ಜುಲೈ 8ರ ರಾಶಿಫಲ: ಸಿಂಹ, ಮಕರ ರಾಶಿಯವರಿಗೆ ಶುಭವಾಗಿದೆ, ಉಳಿದ ರಾಶಿಫಲ ಹೇಗಿದೆ?

ವೈದಿಕ ಶಾಸ್ತ್ರದ ಪ್ರಕಾರ ಜುಲೈ 8ರ ಭವಿಷ್ಯ ನೀಡಲಾಗಿದ್ದು ಈ ದಿನ ಬಹುತೇಕ ರಾಶಿಯವರಿಗೆ ತುಂಬಾನೇ ಶುಭವಾಗಿದೆ. ಈ ದಿನ ನಿಮ್ಮ ರಾಶಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:
ದಿನಾಂಕ: ಜುಲೈ 8
ತಿಥಿ: ಸಂಜೆ 06:58ರವರೆಗೆ ಪಂಚಮಿ ನಂತರ ಷಷ್ಠಿ
ನಕ್ಷತ್ರ: ಶ್ರವಣ 06:59ರ ನಂತರ ಧನಿಷ್ಠ
ಪಕ್ಷ: ಕೃಷ್ಣ ಪಕ್ಷ
ರಾಹುಕಾಲ: ಮಧ್ಯಾಹ್ನ 01:55ರಿಂದ 03:32ರವರೆಗೆ

ಮೇಷ ರಾಶಿ

ಕೆಲಸದ ಸ್ಥಳದಲ್ಲಿ ನಿಮ್ಮ ಸುತ್ತಲೂ ನಡೆಯುತ್ತಿರುವ ಚಟುವಟಿಕೆಗಳತ್ತ ಗಮನಹರಿಸಿ, ಕಚೇರಿ ರಾಜಕೀಯಕ್ಕೆ ಬಲಿಯಾಗದಂತೆ ಜಾಗ್ರತೆ. ಈ ಸಮಯದಲ್ಲಿ ನಿಮ್ಮ ಸಂಗಾತಿ ಮನೆಯಿಂದ ದೂರವಿದ್ದರೆ ನೀವು ಅವರನ್ನು ತುಂಬಾ ಮಿಸ್ ಮಾಡುತ್ತೀರಿ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ವಿಷಯದಲ್ಲಿ ಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಸಮಯ: ಸಂಜೆ 5 ರಿಂದ 9:15 ರವರೆಗೆ

Today Horoscope July 8: 8 July 2023 Dina Bhavishya In Kannada

ವೃಷಭ ರಾಶಿ

ಈ ದಿನ ಅಗ್ಯತ ಕಾರ್ಯಗಳ ಕಡೆ ಗಮನಹರಿಸಿ, ನಿಮ್ಮ ಅಮೂಲ್ಯ ಸಮಯವನ್ನು ಅನಗತ್ಯ ವಿಷಯಗಳಲ್ಲಿ ವ್ಯರ್ಥ ಮಾಡಲು ಹೋಗಬೇಡಿ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಬಹುದು. ನೀವು ಕೋಪವನ್ನು ನಿಯಂತ್ರಿಸಿ ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸುವುದು ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಯಾವುದೇ ಆತುರ ಬೇಡ. ಆರೋಗ್ಯ ಇಂದು ದುರ್ಬಲವಾಗಿರಬಹುದು.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ದಿನ ಏರಳಿತಗಳಿಂದ ಕೂಡಿರಲಿದೆ. ನಿಮ್ಮ ದಿನನಿತ್ಯದ ಯೋಜನೆಗಳಿಗೆ ಅಡ್ಡಿ ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ತುಂಬಾ ಕಿರಿಕಿರಿ ಅನುಭವಿಸಬಹುದು. ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಪ್ರಯತ್ನಿಸುತ್ತಿದ್ದರೆ ನಿಮ್ಮ ಪ್ರಯತ್ನಗಳನ್ನು ನೀವು ಮತ್ತಷ್ಟು ಚುರುಕುಗೊಳಿಸಿದರೆ ಒಳ್ಳೆಯದು.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಬೆಳಿಗ್ಗೆ 8:35 ರಿಂದ 11 ರವರೆಗೆ

ಕರ್ಕ ರಾಶಿ

ವೈವಾಹಿಕ ಜೀವನ ಚೆನ್ನಾಗಿರಲಿದೆ. ನೀವು ಭವಿಷ್ಯದ ಪ್ಲ್ಯಾನ್ ಬಗ್ಗೆ ಚರ್ಚೆ ಮಾಡುತ್ತೀರಿ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ. ಕೆಲಸದ ದೃಷ್ಟಿಯಿಂದ ಇಂದು ನಿಮಗೆ ತುಂಬಾ ಬಿಡುವಿಲ್ಲದ ದಿನವಾಗಿರುತ್ತದೆ. ಬಾಕಿ ಇರುವ ಕಾಮಗಾರಿಗಳ ಹೊರೆ ಹೆಚ್ಚಾಗಬಹುದು.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 24
ಅದೃಷ್ಟದ ಸಮಯ: ಸಂಜೆ 4 ರಿಂದ ರಾತ್ರಿ 8:25 ರವರೆಗೆ

ಸಿಂಹ ರಾಶಿ

ಇಂದು ನಿಮಗೆ ತುಂಬಾ ಶುಭದಿನ. ನೀವು ಈ ದಿನ ಬಯಸಿದ ಫಲಿತಾಂಶವನ್ನು ಪಡೆಯುತ್ತೀರಿ. ನಿಮ್ಮ ವೈಯಕ್ತಿಕ ಅಥವಾ ವೃತ್ತಿಪರ ಜೀವನ, ನೀವು ಧನಾತ್ಮಕ ಬದಲಾವಣೆಗಳನ್ನು ಕಾಣುತ್ತೀರಿ. ಪ್ರಣಯ ಜೀವನದಲ್ಲಿ ಪರಿಸ್ಥಿತಿ ಚೆನ್ನಾಗಿರಲಿದೆ. ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ ಸಂಬಂಧಿಸಿದಂತೆ, ನೀವು ನರಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಹೊಂದಿರಬಹುದು.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಬೆಳಿಗ್ಗೆ 4 ರಿಂದ ಸಂಜೆ 7 ರವರೆಗೆ

ಕನ್ಯಾ ರಾಶಿ

ಹಣದ ವಿಷಯದಲ್ಲಿ, ನೀವು ತುಂಬಾ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ನಿಮ್ಮ ಕಷ್ಟಗಳು ಭವಿಷ್ಯದಲ್ಲಿ ಹೆಚ್ಚಾಗಬಹುದು. ಕಛೇರಿಯಲ್ಲಿ ಅತ್ಯಂತ ಸಮತೋಲಿತವಾಗಿ ವರ್ತಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಮೇಲಾಧಿಕಾರಿಗಳೊಂದಿಗೆ ಮಾತನಾಡುವಾಗ ನಿಮ್ಮ ಮಾತುಗಳನ್ನು ಆಲೋಚಿಸಿ ಬಳಸಿ. ದಿನದ ಎರಡನೇ ಭಾಗದಲ್ಲಿ ಮನೆಗೆ ಕೆಲವು ಅತಿಥಿಗಳ ಹಠಾತ್ ಆಗಮನವಾಗಬಹುದು.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 35
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ

ತುಲಾ ರಾಶಿ

ಈ ದಿನ ನಿಮಗೆ ಅನುಕೂಲಕರವಾಗಿದೆ. ಕೆಲಸದ ಹೊರೆ ಕಡಿಮೆ ಇರಲಿದೆ, ಈ ದಿನ ನಿಮಗಾಗಿ ಸಾಕಷ್ಟು ಸಮಯ ಸಿಗಲಿದೆ. ರೋಮ್ಯಾಂಟಿಕ್ ಜೀವನ ಚೆನ್ನಾಗಿರಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಬೆಳಗ್ಗೆ 4 ರಿಂದ 8:15 ರವರೆಗೆ

ವೃಶ್ಚಿಕ ರಾಶಿ

ಆರೋಗ್ಯದಲ್ಲಿ ಇಂದು ನಿಮಗೆ ಮಿಶ್ರ ದಿನ. ಈ ದಿನ ನಿರ್ಲಕ್ಷ್ಯವು ದುಬಾರಿಯಾಗಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರಾಗುವ ಲಕ್ಷಣಗಳಿವೆ. ಶೀಘ್ರದಲ್ಲೇ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗಲಿದೆ. ಜೀವನ ಸಂಗಾತಿಯ ಪ್ರೀತಿ ಮತ್ತು ಬೆಂಬಲ ಸಿಗಲಿದೆ, ಈ ದಿನ ನೀವು ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತೀರಿ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಸಂಜೆ 4:50 ರಿಂದ ರಾತ್ರಿ 8 ರವರೆಗೆ

ಧನು ರಾಶಿ

ಹಣದ ವಿಷಯದಲ್ಲಿ ಈ ದಿನ ಅದೃಷ್ಟದಿಂದ ಕೂಡಿದೆ, ತುಂಬಾ ಸಮಯದಿಂದ ಸಿಗಬೇಕಾಗಿದ್ದ ಹಣ ಕೈ ಸೇರಲಿದೆ, ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಬಯಸಿದ ಲಾಭ ಪಡೆಯಬಹುದು. ಈ ದಿನ ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಆಗಿರಲಿದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 21
ಅದೃಷ್ಟದ ಸಮಯ: ಬೆಳಿಗ್ಗೆ 8:10 ರಿಂದ 11 ರವರೆಗೆ

ಮಕರ ರಾಶಿ

ಇಂದು ನೀವು ಖುಷಿಯಿಂದ ಸಮಯ ಕಳೆಯುತ್ತೀರಿ, ಆದರೆ ಅತಿಯಾದ ಖರ್ಚು ಒಳ್ಳೆಯದಲ್ಲ, ಖರ್ಚು ನಿಯಂತ್ರಿಸುವುದು ಒಳ್ಳೆಯದು, ಸಂಗಾತಿಯ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬರುವುದು. ಆರೋಗ್ಯವಾಗಿರಲು ಪ್ರತಿದಿನ ವ್ಯಾಯಾಮ ಮಾಡಿ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 26
ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ

ಕುಂಭ ರಾಶಿ

ಸರ್ಕಾರಿ ಕೆಲಸ ಮಾಡುವವರಿಗೆ ಈ ದಿನ ಆರೋಗ್ಯಕರವಾಗಿದೆ. ಇದೇ ವೇಳೆ ವ್ಯಾಪಾರಸ್ಥರಿಗೂ ಲಾಭವಾಗುತ್ತಿದೆ. ನೀವು ಅವಿವಾಹಿತರಾಗಿದ್ದು ಪ್ರೀತಿಸುತ್ತಿದ್ದರೆ ನಿಮ್ಮ ಪ್ರೀತಿಯ ಬಗ್ಗೆ ಮನೆಯಲ್ಲಿ ಹೇಳಲು ಈ ದಿನ ಸೂಕ್ತವಾಗಿದೆ. ಹಣದ ವಿಷಯದಲ್ಲಿ ಇಂದು ಸರಾಸರಿಯಾಗಿರಲಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 29
ಅದೃಷ್ಟದ ಸಮಯ: ಸಂಜೆ 4 ರಿಂದ ಸಂಜೆ 7 ರವರೆಗೆ

ಮೀನ ರಾಶಿ

ಕಚೇರಿಯಲ್ಲಿ ಈ ದಿನ ಸ್ಪರ್ಧೆ ಹೆಚ್ಚಿರಬಹುದು ಯಾವುದೇ ಪ್ರಮುಖ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳದಂತೆ ಉದ್ಯಮಿಗಳಿಗೆ ಸಲಹೆ ನೀಡಲಾಗಿದೆ. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಸಂಗಾತಿಯ ಕೋಪದಿಂದ ಸಮಸ್ಯೆ ಉಂಟಾಗುವುದು, ನೀವು ತಾಳ್ಮೆಯಿಂದ ನಿಭಾಯಿಸಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಬೆಳಿಗ್ಗೆ 7 ರಿಂದ 9:20 ರವರೆಗೆ

English summary

Today Horoscope July 8: 8 July 2023 Dina Bhavishya In Kannada

Here are July 8, 2023 horoscope, read on.
Story first published: Saturday, July 8, 2023, 4:00 [IST]
X
Desktop Bottom Promotion