Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಮನೆಯಲ್ಲಿ ಈ ತಪ್ಪುಗಳಾದ್ರೆ ಬಡತನ ಸುತ್ತಿಕೊಳ್ಳುತ್ತಂತೆ!
ಹಿಂದೂ ಧರ್ಮದ ಪ್ರಕಾರ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಮನೆ ಕಟ್ಟುವುದರಿಂದ ಹಿಡಿದು ಪ್ರತಿಯೊಂದು ಕೆಲಸವನ್ನೂ ವಾಸ್ತು ಶಾಸ್ತ್ರದ ಮೂಲಕವೇ ಮಾಡಲಾಗುತ್ತದೆ. ಆದರೆ ಹೆಚ್ಚಿನವರಿಗೆ ಈ ಬಗ್ಗೆ ನಂಬಿಕೆ ಕಡಿಮೆ ಇರೋದ್ರಿಂದ ವಾಸ್ತು ನಿಯಮಗಳನ್ನು ಅವರು ಪಾಲಿಸೋದಿಲ್ಲ. ಇದರಿಂದ ಮನೆ ಹಾಗೂ ಸಂಪತ್ತಿನ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ. ಅಷ್ಟಕ್ಕು ಯಾವೆಲ್ಲಾ ತಪ್ಪುಗಳಾದ್ರೆ ಒರ್ವ ಮನುಷ್ಯನ ಜೀವನ ಹಾಗೂ ಆತನ ಮನೆಯ ಮೇಲೆ ಕೆಟ್ಟ ಪರಿಣಾಮಗಳಾಗಲಿದೆ ಅನ್ನೋದನ್ನು ತಿಳಿಯೋಣ.
ನೇತಾಡುತ್ತಿರುವ ತಂತಿ
ವಾಸ್ತು ಶಾಸ್ತ್ರದ ಪ್ರಕಾರ ಲ್ಯಾಪ್ ಟಾಪ್, ಫೋನ್ ಚಾರ್ಜರ್ ತಂತಿಗಳು ಅಥವಾ ಮನೆಯಲ್ಲಿರೋ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳ ತಂತಿಗಳನ್ನು ನಾವು ಹಾಗೆಯೇ ನೇತಾಡುತ್ತಿರಲು ಬಿಟ್ಟು ಬಿಡುತ್ತೇವೆ. ಈ ರೀತಿ ಮಾಡುವುದು ತಪ್ಪು. ಇವುಗಳನ್ನು ಒಂದು ಶಿಸ್ತು ಬದ್ಧ ವಿಧಾನದಲ್ಲಿ ಇರಿಸಬೇಕು. ಇಲ್ಲದಿದ್ದರೆ ಇದರಿಂದ ನಿಮ್ಮ ವೃತ್ತಿ ಜೀವನ ಹಾಗೂ ಆಸ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದ್ಯಂತೆ.

ಮಹಾಭಾರತದ ಫೋಟೋ ಅಥವಾ ಫೈಟಿಂಗ್ ಮನೆಯಲ್ಲಿರಬಾರದು!
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯಲ್ಲಿ ಮಹಾಭಾರತ ಯುದ್ಧಕ್ಕೆ ಸಂಬಂಧಿಸಿದಂತಹ ಯಾವುದೇ ಪೋಟೋ ಅಥವಾ ಪೈಟಿಂಗ್ ಅನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದಂತೆ. ಹಾಗೊಂದು ವೇಳೆ ಇಟ್ಟುಕೊಂಡರೆ ಇದರಿಂದ ನಿಮ್ಮ ಮನೆಯಲ್ಲಿ ಅಶಾಂತಿ ಸೃಷ್ಟಿಯಾಗಲಿದ್ಯಂತೆ. ಮನೆ ಸದಸ್ಯರ ನಡುವೆ ಜಗಳ, ಮನಸ್ಥಾಪ ಉಂಟಾಗುವ ಸಾಧ್ಯತೆಯಿದ್ಯಂತೆ.
ಶನಿಯ ಪ್ರಭಾವ ಹೆಚ್ಚಾಗುತ್ತದೆ
ವಾಸ್ತುಶಾಸ್ತ್ರದ ಪ್ರಕಾರ ನಿಮ್ಮ ಮನೆಯಲ್ಲಿ ಹರಿದ ಅಥವಾ ಕಿತ್ತು ಹೋದ ಚಪ್ಪಲಿ ಅಥವಾ ಶೂಗಳು ಇಟ್ಟುಕೊಳ್ಳಬಾರದಂತೆ. ಹಾಗೊಂದು ವೇಳೆ ಇಟ್ಟುಕೊಂಡರೂ ಕೂಡ ಇದು ಶನಿಯ ಪ್ರಭಾವವನ್ನು ಆಕರ್ಷಿಸುತ್ತಂತೆ. ಇನ್ನೂ ಇದರ ಜೊತೆಗೆ ನಿಂತು ಹೋದ ಗಡಿಯಾರವನ್ನೂ ಮನೆಯಲ್ಲಿ ಇಟ್ಟುಕೊಳ್ಳಬೇಡ. ಒಂದಾ ಅದನ್ನು ಸರಿಪಡಿಸಿ. ಇಲ್ಲವಾದರೆ ಅದನ್ನು ತೆಗೆದಿಡಿ. ನಿಂತು ಹೋದ ಗಡಿಯಾರ ಮನೆಯಲ್ಲಿ ಇರೋದ್ರಿಂದ ನಮ್ಮ ಪ್ರಗತಿಯೂ ಕೂಡ ಕುಂಠಿತವಾಗಲಿದ್ಯಂತೆ.
ಟ್ಯಾಪ್ ನಲ್ಲಿ ನೀರು ತೊಟ್ಟಿಕ್ಕುವುದು
ಸಾಮಾನ್ಯವಾಗಿ ಮನೆಯ ಟ್ಯಾಪ್ ನಲ್ಲಿ ನೀರು ತೊಟ್ಟಿಕ್ಕುತ್ತಿದ್ದರೆ ನೀರು ಪೋಲಾಗುತ್ತೆ ಅನ್ನೋ ಕಾಳಜಿಯಿಂದ ಅದನ್ನು ನಿಲ್ಲಿಸುತ್ತೇವೆ. ಕೆಲವೊಂದು ಸಲ ಟ್ಯಾಪ್ ನಲ್ಲಿ ಧೋಷವಿದ್ದರೆ ನೀರು ಹಾಗೆಯೇ ತೊಟ್ಟಿಕ್ಕುತ್ತದೆ. ಆ ಬಗ್ಗೆ ನಾವು ಹೆಚ್ಚು ತಲೆಕಡಿಸಿಕೊಳ್ಳೋದಕ್ಕೆ ಹೋಗೋದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಇದು ಒಳ್ಳೆಯದಲ್ವಂತೆ. ಯಾಕಂದ್ರೆ ಇಂತಹ ಮನೆಯಲ್ಲಿ ಮಾತೆ ಲಕ್ಷ್ಮೀ ನೆಲೆಸೋದಿಲ್ವಂತೆ.
ಅಷ್ಟೇ ಅಲ್ಲದೇ, ಆ ಮನೆಯವರೆಲ್ಲಾ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತಂತೆ. ಹೀಗಾಗಿ ಮನೆಯ ಟ್ಯಾಪ್ ವಿಚಾರದಲ್ಲಿ ಆದಷ್ಟು ಜಾಗರೂಕರಾಗಿರಿ. ಯಾವುದೇ ಕಾರಣಕ್ಕೂ ನೀರು ಪೋಲಾಗೋದಕ್ಕೆ ಅವಕಾಶ ಕೊಡಬೇಡಿ.
ಮುರಿದ ಪಾತ್ರೆ, ಬಿರುಕು ಬಿಟ್ಟ ಗೋಡೆ
ವಾಸ್ತು ಶಾಸ್ತ್ರದ ಪ್ರಕಾರ ನಾವು ಮನೆಯಲ್ಲಿ ಬಳಸುವ ಪಾತ್ರೆಗಳಲ್ಲಿ ಯಾವುದೇ ರೀತಿಯ ಡ್ಯಾಮೇಜ್ ಇರಬಾರದು. ಮುರಿದು ಹೋದ ಪಾತ್ರೆಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಇದರ ಜೊತೆಗೆ ಒಡೆದ ಗಾಜು ಅಥವಾ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳೋದಕ್ಕೆ ಹೋಗಬೇಡಿ. ಯಾಕಂದ್ರೆ ಇದು ರಾಹುವಿನ ಶಕ್ತಿಯನ್ನು ಆಕರ್ಷಣೆ ಮಾಡುತ್ತಂತೆ.
ಇದನ್ನು ಮನೆಯಲ್ಲಿ ಇಟ್ಟುಕೊಂಡರೆ ಮನೆಯ ಅಭಿವೃದ್ಧಿ ಆಗೋದಿಲ್ಲ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಒಡೆದ ಗಾಜು ಅಥವಾ ಗ್ಲಾಸ್ ಅನ್ನು ಆದಷ್ಟು ಬೇಗನೇ ಮನೆಯಿಂದ ಹೊರಹಾಕಿ. ಅಷ್ಟೇ ಅಲ್ಲದೇ ಗೋಡೆ ಬಿರುಕು ಬಿಟ್ಟಿದರೆ ತಕ್ಷಣಕ್ಕೆ ಅದನ್ನು ಸರಿಪಡಿಸಿ. ನಿರ್ಲಕ್ಷ್ಯವಹಿಸಿ ಹಾಗೆಯೇ ಬಿಟ್ಟು ಬಿಡಬೇಡಿ.
ಮನೆಯ ಒಳಗಡೆ ಹಕ್ಕಿಯ ಗೂಡು
ನಿಮ್ಮ ಮನೆಯ ಒಳಗಡೆ ಅಥವಾ ಮನೆ ಮಹಡಿಯಲ್ಲಿ ಹಕ್ಕಿ ಗೂಡು ಕಟ್ಟಿದ್ದರೆ ಅದು ಬಡತನವನ್ನು ಆಹ್ವಾನಿಸುವ ಸಂಕೇತವಾಗಿದೆ. ಒಂದು ವೇಳೆ ಹಕ್ಕಿಯ ಮೊಟ್ಟೆಗಳು ಒಡೆದು ಹೋದ್ರೆ ಅದು ಭವಿಷ್ಯದಲ್ಲಿ ನೀವು ಆರ್ಥಿಕ ಪರಿಸ್ಥಿತಿಯಿಂದ ತತ್ತರಿಸಿ ಹೋಗುತ್ತೀರಿ ಎನ್ನುವ ಸಂಕೇತವಾಗಿದೆ. ಹೀಗಾಗಿ ಪರಿವಾಳ ಅಥವಾ ಯಾವುದೇ ಹಕ್ಕಿಯಾದರೂ ಮನೆಯೊಳಗಡೆ ಗೂಡು ಕಟ್ಟೋದಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ಹಕ್ಕಿಯ ಗೂಡು ಮನೆಯಿಂದ ಹೊರಗಡೆ ಇದ್ದರೆ ಯಾವುದೇ ರೀತಿ ಸಮಸ್ಯೆ ಆಗೋದಿಲ್ಲ.
ಮನೆಯನ್ನು ಸ್ಚಚ್ಛವಾಗಿ ಇಟ್ಟುಕೊಳ್ಳದಿರೋದು
ಬೆಳಗ್ಗೆ ಎದ್ದ ತಕ್ಷಣ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಪೂಜೆಯನ್ನು ಮಾಡಬೇಕು. ಆದರೆ ಕೆಲವು ಮನೆಗಳನ್ನು ಸ್ವಚ್ಛವಾಗಿ ಇಟ್ಟುಕೊಂಡಿರೋದಿಲ್ಲ. ಎಲ್ಲಂದರಲ್ಲಿ ಕಸ ಹಾಕುವುದು ಜೊತೆಗೆ ಮನೆಯಲ್ಲಿ ಬಲೆ ಕಟ್ಟಿಕೊಂಡಿರುತ್ತದೆ. ಈ ರೀತಿ ಇದ್ದರೆ ಅಂತಹ ಮನೆಯಿಂದ ಲಕ್ಷ್ಮೀ ಹೊರ ಹೋಗುತ್ತಾಳಂತೆ. ಅಂತಹ ಮನೆಯಲ್ಲಿ ಲಕ್ಷ್ಮೀ ಇರೋದಕ್ಕೆ ಇಷ್ಟ ಪಡೋದಿಲ್ಲ.
ಮನೆಗೆ ಯಾವುದೇ ರೀತಿಯ ಋನಾತ್ಮಕ ಶಕ್ತಿ ಆಕರ್ಷಿತವಾಗಬಾರದೆಂದರೆ ಈ ವಿಚಾರಗಳ ಬಗ್ಗೆ ಗಮನ ಕೊಡುವುದು ತುಂಬಾನೇ ಮುಖ್ಯ. ಅಪ್ಪಿ-ತಪ್ಪಿಯೂ ಈ ಬಗ್ಗೆ ತಪ್ಪುಗಳಾಗದಂತೆ ಜಾಗೃತೆ ವಹಿಸೋದು ತುಂಬಾನೇ ಮುಖ್ಯವಾಗುದಂತೆ.



Click it and Unblock the Notifications

