Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ 4 ರಾಶಿಯವರಲ್ಲಿ ಆತ್ಮ ವಿಶ್ವಾಸ ಕಡಿಮೆ! ಹೀಗಾಗಿ ಪದೇ ಪದೇ ಸೋಲುತ್ತಾರೆ
ಸಂಕಷ್ಟದ ಪರಿಸ್ಥಿತಿ ಎದುರಾದಾಗ ನಮ್ಮ ಜೊತೆ ನಿಲ್ಲೋದಕ್ಕೆ ಯಾರು ಇರೋದಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮ ಪರವಾಗಿ ನಾವೇ ನಿಲ್ಲಬೇಕು ಹಾಗೂ ನಮ್ಮ ಪರವಾಗಿ ನಾವೇ ವಾದಿಸಬೇಕು. ಇದಕ್ಕೆ ಮುಖ್ಯವಾಗಿ ಬೇಕಾಗಿರೋದು ಆತ್ಮ ವಿಶ್ವಾಸ. ಇದೊಂದಿದ್ದರೆ ಎಂತಹ ಪರಿಸ್ಥಿತಿಯನ್ನಾದರೂ ನಾವು ಗೆಲ್ಲಬಹುದು. ಆದರೆ ನಮಗಾದ ನೋವು, ಅವಮಾನಗಳು ನಮ್ಮ ಪರವಾಗಿ ನಾವು ಮಾತನಾಡೋದಕ್ಕೆ ಅವಕಾಶವನ್ನೇ ನೀಡೋದಿಲ್ಲ. ನಾವು ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವಂತೆ ಮಾಡುತ್ತದೆ. ಹೀಗಾಗಿ ಅನೇಕ ಬಾರಿ ನಾವು ಗೆಲ್ಲೋ ಕಡೆ ಸೋತು ಹೋಗುತ್ತೇವೆ. ಈ ನಾಲ್ಕು ರಾಶಿವರು ಕೂಡ ತಮಗಾಗಿ ಸ್ಟ್ಯಾಂಡ್ ತೆಗೆದುಕೊಳ್ಳೋದ್ರಲ್ಲಿ ಸೋಲುತ್ತಾರೆ. ಹಾಗಾದ್ರೆ ಆ 4 ರಾಶಿಗಳು ಯಾವುದು ಅನ್ನೋದನ್ನು ನೋಡೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತುಂಬಾ ಭಾವುಕ ಜೀವಿಗಳು. ಇವರು ಸೋಲುವುದಕ್ಕೆ ಇದುವೇ ಮುಖ್ಯ ಕಾರಣ. ಈ ರಾಶಿಯವರು ತಮಗಾಗಿ ಎಂದಿಗೂ ಬಾಯಿ ಬಿಟ್ಟು ಮಾತಾನಾಡೋದೇ ಇಲ್ಲ. ತಮ್ಮನ್ನು ನಿರ್ಲಕ್ಷಿಸಿ ಬೇರೆಯವರ ಖುಷಿಗಾಗಿ ಇವರು ಕೆಲಸ ಮಾಡುತ್ತಾರೆ. ಇವರಲ್ಲಿ ಆತ್ಮ ವಿಶ್ವಾಸ ತುಂಬಾನೇ ಕಡಿಮೆ ಇರುತ್ತದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ತಮಗಾಗಿ ಏನನ್ನೂ ಇವರು ಮಾತನಾಡೋದೇ ಇಲ್ಲ. ಹೀಗಾಗಿ ಜೀವನದಲ್ಲಿ ಸೋಲುಗಳನ್ನೇ ಕಾಣುತ್ತಾರೆ. ಹೀಗಾಗಿ ಇವರ ಬದುಕಿಗೆ ಶಕ್ತಿಯಾಗಿ, ಇವರನ್ನು ಪ್ರೋತ್ಸಾಹಿಸಲು ಯಾರಾದರೂ ಬೇಕೇ ಬೇಕು.
ತುಲಾ ರಾಶಿ
ತುಲಾ ರಾಶಿಯವರು ಜೀವನದಲ್ಲಿ ದುಃಖಗಳನ್ನೇ ಅನುಭವಿಸಿರುತ್ತಾರೆ. ಇವರು ತಮ್ಮ ಜೀವನದಲ್ಲಿ ಪದೇ ಪದೇ ತಿರಸ್ಕಾರಕ್ಕೆ ಒಳಗಾಗಿರುತ್ತಾರೆ. ಈ ರಾಶಿಯವರು ಸಮತೋಲಿತ ಜೀವನದವನ್ನು ಇಷ್ಟ ಪಡುತ್ತಾರೆ. ಆದರೆ ಅವರು ತಮ್ಮ ಜೀವನದಲ್ಲಿ ಸಮತೋಲನವನ್ನು ಕಳೆದುಕೊಂಡ ತಕ್ಷಣ ದುರ್ಬಲರಾಗಿ ಬಿಡುತ್ತಾರೆ. ಇದುವೇ ಇವರ ಪ್ರಮುಖ ದೌರ್ಬಲ್ಯವಾಗಿದೆ. ಜೀವನದಲ್ಲಿ ಯಾವಾಗಲಾದರೂ ಒಂದು ಸಲ ಮಾತ್ರ ಈ ರಾಶಿಯವರು ತಮಗಾಗಿ ಮಾತನಾಡುತ್ತಾರೆ. ಅವರಿಗೆ ಏನಾದರೂ ಬೇಕಾದರೂ ಕೂಡ ಕೇಳೋದಕ್ಕೆ ಹೋಗೋದಿಲ್ಲ. ಹೀಗಾಗಿ ಅವರಿಗೆ ಸಿಗಬೇಕಾದ ಅವಕಾಶಗಳು ತಪ್ಪಿ ಹೋಗುತ್ತದೆ.
ಮಿಥುನ ರಾಶಿ
ಮಿಥುನ ರಾಶಿಯವರು ಒಂದು ಪಂಜರದಲ್ಲಿ ಬಂಧಿಯಾಗಿರುತ್ತಾರೆ. ಅದರಿಂದ ಹೊರಬರಲು ಅವರು ಇಷ್ಟ ಪಡೋದಿಲ್ಲ. ಬೇರೆಯವರ ತಂಟೆಗೆ ಹೋಗುವುದಿಲ್ಲ. ತಮ್ಮಷ್ಟಕ್ಕೆ ತಾವಿರುತ್ತಾರೆ. ಹೀಗಾಗಿ ಅನೇಕ ಜನ ಈ ರಾಶಿಯವರನ್ನು ಇಷ್ಟ ಪಡುತ್ತಾರೆ. ಇವರಿಗೆ ಜಗಳ, ಗಲಾಟೆ ಮಾಡೋದು ಇಷ್ಟವಿಲ್ಲ. ಹೀಗಾಗಿ ತಮ್ಮ ಸ್ನೇಹಿತರಿಗೆ ಬೇಕಾದ ಹಾಗೇ ಇವರು ಜೀವನ ಸಾಗಿಸುತ್ತಾರೆ. ಇವರಲ್ಲಿ ಆತ್ಮ ವಿಶ್ವಾಸ ಇಲ್ಲದ ಕಾರಣ. ತಾವು ಅಂದು ಕೊಂಡಂತೆ ಜೀವನ ಸಾಗಿಸೋದಕ್ಕೆ ಆಗೋದಿಲ್ಲ. ಇವರಲ್ಲಿರುವ ಮೌನವೇ ಇವರನ್ನು ಕೊರಗುವಂತೆ ಮಾಡುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ತಮ್ಮ ದೌರ್ಬಲ್ಯದಿಂದಾಗಿ ಆತ್ಮ ವಿಶ್ವಾಸವನ್ನು ಕಳೆದುಕೊಂಡಿರುತ್ತಾರೆ. ತಮ್ಮ ಬಗ್ಗೆ ಯಾವಾಗಲೂ ಅವರು ಋಣಾತ್ಮಕವಾಗಿ ಚಿಂತಿಸುತ್ತಾರೆ. ತಮ್ಮ ಬಗ್ಗೆ ಧನಾತ್ಮಕ ಚಿಂತನೆಗಳನ್ನು ಇವರು ಮಾಡೋದೇ ಇಲ್ಲ. ಒಂದು ವೇಳೆ ಅವರು ಒಬ್ಬರನ್ನೂ ಪ್ರೀತಿಸಲು ಶುರು ಮಾಡಿದರೆ ಚಿಕ್ಕ ಚಿಕ್ಕ ರಹಸ್ಯವನ್ನೂ ಆರಂಭದಲ್ಲೇ ತಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳುತ್ತಾರೆ. ಆದರೆ ಇದರಿಂದಾಗಿ ಅವರು ಒಂದಲ್ಲ ಒಂದು ದಿನ ನೋವು ಅನುಭವಿಸುತ್ತಾರೆ. ಯಾಕಂದ್ರೆ ನಂಬಿದವರು ಬೆನ್ನಿಗೆ ಚೂರಿ ಹಾಕೋ ಕೆಲಸ ಮಾಡುತ್ತಾರೆ. ಹೀಗಾಗಿ ಜಾಗರೂಕರಾಗಿದ್ರೆ ಒಳ್ಳೆಯದು.
ಈ ವಿಚಾರಗಳು ಈ ರಾಶಿಯ ಎಲ್ಲಾ ಜನರಿಗೆ ಅನ್ವಯ ಆಗುತ್ತೆ ಎಂದು ಹೇಳೋದಿಕ್ಕೆ ಆಗೋದಿಲ್ಲ. ಆದರೆ ಹೆಚ್ಚಿನವರಿಗೆ ಈ ವಿಚಾರಗಳು ಅನ್ವಯಿಸುತ್ತದೆ. ನಿಮ್ಮಲ್ಲಿ ಈ ಗುಣಗಳಿದ್ದರೆ ಇನ್ನಾದರೂ ಅದನ್ನು ಸುಧಾರಿಸಿಕೊಂಡು ಜೀವನ ನಡೆಸಿ.



Click it and Unblock the Notifications


