Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಹಾವಿನ ದ್ವೇಷವಲ್ಲ ಕಾಗೆಗಳ ಸೇಡು..! 17 ವರ್ಷ ನೆನಪಿಡುತ್ತವೆ ಕಾಗೆಗಳು..! ಅಧ್ಯಯನದಲ್ಲಿ ಬಹಿರಂಗ!
ಹಿಂದೂ ಸಂಪ್ರದಾಯದಲ್ಲಿ ಕಾಗೆಗಳಿಗೆ ಒಂದು ಸ್ಥಾನವಿದೆ. ಕಾಗೆಗಳು ಪೂರ್ವಜರು ಎಂದು ನಂಬಲಾಗುತ್ತದೆ. ಕಾಗೆಗಳಿಗೆ ಪಿಂಡ ಇಡುವುದು ಕೂಡ ನಾವು ನೋಡಿದ್ದೇವೆ. ಹಾಗೆ ಕಾಗೆಗಳು ಯಾವಾಗಲು ಕೂಗುತ್ತಿದ್ದರೆ ಕೆಟ್ಟ ಸುದ್ದಿ ಕೇಳುತ್ತೀರಿ ಎಂದು ಹೇಳಲಾಗುತ್ತದೆ. ಇನ್ನು ಕಾಗೆಗಳಿಗೂ ಒಂದಿಷ್ಟು ಜಾಗ ಪುರಾಣಗಳಲ್ಲಿರುವುದು ನೋಡಬಹುದು. ಈಗ ಕಾಗೆಗಳ ಕುರಿತಾದ ಒಂದು ಅಧ್ಯಯನ ಕುತೂಹಲ ಮೂಡಿಸಿದೆ.
ಕಾಗೆಗಳು ಮನುಷ್ಯರ ಮೇಲೆ ಸೇಡು ತೀರಿಸಿಕೊಳ್ಳುತ್ತವೆ ಎಂದು ತಿಳಿದುಬಂದಿದೆ. ಹೌದು ಮನುಷ್ಯರು ಸೇಡು ತೀರಿಸಿಕೊಳ್ಳುವುದು ಸಾಮಾನ್ಯ ವಿಷಯ, ಮನುಷ್ಯರು ತಮಗಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳುವುದು ನಾವು ನೋಡಿದ್ದೇವೆ. ಇನ್ನು ಹಾವು ಕೂಡ 12 ವರ್ಷ ದ್ವೇಷ ಇಟ್ಟುಕೊಳ್ಳುತ್ತೆ ಅನ್ನೋದನ್ನು ಕೂಡ ನಾವು ಕೇಳಿದ್ದೇವೆ. ಆದ್ರೆ ಕಾಗೆಗಳು ಸೇಡು ತೀರಿಸಿಕೊಳ್ಳುವುದು ಕೇಳಿದ್ದೀರಾ?

ಒಂದು ಅಧ್ಯಯನದ ಪ್ರಕಾರ, ಕಾಗೆಗಳು ಮನುಷ್ಯರ ಮೇಲೆ ದ್ವೇಷ ಇಟ್ಟುಕೊಂಡರೆ ಬರೋಬ್ಬರಿ 17 ವರ್ಷಗಳ ವರೆಗೂ ನೆನಪಿಟ್ಟುಕೊಳ್ಳುತ್ತವೆ ಹಾಗೆ ಸೇಡು ತೀರಿಸಿಕೊಳ್ಳಲು ಪ್ರಯುತ್ನಿಸುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ. ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನಿ ಪ್ರೊಫೆಸರ್ ಜಾನ್ ಮಾರ್ಜ್ಲಫ್ ಎಂಬುವರು ಈ ಸಂಶೋಧನೆ ನಡೆಸಿದ್ದಾರೆ.
2006ರಲ್ಲಿ ಇಂತಹದೊಂದು ಸಂಶೋಧನೆ ನಡೆಸಿದ ತಂಡ ಈ ರೀತಿಯ ವಿಚಾರ ಬಯಲಿಗೆಳೆದಿದೆ. ಆದ್ರೆ ಕಾಗೆಗಳು ಸೇಡು ಹೇಗೆ ತೀರಿಸಿಕೊಳ್ಳುತ್ತವೆ ಎಂಬುದನ್ನು ಪತ್ತೆ ಮಾಡಲು ಅವರು ಮಾಡಿದ್ದ ಪ್ರಯೋಗ ಅಚ್ಚರಿ ಮೂಡಿಸುತ್ತದೆ.
ಕಾಗೆಗಳ ಹಿಡಿದ ರಾಕ್ಷಸ ಮುಖವಾಡದ ಮಂದಿ
ಕಾಗೆಗಳು ಮುಖ ನೆನೆಪು ಹಿಡಿದುಕೊಳ್ಳಲೆಂದು ರಾಕ್ಷಸ ಮುಖವಾಡ ಧರಿಸಿದ್ದ ಮಂದಿ 7 ಕಾಗೆಗಳನ್ನು ಬಲೆಯಲ್ಲಿ ಹಾಕಿ ಹಿಡಿದಿದ್ದರು. ನಂತರ ಅವುಗಳನ್ನು ಗುರುತು ಹಿಡಿಯಲೆಂದು ಅವುಗಳ ರೆಕ್ಕೆಗಳಿಗೆ ಗುರುತು ಮಾಡಲಾಗಿತ್ತು. ನಂತರ ಅವುಗಳಿಗೆ ಯಾವುದೇ ಹಾನಿ ಮಾಡದೆ ಬಿಡುಗಡೆ ಮಾಡಲಾಗಿತ್ತು. ನಂತರ ರಾಕ್ಷಸ ಮುಖವಾಡ ಧರಿಸಿದ್ದ ಜನರನ್ನು ಅವು ಹಿಂಬಾಲಿಸುವುದು ಕಾಣಿಸುತ್ತಿತ್ತು.
ಅದೇ ವ್ಯಕ್ತಿ ಮುಖವಾಡ ಇಲ್ಲದೆ ಕಾಲೇಜು ಕ್ಯಾಂಪಸ್‌ನಲ್ಲಿ ಓಡಾಡಿದಾಗ ಅವು ಸುಮ್ಮನೆ ಇರುತ್ತಿದ್ದವು. ಆದ್ರೆ ಆ ರಾಕ್ಷಸ ಮುಖವಾಡ ಧರಿಸಿದ್ದರೆ ಮಾತ್ರ ಹಿಂಬಾಲಿಸಿ ಕೂಗಾಟ ಮಾಡುತ್ತಿದ್ದವು. ಇನ್ನೂ ಅಚ್ಚರಿ ಎಂದರೆ ಗುರುತು ಇಲ್ಲದೆ ಹೊಸ ಕಾಗೆಗಳು ಕೂಡ ಈ ಗುಂಪು ಸೇರಿಕೊಂಡವು. ಅವುಗಳು ಕೂಡ ಮುಖವಾಡ ಧರಿಸಿದ್ದವರ ಬೆನ್ನುಬಿದ್ದವು. ಈ ದಾಳಿ ಬರೋಬ್ಬರಿ 7 ವರ್ಷಗಳ ಕಾಲ ಮುಂದುವರೆದಿತ್ತು.
2013 ರ ನಂತರ ಕಾಗೆಗಳ ಆಕ್ರಮಣವು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸಿತು. ನಂತರ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಪ್ರಯೋಗದ 17 ವರ್ಷಗಳ ನಂತರ ಮಾರ್ಜ್ಲಫ್ ಮುಖವಾಡ ಧರಿಸಿ ಹೊರಗೆ ಹೋದಾಗ ಕಾಗೆಗಳು ಆತನ ಮೇಲೆ ದಾಳಿ ಮಾಡಲು ಮುಂದಾಗದೆ, ಕೂಗದೆ ಅವು ಕುಳತಲ್ಲೇ ಕುಳಿತಿದ್ದವು. ಹೀಗಾಗಿ ಈ ಸಂಶೋಧನೆ ಫಲಿತಾಂಶ ಬರಲು ಬರೋಬ್ಬರಿ 17 ವರ್ಷ ತೆಗೆದುಕೊಂಡಿತು.
ಕಾಗೆಗಳು ಸಸ್ತನಿಗಳಲ್ಲಿನ ಅಮಿಗ್ಡಾಲಾವನ್ನು ಹೋಲುವ ಮೆದುಳಿನ ಪ್ರದೇಶವನ್ನು ಹೊಂದಿವೆ ಎಂದು ಮಾರ್ಜ್ಲಫ್ ಕಂಡುಕೊಂಡರು, ಇದು ತಮ್ಮ ಭಾವನೆಯನ್ನು ಹಿಡಿದಿಡುವ ಮೆದುಳಿನ ಭಾಗವಾಗಿದೆ. ಹೀಗಾಗಿ ಕಾಗೆಗಳು ಮಾನವನ ಮುಖಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು ಎಂದು ಈ ಸಂಶೋಧನೆಯಿಂದ ಆತ ತಿಳಿದುಕೊಂಡನು.



Click it and Unblock the Notifications
