Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನವೆಂಬರ್ 9, ರಾಮ ಏಕಾದಶಿಯಂದುಈ ಕಾರ್ಯಗಳನ್ನು ಮಾಡಲೇಬೇಡಿ
ನವೆಂಬರ್ 9ಕ್ಕೆ ರಾಮ ಏಕಾದಶಿಯನ್ನು ಆಚರಿಸಲಾಗುವುದು. ಪ್ರತಿಯೊಂದು ಏಕಾದಶಿಗೂ ಅದರದ್ದೇ ಆದ ಮಹತ್ವವಿದೆ, ಅದರಂತೆ ರಾಮ ಏಕಾದಶಿಯನ್ನು ಯಾರು ಆಚರಿಸುತ್ತಾರೋ ಅವರು ಬ್ರಹ್ಮ ಹತ್ಯೆಯಂಥ ಪಾಪದಿಂದಲೂ ಮುಕ್ತಿ ಪಡೆಯುತ್ತಾರೆ ಎಂದು ಹೇಳಲಾಗುವುದು. ಈ ದಿನ ಶ್ರೀ ವಿಷ್ಣುವಿನ ಜೊತೆಗೆ ಲಕ್ಷ್ಮಿಯನ್ನೂ ಆರಾಧನೆ ಮಾಡಲಾಗುವುದು.
ರಾಮ ಏಕಾದಶಿಯನ್ನು ರಂಭಾ ಏಕಾದಶಿ ಅಥವಾ ಆಶ್ವಯುಜ ಕೃಷ್ಣ ಏಕಾದಶಿ ಎಂದು ಕರೆಯಲಾಗುತ್ತದೆ. ಯಾರು ರಾಮ ಏಕಾದಶಿ ವೃತವನ್ನು ಮಾಡುತ್ತಾರೋ ಅದು ಸಾವಿರ ಅಶ್ವಮೇಧ ಯಾಗವನ್ನು ಮಾಡಿರುವುದಕ್ಕೆ ಸಮನಾಗಿರುತ್ತದೆ ಎಂದಯ ಹೇಳಲಾಗುವುದು.

ರಾಮ ಏಕಾದಶಿ ಪೂಜಾ ಮುಹೂರ್ತ
ಏಕಾದಶಿ ತಿಥಿ ಪಾರಂಭ ನವೆಂಬರ್ 08 ಬೆಳಗ್ಗೆ 08:25ಕ್ಕೆ
ಮುಕ್ತಾಯ ನವೆಂಬರ್ 09 ಬೆಳಗ್ಗೆ 10:44ಕ್ಕೆ
ಉದಯ ತಿಥಿ ಪ್ರಕಾರ ಏಕಾದಶಿ ನವೆಂಬರ್ 9ರಂದು ಆಚರಿಸಲಾಗುವುದು.
ಉಪವಾಸವನ್ನು ನವೆಂಬರ್ 10ರಂದು ಬೆಳಗ್ಗೆ 06:39ರಿಂದ 08:49ರ ನಡುವೆ ಮುರಿಯಬಹುದು.
ರಾಮ ಏಕಾದಶಿಯಂದು ಈ ಕಾರ್ಯಗಳನ್ನು ಮಾಡಲೇಬಾರದು?
* ಇಂದು ತುಳಸಿ ಎಲೆಗಳನ್ನು ಗಿಡವನ್ನು ಕೀಳಬಾರದು
* ಈ ದಿನ ಮನೆ ಗುಡಿಸಬಾರದು, ಏಕಾದಶಿಗೆ ಮುನ್ನವೇ ಮನೆ ಶುದ್ಧವಾಗಿರಬೇಕು. ಈ ದಿನ ಮನೆ ಗುಡಿಸಿದಾಗ ಹುಳಗಳ, ಇರುವೆಗಳು ಸಾಯುತ್ತವೆ, ಯಾವ ಪ್ರಾಣಿಗೂ ನೋವುಂಟು ಮಾಡಬಾರದು
* ಮಾಂಸಾಹಾರ ಮಾಡಬಾರದು, ಪ್ರಾಣಿಗಳ ವಧೆ ಮಾಡಬಾರದು
* ಈ ದಿನ ಕೂದಲು ಕತ್ತರಿಸುವುದು, ಉಗುರು ಕತ್ತರಿಸುವುದು ಮಾಡಬಾರದು
* ಈ ದಿನ ಅಕ್ಕಿಯಿಂದ ಮಾಡಿದ ಆಹಾರ ಪದಾರ್ಥ ಸೇವಿಸಬಾರದು
* ಕೆಟ್ಟ ಆಲೋಚನೆ ಮಾಡಬಾರದು
* ಮನೆಗೆ ಭಿಕ್ಷೆ ಕೇಳಲು ಬಂದವರನ್ನು ಬರಿಗೈಯಲ್ಲಿ ಕಳುಹಿಸಬಾರದು.
ಈ ದಿನ ಕೆಲವೊಂದು ಪರಿಹಾರಗಳನ್ನು ಕೂಡ ಕಂಡುಕೊಳ್ಳಬಹುದು
ವೈವಾಹಿಕ ಜೀವನ ಖುಷಿಯಾಗಿರಲು
ಈ ದಿನ ತುಳಸಿ ಎಲೆಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಕಪಾಟಿನಲ್ಲಿಟ್ಟು ನಂತರ ಶುಕ್ರವಾರ ಲಕ್ಷ್ಮಿ ಪೂಜೆ ಮಾಡುವಾಗ ಶ್ರೀ ವಿಷ್ಣು, ಲಕ್ಷ್ಮಿಗೆ ಅರ್ಪಿಸಿದರೆ ವೈವಾಹಿಕ ಜೀವನ ಚೆನ್ನಾಗಿರುತ್ತದೆ.
ಆದಾಯ ಹೆಚ್ಚಾಗಲು
ಇಂದು ಪೂಜೆಗೆ ಬಳಸಿದ ತುಳಸಿ ಎಲೆಗಳನ್ನು ನಿಮ್ಮ ಪರ್ಸ್‌ನಲ್ಲಿ ಇಡಿ, ಹೀಗೆ ಮಾಡುವುದರಿಂದ ಲಕ್ಷ್ಮಿ ಕೃಪೆಯಿಂದ ಸಾಲಗಳಿಂದ ಮುಕ್ತರಾಗುತ್ತೀರಿ, ಆರ್ಥಿಕ ಆದಾಯ ಹೆಚ್ಚಾಗುವುದು.
ಉದ್ಯೋಗ ಬಡ್ತಿಗಾಗಿ
ಈ ದಿನ ಕೆಂಪು ಬಟ್ಟೆಯಲ್ಲಿ ನಾಣ್ಯಗಳನ್ನು ಹಾಕಿ ಪೂಜೆಗೆ ಇಟ್ಟು ನಂತರ ಆ ನಾಣ್ಯಗಳನ್ನು ನಮ್ಮ ಬಳಿ ಇಟ್ಟುಕೊಳ್ಳುವುದರಿಂದ ಬಡ್ತಿ ದೊರೆಯಲಿದೆ.



Click it and Unblock the Notifications
