Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ವೈರಲ್ : ನವವಿವಾಹಿತೆ ಮಗಳಿಗೆ ಕಳುಹಿಸಿದ ಆಷಾಢ ಉಡುಗೊರೆ ನೋಡಿ ಊರೇ ದಂಗಾಯ್ತು!
ಕೆಲವು ಪೋಷಕರಿಗೆ ಮಗಳನ್ನು ಮದುವೆ ಮಾಡಿ ಕೊಡುವಾಗ ಮಗಳಿಗೆ ಎಷ್ಟು ಕೊಟ್ಟರೂ ಸಮಧಾನ ಇರಲ್ಲ... ಮದುವೆ ಅಡುಗೆ ಬೊಂಬಾಟ್ ಆಗಿರಬೇಕು, ಇನ್ನು ಅಳಿಯನ ಮನೆಗೆ ತಿಂಡಿ-ತಿನಿಸುಗಳನ್ನು ಕಳುಹಿಸುವಾಗ ಅಂತೂ ತರವಾರಿ ತಿಂಡಿ-ತಿನಿಸುಗಳನ್ನು ಕಳುಹಿಸುತ್ತಾರೆ. ಯಾವ ವಿಷಯದಲ್ಲೂ ಕಂಜೂಸು ಮಾಡಲ್ಲ... ಸಂಬಂಧಿಕರು ನಮ್ಮ ಬಗ್ಗೆ ಒಳ್ಳೆಯದು ಅಂದುಕೊಳ್ಳಬೇಕೆಂದು ಬಗೆ-ಬಗೆಯ ತಿನಿಸುಗಳು ಉಡುಗೊರೆಗಳನ್ನು ಕಳುಹಿಸುವುದು ಸಹಜ.

ಆದರೆ ಇಲ್ಲೊಂದು ಪೋಷಕರು ತಮ್ಮ ಅಳಿಯನ ಮನೆಗೆ ಕಳುಹಿಸಿದ ಉಡುಗೊರೆ ನೋಡಿ ಅಳಿಯನ ಮನೆಯವರು ಮಾತ್ರವಲ್ಲ ಇಡೀ ಊರಿನವರೇ ದಂಗಾಗಿ ಹೋಗಿದ್ದಾರೆ... ಇದನ್ನು ನೋಡಿದವರು, ಕೇಳಿದವರು ಈ ರೀತಿ ಗಿಫ್ಟ್ ಕೊಟ್ಟಿರುವುದನ್ನು ನಾವೆಂದೂ ನೋಡಿರಲಿಲ್ಲ ಅಂತಿದ್ದಾರೆ, ಅಲ್ಲದೆ ಈ ಭರ್ಜರಿ ಉಡುಗೊರೆಯ ಸುದ್ದಿ ಸಕತ್ ವೈರಲ್ ಆಗಿದೆ.
ಆಷಾಢ ಮಾಸದಲ್ಲಿ ನವವಿವಾಹಿತೆ ಮಗಳ ಮನೆಗೆ ಪೋಷಕರು ತಿಂಡಿ-ತಿನಿಸುಗಳನ್ನು ತರುವ ಪದ್ಧತಿ ಆಂಧ್ರದಲ್ಲಿದೆ. ಈ ಪೋಷಕರು ಬರೋಬರಿ 1000 ಕೆಜಿ ಮೀನು, 1000 ಕೆಜಿ ತರಕಾರಿ, 250 ಕೆಜಿ ಅಡುಗೆ ಸಾಮಗ್ರಿ, 250 ಡಬ್ಬ ಉಪ್ಪಿನಕಾಯಿ, 250 ಕೆಜಿ ಸೀಗಡಿ, 250 ಕೆಜಿ ಸಿಹಿ ತಿನಿಸು, 10 ಮೇಕೆ, 50 ಕೋಳಿಗಳನ್ನು ಅಳಿಯನ ಮನೆಗೆ ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಮನೆಗೆ ತಂದೆ ಉಡುಗೊರೆ ಕಳುಹಿಸುತ್ತಿದ್ದಾರೆ ಎಂಬುವುದು ಗೊತ್ತಿತ್ತು... ಆದರೆ ಇಷ್ಟೊಂದು ಉಡುಗೊರೆ ನೋಡಿ ಮಗಳು-ಅಳಿಯ ಒಂದು ಕ್ಷಣ ದಂಗಾಗಿ ಹೋದರು.
ಈ ಉಡುಗೊರೆಯನ್ನು ನೀಡಿದ್ದು ಉದ್ಯಮಿ ಬಟುಲಾ ಬಲರಾಮ ಕೃಷ್ಣ, ಇವರು ತಮ್ಮ ಮಗಳು ಪ್ರತ್ಯೂಷರನ್ನು ಯಾನಂನಲ್ಲಿರುವ ಉದ್ಯಮಿಯ ಪುತ್ರ ಪವನ್ ಕುಮಾರ್‌ಗೆ ಕೊಟ್ಟು ಮದುವೆ ಮಾಡಿದ್ದರು. ಮಗಳಿಗೆ ಈ ಆಷಾಢದಲ್ಲಿ ಕಳುಹಿಸುವ ಉಡುಗೊರೆ ತುಂಬಾ ವಿಶೇಷವಾಗಿರಬೇಕೆಂದು ಬಯಸಿದ ತಂದೆ ಇಷ್ಟೆಲ್ಲಾ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ. ಈ ಆಷಾಢ ಉಡುಗೊರೆಯನ್ನು ಮಗಳು ಮತ್ತು ಅಳಿಯ ಮಾತ್ರವಲ್ಲ ಊರಿನವರು ಖಂಡಿತ ಮರೆಯಲ್ಲ ಅಲ್ವಾ?



Click it and Unblock the Notifications
