Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಿಂಹದ ಮರಿ ಎತ್ತಿಕೊಂಡು ಮರವೇರಿ ಮುದ್ದಾಡಿದ ಮಂಗ: ವೀಡಿಯೋ ವೈರಲ್
ದಿ ಲಯನ್ ಕಿಂಗ್ ಸಿನಿಮಾದಲ್ಲಿ ನೋಡಿದ್ದರೆ ಅದರಲ್ಲಿ ಒಮದು ದೃಶ್ಯ ನಿಮಗೆ ನೆನಪಿರಬಹುದು. ಮಂಗವೊಂದು ಸಿಂಹದ ಮರಿಯನ್ನು ಎತ್ತಿಕೊಂಡು ಎತ್ತರದ ಬೆಟ್ಟಕ್ಕೆ ಎತ್ತಿಕೊಂಡು ಇಡೀ ಕಾಡಿನ ದರ್ಶನ ಮಾಡಿಸುತ್ತದೆ. ಆದರೆ ಅಂತಹದ್ದೇ ಘಟನೆಯೊಂದು ಒಂದು ದಕ್ಷಿಣ ಆಫ್ರಿಕಾದ ಕಾಡಿನಲ್ಲಿ ನಡೆದಿದ್ದು, ಇದೀಗ ಆ ವೀಡಿಯೋ ವೈರಲ್ ಆಗಿದೆ.

ತುಂಬಾ ಮುದ್ದಾಗಿ ಕಾಣುವ ಸಿಂಹದ ಮರಿಯನ್ನು ಮಂಗವೊಂದು ಎತ್ತಿಕೊಂಡು ನಡೆಯುತ್ತಿದ್ದರೆ ಉಳಿದ ಮಂಗಗಳು ಅದನ್ನು ಹಿಂಬಾಲಿಸಿವೆ. ಆ ಮಂಗ ಸಿಂಹದ ಮರಿಯನ್ನು ಜೋಪಾನವಾಗಿ ಎತ್ತಿಕೊಂಡು ಮರವೇರಿ ಕೊಂಬೆಯಿಂದ-ಕೊಂಬೆಗೆ ಹಾರುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದ್ದು, ಬಲು ಅಪರೂಪದ ಈ ವೀಡಿಯೋ ಇದೀಗ ವೈರಲ್ ಆಗಿದೆ.
ಬಲು ಅಪರೂಪದ ಈ ದೃಶ್ಯವನ್ನು ದಕ್ಷಿಣ ಆಫ್ರಿಕದ ಕುರ್ಗರ್ ನ್ಯಾಷನಲ್ ಪಾರ್ಕ್‌ನಲ್ಲಿ ಸೆರೆ ಹಿಡಿಯಲಾಗಿದೆ. ಈ ವೀಡಿಯೋವನ್ನು ಕರ್ಟ್ ಸ್ಕಲ್ಟ್ಞ್ ಎಂಬುವರುಫೆಬ್ರವರಿ 1, 2020ರಲ್ಲಿ ಚಿತ್ರೀಕರಿಸಿದ್ದಾರೆ.
ಕರ್ಟ್ ಮೀಟಿಂಗ್ ಮುಗಿಸಿ ಹಿಂತಿರುಗುತ್ತಿದ್ದಾಗ ಪಾರ್ಕ್‌ಗೆ ಹೋಗಿ ಫೋಟೋಗ್ರಾಫಿ ಮಾಡಲು ನಿರ್ಧರಿಸುತ್ತಾರೆ. ಆಗ ಮಂಗಗಳ ಗುಂಪು ಹೋಗುವುದು ಕಣ್ಣಿಗೆ ಬೀಳುತ್ತದೆ. ಮುಂದೆ ಸಾಗುತ್ತಿರುವ ಮಂಗದ ಕೈಯಲ್ಲಿ ಏನೋ ಇರುವುದು ಕಾಣುತ್ತದೆ. ಅದೇನೆಂದು ಕುತೂಹಲದಿಂದ ನೋಡುತ್ತಿದ್ದಾಗ ಆ ಮಂಗ ಕೈಯಲ್ಇರುವ ಮರಿಯನ್ನು ಹಿಡಿದುಕೊಂಡು ಮರವೇರುತ್ತದೆ. ನೋಡಿದರೆ ಮಂಗನ ಕೈಯಲ್ಲಿ ಸಿಂಹದ ಮರಿ.
ಕರ್ಕ್ ಹೇಳುವ ಪ್ರಕಾರ 'ಮೊದಲಿಗೆ ನಾನದನ್ನು ಹೆಣ್ಣು ಮಂಗವಿರಬಹುದು ಅಂದುಕೊಂಡಿದ್ದೆ, ಆದರೆ ಅದು ಗಂಡು ಮಂಗವಾಗಿತ್ತು' ಎಂದಿದ್ದಾರೆ.
ಸಿಂಹದ ಮರಿಯನ್ನು ಹಿಡಿದು ಮರವೇರಿ ಕೊಂಬೆಯಿಂದ ಕೊಂಬೆಗೆ ಹಾರಿ, ಒಂದು ಕಡೆ ಕೂತು ಮರಿಯನ್ನು ಸಿಂಹದ ಮರಿಯನ್ನು ಮುದ್ದು ಮಾಡುತ್ತಿರುವ ವೀಡಿಯೋ ದಿ ಲಯನ್ ಕಿಂಗ್ ಸಿನಿಮಾ ನೆನಪಿಸುವಂತೆಯೇ ಇದೆ.



Click it and Unblock the Notifications
