Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನಾನು ಟೊಮೆಟೊ... ನನ್ನ ಬೆಳೆದವನೂ ಬೆಳಿಬೇಕು ಕಣ್ರೋ, ಅದ್ಯಾಕೆ ಅರ್ಥ ಆಗ್ತಾ ಇಲ್ಲ ನಿಮಗೆ
ನಾನು ಟೊಮೆಟೊ, ಈಗಂತೂ ಟಿವಿ ಚಾನಲ್, ಪೇಪರ್‌ಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ನಂದೇ ಹವಾ... ಎಲ್ಲರಿಗೂ ಹೇಳುವುದಕ್ಕೆ ಇರುವುದು ನನ್ನ ಬಗೆನೇ.... ನನ್ನನ್ನು ಕದಿಯುವಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆಯುತ್ತೇನೆ ಎಂದು ಕನಸು ಮನಸ್ಸಿನಲ್ಲಿ ಅಂದುಕೊಂಡಿರಲಿಲ್ಲ, ಆದರೆ ಈಗ ಆಗಿದೆ, ಸಿಕ್ಕಾಪಟ್ಟೆ ಖುಷಿಯಾಗಿದ್ದಾನೆ.
ಒಂದು ಕಾಲದಲ್ಲಿ ನಾನೆಂದರೆ ಬೆಲೆನೇ ಇರಲಿಲ್ಲ, ನಾನೊಂದು ಬಹು ಮುಖ್ಯವಾದ ತರಕಾರಿಯಾಗಿದ್ದರೂ ನನ್ನನ್ನು ಪರಿಗಣಿಸುತ್ತಿರಲಿಲ್ಲ, ಯಾರಾದರೂ ಟೊಮೆಟೊ ಸಾರು, ಗೊಜ್ಜು ಮಾಡಿದರೆ ಟೊಮೆಟಾ ಸಾರಾ..... ಎಂದು ರಾಗವಾಗಿ ಕೇಳುತ್ತಿದ್ದರು, ಈಗ ನೋಡಿ ನಂಗೆ ಎಂಥ ಡಿಮ್ಯಾಂಡ್ ಬಂದಿದೆ ಅಂತ, ಈರುಳ್ಳಿ ಕತ್ತರಿಸುವಾಗ ಮಾತ್ರವಲ್ಲ ಈಗ ನನನ್ನು ಕತ್ತರಿಸುವಾಗಲೂ ಅಳುತ್ತಿದ್ದೀರಾ, ಅದು ಒಂದು ಲೆಕ್ಕದಲ್ಲಿ ನಂಗೆ ಖುಷಿ ಕೊಡ್ತಾ ಇದೆ...

ಅಲ್ಲಾರೀ ನಾನು ನಿಮ್ಮನ್ನು ಕೇಳ್ತಾ ಇರುವುದು ಅಲ್ಲರೀ ನನ್ನ ಬೆಳೆಯುತ್ತಿದ್ದ ರೈತ ಯಾವ ತಪ್ಪು ಮಾಡಿದ್ದ ಪಾಪ ಅವನಿಗೆ ಒಂದು ನ್ಯಾಯಾವಾದ ಬೆಲೆ ಕೊಡಲು ಸಾಧ್ಯವಾಗುತ್ತಿರಲಿಲ್ಲ, ನನ್ನ ಬೆಳೆದವನ ಸಂಕಟ ನನಗಷ್ಟೇ ಅರ್ಥ ಆಗುತ್ತಿತ್ತು...
ನಾನೇನೋ ಚೆನ್ನಾಗಿ ಬೆಳೆದು ಕೆಂಪಗೆ ಕಾಣಬೇಕೆಂದು ಬೇಗನೆ ಕೆಂಪಗೆ ಆಗುತ್ತಿದ್ದೆ, ನಾನು ಹಸಿರಿನಿಂದ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಂತೆ ನನ್ನ ಬೆಳೆದವನಿಗೆ ತಲೆನೋವು ಶುರು, ನನ್ನ ಇನ್ನು ತುಂಬಾ ಸಮಯ ಅವನ ಬಳಿ ಇಡಲು ಸಾಧ್ಯವಿಲ್ಲ, ಮಾರುಕಟ್ಟೆಗೆ ಹೋಗಿ ಕೊಟ್ಟು ಬರೋಣ ಕೆಜಿಗೆ ಎರಡು ರುಪಾಯಿಯಂತೆ ಕೇಳುತ್ತಾರೆ. ಅಷ್ಟೊಂದು ಕಷ್ಟಪಟ್ಟು ನನ್ನ ಬೆಳೆದು ನನ್ನ ಕೊಡಲೂ ಆಗದೆ ಹೊಲದಲ್ಲಿಯೇ ಇಟ್ಟುಕೊಳ್ಳಲೂ ಆಗದೆ ಒದ್ದಾಡುತ್ತಿದ್ದ, ಆದರೆ ಈಗ ನೋಡಿ ನನ್ನ ನೋಡಿಕೊಳ್ಳಲು ಸೆಕ್ಯೂರಿ ನೇಮಿಸಬೇಕು ಹಾಗೇ ಲಕ ಲಕ ಹೊಳೆಯುತ್ತಾ ನನ್ನ ಬೆಳೆದವನ ಮುಖದಲ್ಲಿ ನಗು ತರುತ್ತಿದ್ದಾನೆ.
ಅವತ್ತು ನನ್ನ ಬೆಳೆದವ ಸರಿಯಾಗಿ ಬೆಲೆ ಸಿಗದೆ ಟ್ಯಾಕ್ಟರ್ ಟೊಮೆಟೊವನ್ನೇ ರೋಡ್‌ಗೆ ಸುರಿದು ಅಳುತ್ತಾ ಹೋಗಾದ ನನಗೆ ಛೀ ನಂದೆಂಥ ಬಾಳು ಒಂದೆಲ್ಲಾ ಒಂದು ಸಮಯ ನಂಗೆ ಬಂದೇ ಬರುತ್ತದೆ, ಆವಾಗ ನನ್ನ ಪವರ್ ಏನೆಂದು ತೋರಿಸುತ್ತೇನೆ ಅಂದುಕೊಂಡಿದ್ದೆ, ಈಗ ಆ ಸಮಯ ಬಂದಿದೆ. ಬೇರೆ ಕೃಷಿ ಮಾಡುವಂತೆ ನನ್ನನ್ನೂ ಕಷ್ಟಪಟ್ಟು ಬೆಳೆದಿದ್ದಾನೆ ಕಣ್ರೀ ನನ್ನ ರೈತ. ಬೇರೆ ಬೆಳೆ ಬೆಳದವರು ದುಡ್ಡು ಮಾಡಬಹುದು, ಏಕೆ ಟೊಮೆಟೊ ಬೆಳೆದವನು ದುಡ್ಡು ಮಾಡಬಾರದಾ? ಆಹಾ ಮತ್ತೆ..
ಈಗ ನೀವು ಬಲೇ ಚಲೋ ಇದ್ದೀರಿ... ನನ್ನ ಮಾತ್ರ ಕಾಣ್ತಿದಿ, ಟೊಮೆಟೊಗೆ 120 ರುಪಾಯಿ ಕೆಜಿಗೆ ಅಂತ ಜೋರು ಬೊಬ್ಬೆ ಹಾಕುತ್ತಿದ್ದೀರಾ? ಏಕೆ ಮಾರ್ಕೆಟ್‌ನಲ್ಲಿ ನನ್ನ ಪಕ್ಕದಲ್ಲಿಯೇ ಇರುವ ಬೀನ್ಸ್, ಮತ್ತಿತರ ತರಕಾರಿ ಬೆಲೆ ಕಡಿಮೆ ಇದೆಯೇ? ಏನೋ ನಾನು ಸ್ವಲ್ಪ ಕೆಂಪಗೆ ಸುಂದರವಾಗಿದ್ದೀನಿ ಅಂತ ನಿಮ್ಮೆಲ್ಲರ ಕಣ್ಣು ನನ್ನ ಮೇಲೆಯೇ ಬಿದ್ದಿದೆ....



Click it and Unblock the Notifications
