನಡಿಯಲ್ಲಿ ಏನೋ ಎರಡು ವಸ್ತುಗಳು ಕಾಣುತ್ತದೆ, ಅದಕ್ಕೆ ಮುಖ ಕಾಣುತ್ತಿರುವುದಿಲ್ಲ, ಬರೀ ಕಿವಿಗಳಷ್ಟೇ ಕಾಣುತ್ತಿರುತ್ತದೆ, ಕನ್ನಡಿಯಲ್ಲಿ ಏನಪ್ಪಾ ಅದು ಎಂದು ನೋಡಲು ನಿಧಾನಕ್ಕೆ ಎದ್ದು ನೋಡುತ್ತದೆ, ಆಗ ಅದಕ್ಕೆ ಅರೇ! ಇದು ನನ್ನದೇ ಕಿವಿ ಎಂದು ಗೊತ್ತಾಗುತ್ತದೆ. ಕನ್ನಡಿ ನೋಡುತ್ತಾ ತಾನು ನೋಡಿದ್ದು ನನ್ನದೇ ಕಿವಿ ಎಂದು ಖಾತರಿ ಪಡಿಸಿಕೊಳ್ಳಲು ತನ್ನ ಕಿವಿಯನ್ನು ಮುಟ್ಟಿ-ಮುಟ್ಟಿ ನೋಡುತ್ತಿರುವ ವೀಡಿಯೋ ತುಂಬಾ ಮುದ್ದಾಗಿದ್ದು, ಈ ವೀಡಿಯೋ ಓಡುತ್ತಿದ್ದರೆ ನಿಮ್ಮ ಟೆನ್ಷನ್ ಎಲ್ಲಾ ಓಡಿ ಹೋಗುವುದು ನೋಡಿ.



Click it and Unblock the Notifications
