Latest Updates
-
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್
ಈ 5 ರಾಶಿಯವರು ಫಿಟ್ ನೆಸ್ ಗೆ ಪ್ರಾಮುಖ್ಯತೆ ಕೊಡ್ತಾರೆ!
ಆರೋಗ್ಯವೇ ಭಾಗ್ಯ ಅಂತಾರೆ. ಅದ್ರಲ್ಲೂ ಈ ಮಾರ್ಡನ್ ಯುಗದಲ್ಲಿ ಆರೋಗ್ಯದ ಕಾಳಜಿ ಮಾಡೋದು ತುಂಬಾನೇ ಮುಖ್ಯವಾಗುತ್ತದೆ. ಕೆಲವರು ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ಮಾಡ್ತಾರೆ. ಅದ್ರಲ್ಲೂ ಫಿಟ್ ನೆಸ್ ಕಡೆಗೆ ಹೆಚ್ಚಿನ ಒಲವು ತೋರುತ್ತಾರೆ. ನಿತ್ಯವೂ ಜಿಮ್ ಗೆ ಹೋಗಿ ದೇಹ ದಂಡನೆ ಮಾಡಿ ತಮ್ಮನ್ನು ತಾವು ಫಿಟ್ ಆಗಿ ಇಟ್ಟುಕೊಳ್ತಾರೆ.
ಇನ್ನೂ ತಿನ್ನುವ ಆಹಾರ ಕೂಡ ಹಾಗೆನೇ ತುಂಬಾನೇ ಕಟ್ಟು ನಿಟ್ಟು. ಒಟ್ಟಿನಲ್ಲಿ ಇವರು ಆರೋಗ್ಯಯುತ ಜೀವನಶೈಲಿಯನ್ನು ಅಳವಡಿಸಿಕೊಂಡಿರುತ್ತಾರೆ. ಅಷ್ಟಕ್ಕೂ ಯಾವ ರಾಶಿಯವರು ಆರೋಗ್ಯಯುತ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುತ್ತಾರೆ ಅನ್ನೋದನ್ನು ತಿಳಿಯೋಣ.

ಕನ್ಯಾ ರಾಶಿ
ಆಗಸ್ಟ್ 23 ಮತ್ತು ಸೆಪ್ಟೆಂಬರ್ 22 ರ ನಡುವೆ ಜನಿಸಿದ ಕನ್ಯಾ ರಾಶಿಯವರು ಸೂಕ್ಷ್ಮ ಸ್ವಭಾವಕ್ಕೆ ಹೆಸರುವಾಗಿಯಾಗಿರುತ್ತಾರೆ. ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ಇವರಿಗಿರುತ್ತದೆ. ಕನ್ಯಾ ರಾಶಿಯವರು ತಮ್ಮ ಆಹಾರಕ್ರಮ, ವ್ಯಾಯಾಮದ ದಿನಚರಿ ಮತ್ತು ಒಟ್ಟಾರೆ ಜೀವನಶೈಲಿಯ ಆಯ್ಕೆಗಳನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ. ಇವರು ಸಮತೋಲಿತ ಹಾಗೂ ಪೌಷ್ಠಿಕ ಆಹಾರಗಳನ್ನೇ ಸೇವನೆ ಮಾಡುತ್ತಾರೆ. ಹೀಗಾಗಿ ಇವರು ಆರೋಗ್ಯವಾಗಿಯೇ ಇರುತ್ತಾರೆ.
ವೃಷಭ ರಾಶಿ
ಏಪ್ರಿಲ್ 20 ಮತ್ತು ಮೇ 20 ರ ನಡುವೆ ಜನಿಸಿದ ವೃಷಭ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದಾರೆ. ಈ ರಾಶಿಯವರು ತಮ್ಮ ಸ್ಥಿರ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಆರೋಗ್ಯರ ಜೀವನ ಶೈಲಿಗೆ ಮೊದಲ ಆಧ್ಯತೆ ನೀಡುತ್ತಾರೆ. ವೃಷಭ ರಾಶಿಯವರು ಸಾಮಾನ್ಯವಾಗಿ ನೈಸರ್ಗಿಕ ಮತ್ತು ಸಾವಯವ ಆಹಾರಗಳತ್ತ ಆಕರ್ಷಿತರಾಗುತ್ತಾರೆ. ಹಾಗೂ ಪ್ರತಿನಿತ್ಯ ಇವರುಗಳು ನಿಯಮಿತ ಆಹಾರವನ್ನೇ ಸೇವನೆ ಮಾಡುತ್ತಾರೆ. ಪಾರ್ಲರ್ ಗಳಿಗೆ ಹೆಚ್ಚು ಭೇಟಿ ನೀಡುವ ಇವರು ಸೆಲ್ಫ್ ಕೇರ್ ಬಗ್ಗೆ ಕೂಡ ಕಾಳಜಿ ಹೊಂದಿರುವವರಾಗಿದ್ದಾರೆ.
ಮಕರ ರಾಶಿ
ಡಿಸೆಂಬರ್ 22 ಮತ್ತು ಜನವರಿ 19 ರ ನಡುವೆ ಜನಿಸಿದ ಮಕರ ರಾಶಿಯವರು ತಮ್ಮ ಶಿಸ್ತು ಮತ್ತು ಗುರಿ-ಆಧಾರಿತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ತಮ್ಮ ಜವಾಬ್ದಾರಿಯನ್ನು ಎಂದಿಗೂ ಮರೆಯುವವರಲ್ಲ. ಇವರು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ.
ಇವರು ನಿತ್ಯ ವ್ಯಾಯಾಮ ಮಾಡಿ ತಮ್ಮನ್ನು ತಾವು ಆರೋಗ್ಯಕರವಾಗಿ ಇಟ್ಟುಕೊಳ್ಳುತ್ತಾರೆ. ಮಕರ ರಾಶಿಯವರು ತಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತಾರೆ. ಮತ್ತು ಸಮತೋಲಿತ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಧ್ಯಾನ ಅಥವಾ ಯೋಗದಂತಹ ಒತ್ತಡ ನಿರ್ವಹಣೆ ತಂತ್ರಗಳನ್ನು ಅನುಸರಿಸುತ್ತಾರೆ.
ವೃಶ್ಚಿಕ ರಾಶಿ
ಅಕ್ಟೋಬರ್ 23 ಮತ್ತು ನವೆಂಬರ್ 21 ರ ನಡುವೆ ಜನಿಸಿದ ವೃಶ್ಚಿಕ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡುತ್ತಾರೆ. ವೃಶ್ಚಿಕ ರಾಶಿಯವರು ಸವಾಲಿನಿಂದ ದೂರ ಸರಿಯುವವರಲ್ಲ. ವೃಶ್ಚಿಕ ರಾಶಿಯವರು ಭಾವನಾತ್ಮಕ ಯೋಗಕ್ಷೇಮದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಆರೋಗ್ಯಕರ ಮನಸ್ಸು-ದೇಹದ ಸಂಪರ್ಕವನ್ನು ಕಾಪಾಡಿಕೊಳ್ಳಲು ಎಲ್ಲಾ ಪ್ರಯತ್ನ ಮಾಡುತ್ತಾರೆ.
ಕುಂಭ ರಾಶಿ
ಜನವರಿ 20 ಮತ್ತು ಫೆಬ್ರವರಿ 18 ರ ನಡುವೆ ಜನಿಸಿದ ಕುಂಭ ರಾಶಿಯವರು ತಮ್ಮ ನವೀನ ಮತ್ತು ಮುಂದಾಲೋಚನೆಯ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ಯೋಗ, ಧ್ಯಾನ ಹಾಗೂ ವ್ಯಾಯಾಮಗಳತ್ತ ಹೆಚ್ಚು ಆಸಕ್ತರಾಗಿ ಇರುತ್ತಾರೆ. ಇವರು ಆಹಾರ ಸೇವನೆ ಮಾಡುವಾಗಲೂ ಕೂಡ ತುಂಬಾನೇ ಕಟ್ಟುನಿಟ್ಟು. ಡಯೇಟ್ ಆಹಾರಕ್ಕೆ ಇವರು ಮೊದಲ ಆಧ್ಯತೆ ನೀಡುತ್ತಾರೆ. ಹೀಗಾಗಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಆಗೋದಿಲ್ಲ.



Click it and Unblock the Notifications
