Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
Viral: ರಶ್ಮಿಕಾ ವಿಚ್ಛೇದನ ಪಡೆಯಬಹುದು ಎಂದ ಜ್ಯೋತಿಷಿ, ಸಮಂತಗೆ ಇವರು ಹೇಳಿದ ಭವಿಷ್ಯ ನಿಜವಾಯ್ತು
ಸ್ಯಾಂಡಲ್‌ವುಡ್‌ಗೆ ಕಿರಿಕ್ ಪಾರ್ಟಿ ಮೂಲಕ ಪಾದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ವರೆಗೂ ಬಹ ಬೇಡಿಕೆಯ ನಟಿ. ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಷ್. ಯಶಸ್ವಿನ ಉತ್ತುಂಗದಲ್ಲಿರುವ ರಶ್ಮಿಕಾ ಮಂದಣ್ಣ ಅವರ ಮದುವೆ ಜೀವನದ ಬಗ್ಗೆ ಖ್ಯಾತ ಸೆಲೆಬ್ರಿಟಿ ಜ್ಯೋತಿಷ್ಯಿ ಗುರೂಜಿ ವೇಣು ಸ್ವಾಮಿ ಹೇಳಿರುವ ಭವಿಷ್ಯ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ರಶ್ಮಿಕಾ ಮಂದಣ್ಣ ವೈಯಕ್ತಿಕ ಕಾರಣಗಳಿಂದಲೂ ಹೆಚ್ಚು ಸುದ್ದಿಯಲ್ಲಿರುತ್ತಾರೆ
ಅವರ ವೃತ್ತಿ ಜೀವನ ಮಾತ್ರವಲ್ಲ ಆಗಾಗ ವೈಯಕ್ತಿಕ ಜೀವನದ ಬಗ್ಗೆ ಸಕತ್ ಸುದ್ದಿಯಲ್ಲಿ ಇರುತ್ತಾರೆ. ಕಿರಿಕ್ ಪಾರ್ಟಿ ಕೋ ಸ್ಟಾರ್ ಕನ್ನಡ ಪ್ರತಿಭಾನ್ವಿತ ನಟ ರಕ್ಷಿತ್ ಶೆಟ್ಟಿ ಜೊತೆ ಪ್ರೀತಿ-ಪ್ರೇಮ ಸುದ್ದಿ ಮಾಡಿತ್ತು. ನಂತರ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಕ್ಯೂಟ್ ಕಪಲ್ ಜೋಡಿಯನ್ನು ಕರ್ನಾಟಕವೇ ಮೆಚ್ಚಿಕೊಂಡಿತ್ತು. ಆದರೆ ಏನಾಯ್ತೋ ಏನೋ ಆ ಮದುವೆ ಮುರಿದು ಬಿತ್ತು. ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಬೇರೆ-ಬೇರೆಯಾದರು.

ವೃತ್ತಿ ಜೀವನದಲ್ಲಿ ಬೆಳೆಯಲಾರಂಭಿಸಿದರು, ಅದರ ಜೊತೆ ಗಾಸಿಪ್‌ಗಳು ಬೆಳೆಯಿತು
ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್‌ಗೆ ಹೋದರೂ ಅಲ್ಲಿಯೂ ಅವರ ಚಿತ್ರಗಳು ಸೂಪರ್ ಡೂಪರ್ ಹಿಟ್‌ಗಳಾದೆವು. ಇದೀಗ ಅವರು ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಪ್ರೀತಿಯಲ್ಲಿದ್ದಾರೆ ಎಂಬ ಗಾಸಿಪ್‌ಗಳು ಹರಿದಾಡುತ್ತಲೇ ಇವೆ, ಆದರೆ ಇವರಿಬ್ಬರು ಅದಕ್ಕೇನು ತಲೆಕೆಡಿಸಿಕೊಂಡಿಲ್ಲ. ರಶ್ಮಿಕಾ ಮದುವೆ ವಿಷಯ ಸಕತ್ ಸದ್ದು ಮಾಡುತ್ತಿದೆ.

ರಶ್ಮಿಕಾ ಮಂದಣ್ಣ ವೈವಾಹಿಕ ಜೀವನ ಕುರಿತು ಜ್ಯೋತಿಷಿ ಭವಿಷ್ಯ
ಆಂಧ್ರ ಪ್ರದೇಶದ ಪ್ರಸಿದ್ಧ ಸೆಲೆಬ್ರಿಟಿ ಜ್ಯೋತಿಷಿಯಾಗಿರುವ ಗುರೂಜಿ ವೇಣು ಸ್ವಾಮಿ ರಶ್ಮಿಕಾ ಮಂದಣ್ಣರ ವೈವಾಹಿಕ ಜೀವನದ ಬಗ್ಗೆ ಭವಿಷ್ಯ ಹೇಳಿದ್ದಾರೆ. ಅವರ ಪ್ರಕಾರ ರಶ್ಮಿಕಾ ಮಂದಣ್ಣರವರ ವೈವಾಹಿಕ ಜೀವನ ಸುಖಕರವಾಗಿರುವುದಿಲ್ಲ, ಅವರು ವಿಚ್ಛೇದನ ಪಡೆಯಬಹುದು ಎಂದು ಹೇಳಿರುವುದು ಭಾರೀ ಚರ್ಚೆಯನ್ನು ಉಂಟು ಮಾಡಿದೆ. ಅದಕ್ಕೆ ಕಾರಣವೂ ಇದೆ, ಈ ಜ್ಯೋತಿಷಿ ಸಮಂತಾ ವೈವಾಹಿಕ ಜೀವನದ ಬಗೆಯೂ ಹೇಳಿದ್ದರು.

ಜ್ಯೋತಿಷಿ ನುಡಿದ ಭವಿಷ್ಯ ಸಮಂತಾ ವಿಷಯದಲ್ಲೂ ನಿಜವಾಗಿತ್ತು
ಈ ಜ್ಯೋತಿಷಿ ಸಮಂತಾ-ನಾಗ ಚೈತನ್ಯರವರ ವೈವಾಹಿಕ ಜೀವನ ತುಂಬಾ ಕಾಲ ಬಾಳಲ್ಲ ಎಂದು ಮೊದಲೇ ನುಡಿದಿದ್ದರು. ಅದರಂತೆ ಆ ಜೋಡಿ 10 ವರ್ಷ ಪ್ರೀತಿಸಿ ಮದುವೆಯಾಗಿ ಮೂರೇ ವರ್ಷದಲ್ಲಿ ಬೇರ್ಪಟ್ಟರು. ಈ ಕಾರಣಕ್ಕೆ ಈಗ ರಶ್ಮಿಕಾ ಕುರಿತು ಹೇಳಿರುವ ಭವಿಷ್ಯ ಅವರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.



Click it and Unblock the Notifications
